ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಸಿಂಗಾಪೂರ್ ಪ್ರಧಾನಮಂತ್ರಿ ಘನತೆವೆತ್ತ ಲೀ ಹ್ಸೀನ್ ಲೂಂಗ್ ಅವರ ನಡುವೆ ದೂರವಾಣಿ ಮಾತುಕತೆ
Posted On:
24 APR 2020 2:08PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಸಿಂಗಾಪೂರ್ ಪ್ರಧಾನಮಂತ್ರಿ ಘನತೆವೆತ್ತ ಲೀ ಹ್ಸೀನ್ ಲೂಂಗ್ ಅವರ ನಡುವೆ ದೂರವಾಣಿ ಮಾತುಕತೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2020ರ ಏಪ್ರಿಲ್ 23ರಂದು ಸಿಂಗಾಪೂರ್ ಪ್ರಧಾನಮಂತ್ರಿ ಘನತೆವೆತ್ತ ಲೀ ಹ್ಸೀನ್ ಲೂಂಗ್ ಅವರ ಜೊತೆ ದೂರವಾಣಿ ಸಂಭಾಷಣೆ ನಡೆಸಿದರು.
ಇಬ್ಬರೂ ನಾಯಕರು ಕೋವಿಡ್ -19 ಸಾಂಕ್ರಾಮಿಕದಿಂದ ಎದುರಾಗಿರುವ ಆರೋಗ್ಯದ ಸವಾಲುಗಳ ಕುರಿತಂತೆ ಅಭಿಪ್ರಾಯ ಹಂಚಿಕೊಂಡರು. ತಮ್ಮ ತಮ್ಮ ದೇಶಗಳಲ್ಲಿ ಸಾಂಕ್ರಾಮಿಕ ಮತ್ತು ಅದರ ಆರ್ಥಿಕ ಹಾಗೂ ಸಾಮಾಜಿಕ ಪರಿಣಾಮಗಳನ್ನು ತಡೆಗಟ್ಟಲು ಕೈಗೊಂಡಿರುವ ಕ್ರಮಗಳ ಕುರಿತೂ ವಿಚಾರ ವಿನಿಮಯ ಮಾಡಿಕೊಂಡರು.
ಪ್ರಧಾನಮಂತ್ರಿಯವರು ವೈದ್ಯಕೀಯ ಉತ್ಪನ್ನ ಸೇರಿದಂತೆ ಅತ್ಯಾವಶ್ಯಕ ವಸ್ತುಗಳ ಪೂರೈಕೆಯೊಂದಿಗೆ ಎಲ್ಲ ಸಾಧ್ಯ ಬೆಂಬಲ ಒದಗಿಸುವ ಭರವಸೆಯನ್ನು ಸಿಂಗಾಪೂರ ಪ್ರಧಾನಮಂತ್ರಿಯವರಿಗೆ ನೀಡಿದರು. ಸಿಂಗಾಪೂರದಲ್ಲಿ ಭಾರತೀಯ ನಾಗರಿಕರಿಗೆ ನೀಡಲಾಗಿರುವ ಬೆಂಬಲಕ್ಕಾಗಿ ಪ್ರಧಾನಮಂತ್ರಿಯವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇಬ್ಬರೂ ನಾಯಕರು ಪ್ರಸಕ್ತ ಸನ್ನಿವೇಶದಲ್ಲಿ ಭಾರತ- ಸಿಂಗಾಪೂರ್ ವ್ಯೂಹಾತ್ಮಕ ಪಾಲುದಾರಿಕೆಯ ಮಹತ್ವವನ್ನು ಪ್ರತಿಪಾದಿಸಿದರು. ಕೋವಿಡ್ 19 ಒಡ್ಡಿರುವ ಪ್ರಸಕ್ತ ಮತ್ತು ಭವಿಷ್ಯದ ಸವಾಲುಗಳನ್ನು ಒಗ್ಗೂಡಿ ಎದುರಿಸಲು ನಿರ್ಧರಿಸಿದರು.
ಪ್ರಧಾನಮಂತ್ರಿಯವರು ಪ್ರಸಕ್ತ ಸನ್ನಿವೇಶದಲ್ಲಿ ಸಿಂಗಾಪೂರ ಜನತೆಯ ಕ್ಷೇಮ ಮತ್ತು ಆರೋಗ್ಯಕ್ಕೆ ಶುಭ ಕೋರಿದರು.
***
(Release ID: 1617992)
Visitor Counter : 175
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam