ಹಣಕಾಸು ಸಚಿವಾಲಯ
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್: ಇಲ್ಲಿಯವರೆಗಿನ ಪ್ರಗತಿ
Posted On:
23 APR 2020 12:10PM by PIB Bengaluru
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್: ಇಲ್ಲಿಯವರೆಗಿನ ಪ್ರಗತಿ
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್‍ನ ಅಡಿಯಲ್ಲಿ 33 ಕೋಟಿಗೂ ಹೆಚ್ಚು ಬಡವರು 31,235 ಕೋಟಿ ರೂಪಾಯಿಗಳಷ್ಟು ಆರ್ಥಿಕ ನೆರವನ್ನು ಪಡೆದಿದ್ದಾರೆ
ಜನ್ಧನ್ ಖಾತೆಯನ್ನು ಹೊಂದಿರುವ 20.05 ಕೋಟಿ ಮಹಿಳೆಯರಿಗೆ 10,025 ಕೋಟಿ ರೂಪಾಯಿಗಳನ್ನು ವಿತರಿಸಲಾಗಿದೆ
ಸುಮಾರು 2.82 ಕೋಟಿ ವೃದ್ಧರಿಗೆ, ವಿಧವೆಯರಿಗೆ ಹಾಗೂ ದಿವ್ಯಾಂಗರಿಗೆ 1405 ಕೋಟಿ ರೂಪಾಯಿಗಳನ್ನು ವಿತರಿಸಲಾಗಿದೆ
ಪಿ.ಎಂ. ಕಿಸಾನ್ ಮೊದಲ ಕಂತು: 8 ಕೋಟಿ ರೈತರಿಗೆ 16,146 ಕೋಟಿ ರೂಪಾಯಿಗಳನ್ನು ವರ್ಗಾಯಿಸಲಾಗಿದೆ
68,775 ಸಂಸ್ಥೆಗಳಿಗೆ ಇ.ಪಿ.ಎಫ್. ಕೊಡುಗೆಯಾಗಿ 162 ಕೋಟಿಗಳನ್ನು ವರ್ಗಾಯಿಸಲಾಗಿದ್ದು, 10.6 ಲಕ್ಷ ಉದ್ಯೋಗಿಗಳಿಗೆ ಪ್ರಯೋಜನಕಾರಿಯಾಗಿದೆ
3497 ಕೋಟಿ ರೂಪಾಯಿಗಳಷ್ಟು ಆರ್ಥಿಕ ಸಹಾಯ ಧನವನ್ನು 2.17 ಕೋಟಿ ಕಟ್ಟಡ ಹಾಗೂ ನಿರ್ಮಾಣ ಕಾರ್ಮಿಕರು ಪಡೆದಿದ್ದಾರೆ
ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ
ಆಹಾರ ಧಾನ್ಯಗಳ ಉಚಿತ ಪಡಿತರವನ್ನು 39.27 ಕೋಟಿ ಫಲಾನುಭವಿಗಳಿಗೆ ವಿತರಿಸಲಾಗಿದೆ
1,09,227 ಮೆಟ್ರಿಕ್ ಟನ್ಗಳಷ್ಟು ಬೇಳೆಕಾಳುಗಳನ್ನು ವಿವಿಧ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ರವಾನಿಸಲಾಗಿದೆ
ಪ್ರಧಾನ ಮಂತ್ರಿ ಉಜ್ವಲ ಯೋಜನೆ: 2.66 ಕೋಟಿ ಉಚಿತ ಉಜ್ವಲ ಸಿಲಿಂಡರ್ಗಳನ್ನು ತಲುಪಿಸಲಾಗಿದೆ
ಕೋವಿಡ್ 19 ನಿಂದಾಗಿ ಲಾಕ್ಡೌನ್ ಮಾಡಿದ ಅವಧಿಯಲ್ಲಿ 33 ಕೋಟಿಗೂ ಹೆಚ್ಚು ಬಡ ಜನರಿಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ (ಪಿ.ಎಂ.ಜಿ.ಕೆ.ಪಿ.) ಅಡಿಯಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಬಳಸಿ ನೇರವಾಗಿ ರೂ.31,25 ಕೋಟಿ ರೂಪಾಯಿಗಳಷ್ಟು (22ನೇ ಏಪ್ರಿಲ್ , 2020 ರಂತೆ) ಆರ್ಥಿಕ ಸಹಾಯವನ್ನು ನೀಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಪಿ.ಎಂ.ಜಿ.ಕೆ.ಪಿ.ಯ ಭಾಗವಾಗಿ, ಸರ್ಕಾರವು ಮಹಿಳೆಯರಿಗೆ, ಬಡ ಹಿರಿಯ ನಾಗರೀಕರಿಗೆ ಮತ್ತು ರೈತರಿಗೆ ಉಚಿತ ಆಹಾರ ಧಾನ್ಯಗಳನ್ನು ಹಾಗೂ ಹಣಕಾಸು ನೆರವನ್ನು ಘೋಷಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ಯಾಕೇಜ್‍ನ ತ್ವರಿತ ಅನುಷ್ಠಾನದ ಕುರಿತು ಸತತವಾಗಿ ಮೇಲ್ವಿಚಾರಣೆ ಕೈಗೊಳ್ಳುತ್ತಿವೆ. ಹಣಕಾಸು ಸಚಿವಾಲಯ, ಸಂಬಂಧ ಪಟ್ಟ ಸಚಿವಾಲಯಗಳು, ಕ್ಯಾಬಿನೇಟ್ ಸಚಿವಾಲಯ ಮತ್ತು ಪ್ರಧಾನಮಂತ್ರಿ ಕಾರ್ಯಾಲಯಗಳು ಲಾಕ್ಡೌನ್ಗೆ ಚ್ಯುತಿಯಾಗÀದಂತೆ ಅಗತ್ಯ ಉಳ್ಳವರಿಗೆ ಪರಿಹಾರ ಕ್ರಮಗಳು ತ್ವರಿತವಾಗಿ ಹಾಗೂ ಸಮರ್ಪಕವಾಗಿ ತಲುಪುವ ರೀತಿಯಲ್ಲಿ ನೋಡಿಕೊಳ್ಳುತ್ತಿವೆ.
ಫಲಾನುಭವಿಗಳಿಗೆ ಕೆಳಕಂಡ ಆರ್ಥಿಕ ಸಹಾಯವನ್ನು (ಹಣಕಾಸು ಮೊತ್ತ) 22ನೇ ಏಪ್ರಿಲ್ 2020 ರವರೆಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್‍ನ ಅಡಿಯಲ್ಲಿ ಬಿಡುಗಡೆ ಮಾಡಲಾಗಿದೆ.
ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್
22ನೇ ಏಪ್ರಿಲ್ 2020 ರವರೆಗೆ ಫಲಾನುಭವಿಗಳಿಗೆ ಒಟ್ಟು ನೇರ ವರ್ಗಾವಣೆ
ಯೋಜನೆಗಳು
|
ಫಲಾನುಭವಿಗಳ ಸಂಖ್ಯೆ
|
ವರ್ಗಾವಣೆಯಾದ ಮೊತ್ತ
|
ಪಿ.ಎಂ.ಜಿ.ಡಿ.ವೈ. ಮಹಿಳಾ ಖಾತೆದಾರರಿಗೆ ನೆರವು
|
20.05ಕೋಟಿ(98%)
|
10,025 ಕೋಟಿ
|
ಎನ್.ಎಸ್.ಎ.ಪಿ. (ವಯಸ್ಸಾದ ವಿಧವೆಯರು, ದಿವ್ಯಾಂಗರು, ಹಿರಿಯ ನಾಗರೀಕರು) ಗಳಿಗೆ ನೆರವು
|
2.82 ಕೋಟಿ (100%)
|
1405 ಕೋಟಿ
|
ಪಿ.ಎಂ. – ಕಿಸಾನ್ ಅಡಿಯಲ್ಲಿ ರೈತರಿಗೆ ಫ್ರಂಟ್ ಲೋಡೆಡ್ ಪಾವತಿ
|
8 ಕೋಟಿ (out of 8 ಕೋಟಿ)
|
16,146 ಕೋಟಿ
|
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ನೆರವು
|
2.17 ಕೋಟಿ
|
3497 ಕೋಟಿ
|
ಇ.ಪಿ.ಎಫ್.ಒ. ಗಳಿಗೆ 24% ಕೊಡುಗೆ
|
0.10 ಕೋಟಿ
|
162 ಕೋಟಿ
|
ಒಟ್ಟು
|
33.14 ಕೋಟಿ
|
31,235 ಕೋಟಿ
|
ಫಲಾನುಭವಿಗಳಿಗೆ ತ್ವರಿತವಾಗಿ ಹಾಗೂ ಪರಿಣಾಮಕಾರಿಯಾಗಿ ವರ್ಗಾವಣೆ ಮಾಡಲು ಫೈನ್ಟೆಕ್ ಮತ್ತು ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. ನೇರ ನಗದು ವರ್ಗಾವಣೆ (ಡಿ.ಬಿ.ಟಿ.) ಅಂದರೆ ನಗದನ್ನು ನೇರವಾಗಿ ಫಲಾನುಭವಿಯ ಖಾತೆಗೆ ಜಮಾ ಮಾಡಲಾಗಿದೆಯೇ ಎಂಬುದನ್ನು ಈ ವರ್ಗಾವಣೆಯು ಖಚಿತಪಡಿಸುತ್ತದೆ, ಸೋರಿಕೆಯನ್ನು ತಪ್ಪಿಸುತ್ತದೆ ಹಾಗೂ ದಕ್ಷತೆಯನ್ನು ಹೆಚ್ಚಿಸುತ್ತದೆ. ಫಲಾನುಭವಿಯು ನೇರವಾಗಿ ಬ್ಯಾಂಕ್ ಶಾಖೆಗೆ ಹೋಗಬೇಕಾದ ಅಗತ್ಯವಿಲ್ಲದ ರೀತಿಯಲ್ಲಿ ನೇರವಾಗಿ ಫಲಾನುಭವಿಯ ಖಾತೆಗೆ ಹಣ ಪಾವತಿಯಾಗುವುದನ್ನು ಖಾತರಿ ಪಡಿಸುತ್ತದೆ.
ಪಿ.ಎಂ.ಜಿ.ಕೆ.ಪಿ. ಯ ಇತರೆ ಘಟಕಗಳಲ್ಲಿ ಇಲ್ಲಿಯವರೆಗೂ ಸಾಧಿಸಿರುವ ಪ್ರಗತಿ:
- ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ:
ಏಪ್ರಿಲ್ ತಿಂಗಳಿಗಾಗಿ ಇಲ್ಲಿಯವರೆಗೆ 36 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಂದ 40 ಲಕ್ಷ ಮೆಟ್ರಿಕ್ ಟನ್ನಲ್ಲಿ 40.03 ಲಕ್ಷದಷ್ಟು ಮೆಟ್ರಿಕ್ ಟನ್ಗಳಷ್ಟು ಆಹಾರ ಧಾನ್ಯಗಳನ್ನು ಪಡೆದುಕೊಳ್ಳಲಾಗಿದೆ. ಏಪ್ರಿಲ್ 2020 ಕ್ಕೆ 1.19 ಕೋಟಿಯಷ್ಟು ಅರ್ಹ ಪಡಿತರ ಕಾರ್ಡ್ ಉಳ್ಳ 39.27 ಕೋಟಿ ಫಲಾನುಭವಿಗಳಿಗೆ 31 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಂz 19.63 ಲಕ್ಷದಷ್ಟು ಮೆಟ್ರಿಕ್ ಟನ್ಗಳಷ್ಟನ್ನು ಆಹಾರ ಧಾನ್ಯ ವಿತರಿಸಲಾಗಿದೆ.
1,09,227 ಮೆಟ್ರಿಕ್ ಟನ್ಗಳಷ್ಟು ಬೇಳೆಕಾಳುಗಳನ್ನು ಕೂಡ ಹಲವು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ರವಾನಿಸಲಾಗಿದೆ.
- ಪ್ರಧಾನ ಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ಗಳು :-
ಪಿ.ಎಂ.ಯು.ವೈ. ಯೋಜನೆಯಡಿ ಇಲ್ಲಿಯವರೆಗೆ ಒಟ್ಟು 3.05 ಕೋಟಿ ಸಿಲಿಂಡರ್ಗಳನ್ನು ಕಾಯ್ದಿರಿಸಲಾಗಿದೆ ಮತ್ತು 2.66 ಕೋಟಿ ಪಿ.ಎಂ.ಯು.ವೈ. ಉಚಿತ ಸಿಲಿಂಡರ್ಗಳನ್ನು ¥S್ಪಲಾನುಭವಿಗಳಿಗೆ ವಿತರಿಸಲಾಗಿದೆ
- ಮರುಪಾವತಿ ಆಗದ ಮುಂಗಡವಾಗಿ ಬಾಕಿ ಇರುವ 75% ಅಥವಾ 3 ತಿಂಗಳುಗಳ ವೇತನÀದಲ್ಲಿ ಯಾವುದು ಕಡಿಮೆಯೋ ಅದನ್ನು ಇ.ಪಿ.ಎಫ್.ಒ. ಸದಸ್ಯರಿಗೆ ನೀಡಲು ಅನುಮತಿಸಲಾಗಿದೆ.
ಇಲ್ಲಿಯವರೆಗೆ 1954 ಕೋಟಿ ರೂಪಾಯಿಗಳನ್ನು ಇ.ಪಿ.ಎಫ್.ಒ. ನ 6.06 ಲಕ್ಷ ಸದಸ್ಯರು ಆನ್ಲೈನ್ ಮೂಲಕ ಹಿಂಪಡೆದುಕೊಂಡಿದ್ದಾರೆ.
- ಮೂರು ತಿಂಗಳಿಗೆ ಇ.ಪಿ.ಎಫ್. ಕೊಡುಗೆ ; 100 ಮಂದಿಯವರೆಗೆ ಕೆಲಸಗಾರರಿರುವ ಸಂಸ್ಥೆಯೊಂದರಲ್ಲಿ ಒಂದು ತಿಂಗಳಿಗೆ 15000 ರೂಪಾಯಿಗಳಿಗಿಂತ ಕಡಿಮೆ ಹಣವನ್ನು ಸಂಬಳವಾಗಿ ಪಡೆಯುವ ಇ.ಪಿ.ಎಫ್.ಒ. ಸದಸ್ಯರಿಗೆ ವೇತನದ 24% ರಷ್ಟನ್ನು ಕೊಡುಗೆಯಾಗಿ ನೀಡಲಾಗಿದೆ.
ಏಪ್ರಿಲ್ ತಿಂಗಳ 2020 ರ ಯೋಜನೆಗೆ, 1000 ಕೋಟಿ ರೂಪಾಯಿಗಳ ಮೊತ್ತವನ್ನು ಈಗಾಗಲೇ ಇ.ಪಿ.ಎಫ್.ಒ. ಗೆ ಬಿಡುಗಡೆ ಮಾಡಲಾಗಿದೆ. 78.74 ಲಕ್ಷ ಫಲಾನುಭವಿಗಳಿಗೆ ಹಾಗೂ ಸಂಬಂಧಪಟ್ಟ ಸಂಸ್ಥೆಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಪ್ರಕಟಣೆಯನ್ನು ಕಾರ್ಯರೂಪಕ್ಕೆ ತರಲು ಯೋಜನೆಯೊಂದನ್ನು ರೂಪಿಸಲಾಗಿದೆ. ಆಗ್ಗಾಗ್ಗೆ ಕೇಳಲಾಗುವ ಪ್ರಶ್ನೆಗಳನ್ನು (ಎಫ್.ಎ.ಕ್ಯೂ.) ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.
ಇಲ್ಲಿಯವರೆಗೂ 10.6 ಲಕ್ಷ ಉದ್ಯೋಗಿಗಳು ಇದರಿಂದ ಲಾಭ ಪಡೆದಿದ್ದಾರೆ ಹಾಗೂ ಒಟ್ಟು 162.11 ಕೋಟಿ ರೂಪಾಯಿಗಳನ್ನು 68,775 ಸಂಸ್ಥೆಗಳಿಗೆ ವರ್ಗಾಯಿಸಲಾಗಿದೆ.
- ಎಂ.ನರೆಗಾ :-
01-04-2020 ಕ್ಕೆ ಅನ್ವಯಿಸುವಂತೆ ದರದ ಹೆಚ್ಚಳವನ್ನು ಗಮನಿಸಲಾಗಿದೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿ, 1.27 ಕೋಟಿ ಮಂದಿಗೆ ದುಡಿಮೆ ದಿನಗಳನ್ನು ಕಲ್ಪಿಸಲಾಗಿದೆ. ಮುಂದುವರಿದಂತೆ, ವೇತನ ಹಾಗೂ ಸಾಮಗ್ರಿಗಳ ಬಾಕಿ ಉಳಿದಿರುವ ಮೊತ್ತವಾಗಿ ರೂ. 7300 ಕೋಟಿ ಗಳನ್ನು ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ.
- ಸರ್ಕಾರಿ ಆಸ್ಪತ್ರೆಗಳು ಹಾಗೂ ಆರೋಗ್ಯ ತಪಾಸಣೆ ಕೇಂದ್ರಗಳಲ್ಲಿನ ಆರೋಗ್ಯ ಕಾರ್ಯಕರ್ತರಿಗೆ ವಿಮಾ ಯೋಜನೆ :-
ಈ ಯೋಜನೆಯು 22.12 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದು, ನ್ಯೂ ಇಂಡಿಯಾ ಅಶ್ಯುರೆನ್ಸ್ ನ ವತಿಯಿಂದ ಕಾರ್ಯ ನಿರ್ವಹಿಸುತ್ತಿದೆ.
- ರೈತರಿಗೆ ನೆರವು:-
ಪಿ.ಎಂ. = ಕಿಸಾನ್‍ನ ಒಟ್ಟು ವಿತರಣಾ ಮೊತ್ತದಲ್ಲಿ, ಮೊದಲ ಕಂತಿನ ರೂಪದಲ್ಲಿ 16,146 ಕೋಟಿ ರೂಪಾಯಿಗಳನ್ನು ಪಾವತಿ ಮಾಡಲಾಗಿದೆ. ಈ ಯೋಜನೆಯ ಅಡಿಯಲ್ಲಿ ಒಟ್ಟು 8 ಕೋಟಿ ಫಲಾನುಭವಿಗಳಲ್ಲಿ ಗುರುತಿಸಲ್ಪಟ್ಟ ಎಲ್ಲ 8 ಕೋಟಿ ಫಲಾನುಭವಿಗಳು ರೂ 2,000 ಗಳನ್ನು ನೇರವಾಗಿ ತಮ್ಮ ಖಾತೆಗೆ ಪಡೆದಿದ್ದಾರೆ.
- ಪಿ.ಎಂ.ಜೆ.ಡಿ.ವೈ. ಮಹಿಳಾ ಖಾತೆದಾರರಿಗೆ ನೆರವು:
ಭಾರತದಲ್ಲಿನ ಬಹಳಷ್ಟು ಮನೆಗಳನ್ನು ಮಹಿಳೆಯರೇ ನಿರ್ವಹಿಸುತ್ತಿರುವುದರಿಂದ, ಈ ಪ್ಯಾಕೇಜ್‍ನ ಅಡಿಯಲ್ಲಿ, ಸಾಧ್ಯವಾದಷ್ಟು 20.05 ಕೋಟಿ ಮಹಿಳಾ ಜನ ಧನ ಖಾತೆದಾರರು ರೂ. 500 ಅನ್ನು ತಮ್ಮ ಖಾತೆಯಲ್ಲಿ ಸ್ವೀಕರಿಸಿದ್ದಾರೆ. 22 ಏಪ್ರಿಲ್ 2020ಕ್ಕೆ ಅನ್ವಯವಾಗುವಂತೆ, ಒಟ್ಟು ರೂ 10,025 ಕೋಟಿ ವಿತರಿಸಲಾಗಿದೆ.
- ವೃದ್ಧರಿಗೆ, ವಿಧವೆಯರಿಗೆ ಹಾಗೂ ದಿವ್ಯಾಂಗರಿಗೆ ನೆರವು :-
ರಾಷ್ಟ್ರೀಯ ಸಾಮಾಜಿಕ ಸಹಾಯತಾ ಕಾರ್ಯಕ್ರಮ (ಎನ್.ಎಸ್.ಎ.ಪಿ.) ವು ಸುಮಾರು 2.82 ಕೋಟಿ ವೃದ್ಧರಿಗೆ, ವಿಧವೆಯರಿಗೆ ಹಾಗೂ ದಿವ್ಯಾಂಗರಿಗೆ ರೂ 1,405 ಕೋಟಿ ವಿತರಿಸಿದೆ. ಪ್ರತಿ ಫಲಾನುಭವಿಯು ಈ ಯೋಜನೆಯ ಅಡಿಯಲ್ಲಿ ಮೊದಲ ಕಂತಿನ ರೂಪದಲ್ಲಿ ರೂ 500 ಸಹಾಯ ಧನ ಸ್ವೀಕರಿಸಿದ್ದಾರೆ. ಮತ್ತೊಂದು ಕಂತಾದ 500 ರೂಪಾಯಿಗಳನ್ನು ಮುಂದಿನ ತಿಂಗಳಿನಲ್ಲಿ ಪಾವತಿಸಲಾಗುತ್ತದೆ.
- ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ನೆರವು :-
ರಾಜ್ಯ ಸರ್ಕಾರದಿಂದ ನಿರ್ವಹಿಸಲ್ಪಡುವ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ನಿಧಿಯಿಂದ 2.17 ಕೋಟಿಯಷ್ಟು ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರು ಆರ್ಥಿಕ ಬೆಂಬಲವನ್ನು ಪಡೆದಿದ್ದಾರೆ. ಇದರ ಅಡಿಯಲ್ಲಿ 3,497 ಕೋಟಿ ರೂಪಾಯಿಗಳನ್ನು ಫಲಾನುಭವಿಗಳಿಗೆ ನೀಡಲಾಗಿದೆ.
***
(Release ID: 1618041)
Visitor Counter : 326
Read this release in:
Punjabi
,
English
,
Urdu
,
Hindi
,
Marathi
,
Manipuri
,
Assamese
,
Gujarati
,
Odia
,
Tamil
,
Telugu
,
Malayalam