ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ

ಕೊವಿಡ್ -19 ಸಾಂಕ್ರಾಮಿಕ ಪರಿಸ್ಥಿತಿಯನ್ನು ಅವಕಾಶವನ್ನಾಗಿ ಪರಿವರ್ತಿಸುವಲ್ಲಿ ದೊಡ್ಡ ಪಾತ್ರವಹಿಸಲು ಸಾಗರೋತ್ತರ ಭಾರತೀಯ ವಿದ್ಯಾರ್ಥಿಗಳಿಗೆ ಕೇಂದ್ರ ಸಚಿವ ಶ್ರೀ ನಿತಿನ್ ಗಡ್ಕರಿ ಕರೆ

Posted On: 26 APR 2020 10:46PM by PIB Bengaluru

ಕೊವಿಡ್ -19 ಸಾಂಕ್ರಾಮಿಕ ಪರಿಸ್ಥಿತಿಯನ್ನು ಅವಕಾಶವನ್ನಾಗಿ ಪರಿವರ್ತಿಸುವಲ್ಲಿ ದೊಡ್ಡ ಪಾತ್ರವಹಿಸಲು ಸಾಗರೋತ್ತರ ಭಾರತೀಯ ವಿದ್ಯಾರ್ಥಿಗಳಿಗೆ ಕೇಂದ್ರ ಸಚಿವ ಶ್ರೀ ನಿತಿನ್ ಗಡ್ಕರಿ ಕರೆ

ದೇಶಾದ್ಯಂತ ಹೊಸ ಹೆದ್ದಾರಿಗಳು, ಹೆಚ್ಚಿನ ಸಂಖ್ಯೆಯ ರಸ್ತೆಬದಿಯ ಸೌಲಭ್ಯಗಳು ಮತ್ತು ಬಸ್ ತಾಣಗಳ ಯೋಜನೆಯಿಂದ ಅತ್ಯುತ್ತಮ ಹೂಡಿಕೆ ಅವಕಾಶ ಸಾದ್ಯ

ವೆಬ್ನಾರ್ಗಳು, ವಿ.ಸಿ.ಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಉದ್ಯಮಿಗಳು ಮತ್ತು ಯುವಕರು ಸೇರಿದಂತೆ ಇದುವರೆಗೆ ಸುಮಾರು 1.3 ಕೋಟಿ ಜನರ ಜೊತೆಗೆ ಸಚಿವ ಶ್ರೀ ನಿತಿನ್ ಗಡ್ಕರಿ ಅವರು ತಲುಪಿದ್ದಾರೆ ಮತ್ತು ಕೋವಿಡ್ -19 ತಡೆಯಲು ಹಾಗೂ ಮನೋಸ್ಥೈರ್ಯ ಹೆಚ್ಚಿಸಲು ಸರ್ಕಾರದ ಪ್ರಯತ್ನಗಳನ್ನು ವಿವರಿಸಿದ್ದಾರೆ

 

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು ಮತ್ತು ಎಂ.ಎಸ್‌.ಎಂ.. ಶ್ರೀ ನಿತಿನ್ ಗಡ್ಕರಿ ಅವರು ವೆಬ್ನಾರ್ಗಳು, ವಿಡಿಯೋ ಕಾನ್ಫರೆನ್ಸ್ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳ ಮೂಲಕ ಸಮಾಜದ ವಿವಿಧ ವರ್ಗ, ವಿಭಾಗಗಳು ಮತ್ತು ಕ್ಷೇತ್ರಗಳೊಂದಿಗೆ ಕಳೆದ ಕೆಲವು ದಿನಗಳಲ್ಲಿ ಸಂಪರ್ಕ ಸಂವಹನದ ಬೃಹತ್ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ. ಇದು ಸುಮಾರು 1.30 ಕೋಟಿ ಜನರೊಂದಿಗೆ ಸಂವಹನ ನಡೆಸಿದ್ದಾರೆ.

ಅದೇ ಸರಣಿಯಲ್ಲಿ, “ಇಂಡಿಯನ್ ರೆಸ್ಪಾನ್ಸ್ ಟು ಗ್ಲೋಬಲ್ ಪ್ಯಾಂಡೆಮಿಕ್: ರೋಡ್ಮ್ಯಾಪ್ ಫಾರ್ ಇಂಡಿಯಾ ಎಂಬ ವಿಷಯದಡಿಯಲ್ಲಿ ಯು.ಕೆ, ಕೆನಡಾ, ಸಿಂಗಾಪುರ್, ಇತರ ಯುರೋಪಿಯನ್ ದೇಶಗಳು ಮತ್ತು ಆಸ್ಟ್ರೇಲಿಯಾದಂತಹ ವಿವಿಧ ದೇಶಗಳಲ್ಲಿನ ಭಾರತೀಯ ಸಾಗರೋತ್ತರ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದರು. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಸಚಿವರು ಶ್ರೀ ನಿತಿನ್ ಗಡ್ಕರಿ ಅವರು, ಭಾರತಕ್ಕೆ ತನ್ನ ಮುಂದಿನ ದಾರಿ ಸ್ಪಷ್ಟವಾಗಿದೆ. ನಮ್ಮಲ್ಲಿ ಎಲ್ಲವೂ ಸಕಾರಾತ್ಮಕವಾಗಿದೆ ಮತ್ತು ಪ್ರತಿಕೂಲತೆಯನ್ನು ಅವಕಾಶವಾಗಿ ಪರಿವರ್ತಿಸಲು ಸಮಗ್ರ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಅದೇ ಸಮಯದಲ್ಲಿ, ನಾವು ವಿವಿಧ ಚಟುವಟಿಕೆಗಳನ್ನು ಪುನರಾರಂಭಿಸಲು ಮುಂದಾಗುತ್ತಿರುವಾಗ, ಕೊವಿಡ್-19 ವೈರಸ್ ಹರಡುವುದನ್ನು ತಡೆಗಟ್ಟಲು ನಾವೆಲ್ಲರೂ ಆರೋಗ್ಯ ಶಿಷ್ಠಾಚಾರಗಳಿಗೆ ಸಂಬಂಧಿಸಿದ ಎಲ್ಲಾ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕಾಗಿದೆ. ನಮ್ಮ ದೊಡ್ಡ, ಮಧ್ಯಮ, ಸಣ್ಣ ಅಥವಾ ಸೂಕ್ಷ್ಮ ಕೈಗಾರಿಕೆಗಳು ವ್ಯವಹಾರ ಕಾರ್ಯಾಚರಣೆಗಳನ್ನು ಮಾಡುತ್ತಿರುವ ರೀತಿಯಲ್ಲಿ ಬದಲಾವಣೆಯನ್ನು ಮಾಡಬೇಕಾಗುತ್ತದೆ, ಇದರಲ್ಲಿ ಮುಖವಾಡಗಳು, ಸೆನಿಟೈಸರ್ಗಳು ಮತ್ತು ಸಾಮಾಜಿಕ ಅಂತರವನ್ನು ಖಾತ್ರಿಪಡಿಸುವುದು ಮತ್ತು ಕಾರ್ಮಿಕರಿಗೆ ಆಹಾರ-ಆಶ್ರಯ ವ್ಯವಸ್ಥೆಗಳನ್ನು ಮಾಡುವುದು, ಅವರು ತಮ್ಮ ಆಮದು ಕಡಿಮೆ ಮಾಡಿ ಪರ್ಯಾಯವನ್ನು ಹೆಚ್ಚಿಸುವುದು, ಪ್ರಮುಖ ನಗರ (ಮೆಟ್ರೊ ಪಟ್ಟಣ) ಗಳಿಂದ ದೂರದಲ್ಲಿರುವ ಹೊಸ ಸಣ್ಣಪ್ರದೇಶಗಳಲ್ಲಿ ವ್ಯಾಪಾರ ಮತ್ತು ಕೈಗಾರಿಕೆಗಳನ್ನು ಪ್ರಾರಂಭಿಸುವುದು. ಭಾರತದಲ್ಲಿ ಜೆ.ವಿ. ಇತ್ಯಾದಿಗಳನ್ನು ಸ್ಥಾಪಿಸಲು ಕಂಪನಿಗಳು ಜಾಗತಿಕ ಸಂಸ್ಥೆಗಳೊಂದಿಗೆ ಹೊಸ ಸಹಭಾಗಿತ್ವವನ್ನು ಹುಡುಕುವ ಅಗತ್ಯವಿದೆ ಎಂದು ಸಚಿವರು ಹೇಳಿದರು.

ಅನೇಕ ದೇಶಗಳ, ಅನೇಕ ಕಂಪನಿಗಳು ಚೀನಾದಿಂದ ದೂರ ಸರಿಯಲು ಪ್ರಯತ್ನಿಸುತ್ತಿರುವುದರಿಂದ ನಮ್ಮ ಪ್ರಯತ್ನಗಳು ಭಾರತೀಯ ಬೇಡಿಕೆಯನ್ನು ಮಾತ್ರವಲ್ಲದೆ ಜಾಗತಿಕ ಮಾರುಕಟ್ಟೆಯನ್ನು ಪೂರೈಸುವ ಅಗತ್ಯವಿದೆ ಎಂದು ಶ್ರೀ ಗಡ್ಕರಿ ಹೇಳಿದ್ದಾರೆ. ಭಾರತದ ಜನಸಂಖ್ಯೆಯಲ್ಲಿ ಯುವಜನರು ಬಹುಪಾಲನ್ನು ಹೊಂದಿದ್ದು, ಭಾರತ ಜಗತ್ತನ್ನು ಮುನ್ನಡೆಸುತ್ತಿರುವುದರಿಂದ ವಿದೇಶದಲ್ಲಿ ಕಲಿಯುತ್ತಿರುವ ಯುವ ಭಾರತೀಯ ವಿದ್ಯಾರ್ಥಿಗಳು ಗುರಿಯಲ್ಲಿ ಹೆಚ್ಚಿನ ಕೊಡುಗೆ ನೀಡುವಂತೆ ಸಚಿವರು ಕರೆ ನೀಡಿದರು.

22 ಗ್ರೀನ್ ಎಕ್ಸ್ ಪ್ರೆಸ್ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಮತ್ತು ದೆಹಲಿ-ಮುಂಬೈ ಎಕ್ಸ್ ಪ್ರೆಸ್ ಹೆದ್ದಾರಿಯ ಹೊಸ ಜೋಡಣೆಯ ಕಾಮಗಾರಿ ಪ್ರಾರಂಭವಾಗಿದೆ. ಕೈಗಾರಿಕಾ ಸಮೂಹಗಳು, ಕೈಗಾರಿಕಾ ಉದ್ಯಾನವನಗಳು, ಲಾಜಿಸ್ಟಿಕ್ಸ್ ಉದ್ಯಾನವನಗಳು ಇತ್ಯಾದಿಗಳಲ್ಲಿ ಭವಿಷ್ಯದಲ್ಲಿ ಹೂಡಿಕೆ ಮಾಡಲು ಉದ್ಯಮಕ್ಕೆ ಒಂದು ಹೊಸ ಅವಕಾಶವನ್ನು ನೀಡಲಿವೆ. ಹೆದ್ದಾರಿಗಳ ಜೊತೆಗೆ ಸುಮಾರು 2000ದಷ್ಟು ರಸ್ತೆಬದಿಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು ಮತ್ತು 2000 ಬಸ್ ತಾಣಗಳನ್ನು ಸ್ಥಾಪಿಸುವ ಯೋಜನೆಯನ್ನು ಹೊಂದಿದ್ದೇವೆ ಎಂದು ಸಚಿವ ಶ್ರೀ ಗಡ್ಕರಿ ಅವರು ಹೇಳಿದರು.

ಭಾರತದ ಬೆಳವಣಿಗೆಯ ಕಥೆಯ ಸಾಗಾದಲ್ಲಿ ಭಾಗವಹಿಸಲು ಮತ್ತು ಸಂಶೋಧನೆ, ನಾವೀನ್ಯತೆ, ನಿರ್ವಹಣೆ, ಔಷಧ, ಉನ್ನತ ಶಿಕ್ಷಣ ಇತ್ಯಾದಿ ಕ್ಷೇತ್ರಗಳಲ್ಲಿನ ಹೊಸ ಅವಕಾಶಗಳಲ್ಲಿ ಭಾಗವಹಿಸಲು ವಿದೇಶದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗಳು ಮತ್ತು ಯುವ ಅದ್ಭುತ ಮನಸ್ಸು ಹೊಂದಿರುವ ವಿಜ್ಞಾನಿಗಳನ್ನು ಶ್ರೀ ನಿತಿನ್ ಗಡ್ಕರಿ ಆಹ್ವಾನಿಸಿದ್ದಾರೆ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿವಿಧ ದೇಶಗಳ 43 ವಿಶ್ವವಿದ್ಯಾನಿಲಯಗಳ ಸಾಗರೋತ್ತರ ಭಾರತೀಯ ವಿದ್ಯಾರ್ಥಿಗಳೊಂದಿಗೆ ಸಂವಹನ ಮಾಡಿದ ಸಚಿವರು, ಪಿಪಿಪಿ ಅಥವಾ ಜೆವಿ ಆಗಿರಲಿ, ವಿವಿಧ ವಿಧಾನಗಳಲ್ಲಿ ಸರ್ಕಾರವು ಇಂತಹ ಉದ್ಯಮಗಳಿಗೆ ಹೆಚ್ಚಿನ ಬೆಂಬಲ ನೀಡುತ್ತದೆ ಎಂದು ಭರವಸೆ ನೀಡಿದರು.

ಇದುವರೆಗೆ ಸುಮಾರು 8000 ವ್ಯಾಪಾರ ಮುಖಂಡರು, ಕೈಗಾರಿಕೋದ್ಯಮಿಗಳು, ಉದ್ಯಮಿಗಳೊಂದಿಗೆ ಸಚಿವ ಶ್ರೀ ಗಡ್ಕರಿ ಅವರು ಸಂವಹನ ನಡೆಸಿದ್ದಾರೆ, ಹಣಕಾಸು, ವಾಣಿಜ್ಯ ಮತ್ತು ಕೈಗಾರಿಕೆ, ರೈಲ್ವೆ, ಕಾರ್ಮಿಕ ಮತ್ತು ಉದ್ಯೋಗ ಸೇರಿದಂತೆ ಸಂಬಂಧಿತ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ತಮ್ಮ ವಿಷಯಗಳನ್ನು ತಿಳಿಸಿದ್ದಾರೆ ಮತ್ತು ಅವರ ಸಮಸ್ಯೆಗಳನ್ನು ಸದಾ ಆಲಿಸುತ್ತಿದ್ದಾರೆ.

ಉದ್ಯಮಗಳಿಗೆ 3 ತಿಂಗಳಲ್ಲಿ ಅಗತ್ಯ ಅನುಮತಿ ಪಡೆಯಲು ತಮ್ಮ ಸಚಿವಾಲಯ ಎಲ್ಲಾ ಸಹಾಯ ಮಾಡುತ್ತದೆ ಎಂದು ಸಚಿವರು ಹೇಳಿದರು. ಮೂಲಸೌಕರ್ಯ ಅಭಿವೃದ್ಧಿಗೆ ಮತ್ತು ಗ್ರಾಮೀಣ, ಬುಡಕಟ್ಟು ಮತ್ತು ಕೃಷಿ ಕ್ಷೇತ್ರಗಳು / ಪ್ರದೇಶಗಳ ಬೆಳವಣಿಗೆಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ, ಎಲ್ಲಾ ಪಾಲುದಾರರು ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ ಎಂದ ಸಚಿವರು, ನಾವು ಕೊರೊನ ವಿರುದ್ಧ ಹೋರಾಟವನ್ನು ಗೆಲ್ಲುತ್ತೇವೆ ಮತ್ತು ಆರ್ಥಿಕ ವ್ಯವಸ್ಥೆಯನ್ನು ಮುಂಚೂಣಿಯಿಂದ ಹೋರಾಡಿ ಗೆಲ್ಲುತ್ತೇವೆ ಎಂಬ ವಿಶ್ವಾಸವನ್ನು ಸಚಿವ ಶ್ರೀ ಗಡ್ಕರಿ ಅವರು ವ್ಯಕ್ತಪಡಿಸಿದರು.

ನಾಸಾದ ಭಾರತೀಯ ಮೂಲದ ವಿಜ್ಞಾನಿ ಹೊರತುಪಡಿಸಿ, ವಿವಿಧ ದೇಶಗಳ 43 ವಿಶ್ವವಿದ್ಯಾಲಯಗಳ ಸಾಗರೋತ್ತರ ಭಾರತೀಯ ವಿದ್ಯಾರ್ಥಿಗಳೊಂದಿಗೆ ಸಚಿವ ಶ್ರೀ ನಿತಿನ್ ಗಡ್ಕರಿ ಅವರು ಸಂವಹನ ನಡೆಸಿದರು. ಹಿಂದೆ ಎಫ್..ಸಿ.ಸಿ., ಎಸ್.ಎಂ., ಕ್ರೆಡೈ ಮುಂಬೈ, ಎಸ್.ಎಂ..ಗಳು, ಸಿ...ಗಳ ಕ್ಲಬ್ ಆಫ್ ಇಂಡಿಯಾ, ..ಪಿ.ಎಂ., ಭಾರತೀಯ ಶಿಕ್ಷಣ್ ಮನಲ್, ಯುವ ಅಧ್ಯಕ್ಷರ ಸಂಸ್ಥೆ, ಮಹಾರಾಷ್ಟ್ರ ಆರ್ಥಿಕ ಅಭಿವೃದ್ಧಿ ಮಂಡಳಿ, ಅಸ್ಸೋಕಾಮ್, ಪಿ.ಎಚ್.ಡಿ ಚೇಂಬರ್ ಆಫ್ ಕಾಮರ್ಸ್, ಭಾರತ್ ವಾಣಿಜ್ಯ ಸಂಸ್ಥೆ ಇತ್ಯಾದಿ ಹಲವಾರು ಸಂಸ್ಥೆಗಳು, ಸಂಘಟನೆಗಳ, ಸದಸ್ಯರು ಮತ್ತು ಪ್ರತಿನಿಧಿಗಳು ನಡೆಸಿದ ಇದೇ ರೀತಿಯ ಸಭೆಗಳಲ್ಲಿ ಭಾಗವಹಿಸಿ ಶ್ರೀ ಗಡ್ಕರಿಯೊಂದಿಗೆ ಸಂವಹನ ನಡೆಸಿದ್ದಾರೆ.

***



(Release ID: 1618823) Visitor Counter : 193