ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ನೈಸರ್ಗಿಕ ರಕ್ಷಣೆಯನ್ನು ಹೆಚ್ಚಿಸಿ, ಕೋವಿಡ್-19 ವಿರುದ್ಧ ಹೋರಾಡಲು ಭಾರತದ ಉಪಕ್ರಮ

Posted On: 23 APR 2020 3:18PM by PIB Bengaluru

ನೈಸರ್ಗಿಕ ರಕ್ಷಣೆಯನ್ನು ಹೆಚ್ಚಿಸಿ, ಕೋವಿಡ್-19 ವಿರುದ್ಧ ಹೋರಾಡಲು ಭಾರತದ ಉಪಕ್ರಮ

ಸಿಎಸ್ಐಆರ್, ಕೋವಿಡ್-19 ಹರಡುವುದನ್ನು ನಿಯಂತ್ರಿಸಲು ಹಾಗು ಕೋವಿಡ್-19 ರೋಗಿಗಳ ಚೇತರಿಕೆಯನ್ನು ತ್ವರಿತಗೊಳಿಸಲು ದೇಹದ ಸಹಜ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸೆಪ್ಸಿವಾಕ್ ಎಂಬ ಅನುಮೋದಿತ ಇಮ್ಯುನೊಮಾಡ್ಯುಲೇಟರ್ ಅನ್ನು ಅಭಿವೃದ್ಧಿಪಡಿಸಲು/ ಮರುರೂಪಿಸಲು ನಿರ್ಧರಿಸಿದೆ

ಹೊಸ ಕ್ಲಿನಿಕಲ್ ಪ್ರಯೋಗಗಳನ್ನು ಈಗ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮೋದಿಸಿದೆ

ಅವುಗಳು ರಾಂಡಮೈಸ್ಡ್, ಡಬಲ್-ಬ್ಲೈಂಡ್, ಟು ಆರ್ಮ್, ನಿಯಂತ್ರಿತ ಕ್ಲಿನಿಕಲ್ ಪ್ರಯೋಗಗಳಾಗಿರುತ್ತವೆ

ಎರಡು ಕ್ಲಿನಿಕಲ್ ಪ್ರಯೋಗಗಳು ತೀವ್ರ ಅನಾರೋಗ್ಯಕ್ಕೊಳಗಾದ ಕೋವಿಡ್-19 ರೋಗಿಯಲ್ಲಿ ಮರಣ ಪ್ರಮಾಣವನ್ನು (ಸಾವುಗಳನ್ನು) ಕಡಿಮೆ ಮಾಡಲು, ಔಷಧದ ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡಲು ಇತ್ತೀಚೆಗೆ ಘೋಷಿಸಿದ ಪ್ರಯೋಗಕ್ಕೆ ಹೆಚ್ಚುವರಿಯಾಗಿ ಸೇರಿವೆ

 

ಕೋವಿಡ್-19 ಮತ್ತು ಇತರ ವೈರಲ್ ಸೋಂಕುಗಳ ವಿರುದ್ಧದ ಹೋರಾಟದಲ್ಲಿ ದೇಹದ ನೈಸರ್ಗಿಕ ರಕ್ಷಣಾ ಕಾರ್ಯವಿಧಾನವು (ಸಹಜ ರೋಗನಿರೋಧಕ ಶಕ್ತಿ) ಪ್ರಮುಖ ಪಾತ್ರ ವಹಿಸುತ್ತದೆ. ಕೋವಿಡ್-19 ಮತ್ತು ಇತರ ವೈರಸ್ಗಳನ್ನು ಗುರುತಿಸಲು ಮತ್ತು ತೆಗೆದುಹಾಕಲು ಇದು ವೇಗವಾದ, ಮೊದಲ ಮತ್ತು ಪರಿಣಾಮಕಾರಿಯಾದ ರೋಗನಿರೋಧಕ ಪ್ರತಿಸ್ಪಂದನೆಯಾಗಿದೆ. ಕೋವಿಡ್-19 ಅಥವಾ ಇತರ ವೈರಸ್ಗಳ ಸಂಪರ್ಕಕ್ಕೆ ಬರುವ ಬಹುಪಾಲು ವ್ಯಕ್ತಿಗಳು ರೋಗಕ್ಕೆ ಒಳಗಾಗುವುದಿಲ್ಲ ಅಥವಾ ಸಹಜ ರೋಗನಿರೋಧಕ ಶಕ್ತಿ ಸಮರ್ಪಕವಾಗಿರುವುದರಿಂದ ಸ್ವಯಂ-ಸೀಮಿತಗೊಳಿಸುವ ಕಾಯಿಲೆಯ ಸೌಮ್ಯ ಸ್ವರೂಪವನ್ನು ಪಡೆಯುತ್ತಾರೆ. ಮ್ಯಾಕ್ರೋಫೇಜಸ್, ಎನ್ ಕೆ ಕೋಶಗಳಂತಹ ಮಾನವ ರೋಗನಿರೋಧಕ ವ್ಯವಸ್ಥೆಯ ಕೋಶಗಳು ಅಂತಹ ರಕ್ಷಣೆಯನ್ನು ನೀಡುತ್ತವೆ. ಕೋವಿಡ್-19 ನಿರ್ವಹಣೆಗಾಗಿ ಲಸಿಕೆಗಳು ಮತ್ತು ಆಂಟಿವೈರಲ್ ಏಜೆಂಟ್ಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಜಗತ್ತು ಕಾರ್ಯನಿರ್ವಹಿಸುತ್ತಿದ್ದರೆ, ದೇಹದ ಸ್ವಾಭಾವಿಕ ಪ್ರತಿರಕ್ಷೆಯನ್ನು ಹೆಚ್ಚಿಸಲು ಸೆಪ್ಸಿವಾಕ್ ಎಂಬ ಅನುಮೋದಿತ ಇಮ್ಯುನೊಮಾಡ್ಯುಲೇಟರ್ ಅನ್ನು ಅಭಿವೃದ್ಧಿಪಡಿಸಲು / ಮರುರೂಪಿಸಲು ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ತನ್ನ ಪ್ರಮುಖ ಯೋಜನೆ ನ್ಯೂ ಮಿಲೇನಿಯಮ್ ಇಂಡಿಯನ್ ಟೆಕ್ನಾಲಜಿ ಲೀಡರ್ಶಿಪ್ ಇನಿಶಿಯೇಟಿವ್ (NMITLI) ಮುಖಾಂತರ ನಿರ್ಧರಿಸಿದೆ. ಇದು ಕೋವಿಡ್-19 ಹರಡುವಿಕೆಯನ್ನು ಮಿತಿಗೊಳಿಸಿ ಮತ್ತು ಕೋವಿಡ್-19 ರೋಗಿಗಳ ಚೇತರಿಕೆಯನ್ನು ತ್ವರಿತಗೊಳಿಸುತ್ತದೆ.

ಸೆಪ್ಸಿವಾಕ್ ನಿಂದ ಕೆಳಗಿನ ಕಾರ್ಯಗಳನ್ನು ನಿರೀಕ್ಷಿಸಲಾಗಿದೆ -

  1. ಕೋವಿಡ್-19 ರೋಗಿಗಳು ಮತ್ತು ಆರೋಗ್ಯ ಸಿಬ್ಬಂದಿಗಳ ನಿಕಟ ಸಂಪರ್ಕ ವ್ಯಕ್ತಿಗಳನ್ನು ಅವರ ಸಹಜ ಪ್ರತಿಸ್ಪಂದನೆಯನ್ನು ಹೆಚ್ಚಿಸುವ ಮೂಲಕ ಮತ್ತು ಮೂಲಕ ರೋಗ ಅಂಟಿಕೊಳ್ಳುವುದನ್ನು ತಡೆಯುವ ಮೂಲಕ ರಕ್ಷಿಸುವುದು.
  2. ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗದ ಆದರೆ ಆಸ್ಪತ್ರೆಗೆ ದಾಖಲಾದ ಕೋವಿಡ್-19 ರೋಗಿಗಳಿಗೆ ತ್ವರಿತವಾಗಿ ಚೇತರಿಕೆಯನ್ನು ಒದಗಿಸುವುದು. ಐಸಿಯು ನಿರ್ವಹಣೆ ಅಗತ್ಯವಾಗುವಷ್ಟು ಉಲ್ಬಣವಾಗುವ ಮುನ್ನ ರೋಗದ ಬೆಳವಣಿಗೆಯನ್ನು ಇದು ತಡೆಯುತ್ತದೆ.

ಎರಡೂ ಹೊಸ ಕ್ಲಿನಿಕಲ್ ಪ್ರಯೋಗಗಳನ್ನು ಈಗ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮೋದಿಸಿದೆ. ಅವುಗಳು ರಾಂಡಮೈಸ್ಡ್, ಡಬಲ್-ಬ್ಲೈಂಡ್, ಟು ಆರ್ಮ್, ನಿಯಂತ್ರಿತ ಕ್ಲಿನಿಕಲ್ ಪ್ರಯೋಗಗಳಾಗಿರುತ್ತವೆ ಎರಡು ಕ್ಲಿನಿಕಲ್ ಪ್ರಯೋಗಗಳು ತೀವ್ರ ಅನಾರೋಗ್ಯಕ್ಕೊಳಗಾದ ಕೋವಿಡ್-19 ರೋಗಿಯಲ್ಲಿ ಮರಣ ಪ್ರಮಾಣವನ್ನು (ಸಾವುಗಳನ್ನು) ಕಡಿಮೆ ಮಾಡಲು, ಔಷಧದ ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡಲು ಇತ್ತೀಚೆಗೆ ಘೋಷಿಸಿದ ಪ್ರಯೋಗಕ್ಕೆ ಹೆಚ್ಚುವರಿಯಾಗಿ ಸೇರಿವೆ.

ಸೆಪ್ಸಿವಾಕ್ ಶಾಖದಿಂದ-ಕೊಲ್ಲಲ್ಪಟ್ಟ ಮೈಕೋಬ್ಯಾಕ್ಟೀರಿಯಂ W (Mw) ಅನ್ನು ಹೊಂದಿರುತ್ತದೆ. ಇದು ರೋಗಿಗಳಲ್ಲಿ ಅತ್ಯಂತ ಸುರಕ್ಷಿತವೆಂದು ಕಂಡುಬಂದಿದೆ ಮತ್ತು ಯಾವುದೇ ವ್ಯವಸ್ಥಿತ ಅಡ್ಡಪರಿಣಾಮಗಳು ಅದರ ಬಳಕೆಯೊಂದಿಗೆ ಇರುವುದಿಲ್ಲ . ಸಿಪ್ಸಿವಾಕ್ ಅನ್ನು ಸಿಎಸ್ಐ ಆರ್ ಎನ್ಎಂಐಟಿಎಲ್ಐ ಕಾರ್ಯಕ್ರಮದಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಇದನ್ನು ಅಹಮದಾಬಾದ್ ಕ್ಯಾಡಿಲಾ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ತಯಾರಿಸಿದೆ.

***


(Release ID: 1617623) Visitor Counter : 257