ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
ಎಂ.ಎಸ್.ಎಂ.ಇ.ಗಳ ವಿಳಂಬ ಪಾವತಿ ಸಮಸ್ಯೆ ಪರಿಹರಿಸಲು ಪ್ರತ್ಯೇಕ ಯೋಜನೆ ರೂಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ: ಶ್ರೀ ನಿತಿನ್ ಗಡ್ಕರಿ
Posted On:
24 APR 2020 6:59PM by PIB Bengaluru
ಎಂ.ಎಸ್.ಎಂ.ಇ.ಗಳ ವಿಳಂಬ ಪಾವತಿ ಸಮಸ್ಯೆ ಪರಿಹರಿಸಲು ಪ್ರತ್ಯೇಕ ಯೋಜನೆ ರೂಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ: ಶ್ರೀ ನಿತಿನ್ ಗಡ್ಕರಿ
ಎಂ.ಎಸ್.ಎಂ.ಇ.ಗಳ ವಿಳಂಬ ಪಾವತಿ ಸಮಸ್ಯೆಗಳನ್ನು ಪರಿಹರಿಸಲು ಪ್ರತ್ಯೇಕ ಯೋಜನೆಯನ್ನು ರೂಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಹಾಗೂ ಎಂ.ಎಸ್.ಎಂ.ಇ.ಗಳಿಗೆ ಪಾವತಿಸಲು ಮೀಸಲಾದ ವಿಶೇಷ ನಿಧಿಯನ್ನು ರಚಿಸಲಿದೆ ಎಂದು ಕೇಂದ್ರ ಎಂ.ಎಸ್.ಎಂ.ಇ. ಮತ್ತು ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವ ಶ್ರೀ ನಿತಿನ್ ಗಡ್ಕರಿ ಅವರು ಹೇಳಿದ್ದಾರೆ.
ಎಂ.ಎಸ್.ಎಂ.ಇ.ಗಳಿಗೆ ಪಾವತಿಗಳು ವಿಳಂಬವಾಗುವ ಕುರಿತು ಪ್ರತಿಕ್ರಿಯಿಸಿದ ಸಚಿವ ಶ್ರೀ ಗಡ್ಕರಿ ಅವರು ತಕ್ಷಣವೇ ಪಾವತಿ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು ಮತ್ತು ಎಲ್ಲಾ ಸರ್ಕಾರಿ ಇಲಾಖೆಗಳಿಗೆ ಅಂತಹ ತ್ವರಿತ ಪಾವತಿಯ ನಿರ್ದೇಶನಗಳನ್ನು ಈಗಾಗಲೇ ನೀಡಲಾಗಿದೆ ಎಂದು ಹೇಳಿದರು.
ಎಂ.ಎಸ್.ಎಂ.ಇ.ಗಳ ಮೇಲೆ ಕೊವಿಡ್-19ರ ಪ್ರಭಾವದ ಕುರಿತು ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಆಫ್ ಇಂಡಿಯಾದ (ಅಸ್ಸೋಕಾಮ್) ಪ್ರತಿನಿಧಿಗಳೊಂದಿಗೆ ವಿಡಿಯೋ ಸಂವಾದ ಮೂಲಕ ಅವರು ಮಾತನಾಡಿದರು.
ಕೆಲವು ಉದ್ಯಮ ಕ್ಷೇತ್ರಗಳಲ್ಲಿ ಕಾರ್ಯವನ್ನು ಪ್ರಾರಂಭಿಸಲು ಸರ್ಕಾರವು ಅವಕಾಶ ಮಾಡಿಕೊಟ್ಟರೂ, ಕೊವಿಡ್-19 ಹರಡುವುದನ್ನು ತಡೆಗಟ್ಟಲು ಅಗತ್ಯವಾದ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗಿದೆಯೆಂದು ಕೈಗಾರಿಕೆಗಳು ಖಚಿತಪಡಿಸಬೇಕು ಎಂದು ಸಚಿವ ಶ್ರೀ ಗಡ್ಕರಿ ಅವರು ಉದ್ಯಮಕ್ಕೆ ತಿಳಿಸಿದರು. ಆಹಾರ, ಆಶ್ರಯ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮಾನದಂಡಗಳನ್ನು ಕಾಪಾಡಿಕೊಳ್ಳುವ ಮೂಲಕ ಸಂಸ್ಥೆಗಳು ತಮ್ಮ ಕಾರ್ಮಿಕರ ಮತ್ತು ಕಾರ್ಯನಿರ್ವಾಹಕರ ಆರೋಗ್ಯವನ್ನು ಸಂರಕ್ಷಿಸುವ ಕುರಿತು ದಢೀಕರಿಸಬೇಕು ಎಂದು ಅವರು ಹೇಳಿದರು.
ವಿದೇಶಿ ಆಮದನ್ನು ಆದಷ್ಟು ಹೆಚ್ಚು ಸ್ವದೇಶೀಯ ಉತ್ಪಾದನೆಯೊಂದಿಗೆ ಬದಲಿಸಲು ಹಾಗೂ ಆಮದು ಕಡಿಮೆಗೊಳಿಸಲು ಪರ್ಯಾಯ ಮಾರ್ಗದತ್ತ ಗಮನ ಹರಿಸುವ ಅವಶ್ಯಕತೆಯಿದೆ ಎಂದು ಸಚಿವರು ಹೇಳಿದರು. ಅಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವಂತೆ ಅವರು ವ್ಯವಹಾರಿಕೋದ್ಯಮಗಳನ್ನು ಒತ್ತಾಯಿಸಿದರು ಮತ್ತು ಕೈಗಾರಿಕಾ ಅಭಿವೃದ್ಧಿಯಲ್ಲಿ ಸಂಶೋಧನೆ, ನಾವೀನ್ಯತೆ ಮತ್ತು ಗುಣಮಟ್ಟದ ಸುಧಾರಣೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಜಪಾನಿನ ಹೂಡಿಕೆಗಳನ್ನು ಚೀನಾದಿಂದ ಹೊರತೆಗೆದು ಬೇರೆಕಡೆಗೆ ಉದ್ಯಮಗಳನ್ನು ಸಾಗಿಸಲು ಜಪಾನ್ ಸರ್ಕಾರ ತನ್ನ ಕೈಗಾರಿಕೆಗಳಿಗೆ ವಿಶೇಷ ಪ್ಯಾಕೇಜ್ ನೀಡಿ ಪ್ರೋತ್ಸಾಹಿಸಲಿದೆ ಎಂದು ಸಚಿವರು ಈ ಸಂದರ್ಭದಲ್ಲಿ ನೆನಪಿಸಿಕೊಂಡ ಸಚಿವರು, ಇದು ಭಾರತದ ಸುವರ್ಣಾವಕಾಶ ಮತ್ತು ಅದನ್ನು ನಾವು ಸದುಪಯೋಗ ಮಾಡಿಕೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಗ್ರೀನ್ ಎಕ್ಸ್ ಪ್ರೆಸ್ ಹೆದ್ದಾರಿಗಳಲ್ಲಿ ಕೆಲಸ ಈಗಾಗಲೇ ಪ್ರಾರಂಭವಾಗಿದೆ, ಹಾಗಾಗಿ ಕೈಗಾರಿಕಾ ಕ್ಲಸ್ಟರ್ಗಳು, ಕೈಗಾರಿಕಾ ಉದ್ಯಾನವನಗಳು, ಸಾಗಣಿಕೆ(ಲಾಜಿಸ್ಟಿಕ್ಸ್) ಉದ್ಯಾನವನಗಳಲ್ಲಿ ಭವಿಷ್ಯದ ಹೂಡಿಕೆ ಮಾಡಲು ಉದ್ಯಮಗಳಿಗೆ ಇದು ಸರಿಯಾದ ಸಮಯಾವಕಾಶ ಎಂದು ಸಚಿವರು ಹೇಳಿದರು. ಮೆಟ್ರೊ ನಗರಗಳನ್ನು ಹೊರತುಪಡಿಸಿ ಇತರ ಪ್ರದೇಶಗಳಲ್ಲಿ ಕೈಗಾರಿಕಾ ಕ್ಲಸ್ಟರ್ ಗಳನ್ನು ವಿಸ್ತರಿಸುವ ಅವಶ್ಯಕತೆಯಿದೆ, ಈ ನಿಟ್ಟಿನಲ್ಲಿ ಪ್ರಸ್ತಾಪಗಳನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಹೇಳಿದರು.
ಕೊವಿಡ್-19 ಬಿಕ್ಕಟ್ಟುನಿಂದ ಹೊರಬಂದ ನಂತರ ನಮ್ಮೆದುರು ಸೃಷ್ಟಿಯಾಗುವ ಎಲ್ಲಾ ಅವಕಾಶಗಳನ್ನು ನಾವು ಸದುಪಯೋಗಪಡಿಸಿಕೊಳ್ಳಲು ಸಂಬಂಧಿತ ಎಲ್ಲಾ ಪಾಲುದಾರರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಸಚಿವ ಶ್ರೀ ಗಡ್ಕರಿ ಅವರು ಹೇಳಿದರು. ಪ್ರತಿಕೂಲ ಪರಿಸ್ಥಿತಿಯಲ್ಲಿ ಸಕಾರಾತ್ಮಕವಾಗಿ ಪ್ರವರ್ತಿಸಲು ಎಲ್ಲಾ ಕ್ಷೇತ್ರಗಳಿಗೆ ಅವರು ಕರೆ ನೀಡಿದರು.
ಪ್ರತಿನಿಧಿಗಳು ಸೂಚಿಸಿದ ಕೆಲವು ಸಮಸ್ಯೆಗಳು ಮತ್ತು ನೀಡಿರುವ ಸಲಹೆಗಳು ಇಂತಿವೆ: ಬಡ್ಡಿ ಅನುದಾನ (ಸಬ್ವೆನ್ಷನ್ ) ಯೋಜನೆಯ ಪ್ರಾರಂಭಕ್ಕೆ ಆದ್ಯತೆ ನೀಡುವುದು, ಕೈಗಾರಿಕೆಗಳ ಕಾರ್ಯಾಚರಣೆ ಪ್ರಾರಂಭದೊಂದಿಗೆ ಮಾರುಕಟ್ಟೆಗಳನ್ನು ಕೂಡಾ ತೆರೆಯುವುದು, ಕೈಗಾರಿಕೆಗಳಿಗೆ ಹೆಚ್ಚುವರಿ ಹಣಕಾಸು ಒದಗಿಸಲು ಸಂಬಂಧಿಸಿದ ಆರ್.ಬಿ.ಐ ಮಾರ್ಗಸೂಚಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಇತ್ಯಾದಿ.
ಪ್ರತಿನಿಧಿಗಳ ಪ್ರಶ್ನೆಗಳಿಗೆ ಸಚಿವ ಶ್ರೀ ಗಡ್ಕರಿ ಅವರು ಪ್ರತಿಕ್ರಿಯಿಸಿ ಸಲಹೆಗಳನ್ನು ಕಳುಹಿಸುವಂತೆ ಉದ್ಯಮಗಳನ್ನು ಕೋರಿದರು ಮತ್ತು ಸರ್ಕಾರದಿಂದ ಎಲ್ಲ ಸಹಾಯವನ್ನು ದೊರಕಿಸಿಕೊಡುವ ಭರವಸೆ ನೀಡಿದರು. ಅವರು ಶೀಘ್ರದಲ್ಲಿಯೇ ಪರಿಹಾರಗಳನ್ನು ರೂಪಿಸುವ ನಿಟ್ಟಿನಲ್ಲಿ ಎಲ್ಲಾ ಸಮಸ್ಯೆಗಳನ್ನು ಸಂಬಂಧಿತ ಇಲಾಖೆಗಳ / ಪಾಲುದಾರಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಈ ಸಂವಾದದ ಸಮಯದಲ್ಲಿ, ಕೊವಿಡ್-19 ಸಾಂಕ್ರಾಮಿಕದಿಂದಾಗಿ ಎಂ.ಎಸ್.ಎಂ.ಇ.ಗಳು ಎದುರಿಸುತ್ತಿರುವ ವಿವಿಧ ಸವಾಲುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅಸ್ಸೋಕಾಮ್ ಪ್ರತಿನಿಧಿಗಳು, ಕೆಲವು ಸಲಹೆಗಳನ್ನು ನೀಡುವ ಜೊತೆಗೆ ಎಂ.ಎಸ್.ಎಂ.ಇ. ವಲಯವನ್ನು ವ್ಯವಹಾರಿಕವಾಗಿ ಉಳಿಸಿ ಬೆಳೆಸಲು ಸರ್ಕಾರದಿಂದ ಬೆಂಬಲವನ್ನು ಕೋರಿದರು.
***
(Release ID: 1618047)
Visitor Counter : 185