PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 25 APR 2020 6:48PM by PIB Bengaluru

ಕೋವಿಡ್-19: ಪಿ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

 

  • ದೇಶದಲ್ಲಿ ದೃಢೀಕೃತ  ಕೋವಿಡ್ -19  ಪಾಸಿಟಿವ್ ಪ್ರಕರಣಗಳ ಸಂಖ್ಯೆ ಈಗ 24,506 ,ಇದರಲ್ಲಿ  5062 ಮಂದಿ ಗುಣಮುಖರಾಗಿದ್ದಾರೆ. ನಿನ್ನೆಯಿಂದೀಚೆಗೆ 1429 ಹೊಸ ಪ್ರಕರಣಗಳು ವರದಿಯಾಗಿವೆ.
  • ಮಾಲ್ ಗಳಲ್ಲಿಯ ಅಂಗಡಿಗಳನ್ನು ಹೊರತುಪಡಿಸಿ  ಕೆಲವು ನಿರ್ದಿಷ್ಟ ವರ್ಗದ ಅಂಗಡಿಗಳ ತೆರೆಯುವಿಕೆಗೆ ಎಂ.ಎಚ್.. ಅನುಮತಿ,
  • ಸರ್ವೇಕ್ಷಣೆ, ಮನೆ ಮನೆ ಆಕ್ಟಿವ್ ಪ್ರಕರಣಗಳ ಪತ್ತೆ ಹಚ್ಚುವಿಕೆ, ಮುಂಚಿತವಾಗಿ ಪ್ರಕರಣಗಳ ಗುರುತಿಸುವಿಕೆ, ಮತ್ತು ಸೂಕ್ತ ಕ್ಲಿನಿಕಲ್ ನಿರ್ವಹಣೆಗೆ ಆದ್ಯತೆ ನೀಡಲು ರಾಜ್ಯಗಳಿಗೆ ಆರೋಗ್ಯ ಸಚಿವರ ಮನವಿ.
  • ..ಟಿ. ದಿಲ್ಲಿಯಿಂದ ಕಡಿಮೆ ಖರ್ಚಿನ ಕೋವಿಡ್ -19 ಪತ್ತೆ ಸಾಧನ ಅಭಿವೃದ್ದಿ.
  • 7.5 ಕೋಟಿ ಜನರಿಂದ ಅವರ ಮೊಬೈಲಿಗೆ ಆರೋಗ್ಯ  ಸೇತು ಆಪ್ ಡೌನ್ ಲೋಡ್.
  • ಧೀರ್ಘ ದೂರಕ್ಕೆ ಅವಶ್ಯಕ ಸರಕುಗಳನ್ನು ತಲುಪಿಸಲು ಅಂಚೆ ಇಲಾಖೆಯಲ್ಲಿ ಲಭ್ಯ ಇರುವ ವಾಹನಗಳನ್ನು ಬಳಸಿ ಇಲಾಖೆ ಕಾರ್ಯಾಚರಣೆ.

 

ಪ್ರಸ್ತುತ ಸ್ಥಿತಿ ಗತಿ ಮತ್ತು ಕೋವಿಡ್ -19  ನಿರ್ವಹಣೆಗೆ ಕ್ರಮಗಳ ಕುರಿತಂತೆ ಸಚಿವರ ತಂಡ ಪರಾಮರ್ಶೆ

ಇಂದಿನವರೆಗೆ ಕೋವಿಡ್ -19 ತಡೆ, ಹರಡುವಿಕೆ ನಿಯಂತ್ರಣ ಮತ್ತು ನಿರ್ವಹಣೆಯ ಬಗ್ಗೆ ಕೇಂದ್ರ ಮತ್ತು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಕೈಗೊಂಡ ಕ್ರಮಗಳ ಬಗ್ಗೆ ಕೋವಿಡ್ -19 ನ್ನು ಕುರಿತ ಸಚಿವರ ಗುಂಪು ವಿವರವಾದ ಸಮಾಲೋಚನೆ ನಡೆಸಿತು. ಎಲ್ಲಾ ಜಿಲ್ಲೆಗಳಿಗೂ ಕೋವಿಡ್ -19 ವಿರುದ್ದ ಅವುಗಳ ತುರ್ತು ಯೋಜನೆಗಳನ್ನು ಇನ್ನಷ್ಟು ಬಲಪಡಿಸುವಂತೆ ಮತ್ತು ಅವುಗಳನ್ನು ಅನುಸರಿಸುವಂತೆ ತಿಳಿಸಲಾಗಿರುವ ಬಗ್ಗೆ ಜಿ..ಎಂ. ಗೆ ಮಾಹಿತಿ ನೀಡಲಾಯಿತು. ರಾಜ್ಯವಾರು ಕೋವಿಡ್ -19 ಕ್ಕಾಗಿಯೇ ಮೀಸಲಿಟ್ಟ ಆಸ್ಪತ್ರೆಗಳು, ಐಸೋಲೇಶನ್  ಹಾಸಿಗೆಗಳು, ವಾರ್ಡ್ ಗಳು , ಪಿ.ಪಿ..ಗಳು, ಔಷಧಿ, ವೆಂಟಿಲೇಟರುಗಳು, ಆಕ್ಸಿಜನ್ ಸಿಲಿಂಡರುಗಳು ಇತ್ಯಾದಿಗಳ ಬಗ್ಗೆಯೂ ಜಿ..ಎಂ.ಗೆ ವಿವರ ನೀಡಲಾಯಿತು. ಇದುವರೆಗೆ 5,062 ಜನರು ಗುಣಮುಖರಾಗಿರುವ ಬಗ್ಗೆ ಮತ್ತು ಗುಣಮುಖವಾಗುವ ದರ 20.66%. ಇರುವ ಬಗ್ಗೆಯೂ ಜಿ..ಎಂ. ಗೆ ತಿಳಿಸಲಾಯಿತು. ನಿನ್ನೆಯಿಂದೀಚೆಗೆ 1429 ಹೊಸ ಪ್ರಕರಣಗಳು ವರದಿಯಾಗಿವೆ. ಒಟ್ಟು 24,506 ಜನರಿಗೆ ಕೋವಿಡ್ -19  ಇರುವುದು ದೃಢಪಟ್ಟಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1618318

ಏಕ ಮತ್ತು ಬಹು ಬ್ರಾಂಡ್ ಮಾಲ್ ಗಳಲ್ಲಿರುವ ಅಂಗಡಿಗಳನ್ನು ಹೊರತುಪಡಿಸಿ ನಿರ್ದಿಷ್ಟ ವರ್ಗದ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲು ಸೂಚಿಸಿ  ರಾಜ್ಯಗಳಿಗೆ/ ಕೇಂದ್ರಾಡಳಿತ ಪ್ರದೇಶಗಳಿಗೆ ಎಂ.ಎಚ್..ಆದೇಶ

ವಾಣಿಜ್ಯಿಕ ಮತ್ತು ಖಾಸಗಿ ಸಂಸ್ಥೆಗಳ ವರ್ಗದಲ್ಲಿ ಸಡಿಲಿಕೆಗಳನ್ನು ನೀಡಿರುವ ಎಂ.ಎಚ್.. ಯು ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಆಯಾ ರಾಜ್ಯಗಳ /ಕೇಂದ್ರಾಡಳಿತ ಪ್ರದೇಶಗಳ ಅಂಗಡಿಗಳು ಮತ್ತು ಎಸ್ಟ್ಯಾಬ್ಲಿಶ್ ಮೆಂಟ್ ಕಾಯ್ದೆ ಪ್ರಕಾರ ನೊಂದಾಯಿಸಲ್ಪಟ್ಟಿರುವ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಬೇಕು ಎಂದು ಆದೇಶ ಹೊರಡಿಸಿದೆ. ನಿವಾಸಿ ಸಂಕೀರ್ಣಗಳಲ್ಲಿರುವ ಅಂಗಡಿಗಳು, ನೆರೆಹೊರೆಯ ಅಂಗಡಿಗಳು ಮತ್ತು ಪ್ರತ್ಯೇಕ ಅಂಗಡಿ ಇದ್ದರೆ ಅದನ್ನು ತೆರೆಯುವುದಕ್ಕೂ ಅವಕಾಶ ನೀಡುವಂತೆ ತಿಳಿಸಲಾಗಿದೆ. ಮಾರುಕಟ್ಟೆ ಸಂಕೀರ್ಣದಲ್ಲಿರುವ ಅಂಗಡಿಗಳು, ಅವುಗಳು ಮುನ್ಸಿಪಲ್ ಕಾರ್ಪೋರೇಶನ್ ಮತ್ತು ಮುನ್ಸಿಪಾಲ್ಟಿಗಳ ವ್ಯಾಪ್ತಿಯಿಂದ ಹೊರಗಿದ್ದರೆ ಅವುಗಳನ್ನು ತೆರೆಯುವುದಕ್ಕೂ ಅವಕಾಶ ನೀಡಬೇಕು. ಆದರೆ ಏಕ ಬ್ರಾಂಡ್ ಮತ್ತು ಬಹು ಬ್ರಾಂಡ್ ಮಾಲ್ ಗಳಲ್ಲಿರುವ ಅಂಗಡಿಗಳು  ಅವುಗಳು ಎಲ್ಲಿದ್ದರೂ ತೆರೆಯಲು ಅವಕಾಶ ಇಲ್ಲ.

ವಿವರಗಳಿಗೆ: https://pib.gov.in/PressReleseDetail.aspx?PRID=1618092

ಅಂಗಡಿಗಳ ತೆರೆಯುವಿಕೆಗೆ ಅವಕಾಶ ನೀಡುವ ಎಂ.ಎಚ್.. ಆದೇಶದ ಬಗ್ಗೆ ಸ್ಪಷ್ಟೀಕರಣ

ಆದೇಶ ಗ್ರಾಮೀಣ ಭಾಗಕ್ಕೆ ಅನ್ವಯಿಸುತ್ತದೆ. ಶಾಪಿಂಗ್ ಮಾಲ್ ಗಳಲ್ಲಿ ಇರುವುದನ್ನು  ಹೊರತುಪಡಿಸಿ ಎಲ್ಲಾ ಅಂಗಡಿಗಳನ್ನು ತೆರೆಯಲು ಅವಕಾಶವಿದೆ. ನಗರ ಪ್ರದೇಶಗಳಲ್ಲಿ ಎಲ್ಲಾ ಏಕಾಂಗಿ ಅಂಗಡಿಗಳನ್ನು, ನೆರೆಹೊರೆಯ ಅಂಗಡಿಗಳನ್ನು ಮತ್ತು ವಸತಿ ಸಂಕೀರ್ಣಗಳಲ್ಲಿರುವ ಅಂಗಡಿಗಳನ್ನು ತೆರೆಯಲು ಅನುಮತಿ ಇದೆ. ಮಾರುಕಟ್ಟೆಗಳು/ ಮಾರುಕಟ್ಟೆ ಸಂಕೀರ್ಣಗಳಲ್ಲಿರುವ ಅಂಗಡಿಗಳಿಗೆ ಮತ್ತು ಶಾಪಿಂಗ್ ಮಾಲ್ ಗಳಿಗೆ ತೆರೆಯಲು ಅವಕಾಶ ಇಲ್ಲ. ಇದಲ್ಲದೆ ಸ್ಪಷ್ಟಿಕರಿಸಲಾಗುವುದೆಂದರೆ -ವಾಣಿಜ್ಯ ಕಂಪೆನಿಗಳಿಗೆ ಅವಶ್ಯಕ ವಸ್ತುಗಳ ಪೂರೈಕೆಗೆ ಮಾತ್ರವಷ್ಟೇ ಅನುಮತಿ ನೀಡಲಾಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1618078

ಡಾ. ಹರ್ಷ ವರ್ಧನ ಅವರ ಅಧ್ಯಕ್ಷತೆಯಲ್ಲಿ ಕೋವಿಡ್ -19  ಕ್ಕೆ ಸಂಬಂಧಿಸಿ ಕೈಗೊಂಡ ಕ್ರಮಗಳನ್ನು ಕುರಿತ ರಾಜ್ಯಗಳು/ ಕೇಂದ್ರಾಡಳಿತ ಗಳ ಆರೋಗ್ಯ ಸಚಿವರ ವೀಡಿಯೋ ಕಾನ್ಫರೆನ್ಸ್

ಕೋವಿಡ್ -19 ನಿರ್ವಹಣೆಗೆ ಕೈಗೊಂಡ ಕ್ರಮಗಳು ಮತ್ತು ಸಿದ್ದತಾ ಪರಿಸ್ಥಿತಿಯ ಪರಾಮರ್ಶೆಗಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಹರ್ಷ ವರ್ಧನ ಅವರು ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರು ಮತ್ತು ಆರೋಗ್ಯ ಕಾರ್ಯದರ್ಶಿಗಳ ಜೊತೆ ವೀಡಿಯೋ ಕಾನ್ಫರೆನ್ಸ್ ನಡೆಸಿದರು. ರಾಜ್ಯಗಳು ಇದುವರೆಗೆ  ಕೈಗೊಂಡ ಕ್ರಮಗಳಿಗಾಗಿ ಕೃತಜ್ಞತೆ ಸಲ್ಲಿಸಿದ ಅವರು ಹೆಚ್ಚು ಸಂಖ್ಯೆಯಲ್ಲಿ ಪ್ರಕರಣಗಳು ವರದಿಯಾಗುತ್ತಿರುವ ಜಿಲ್ಲೆಗಳ ಬಗ್ಗೆ ಮತ್ತು ಪ್ರಕರಣಗಳು ವೇಗವಾಗಿ ದುಪ್ಪಟ್ಟು ಆಗುತ್ತಿರುವ ಪ್ರದೇಶಗಳ ಬಗ್ಗೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಸಾವು ಸಂಭವಿಸುತ್ತಿರುವ ಜಿಲ್ಲೆಗಳ ಬಗ್ಗೆ ಗಮನ ಕೇಂದ್ರೀಕರಿಸುವಂತೆ ಕೋರಿದರು. ನಿಗಾ, ಮನೆಯಿಂದ ಮನೆಗೆ ಆಕ್ಟಿವ್ ಪ್ರಕರಣಗಳ ಪತ್ತೆ , ಸಾಕಷ್ಟು ಮುಂಚಿತವಾಗಿ ಪ್ರಕರಣಗಳನ್ನು ಗುರುತಿಸುವಿಕೆ ಮತ್ತು ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆತು , ಸಾವುಗಳ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸೂಕ್ತ ಕ್ಲಿನಿಕಲ್ ನಿರ್ವಹಣೆ ಬಗ್ಗೆ ಗಮನ ಹರಿಸುವಂತೆ ಅವರು ರಾಜ್ಯಗಳನ್ನು ಕೋರಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1618338

ಮಹತ್ವದ ಸಾಧನೆ, ..ಟಿ. ದಿಲ್ಲಿಯಿಂದ  ಕಡಿಮೆ ವೆಚ್ಚದ    ಕೋವಿಡ್ 19  ಪತ್ತೆ ಪರೀಕ್ಷಾ ಸಾಧನ

ಕೋವಿಡ್ -19 ಪತ್ತೆಗಾಗಿ ಪರೀಕ್ಷಾ ಸಾಧನವನ್ನು ..ಟಿ. ದಿಲ್ಲಿಯ ವಿಜ್ಞಾನಿಗಳು ಅಭಿವೃದ್ದಿಪಡಿಸಿದ್ದು ಕೇಂದ್ರ ಎಚ್.ಆರ್.ಡಿ. ಸಚಿವರು ವಿಜ್ಞಾನಿಗಳ ತಂಡವನ್ನು ಅಭಿನಂದಿಸಿದರು. ಪರೀಕ್ಷಾ ಕಿಟ್ ಆರೋಗ್ಯ ಸೇವೆಗಳನ್ನು ಸಶಕ್ತಗೊಳಿಸುತ್ತದೆ ಮತ್ತು ಕೋವಿಡ್ -19 ನಿಭಾವಣೆಯಲ್ಲಿ ಸರಕಾರದ ಪ್ರಯತ್ನಗಳನ್ನು ಬೆಂಬಲಿಸುತ್ತದೆ. ಇದು ಕೋವಿಡ್ -19 ಕ್ಕಾಗಿ .ಸಿ.ಎಂ.ಆರ್. ನಿಂದ ಅನುಮೋದನೆಗೊಂಡಿರುವ ಪರೀಕ್ಷಾ ಸಾಧನವಾಗಿದೆ. ಮತ್ತು ಇದು ನಿರ್ದಿಷ್ತ ಹಾಗು ಕೈಗೆಟಕುವ ದರದ ಪರೀಕ್ಷಾ ಸಾಧನವಾಗಿದೆ. ಇದಕ್ಕೆ ಫ್ಲೋರೋಸೆಂಟ್ ಸಲಕರಣೆಗಳು ಅಗತ್ಯವಿಲ್ಲ . ಸುಲಭದಲ್ಲಿ  ಬಳಸಬಹುದು . ತಂಡವು ಬೃಹತ್ ಪ್ರಮಾಣದಲ್ಲಿ ಕಿಟ್ ಗಳನ್ನು ಕೈಗೆಟಕುವ ದರದಲ್ಲಿ ಸೂಕ್ತ ಕೈಗಾರಿಕಾ ಸಹಭಾಗಿಗಳ ಜೊತೆ ಸಾಧ್ಯವಾದಷ್ಟು ಬೇಗ ತಯಾರಿಸುವ ಇರಾದೆಯನ್ನು ಹೊಂದಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1618089

ಎಂ.ಎಸ್.ಎಂ..ಗಳಿಗೆ ವಿಳಂಬ ಪಾವತಿ ವಿಷಯವನ್ನು ಬಗೆಹರಿಸಲು ಸರಕಾರವು ಪ್ರತ್ಯೇಕ ಯೋಜನೆಯ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ-ಶ್ರೀ ನಿತಿನ್ ಗಡ್ಕರಿ

ಎಂ.ಎಸ್.ಎಂ. . ಗಳಿಗೆ ವಿಳಂಬ ಪಾವತಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಶ್ರೀ ಗಡ್ಕರಿ ಪಾವತಿಯನ್ನು ತ್ವರಿತವಾಗಿ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕಾಗಿದೆ ಮತ್ತು ಎಲ್ಲಾ ಸರಕಾರಿ ಇಲಾಖೆಗಳಿಗೆ ನಿಟ್ಟಿನಲ್ಲಿ ಅಂತಹ ನಿರ್ದೇಶನಗಳನ್ನು ನೀಡಲಾಗಿದೆ ಎಂದಿದ್ದಾರೆ.

ವಿವರಗಳಿಗೆ: https://pib.gov.in/PressReleseDetail.aspx?PRID=1618047

ರಾಜ್ಯ ಗ್ರಾಮೀಣಾಭಿವೃದ್ದಿ ಸಚಿವರ ಜೊತೆ  ವೀಡಿಯೋ ಕಾನ್ಫರೆನ್ಸ್ ನಡೆಸಿದ ಗ್ರಾಮೀಣಾಭಿವೃದ್ದಿ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್

ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎಂ.ಜಿ. ನರೇಗಾ) , ಪ್ರಧಾನ ಮಂತ್ರಿ ಆವಾಸ್ ಯೋಜನಾ ಗ್ರಾಮೀಣ  (ಪಿ.ಎಂ..ವೈ.-ಜಿ.) , ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನಾ (ಪಿ.ಎಂ.ಜಿ.ಎಸ್.ವೈ.) ಮತ್ತು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಶನ್ (ಎನ್.ಆರ್.ಎಲ್.ಎಂ.) ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು. ಕೋವಿಡ್ -19   ಸವಾಲನ್ನು ಗ್ರಾಮೀಣ ಮೂಲಸೌಕರ್ಯಗಳನ್ನು ಬಲಪಡಿಸಲು , ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಸಲು ಮತ್ತು ಗ್ರಾಮೀಣ ಜೀವನೋಪಾಯಗಳನ್ನು  ವೈವಿಧ್ಯಮಯಗೊಳಿಸುವುದಕ್ಕೆ ಬಳಸಬೇಕು ಎಂದು ಸಚಿವರು ಒತ್ತಿ ಹೇಳಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1618048

ಆರಂಭಗೊಂಡ ವಾರದಲ್ಲಿಯೇ ವಿಕ್ರಮ ಮೆರೆದ ಕಿಸಾನ್ ರಥ್  ಮೊಬೈಲ್ ಆಪ್

ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು 17.04.2020 ರಂದು ಕೃಷಿಕರಿಗೆ ಮತ್ತು ವರ್ತಕರಿಗೆ ಆಹಾರ ಧಾನ್ಯಗಳು, ( ಬೇಳೆ ಕಾಳುಗಳು, ಸಿರಿ ಧಾನ್ಯಗಳು, ದ್ವಿದಳ ಧಾನ್ಯಗಳು ಇತ್ಯಾದಿ ) ಹಣ್ಣುಗಳು, ಮತ್ತು ತರಕಾರಿಗಳು, ತೈಲ ಬೀಜಗಳು, ಸಾಂಬಾರು ಪದಾರ್ಥಗಳು, ನಾರಿನ ಬೆಳೆಗಳು , ಹಣ್ಣುಗಳು, ಬಿದಿರು, ಮರದ ದಿಮ್ಮಿಗಳು ಮತ್ತು ಲಘು ಅರಣ್ಯ ಉತ್ಪನ್ನಗಳು , ತೆಂಗಿನ ಕಾಯಿ ಇತ್ಯಾದಿಗಳನ್ನು ಸಾಗಾಟ ಮಾಡಲು ಸೂಕ್ತ ಸಾರಿಗೆ ಮಾದರಿಯನ್ನು ಗುರುತಿಸಿಕೊಳ್ಳಲು ಅನುಕೂಲವಾಗುವಂತೆ  ಕಿಸಾನ್  ರಥ್”  ಆಪ್ ನ್ನು ಆರಂಭಿಸಿತ್ತು. ಇಂದಿನವರೆಗೆ ಒಟ್ಟು  80,474  ಮತ್ತು  70,581 ವರ್ತಕರು ಆಪ್ ನಲ್ಲಿ ನೊಂದಾಯಿಸಿಕೊಂಡಿದ್ದಾರೆ.

ವಿವರಗಳಿಗೆ: https://pib.gov.in/PressReleseDetail.aspx?PRID=1618332

ಹಣಕಾಸು ಆಯೋಗವು ತನ್ನ ಸಲಹಾ ಮಂಡಳಿಯ ಜೊತೆ ಸಭೆ ನಡೆಸಿತು

ಭಾರತೀಯ ಆರ್ಥಿಕತೆಯ ಮೇಲೆ ಕೋವಿಡ್ ಜಾಗತಿಕ ಸಾಂಕ್ರಾಮಿಕದ ಪರಿಣಾಮ ಮತ್ತು ರಾಷ್ತ್ರೀಯ ಲಾಕ್ ಡೌನ್ ನಿಂದಾಗಿ ದೇಶೀಯ ಕಾರ್ಯಚಟುವಟಿಕೆಯಲ್ಲಿ ಇಳಿತ ಕಂಡುಬಂದು ಹಿಂಜರಿತ ಉಂಟಾಗಬಹುದು ಎಂದು ಸಲಹಾ ಮಂಡಳಿಯ ಸದಸ್ಯರು ಅಭಿಪ್ರಾಯ ಪಟ್ಟಿದ್ದಾರೆ. 2020 ಮಾರ್ಚ್ ಗೆ ಮೊದಲು ಮಾಡಲಾದ ಜಿ.ಡಿ.ಪಿ. ಲೆಕ್ಕಾಚಾರದ ಬಗ್ಗೆ ಇಡೀಯಾಗಿ ಮರು ಪರಿಶೀಲನೆ ಮಾಡಬೇಕಾದ ಅಗತ್ಯವನ್ನು ಮುಂದಿಟ್ಟಿರುವ ಅವರು ಅದನ್ನು ಕೆಳಮುಖವಾಗಿ ಪರಿಷ್ಕರಿಸಬೇಕಾಗಬಹುದು ಎಂದಿದ್ದಾರೆ. ಆರ್ಥಿಕತೆಯ ಲಾಕ್ ಡೌನ್ ಮುಕ್ತಗೊಂಡರೆ , ಮರು ಚೇತರಿಕೆಯು  ಮತ್ತೆ ಕೆಲಸಕ್ಕೆ ಹಾಜರಾಗುವ ಕಾರ್ಮಿಕ ಶಕ್ತಿಯನ್ನು ಅವಲಂಬಿಸಿ , ಮಧ್ಯಂತರ ಸಾಮಗ್ರಿಗಳ ಪೂರೈಕೆ ಮತ್ತು ನಗದು ಹರಿವಿನ  ಹಾಗು ಉತ್ಪನ್ನಕ್ಕೆ ಇರುವ ಬೇಡಿಕೆಯನ್ನು ಅನುಸರಿಸಿ ನಿಧಾನಗತಿಯಲ್ಲಿ  ಸಾಗುತ್ತದೆ

ವಿವರಗಳಿಗೆ: https://pib.gov.in/PressReleseDetail.aspx?PRID=1618088

ಅಂಚೆ ಇಲಾಖೆಯು ಅವಶ್ಯಕ ವಸ್ತುಗಳನ್ನು ರಾಷ್ಟ್ರೀಯ ರಸ್ತೆ ಸಾರಿಗೆ ಜಾಲದ ಮೂಲಕ 22 ಮಾರ್ಗಗಳಲ್ಲಿ 500 ಕಿಲೋ ಮೀಟರ್ ದೂರದವರೆಗೆ ಪೂರೈಕೆ ಮಾಡುತ್ತದೆ

ನಗರದೊಳಗೆ ಪೂರೈಕೆಗೆ  ಬಳಸುತ್ತಿದ್ದ  ಹಾಲಿ ಇರುವ ಇಲಾಖಾ ವಾಹನಗಳನ್ನು ಬಳಸಿಕೊಂಡು  ರಾಷ್ಟ್ರೀಯ ರಸ್ತೆ ಸಾರಿಗೆ ಜಾಲವನ್ನು ವಿನ್ಯಾಸಗೊಳಿಸಲಾಗಿದ್ದು, 22 ಧೀರ್ಘ ದೂರದ ಮಾರ್ಗಗಳಲ್ಲಿ ಅಂಚೆ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ಅಂತರ ರಾಜ್ಯ ಮತ್ತು ರಾಜ್ಯದೊಳಗೇ ವೇಳಾಪಟ್ಟಿಯನ್ನು ರೂಪಿಸಿಕೊಂಡು  ದೇಶದ ೭೫ ನಗರಗಳನ್ನು ತಲುಪುವಂತೆ ೫೦೦ ಕಿಲೋ ಮೀಟರ್ ದೂರದವರೆಗೆ ವ್ಯಾಪ್ತಿಯನ್ನು ನಿಗದಿ ಮಾಡಿಕೊಂಡು ಅದು ಅವಶ್ಯಕ ವಸ್ತುಗಳ ಸಾಗಾಟವನ್ನು ಖಾತ್ರಿಪಡಿಸಿದೆ. ಅಂಚೆ ಇಲಾಖೆಯು ಅವಶ್ಯಕ ವಸ್ತುಗಳನ್ನು ಒಳಗೊಂಡ ಪಾರ್ಸೆಲ್ ಗಳನ್ನು ದೇಶದೊಳಗೆ ಎಲ್ಲಿ ಬೇಕಾದರೂ ತಲುಪಿಸುವ ಸಾಮರ್ಥ್ಯವನ್ನು ಗಳಿಸಿಕೊಂಡಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1618331

ದೇಶದಲ್ಲಿ .ಟಿ ಸೇವೆಗಳ ಪರಿಸ್ಥಿತಿ ಯನ್ನು ಅವಲೋಕಿಸಿದ ಶ್ರೀ ಸಂಜಯ್ ಧೋತ್ರೆ

75 ಮಿಲಿಯನ್ ಜನರು ಈಗಾಗಲೇ ಆರೋಗ್ಯ ಸೇತು ಆಪ್ ಡೌನ್ ಲೋಡ್ ಮಾಡಿಕೊಂಡಿರುವ ಬಗ್ಗೆ ಸಚಿವರಿಗೆ ತಿಳಿಸಲಾಯಿತು. ಆಪ್ ಕೋವಿಡ್ ವಿರುದ್ದದ ಹೋರಾಟದಲ್ಲಿ ಬಹಳ ಮಹತ್ವದ ಸಲಕರಣೆ ಎಂದವರು ಬಣ್ಣಿಸಿದರು. ಜಾಗತಿಕ ಸಾಂಕ್ರಾಮಿಕದ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಇದೊಂದು ಲೈಫ್ ಲೈನ್ ಎಂದ ಅವರು ಆಪ್ ಅನ್ನು ಜನಪ್ರಿಯಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1617885

ಬೇಳೆ ಕಾಳುಗಳ ವಿತರಣೆಗೆ ಬೃಹತ್ ಕಾರ್ಯಾಚರಣೆ ಜಾರಿಯಲ್ಲಿ

ದೇಶದಲ್ಲಿ ಮೂರು ತಿಂಗಳು ಕಾಲ 20  ಕೋಟಿ ಮನೆಗಳಿಗೆ ಒಂದು ಕಿಲೋ ಬೇಳೆ ಕಾಳುಗಳನ್ನು ನೀಡುವ  ಬೃಹತ್ ಕಾರ್ಯಾಚರಣೆ ಜಾರಿಯಲ್ಲಿದೆ. ಸಾಗಾಟ ಮತ್ತು ಅವುಗಳ ಸಂಸ್ಕರಣೆ ನಡೆಯುತ್ತಿದೆ. ನಫೇಡ್ 20 ಕೋಟಿ ಎನ್.ಎಫ್.ಎಸ್.. ಮನೆಗಳಿಗೆ ಪಡಿತರ ಅಂಗಡಿಗಳ ಮೂಲಕ ಮೂರು ತಿಂಗಳು ಪಿ,ಎಂ.ಜಿ.ಕೆ.ವೈ ಅಡಿಯಲ್ಲಿ ಒಟ್ಟು 5.88 ಎಲ್.ಎಂ.ಟಿ. ಬೇಳೆ ಕಾಳುಗಳನ್ನು ಪೂರೈಸಲಿದೆ. ಇದು ಎರಡು ಲಕ್ಷ ಟ್ರಕ್ ಟ್ರಿಪ್ ಗಳನ್ನು ಒಳಗೊಂಡಿದೆ ಮತ್ತು ನಾಲ್ಕು ವಾರಗಳ ಲೋಡಿಂಗ್ ಹಾಗು ಅನ್ ಲೋಡಿಂಗ್ ಕಾರ್ಯಾಚರಣೆಯನ್ನು ಒಳಗೊಂಡಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1618155

ಭಾರತೀಯ ನಾವಿಕ ವಲಯದ ಪ್ರತಿನಿಧಿಗಳ ಜೊತೆ  ಶ್ರೀ ಮನ್ ಸುಖ್ ಮಾಂಡವೀಯ ಸಂವಾದ ಮತ್ತು ವ್ಯಾಪಾರ ಮುಂದುವರಿಕೆ ಯೋಜನೆ ಹಾಗು ಕೋವಿಡೋತ್ತರ ಕಾಲದಲ್ಲಿ ಪುನಶ್ಚೇತನ ಹಾದಿಯ ಬಗ್ಗೆ ಸಮಾಲೋಚನೆ

ಶ್ರೀ ಮನ್ ಸುಖ್ ಮಾಂಡವೀಯ ಅವರು ನಾವಿಕ ವಲಯದ ಕೈಗಾರಿಕೆಗಳ ಭಾಗೀದಾರರಿಗೆ ಭಾರತೀಯ ಬಂದರು ಗಳು  ಎಂದಿನಂತೆ ಕಾರ್ಯಾಚರಣೆ ನಡೆಸಲು ಸಿದ್ದವಾಗಿವೆ ಆದರೆ ಅಲ್ಲಿ ಕೋವಿಡ್ -19 ರಿಂದಾಗಿ ಕೆಲವು ಸವಾಲುಗಳು ಉಳಿದುಕೊಂಡಿವೆ, ಅವುಗಳನ್ನು ನೀತಿ ನಿರ್ಧಾರಗಳ ಮೂಲಕ ಮತ್ತು ಅವುಗಳ ಪ್ರಾಮಾಣಿಕ ಅನುಷ್ಟಾನದ ಮೂಲಕ ಪರಿಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ವಿವರಗಳಿಗೆ: https://pib.gov.in/PressReleseDetail.aspx?PRID=1617965

ಭಾರತೀಯ ರೈಲ್ವೇ ಯಲ್ಲಿ ಬೋಗಿ ನಿರ್ಮಾಣ ಮತ್ತೆ ಹಳಿಗೆ ಬರುತ್ತಿದೆ

ಭಾರತೀಯ ರೈಲ್ವೇಯ ಉತ್ಪಾದನಾ ಘಟಕವಾದ ಕಪೂರ್ತಾಲಾದ ರೈಲ್ ಕೋಚ್ ಕಾರ್ಖಾನೆ ( ಆರ್.ಸಿ.ಎಫ್.)  28  ದಿನಗಳ ಲಾಕ್ ಡೌನ್ ಬಳಿಕ ದಿನಾಂಕ 23.04.2020 ರಂದು ಉತ್ಪಾದನಾ ಪ್ರಕ್ರಿಯೆಯನ್ನು ಪುನರಾರಂಭ ಮಾಡಿತು. ಕೋವಿಡ್ -19 ವಿರುದ್ದ ಅವಿಶ್ರಾಂತ ಹೋರಾಟದಲ್ಲಿ ಕಾರ್ಖಾನೆಯನ್ನು ಎಲ್ಲಾ ಸುರಕ್ಷಾ ಮುಂಜಾಗರೂಕತಾ ಕ್ರಮಗಳಿಗೆ ಬದ್ದವಾಗಿ ಮತ್ತು ಗೃಹ ವ್ಯವಹಾರಗಳ ಸಚಿವಾಲಯದ ಆದೇಶದ ಮಾರ್ಗದರ್ಶಿಗಳು ಹಾಗು ಸ್ಥಳೀಯಾಡಳಿತದ ಸೂಚನೆಗಳನ್ನು ಅಳವಡಿಸಿಕೊಂಡು ಆರಂಭಿಸಲಾಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1618164

ಆರ್ ಮತ್ತು ಡಿ ಆಧಾರಿತ ತಾಂತ್ರಿಕ ಪರಿಹಾರಗಳು ಮತ್ತು ಉತ್ಪನ್ನಗಳ ಜೊತೆಗೆ ಸಿ.ಎಸ್..ಅರ್. ಹ್ಯಾಂಡ್ ಸ್ಯಾನಿಟೈಸರ್, ಸಾಬೂನುಗಳು ಮತ್ತು ಕ್ರಿಮಿನಾಶಕಗಳನ್ನು ಕೋವಿಡ್ -19 ತಡೆಗಾಗಿ  ತಕ್ಷಣವೇ ಒದಗಿಸಿದೆ

ವಿವರಗಳಿಗೆ: https://pib.gov.in/PressReleseDetail.aspx?PRID=1618158

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಆನಿಮೇಶನ್ ಮಾಡಲಾದ ವೀಡಿಯೋದಲ್ಲಿ ಟ್ರಕ್/ ಲಾರಿಗಳ ಚಾಲಕರು ಏನು ಮಾಡಬೇಕು ಮತ್ತು ಏನನ್ನು ಮಾಡಬಾರದು ಎಂಬ ವಿವರಗಳನ್ನು ಒದಗಿಸಿದೆ. ಇವರು ದೇಶಾದ್ಯಂತ ಸರಕುಗಳ ಸಾಗಾಟದಲ್ಲಿ ನಿರತರಾಗಿರುವುದರಿಂದ ಮತ್ತು ಚಲನ ವಲನಗಳಲ್ಲಿ ಇರುವ ಹಿನ್ನೆಲೆಯಲ್ಲಿ ಸಲಹೆಗಳನ್ನು ನೀಡಲಾಗಿದೆ

ವಿವರಗಳಿಗೆ: https://pib.gov.in/PressReleseDetail.aspx?PRID=1618206

ದಿಲ್ಲಿ ಹೆರಿಟೇಜ್ ರೋಟರಿ ಕ್ಲಬ್ ಪಿ..ಬಿ ಜೊತೆಗೂಡಿ 50,000 ಮರುಬಳಕೆ ಮಾಡಬಹುದಾದ ಮುಖಗವಸುಗಳನ್ನು ಪೂರೈಸಿದೆ. ಮುಖಗವಸುಗಳನ್ನು ಲಾಕ್ ಡೌನ್ ಅವಧಿಯಲ್ಲಿ ಮಹಿಳೆಯರು ಮನೆಯಿಂದಲೇ ಕೆಲಸ ನಿರ್ವಹಿಸುವ ಮೂಲಕ ತಯಾರಿಸಿದ್ದಾರೆ. ಮುಖಗವಸುಗಳನ್ನು ಪಿ..ಬಿ. ಪ್ರಧಾನ ಮಹಾನಿರ್ದೇಶಕರು ವಿತರಿಸಿದರು

ವಿವರಗಳಿಗೆ: https://pib.gov.in/PressReleseDetail.aspx?PRID=1618146

ಲಾಕ್ ಡೌನ್ ಹೊರತಾಗಿಯೂ ಎನ್.ಟಿ.ಪಿ.ಸಿ.ಯು ಅಡೆ ತಡೆ ಇಲ್ಲಗೆ ವಿದ್ಯುತ್ ಪೂರೈಕೆ ಮಾಡಿದೆ

ವಿವರಗಳಿಗೆ: https://pib.gov.in/PressReleseDetail.aspx?PRID=1618132

ಪ್ರವಾಸೋದ್ಯಮ ಸಚಿವಾಲಯವು  ದೇಖೋ ಅಪ್ನಾ ದೇಶ್ ಸರಣಿಯಲ್ಲಿ 8 ನೇ ವೆಬಿನಾರನ್ನು ಈಶಾನ್ಯ ಭಾರತ್ ಅನುಭವ ಮತ್ತು ವಿಶೇಷ ಗ್ರಾಮಗಳುಕುರಿತಂತೆ ಆಯೋಜಿಸಿತ್ತು. ವೆಬಿನಾರ್ ನಲ್ಲಿ ವಿವಿಧ ದೇಶಗಳ ಜನರು ಭಾಗವಹಿಸಿದ್ದರಿಂದ  ಜನರ ಆಸಕ್ತಿ ಕುದುರಿಸುವಲ್ಲಿ ಯಶಸ್ವಿಯಾಯಿತು.

ವಿವರಗಳಿಗೆ: https://pib.gov.in/PressReleseDetail.aspx?PRID=1618111

ಆದಾಯ ತೆರಿಗೆ ಟ್ರಿಬ್ಯುನಲ್ , .ಟಿ..ಟಿ. ಗಳು ಇದೇ ಮೊದಲ ಬಾರಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಹಿಯರಿಂಗ್ (ವಿಚಾರಣೆ ) ನಡೆಸಿದವು

ವಿವರಗಳಿಗೆ: https://pib.gov.in/PressReleseDetail.aspx?PRID=1618093

ಪಿಂಪ್ರಿ ಚಿಂಚವಾಡ್ ಕೋವಿಡ್ -19  ವಾರ್ ರೂಂ ತಂತ್ರಜ್ಞಾನ ಆಧರಿಸಿಕೊಂಡು ದಕ್ಷ ನಿರ್ಧಾರ ಕೈಗೊಳ್ಳಲು  ದತ್ತಾಂಶ ಟ್ರ್ಯಾಕಿಂಗ್ ಬಳಸುತ್ತಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1617889

 

ಪಿ.ಐ.ಬಿ. ಕ್ಷೇತ್ರ ಕಾರ್ಯಾಲಯಗಳಿಂದ ಮಾಹಿತಿ

  • ಚಂಡೀಗಢ: ಕೊರೊನಾ ಸಂತ್ರಸ್ತರ ಗುಣಮುಖ ದರ ರಾಷ್ಟ್ರ ಮಟ್ಟದಲ್ಲಿ 20 % ಇದ್ದರೆ ಚಂಡೀಗಢದಲಿ ದರ 56% . ಗರಿಷ್ಟ ಗುಣಮುಖ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯಲ್ಲಿ ಚಂಡೀಗಢ ಮೂರನೆಯ ಸ್ಥಾನದಲ್ಲಿದೆ. ಚಂಡೀಗಢದಲ್ಲಿ ಪ್ರಕರಣಗಳ ದುಪ್ಪಟ್ಟಗುವ ದರ 30.26 ದಿನಗಳು, ರಾಷ್ಟ್ರೀಯ ಸರಾಸರಿ 8.6 ದಿನಗಳು.ಜೈಲು ಆವರಣಗಳಲ್ಲಿ ಕೋವಿಡ್ -19  ಸ್ಪೋಟಗೊಳ್ಳುವುದನ್ನು ತಡೆಯಲು  ಜೈಲಿನಲ್ಲಿರುವವರನ್ನು ಪರೀಕ್ಷೆಗೆ ಒಳಪಡಿಸಲು ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ.
  • ಪಂಜಾಬ್: ಜಿಲ್ಲಾಧಿಕಾರಿಗಳ ನಿಯಂತ್ರಣದಲ್ಲಿರುವ  ಕೈಗಾರಿಕಾ ಇಲಾಖೆ ಮತ್ತು ಜಿಲ್ಲಾ ಕೈಗಾರಿಕೆಗಳ ಕೇಂದ್ರಗಳಿಗೆ  ಪುನರಾರಂಭ ಮಾಡಲು ಅರ್ಹತೆ ಇರುವ ಕೈಗಾರಿಕಾ ಘಟಕಗಳಿಗೆ ಅವಶ್ಯ ಕರ್ಫ್ಯೂ ಪಾಸ್ ಗಳೊಂದಿಗೆ ಸೂಕ್ತ ಮಂಜೂರಾತಿಗಳನ್ನು ಅರ್ಜಿ ಸಲ್ಲಿಕೆಯಾದ 12 ಗಂಟೆಗಳ ಒಳಗೆ ಒದಗಿಸುವಂತೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದ್ದಾರೆ..  ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಂಜಾಬಿನ ಅತ್ಯಂತ ಕಿರಿಯ ವಯಸ್ಸಿನ ಸರಪಂಚರಾದ ಪಲ್ಲವಿ ಠಾಕೂರ್ ಜೊತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರು ದೇಶದ ರೈತರು ಅದರಲ್ಲೂ ಪಂಜಾಬಿನ ರೈತರು ದೇಶದ ಆಹಾರಧಾನ್ಯ ಸಂಗ್ರಹ ತುಂಬಲು ಸ್ವಾರ್ಥ ರಹಿತವಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
  • ಹರ್ಯಾಣ: ಬಿಕ್ಕಟ್ಟಿನ ಸಮಯದಲ್ಲಿ ಹರ್ಯಾಣಾ ಸರಕಾರದ ಕೋವಿಡ್ -19 ನಿಯಂತ್ರಣ ಕೊಠಡಿ ರಾಜ್ಯದ ಜನತೆಗೆ ಬಹಳ ಉಪಯುಕ್ತವಾಗಿದೆ. ಜನರು ಸಹಾಯವಾಣಿಗೆ ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಿದ್ದಾರೆ. ಈಗಿರುವ ಕೋವಿಡ್ -19 ಪರಿಸ್ಥಿತಿಯಲ್ಲಿ ಹರ್ಯಾಣಾ ಸರಕಾರವು ವಿದ್ಯಾರ್ಥಿಗಳಿಗೆ ತಿಂಗಳೊಂದಕ್ಕೆ ಟ್ಯೂಶನ್ ಶುಲ್ಕವನ್ನು ಮಾತ್ರವೇ ವಿಧಿಸುವಂತೆ ಖಾಸಗಿ ಶಾಲೆಗಳಿಗೆ ನಿರ್ದೇಶನ ನೀಡಿದೆ.
  • ಹಿಮಾಚಲ ಪ್ರದೇಶ: ವಿದ್ಯಾರ್ಥಿಗಳಿಗೆ ಮನೆ ಆಧಾರಿತ ಬೋಧನಾ ಸೌಲಭ್ಯವನ್ನು ಒದಗಿಸಲು ರಾಜ್ಯ ಸರಕಾರವು ಹರ್ ಘರ್ಪಾಠಶಾಲಾಯೋಜನೆಯನ್ನು ಆರಂಭಿಸಿದೆ. ಕೊರೊನಾ ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕರ್ಫ್ಯೂ ಜಾರಿಯಲ್ಲಿರುವ ಕಾರಣದಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆ ಆಗಬಾರದು ಎಂದು ಯೋಜನೆಯನ್ನು ಆರಂಭಿಸಲಾಗಿದೆ. ಇದರಡಿಯಲ್ಲಿ ವಿದ್ಯಾರ್ಥಿಗಳನ್ನು ಗರಿಷ್ಟ ಪ್ರಮಾಣದಲ್ಲಿ ತಲುಪಲು ಬಹು ಕಾರ್ಯಕ್ರಮಗಳನ್ನು ಬಳಸಲಾಗುತ್ತದೆ. ದೂರದರ್ಶನ ಶಿಮ್ಲಾದಲ್ಲಿ ದಿನಕ್ಕೆ ಮೂರು ಗಂಟೆಗಳ ಅವಧಿಯಲ್ಲಿ ಹತ್ತನೆ ತರಗತಿ ಮತ್ತು ಹನ್ನೆರಡನೆ ತರಗತಿ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟು ಕೊಂಡು ಪಾಠಗಳನ್ನು ಮಾಡಲಾಗುತ್ತದೆ. ಇದಲ್ಲದೆ ಶಿಕ್ಷಕರು ವಾಟ್ಸ್ಯಾಪ್ ಮೂಲಕ ಮತ್ತು ಕೇಂದ್ರೀಕೃತ ಜಾಲತಾಣದ ಮೂಲಕ ಆನ್ ಲೈನ್ ತರಗತಿಗಳನ್ನು ನಡೆಸುತ್ತಾರೆ.
  • ಅರುಣಾಚಲ ಪ್ರದೇಶ: ಸರಕಾರದಿಂದ ಆಹಾರ ಸಂಸ್ಕರಣೆ ಮತ್ತು ಗುಡಿ ಕೈಗಾರಿಕೆಗಳ ಮೇಲಿನ ನಿರ್ಬಂಧ ತೆರವು
  • ಮಣಿಪುರ: ರಮ್ಜಾನ್ ಸಂದರ್ಭ ಸಾಮಾಜಿಕ ಅಂತರ ಖಾತ್ರಿಪಡಿಸಲು ಅಧಿಕಾರಿಗಳಿಂದ ಸರ್ವ ಮುಂಜಾಗರೂಕತಾ ಕ್ರಮ.
  • ಮಿಜೋರಾಂ: ಅಸ್ಸಾಂ ಮಿಜೋರಾಂ ಗಡಿಯ ವೈರೆಂಗ್ಟೆ ತಪಾಸಣಾ ಠಾಣೆಯಲ್ಲಿ ಕೋವಿಡ್ -19 ಹರಡುವಿಕೆ ನಿಯಂತ್ರಿಸಲು ಅವಶ್ಯಕ ಸಾಮಗ್ರಿಗಳನ್ನು ಸಾಗಿಸುವ ಟ್ರಕ್ ಗಳನ್ನು ಕ್ರಿಮಿನಾಶಕಗೊಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿ  .
  • ನಾಗಾಲ್ಯಾಂಡ್: ರಮ್ಜಾನ್ ವೇಳೆಯಲ್ಲಿ ಸಾಮಾಜಿಕ ಅಂತರದ ಪ್ರಾಮುಖ್ಯತೆಯನ್ನು ಅರಿತುಕೊಳ್ಳುವಂತೆ ಸಮುದಾಯದ ಸದಸ್ಯರಿಗೆ ಧಿಮಾಪುರ ಮುಸ್ಲಿಂ ಮಂಡಳಿ ಮನವಿ. ಆದುದರಿಂದ ಮನೆಯ ಮೇಲ್ಚಾವಣಿ, ಪಾರ್ಕಿಂಗ್  ಮತ್ತು ಅಪಾರ್ಟ್ ಮೆಂಟ್ ಇತ್ಯಾದಿಗಳಲ್ಲಿ ನಮಾಜ್ ಸಂಘಟಿಸಬಾರದು. ಕೋವಿಡ್ 19  ಜಾಗತಿಕ ಸಾಂಕ್ರಾಮಿಕದಿಂದಾಗಿ ನಷ್ಟವಾಗಿರುವ ತರಗತಿಗಳನ್ನು ಸರಿದೂಗಿಸಲು ನಾಗಾಲ್ಯಾಂಡ್ ರಾಜ್ಯದ ಅಧಿಕಾರಿಗಳು ಶಾಲೆಗಳಿಗೆ ಶನಿವಾರವನ್ನು ಕೆಲಸದ ದಿನವನ್ನಾಗಿ ಮಾಡಲುದ್ದೇಶಿಸಿದ್ದಾರೆ.  .
  • ಸಿಕ್ಕಿಂ: ಆರೋಗ್ಯ ಸಚಿವ ಡಾ, ಎಂ.ಕೆ. ಶರ್ಮಾ ಅವರು ಕೋವಿಡ್ -19  ಹೋರಾಟಕ್ಕಾಗಿ ರಾಂಗ್ಪೋ ದಲ್ಲಿ ಆರ್.ಟಿ.-ಪಿ.ಸಿ.ಆರ್. ಗಾಗಿ ಸಂಚಾರಿ ಪರೀಕ್ಷಾ ಬೂತ್ ಉದ್ಘಾಟಿಸಿದರು.
  • ಕೇರಳ: ಕೆಂಪು ವಲಯವನ್ನು ಹೊರತುಪಡಿಸಿ ರಾಜ್ಯದ ಉಳಿದೆಡೆಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ರಾಜ್ಯದ 7 ಹೊಸ ಸ್ಥಳಗಳನ್ನು ಹಾಟ್ ಸ್ಪಾಟ್ ಗಳೆಂದು ಘೋಷಿಸಲಾಗಿದೆ. ಕೋವಿಡ್ ಸ್ಪೋಟದ ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ಬಾಕಿಯಾಗಿರುವ ಭಾರತೀಯರನ್ನು ವಾಪಾಸು ಕರೆತರಲು ಸಿದ್ದತೆಗಳನ್ನು ಮಾಡುತ್ತಿರುವ ಕೇಂದ್ರದ ಕ್ರಮವನ್ನು ರಾಜ್ಯ ಸರಕಾರ ಸ್ವಾಗತಿಸಿದೆ. ವಿದೇಶಗಳಿಂದ ಕರೆತರುವವರಿಗಾಗಿ ಕ್ವಾರಂಟೈನ್ ಮಾಡಲು ಎರ್ನಾಂಕುಲಂ ಒಂದರಲ್ಲೇ 6000 ಮನೆಗಳು ಮತ್ತು ಫ್ಲ್ಯಾಟ್ ಗಳು ಸಿದ್ದಗೊಳ್ಳುತ್ತಿವೆ. ನಿನ್ನೆಯವರೆಗೆ ಒಟ್ಟು ಪ್ರಕರಣಗಳ ಸಂಖ್ಯೆ 450. ಗುಣಮುಖರಾದವರು 331, ಆಕ್ಟಿವ್ ಪ್ರಕರಣಗಳು 116.
  • ತಮಿಳುನಾಡು: ಚೆನ್ನೈ ಸಹಿತ 5 ನಗರಗಳಲ್ಲಿ ಭಾನುವಾರದಿಂದ ಸಂಪೂರ್ಣ ಲಾಕ್ ಡೌನ್ ಜಾರಿಯಾಗಲಿರುವುದರಿಂದ ಚೆನ್ನೈಯ ನಿವಾಸಿಗಳು ಇಂದು ಆತಂಕದಿಂದ ಖರೀದಿ ಮಾಡಿದರು. ಪುದುಚೇರಿಯಲ್ಲಿ ಕೋವಿಡ್ ರೋಗಿಯ 18 ವರ್ಷದ ಪುತ್ರ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದಾರೆ. ಇದರೊಂದಿಗೆ ಕೇಂದ್ರಾಡಳಿತ ಪ್ರದೇಶದಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 9 ಕ್ಕೇರಿದೆ ಮತ್ತು ಆಕ್ಟಿವ್ ಪ್ರಕರಣಗಳ ಸಂಖ್ಯೆ 4 ಆಗಿದೆ. ಮುಖ್ಯಮಂತ್ರಿ ಅವರು ದಿಲ್ಲಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮರ್ಕಜ್ ಘಟನೆ ಬಳಿಕ ದಿಲ್ಲಿಯಲ್ಲಿ ಕ್ವಾರಂಟೈನ್ ಆಗಿರುವ 559 ತಮಿಳುನಾಡು ಮುಸಲ್ಮಾನರ ಬಗ್ಗೆ ಕಾಳಜಿ ವಹಿಸುವಂತೆ ಮನವಿ ಮಾಡಿದ್ದಾರೆ. ನಿನ್ನೆಯವರೆಗೆ ಒಟ್ಟು ಪ್ರಕರಣಗಳ ಸಂಖ್ಯೆ  1755, ಸಾವುಗಳು :22, ಬಿಡುಗಡೆಯಾದವರು;866 ಗರಿಷ್ಟ ಸಂಖ್ಯೆಯ  ಪ್ರಕರಣಗಳಿರುವುದು ಚೆನ್ನೈಯಲ್ಲಿ -452.
  • ಕರ್ನಾಟಕ: ಇಂದು 15 ಹೊಸ ಪ್ರಕರಣಗಳು ದೃಢೀಕರಿಸಲ್ಪಟ್ಟಿವೆ. ಬೆಂಗಳೂರು 6, ಬೆಳಗಾವಿ 6, ಚಿಕ್ಕಬಳ್ಳಾಪುರ 1, ಮಂಡ್ಯ 1 ಮತ್ತು ದಕ್ಷಿಣ ಕನ್ನಡ 1. ಬೆಂಗಳೂರು ನಗರದ ಪತ್ರಕರ್ತರೋರ್ವರು ಸೋಂಕಿತರಲ್ಲಿ ಸೇರಿದ್ದಾರೆ. ಒಟ್ಟು ಪ್ರಕರಣಗಳು 489 , ಇದುವರೆಗೆ 18 ಮಂದಿ ಮೃತಪಟ್ಟಿದ್ದಾರೆ ಮತು 152 ಮಂದಿ ಬಿಡುಗಡೆಯಾಗಿದ್ದಾರೆ.
  • ಆಂಧ್ರ ಪ್ರದೇಶ: ಕಳೆದ 24 ಗಂಟೆಗಳಲ್ಲಿ 61 ಹೊಸ ಪ್ರಕರಣಗಳು ವರದಿಯಾಗಿವೆ. ಕರ್ನೂಲು ಮತ್ತು ಕೃಷ್ಣಾದಲ್ಲೆ 2 ಸಾವುಗಳ ವರದಿಯಾಗಿವೆ. ಇದುವರೆಗೆ ಶೂನ್ಯ ಪ್ರಕರಣಗಳಿದ್ದ ಶ್ರೀಕಾಕುಲಂನಲ್ಲಿ ಈಗ 3 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಈಗ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 1016,ಆಕ್ಟಿವ್ ಪ್ರಕರಣಗಳು ; 814. ಗುಣಮುಖರಾದವರು 171, ಸಾವುಗಳ ಸಂಖ್ಯೆ 31. ಪರೀಕ್ಷೆ ಮಾಡಲಾದ ಮಾದರಿಗಳು 61,266  : ಕರ್ನೂಲು (275 ) ಗುಂಟೂರು (209 ) ಕೃಷ್ಣಾ (127 ) ಮತ್ತು ಚಿತ್ತೂರು ( 73) ಜಿಲ್ಲೆಗಳಲ್ಲಿ ಗರಿಷ್ಟ ಜಾಗೃತಿ ಘೋಷಿಸಲಾಗಿದೆ. ರಾಜ್ಯದಲ್ಲಿ ವರದಿಯಾದ ಒಟ್ಟು ಪ್ರಕರಣಗಳಲ್ಲಿ ಜಿಲ್ಲೆಗಳ ಪಾಲು 66% ಆಗಿದೆ.
  • ತೆಲಂಗಾಣ: ಕೋವಿಡ್ -19 ಪರಿಸ್ಥಿತಿಯ ಅವಲೋಕನ ಮತ್ತು ಜಾಗತಿಕ ಸಾಂಕ್ರಾಮಿಕ ನಿರ್ವಹಣೆಯಲ್ಲಿ  ರಾಜ್ಯದ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಲು ಅಂತರ ಸಚಿವಾಲಯ ತಂಡ ಹೈದರಾಬಾದಿಗೆ ಆಗಮಿಸಿತು. ಗುಣಮುಖರಾಗಿ ಬಿಡುಗಡೆಯಾದ ಕನಿಷ್ಟ 15 ಮಂದಿ ರೋಗಿಗಳು ಅವಶ್ಯ ಬಿದ್ದಾಗ ತಮ್ಮ ಪ್ಲಾಸ್ಮಾವನ್ನು ದಾನ ಮಾಡಲು ಒಪ್ಪಿಕೊಂಡಿದ್ದಾರೆ. ತೆಲಂಗಾಣದಲ್ಲಿಯ ಸುಮಾರು 30% ಜಿಲ್ಲೆಗಳು ಸರಕಾರದಿಂದ ಕೋವಿಡ್ -19 ಮುಕ್ತ ಎಂದು ಘೋಷಿಸಲ್ಪಟ್ತಿವೆ.ಇದುವರೆಗೆ ತೆಲಂಗಾಣದಲ್ಲಿ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ. ಪಾಸಿಟಿವ್ ಪ್ರಕರಣಗಳ ಸಂಖ್ಯೆ 983, ಆಕ್ಟಿವ್ ಪ್ರಕರಣಗಳ ಸಂಖ್ಯೆ 663
  • ಜಮ್ಮು ಮತ್ತು ಕಾಶ್ಮೀರ: ಕಳೆದ 24 ಗಂಟೆಗಳಲ್ಲಿ 1071 ಮಾದರಿಗಳನ್ನು ಪರೀಕ್ಷಿಸಲಾಗಿದೆ , ಇಂದು ಮತ್ತೆ 40 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ, ಎಲ್ಲವೂ ಕಾಶ್ಮೀರದವು, ಈಗ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 494. ಜಮ್ಮು -57 ಮತ್ತು ಕಾಶ್ಮೀರ -437. ಒಟ್ಟು ಸಾವುಗಳು -6

 

ಪಿ.ಐ.ಬಿ. ವಾಸ್ತವ ಪರಿಶೀಲನೆ

https://ci6.googleusercontent.com/proxy/YTkKLrIhcyGmM2Dz4t4htlqLwqHtQWew3TYiborNuNmJHYos8kFGP8Rh5XNwYfj5vw0Wwyq5_BWH6vqEtrZF15vtswqcfTVsdjPyGuFIWlje7j9cAtMc=s0-d-e1-ft#https://static.pib.gov.in/WriteReadData/userfiles/image/image0051527.jpg

https://ci4.googleusercontent.com/proxy/uywuV_0X2ZWIvlmmR5PB2gCpSl_niOdtpKIaAvQ7cowYG4-A_w7blmFWzXVt-P4IQtbUPE1U53LqIN7A8juKDHVMGY0iX2IPRSGPspGBZ4AM8ggO8Czw=s0-d-e1-ft#https://static.pib.gov.in/WriteReadData/userfiles/image/image006CK64.png

https://ci4.googleusercontent.com/proxy/k_rOPhpr2rjJ1EcT0EX79T2BmNJpBRSNCUbORJF8I9uYJbeCDvekwbaKUarykjLhqs_7ifpHQIKSRY2mpxwwKQ1C6bncLd5BdyeMoiexJ5fIYqHsTevl=s0-d-e1-ft#https://static.pib.gov.in/WriteReadData/userfiles/image/image0079N9I.png

https://ci3.googleusercontent.com/proxy/jQgHTqsO4Xkvi6H49tJqKf3bgMMF02PBjix2tpvqLFp-sIHCPAZiWc2w0qgATtKxFhor2eRGeKyVh1XcmfUHy-TdZBYEkHqEzGz2A3HvTI2TCoGKtcRO=s0-d-e1-ft#https://static.pib.gov.in/WriteReadData/userfiles/image/image008O4WW.jpg

***



(Release ID: 1618339) Visitor Counter : 218