ಇಂಧನ ಸಚಿವಾಲಯ
ಕೋವಿಡ್ – 19 ಸ್ಫೋಟದಿಂದಾಗಿ ರಾಷ್ಟ್ರಾದ್ಯಂತ ಲಾಕ್ ಡೌನ್ ಘೋಷಿಸಿದ ಸಂದರ್ಭದಲ್ಲಿ ಆರೋಗ್ಯದ ಶಿಷ್ಟಾಚಾರಗಳನ್ನು ಗಮನಿಸಿದ ನಂತರ ಪುರಸಭೆ ವ್ಯಾಪ್ತಿಯ ಹೊರಗಿರುವ ವಿದ್ಯುತ್ ಯೋಜನೆಗಳಲ್ಲಿ ನಿರ್ಮಾಣ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸುವಂತೆ ಕೇಂದ್ರ ಇಂಧನ ಸಚಿವರು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದ್ದಾರೆ
Posted On:
23 APR 2020 2:47PM by PIB Bengaluru
ಕೋವಿಡ್ – 19 ಸ್ಫೋಟದಿಂದಾಗಿ ರಾಷ್ಟ್ರಾದ್ಯಂತ ಲಾಕ್ ಡೌನ್ ಘೋಷಿಸಿದ ಸಂದರ್ಭದಲ್ಲಿ ಆರೋಗ್ಯದ ಶಿಷ್ಟಾಚಾರಗಳನ್ನು ಗಮನಿಸಿದ ನಂತರ ಪುರಸಭೆ ವ್ಯಾಪ್ತಿಯ ಹೊರಗಿರುವ ವಿದ್ಯುತ್ ಯೋಜನೆಗಳಲ್ಲಿ ನಿರ್ಮಾಣ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸುವಂತೆ ಕೇಂದ್ರ ಇಂಧನ ಸಚಿವರು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದ್ದಾರೆ
15.04.2020 ರಂದು ಕೇಂದ್ರ ಗೃಹ ಸಚಿವಾಲಯ ನೀಡಿದ ಮಾರ್ಗಸೂಚಿಗಳ ಮೇರೆಗೆ ಕೋವಿಡ್ – 19 ರ ಸ್ಫೋಟದಿಂದಾಗಿ ರಾಷ್ಟ್ರಾದ್ಯಂತ ಲಾಕ್ ಡೌನ್ ಘೋಷಿಸಿದ ಸಂದರ್ಭದಲ್ಲಿ ಪುರಸಭೆಯ ವ್ಯಾಪ್ತಿಯ ಹೊರಗಿರುವ ವಿದ್ಯುತ್ ಯೋಜನೆಗಳಲ್ಲಿ ನಿರ್ಮಾಣ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸುವಂತೆ ಕೇಂದ್ರ ಇಂಧನ ಸಚಿವಾಲಯ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದ್ದಾರೆ. ಕೋವಿಡ್ – 19 ನ್ನು ನಿಗ್ರಹಿಸಲು ಅವಶ್ಯಕ ಆರೋಗ್ಯ ಶಿಷ್ಟಾಚಾರಗಳನ್ನು ಗಮನಿಸಿದ ನಂತರ ಈ ಚಟುವಟಿಕೆಗಳಿಗೆ ಪರವಾನಿಗೆ ನೀಡಲಾಗುವುದು.
15.04.2020 ದಿನಾಂಕದಂದು ಗೃಹ ಸಚಿವಾಲಯ ಹೊರಡಿಸಿದ ಆದೇಶ ಸಂಖ್ಯೆ 40-3/2020- DM-I(A) ಮಾರ್ಗಸೂಚಿಗಳ ಪ್ಯಾರಾ 16(i) ರ ಪ್ರಕಾರ ಗ್ರಾಮೀಣ ಭಾಗದ ಎಲ್ಲ ಬಗೆಯ ಔದ್ಯಮಿಕ ಯೋಜನೆಗಳ ಚಟುವಟಿಕೆಗಳಿಗೆ ಅಂದರೆ ನಗರಸಭೆ ಮತ್ತು ಪುರಸಭೆಯ ವ್ಯಾಪ್ತಿಯ ಹೊರಗಿರುವ ಕಾಮಗಾರಿಗಳನ್ನು ಕೈಗೊಳ್ಳಲು 20 ಏಪ್ರೀಲ್ 2020 ರಿಂದ ಅವಕಾಶ ನೀಡಬೇಕು ಎಂದು ಹೇಳಲಾಗಿದೆ ಎಂದು 20.04.2020 ರಂದು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು, ಡಿ ಎಂ ಗಳು, ಪೋಲಿಸ್ ಅಧಿಕಾರಿಗಳು, ಪುರಸಭೆ ಸಂಸ್ಥೆಗಳೊಂದಿಗೆ ನಡೆಸಿದ ಮಾತುಕತೆಯಲ್ಲಿ ಸಚಿವಾಲಯ ತಿಳಿಸಿದೆ. ನಗರ ಸ್ಥಳೀಯ ಸಂಸ್ಥೆ (ಯು ಎಲ್ ಬಿಗಳು) ಮಿತಿಯ ಹೊರಗೆ ಇರುವಂಥ ಉಷ್ಣ/ಜಲವಿದ್ಯುತ್ ಉತ್ಪಾದನಾ ಯೋಜನೆಗಳ ಚಟುವಟಿಕೆಗಳಿಗೂ ಇದು ಅನ್ವಯಿಸುತ್ತದೆ.
15.04.2020 ದಿನಾಂಕದ ಗೃಹ ಸಚಿವಾಲಯ ಆದೇಶ ಸಂಖ್ಯೆ 40-3/2020-ಡಿ ಎಂ-I(ಎ) ಪ್ಯಾರಾ 12(vi) ದಂತೆ ನಿರ್ಮಾಣ ವಿದ್ಯುತ್ ಯೋಜನೆಗಳ ಅಡಿಯಲ್ಲಿ ನಿರ್ಮಾಣ ಸಾಮಗ್ರಿಗಳು, ಉಪಕರಣಗಳು, ಬಿಡಿ ಭಾಗಗಳು ಮತ್ತು ಉಪಭೋಗ್ಯ ವಸ್ತುಗಳು ಮುಂತಾದವುಗಳ ಅಂತರರಾಜ್ಯ ಮತ್ತು ರಾಜ್ಯದೊಳಗಿನ ಚಟುವಟಿಕೆಗಳಿಗೆ ಪರವಾನಿಗೆ ನೀಡುವಂತೆ ಸಚಿವಾಲಯ ಮನವಿ ಮಾಡಿದೆ.
ಕೋವಿಡ್ – 19 ಕ್ಕೆ ಸಂಬಂಧಿಸಿದಂತೆ ಕಾಲ ಕಾಲಕ್ಕೆ ಗೃಹ ಸಚಿವಾಲಯ ಮತ್ತು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ನೀಡುವ ಸಲಹೆಗಳ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಹಾಗೂ ಕಡ್ಡಾಯ ಮುನ್ನೆಚ್ಚರಿಕೆಗಳನ್ನು ತೆಗದುಕೊಳ್ಳುವ ಮೂಲಕ ಯೋಜನಾ ಚಟುವಟಿಕೆಗಳ ಸೈಟ್ ನಲ್ಲಿ ಕಾರ್ಯನಿರ್ವಹಿಸುವುದು ಕಡ್ಡಾಯ ಎಂದು ಹೇಳಲಾಗಿದೆ.
ಕೋವಿಡ್ – 19 ನಿಂದ ತನ್ನ ಉದ್ಯೋಗಿಗಳನ್ನು ಮತ್ತು ನಿರ್ಮಾಣ ಚಟುವಟಿಕೆಗಳಿಗೆ ನೇಮಿಸುವ ಕಾರ್ಯಪಡೆಯನ್ನು ರಕ್ಷಿಸಲು ಅಗತ್ಯ ಕಟ್ಟುನಿಟ್ಟಿನ ಕ್ರಮಗಳು/ಉಪಕರಣಗಳು/ಸೌಕರ್ಯಗಳನ್ನು ಖಾತ್ರಿಪಡಿಸಿಕೊಳ್ಳಲು ಸಿಪಿಎಸ್ ಯು ಗಳು ಮತ್ತು ಐಐಪಿಗಳು ಮತ್ತು ಯುಎಂಪಿಪಿಗಳ ಎಲ್ಲ ಸಿಎಂಡಿ ಗಳಿಗೆ ಇಂಧನ ಸಚಿವಾಲಯ ಆದೇಶಿಸಿಸಿದೆ
ಮೇಲಿನ ಮಾತುಕತೆ ರಾಜ್ಯದ ಉತ್ಪಾದಕ ಕಂಪೆನಿಗಳು/ಸ್ವತಂತ್ರ ವಿದ್ಯುತ್ ಉತ್ಪಾದಕರಿಗೆ(ಐಪಿಪಿಗಳು) ಸಂಬಂಧಿಸಿದಂತೆ ಇಂಥದ್ದೇ ಕ್ರಮಕ್ಕಾಗಿ ಮುಖ್ಯ ಕಾರ್ಯದರ್ಶಿಗೆ (ಎಲ್ಲ ರಾಜ್ಯಗಳು) ಸಲಹೆ ನೀಡಲಾಗಿದೆ.
***
(Release ID: 1618045)
Visitor Counter : 213
Read this release in:
Assamese
,
English
,
Urdu
,
Hindi
,
Marathi
,
Bengali
,
Punjabi
,
Gujarati
,
Odia
,
Tamil
,
Telugu
,
Malayalam