ವಾರ್ತಾ ಮತ್ತು ಪ್ರಸಾರ ಸಚಿವಾಲಯ
ದೂರ ಸಂಪರ್ಕ ಇಲಾಖೆ ಉಚಿತ ಅಂತರ್ಜಾಲ ಒದಗಿಸುತ್ತಿಲ್ಲ
Posted On:
22 APR 2020 9:10PM by PIB Bengaluru
ದೂರ ಸಂಪರ್ಕ ಇಲಾಖೆ ಉಚಿತ ಅಂತರ್ಜಾಲ ಒದಗಿಸುತ್ತಿಲ್ಲ
ಅಕ್ಟೋಬರ್ 15ರ ವರೆಗೆ ಹೋಟೆಲ್ ಗಳನ್ನು ಮುಚ್ಚಲು ಪ್ರವಾಸೋದ್ಯಮ ಇಲಾಖೆ ನಿರ್ದೇಶನ ನೀಡಿಲ್ಲ
ಮೇ 3, 2020 ರ ವರೆಗೆ ದೂರ ಸಂಪರ್ಕ ಇಲಾಖೆ ಎಲ್ಲ ಬಳಕೆದಾರರಿಗೆ ಉಚಿತ ಅಂತರ್ಜಾಲ (ಇಂಟರ್ ನೆಟ್) ಸೌಲಭ್ಯ ನೀಡುತ್ತಿಲ್ಲ ಎಂದು ಭಾರತ ಸರ್ಕಾರದ ವಾರ್ತಾ ಶಾಖೆ (ಪಿಐಬಿ) ಸತ್ಯಾಂಶ ಪರೀಕ್ಷಾ ವಿಭಾಗ (ಫ್ಯಾಕ್ಟ್ ಚೆಕ್ ಯೂನಿಟ್) ಇಂದು ಟ್ವೀಟ್ ಮೂಲಕ ಸ್ಪಷ್ಟಪಡಿಸಿದೆ. ಎಲ್ಲರೂ ಮನೆಯಿಂದ ಕೆಲಸ ಮಾಡಲು ಸಾಧ್ಯವಾಗುವಂತೆ, ಇಲಾಖೆಯಿಂದ ಉಚಿತ ಅಂತರ್ಜಾಲ ಒದಗಿಸಲಾಗುತ್ತಿದೆ ಮತ್ತು ನೀಡಿದ ಲಿಂಕ್ ಅನ್ನು ಕ್ಲಿಕ್ ಮಾಡುವುದರಿಂದ ಇದನ್ನು ಪಡೆಯಬಹುದು ಎಂದು ಸುಳ್ಳು ವದಂತಿ ಹಬ್ಬಿಸಲಾಗಿತ್ತು. ಪಿಐಬಿ ಫ್ಯಾಕ್ಟ್ ಚೆಕ್ ಈ ಮಾಹಿತಿ ಸುಳ್ಳು ಮತ್ತು ಒದಗಿಸಿರುವ ಲಿಂಕ್ ಒಂದು ಮೋಸ ಎಂದು ಸ್ಪಷ್ಟಪಡಿಸಿದೆ.
https://twitter.com/PIBFactCheck/status/1252933594579824643?s=20
ಮತ್ತೊಂದೆಡೆ, ಯಾವುದೇ ಕಂಪೆನಿಯ ಸಿಬ್ಬಂದಿ ಕೊವಿಡ್-19 ಪರೀಕ್ಷೆಯಲ್ಲಿ ಫಲಿತಾಂಶ ಪಾಸಿಟಿವ್ ಬಂದರೆ, ಆ ಕಂಪೆನಿಯ ನಿರ್ದೇಶಕರು ಮತ್ತು ನಿರ್ವಹಣಾ ಸಿಬ್ಬಂದಿಗೆ ದಂಡ ವಿಧಿಸಲಾಗುವುದು ಎಂಬ ಮಾಧ್ಯಮದ ವರದಿಗಳು ಸುಳ್ಳು ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ. ಹಾಗೂ, ಉದ್ಯೋಗದಾತರ ಒಪ್ಪಿಗೆ, ಅರಿವು ಅಥವಾ ನಿರ್ಲಕ್ಷ್ಯದಿಂದ ಅಪರಾಧವೆಸೆಗಿದರೆ, ದಂಡ ವಿಧಿಸಲಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ಪ್ರಕಟಿಸಲಾಗಿದೆ. ಪಿಐಬಿ ಫ್ಯಾಕ್ಟ್ ಚೆಕ್ ಇದರ ಕುರಿತು ಟ್ವೀಟ್ ಮಾಡಿರುವದನ್ನು ಕೆಳಗಿನ ಲಿಂಕ್ ನಲ್ಲಿ ಕಾಣಬಹುದು
https://twitter.com/PIB_India/status/1252861361777897472?s=20
ಗೃಹ ಸಚಿವಾಲಯದ ವಕ್ತಾರರು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿರುವದನ್ನು ಕೆಳಗಿನ ಲಿಂಕ್ ನಲ್ಲಿ ಪಡೆಯಬಹುದು
https://twitter.com/PIBHomeAffairs/status/1252897072526704640?s=20
ಮತ್ತೊಂದು ಪ್ರಕರಣದಲ್ಲಿ, ಕೊರೊನಾ ವೈರಸ್ ಬಿಕ್ಕಟ್ಟಿನಿಂದಾಗಿ 15, ಅಕ್ಟೋಬರ್ 2020 ರ ವರೆಗೆ ಹೋಟೆಲ್ ಗಳನ್ನು ಮುಚ್ಚುವಂತೆ, ಪ್ರವಾಸೋದ್ಯಮ ಸಚಿವಾಲಯ ಯಾವುದೇ ಪತ್ರ ನೀಡಿಲ್ಲ ಎಂದು ಪಿಐಬಿ ಫ್ಯಾಕ್ಟ್ ಚೆಕ್ ತನ್ನ ಸ್ಪಷ್ಟೀಕರಣದಲ್ಲಿ ಪುನರುಚ್ಚರಿಸಿದೆ
https://twitter.com/PIBFactCheck/status/1252888187363442689?s=20
ಅಸ್ಸಾಂನ ಸ್ಥಳೀಯರು ನಿರೋಧಕ ಶಕ್ತಿ ಹೊಂದಿರುವುದರ ಬಗ್ಗೆ ಐಸಿಎಂಆರ್ ಅಧ್ಯಯನ ನಡೆಸುತ್ತಿಲ್ಲ ಎಂಬುದರ ಕುರಿತು ಅಸ್ಸಾಂನ ಪ್ರಾದೇಶಿಕ ಪಿಐಬಿ ವಿಭಾಗ ಗಮನ ಸೆಳೆದಿದೆ. ಅಸ್ಸಾಂನ ಸ್ಥಳೀಯರು ರೋಗ ನಿರೋಧಕ ಶಕ್ತಿ ಹೊಂದಿರುವುದರಿಂದ ಅವರಿಗೆ ಕೊವಿಡ್-19 ಸೋಂಕು ತಗುಲಿಲ್ಲ ಮತ್ತು ಇದರಿಂದಾಗಿ ಐಸಿಎಂಆರ್ ಅಂತಹ ಜನರ ತಳಿಶಾಸ್ತ್ರವನ್ನು ಅಧ್ಯಯನ ಮಾಡಲು ಪ್ರೇರೇಪಿಸಿದೆ ಎಂಬ ಟ್ವೀಟ್ ಗೆ, ಈ ಟ್ವೀಟ್ ಫ್ಯಾಕ್ಟ್ ಚೆಕ್ ಪ್ರತಿಕ್ರಿಯೆಯಾಗಿದೆ.
https://twitter.com/PIB_Guwahati/status/1252932862971707392?s=20
ಹಿನ್ನೆಲೆ
ಸಾಮಾಜಿಕ ಮಾಧ್ಯಮದಲ್ಲಿ ನಕಲಿ ಸುದ್ದಿಗಳ ಹರಡುವಿಕೆಯನ್ನು ಪರಿಶೀಲಿಸಲು ಮತ್ತು ಸರ್ವೋಚ್ಚ ನ್ಯಾಯಾಲಯದ ಆದೇಶಗಳನ್ನು ಪಾಲಿಸಲು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವದಂತಿಗಳನ್ನ ತಡೆಯಲು ಪಿಐಬಿ ಪ್ರತ್ಯೇಕ ವಿಭಾಗವನ್ನು ಸ್ಥಾಪಿಸಿದೆ. ಸಾಮಾಜಿಕ ಮಾಧ್ಯಮದ ವಿವಿಧ ವೇದಿಕೆಗಳಲ್ಲಿ ಬಿತ್ತರಿಸುವ ಸುದ್ದಿಗಳನ್ನು ಸತತವಾಗಿ ಪರಿವೀಕ್ಷಿಸುವ ಟ್ವಿಟರ್ ಹ್ಯಾಂಡಲ್ ‘ಪಿಐಬಿ ಫ್ಯಾಕ್ಟ್ ಚೆಕ್’ ಆಗಿದೆ ಮತ್ತು ನಕಲಿ ಸುದ್ದಿಗಳ ಕುರಿತು ಜಾಗೃತಿಮೂಡಿಸಲು ಆ ವಿಷಯಗಳ ಕುರಿತು ಸಮಗ್ರ ಪರಿಶೀಲನೆ ನಡೆಸುತ್ತದೆ. ಇದಲ್ಲದೆ, ‘ಪಿಐಬಿ_ಇಂಡಿಯಾ’ ಹ್ಯಾಂಡಲ್ ಮತ್ತು ವಿವಿಧ ಪಿಐಬಿ ಪ್ರಾದೇಶಿಕ ವಿಭಾಗಗಳ ಟ್ವಿಟರ್ ನ ಹ್ಯಾಂಡಲ್ ಗಳು, ಟ್ವಿಟರ್ ನಲ್ಲಿ ಯಾವುದೇ ವಿಷಯದ ಅಧಿಕೃತ ಮತ್ತು ಪ್ರಾಮಾಣಿಸಿದ ವಿಷಯಗಳನ್ನು ಟ್ವಿಟರ್ ಸಮುದಾಯದ ಹಿತದೃಷ್ಠಿಯಿಂದ #ಪಿಐಬಿಫ್ಯಾಕ್ಟ್ ಚೆಕ್ ಎಂಬ ಹ್ಯಾಶ್ ಟ್ಯಾಗ್ ಬಳಸಿ ಪೋಸ್ಟ್ ಮಾಡುತ್ತಿವೆ.
ಯಾವುದೇ ವ್ಯಕ್ತಿ, ಯಾವುದೇ ಲಿಖಿತ, ಧ್ವನಿ ಮತ್ತು ವಿಡಿಯೊ ಸೇರಿದಂತೆ ಸಾಮಾಜಿಕ ಮಾಧ್ಯಮದ ಸಂದೇಶವನ್ನು ಪ್ರಮಾಣೀಕರಣ ಪರೀಕ್ಷೆಗಾಗಿ ಪಿಐಬಿಫ್ಯಾಕ್ಟ್ ಚೆಕ್ ಗೆ ಸಲ್ಲಿಸಬಹುದಾಗಿದೆ. ಇವುಗಳನ್ನು https://factcheck.pib.gov.in/ ಆನ್ ಪೋರ್ಟಲ್ ನಲ್ಲಿ ಅಥವಾ ವಾಟ್ಸ್ ಪ್ ಸಂಖ್ಯೆ +918799711259 ಗೆ ಅಥವಾ ಮಿಂಚಂಚೆ -pibfactcheck[at]gmail[dot]com ಮೂಲಕವೂ ಸಲ್ಲಿಸಬಹುದಾಗಿದೆ. ಈ ವಿವರಗಳು ಪಿಐಬಿ ಜಾಲತಾಣ https://pib.gov.in ದಲ್ಲೂ ಲಭ್ಯವಿದೆ.
***
(Release ID: 1617632)
Visitor Counter : 157