ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಪಿ ಐ ಬಿ ಸಮನ್ವಯದಲ್ಲಿ ರೋಟರಿ ಕ್ಲಬ್ ಆಫ್ ದೆಹಲಿ ಹೆರಿಟೇಜ್ ನಿಂದ ಮರುಬಳಕೆ ಮಾಡಬಹುದಾದ 50,000 ಮಾಸ್ಕ್ ಪೂರೈಕೆ

Posted On: 25 APR 2020 3:55PM by PIB Bengaluru

ಪಿ ಬಿ ಸಮನ್ವಯದಲ್ಲಿ ರೋಟರಿ ಕ್ಲಬ್ ಆಫ್ ದೆಹಲಿ ಹೆರಿಟೇಜ್ ನಿಂದ ಮರುಬಳಕೆ ಮಾಡಬಹುದಾದ 50,000 ಮಾಸ್ಕ್ ಪೂರೈಕೆ

ಮನೆಯಿಂದ ಕೆಲಸ ಮಾಡುವ ಮಹಿಳಾ ದರ್ಜಿಗಳಿಂದ ಲಾಕ್ಡೌನ್ ಅವಧಿಯಲ್ಲಿ ಮಾಸ್ಕ್  ತಯಾರಿ

ಪಿ ಬಿ ಪ್ರಧಾನ ಮಹಾನಿರ್ದೇಶಕರಿಂದ ಮಾಸ್ಕ್ ಗಳ ವಿತರಣೆ

 

ಕೊವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶವಾಸಿಗಳಿಗೆ ಪರಿಹಾರ ಸಾಮಗ್ರಿಗಳ ಮೂಲಕ ಸಹಾಯ ಮಾಡುವಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನೀಡಿದ ಕರೆಗೆ ಸ್ಪಂದಿಸಿದ ರೋಟರಿ ಕ್ಲಬ್ ಆಫ್ ದೆಹಲಿ ಹೆರಿಟೇಜ್ ಇವರು ಭಾರತ ಸರ್ಕಾರದ ವಾರ್ತಾ ಶಾಖೆ (ಪ್ರೆಸ್ ಇನ್ಫೋರ್ಮೇಷನ್ ಬ್ಯೂರೋ) ಇದರ ಸಮನ್ವಯದೊಂದಿಗೆ ಮರುಬಳಕೆ ಮಾಡಬಹುದಾದ ಸುಮಾರು 50,000 ಮಾಸ್ಕ್ ಗಳನ್ನು ವಿತರಣೆಗಾಗಿ ಪೂರೈಕೆ ಮಾಡಿದ್ದಾರೆ.

ರೋಟರಿ ಇಂಟರ್ನ್ಯಾಷನಲ್ ಒಂದು ಅಂತರರಾಷ್ಟ್ರೀಯ ಸೇವಾ ಸಂಸ್ಥೆಯಾಗಿದ್ದು, ಇದು ಮಾನವೀಯ ಸೇವೆ ಮಾಡಲು, ಮತ್ತು ವಿಶ್ವದಾದ್ಯಂತ ಸದ್ಭಾವನೆ ಮತ್ತು ಶಾಂತಿಯನ್ನು ಬೆಳೆಸುವ ನಿಟ್ಟಿನಲ್ಲಿ ವ್ಯಾಪಾರಿಕೋದ್ಯಮಿಗಳನ್ನು ಮತ್ತು ವೃತ್ತಿಪರರನ್ನು ಸದುದ್ಧೇಶದಲ್ಲಿ ಒಟ್ಟುಗೂಡಿಸುವ ಗುರಿಯನ್ನು ಹೊಂದಿದೆ. ಲಾಕ್ಡೌನ್ ಅವಧಿಯಲ್ಲಿ ತಮ್ಮ ಮನೆಗಳಿಂದ ಕೆಲಸ ಮಾಡುವ ಮಹಿಳಾ ದರ್ಜಿಗಳು ತಯಾರಿಸಿದ ಮಾಸ್ಕ್ ಗಳನ್ನು ವಿತರಿಸಲಾಯಿತು.

ಪಿಐಬಿಯ ಪ್ರಧಾನ ಮಹಾನಿರ್ದೇಶಕ ಶ್ರೀ ಕುಲದೀಪ್ ಸಿಂಗ್ ದತ್ವಾಲಿಯಾ ಅವರು ಮಾಸ್ಕ್ ಗಳನ್ನು ವಿತರಣೆ ಮಾಡಿದರು. ರೋಟರಿ ಕ್ಲಬ್ ಆಫ್ ದೆಹಲಿ ಹೆರಿಟೇಜ್ ಪರವಾಗಿ ಪಿಐಬಿಯ ಹೆಚ್ಚುವರಿ ಮಹಾನಿರ್ದೇಶಕ ಶ್ರೀ ಎಸ್ ರಾಜೀವ್ ಜೈನ್ ಮತ್ತು ರೋಟರಿ ಹೆರಿಟೇಜ್ ಅಧ್ಯಕ್ಷ ಶ್ರೀ ಎಸ್ ರಾಕೇಶ್ ಜೈನ್ ನಿಟ್ಟಿನಲ್ಲಿ ಕಾರ್ಯಯೋಜನೆಗಳನ್ನು ಸಂಯೋಜಿಸಿದ್ದಾರೆ. ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾಸ್ಕ್ ಗಳನ್ನು ಶ್ರೀ ಈಶ್ ಸಿಂಘಾಲ್ ಡಿಸಿಪಿ, ದೆಹಲಿ ಪೊಲೀಸ್, ಸಂಸತ್ ಮಾರ್ಗ ಮತ್ತು ಶ್ರೀ ಮುಖೇಶ್ ಕುಮಾರ್ ಸಿ.ಎಂ.ಡಿ, ಕೇಂದ್ರೀಯ ಭಂಡಾರ್ ಅವರಿಗೆ ಇಂದು ಹಸ್ತಾಂತರಿಸಲಾಯಿತು. ಸಂದರ್ಭದಲ್ಲಿ ಪಿಐಬಿಯ ಪ್ರಧಾನ ಮಹಾನಿರ್ದೇಶಕ ಶ್ರೀ ಕುಲದೀಪ್ ಸಿಂಗ್ ದತ್ವಾಲಿಯಾ ಅವರು ಪತ್ರಕರ್ತರಿಗೆ ಮಾಸ್ಕ್ ಗಳನ್ನು ವಿತರಣೆ ಮಾಡಿದರು.

Image   Image

***



(Release ID: 1618566) Visitor Counter : 139