ನೌಕಾ ಸಚಿವಾಲಯ

ಭಾರತೀಯ ಬಂದರುಗಳ ನಾವಿಕರ ಚಲನವಲನದ ಬಗ್ಗೆ ಗೃಹ ಸಚಿವಾಲಯ  ನಿಗಾ

Posted On: 22 APR 2020 1:28PM by PIB Bengaluru

ಭಾರತೀಯ ಬಂದರುಗಳ ನಾವಿಕರ ಚಲನವಲನದ ಬಗ್ಗೆ ಗೃಹ ಸಚಿವಾಲಯ  ನಿಗಾ

ಕಾರ್ಯಾಚಾರಣೆ ಜಾರಿಗೆ ಬಂದರು ಸಚಿವ ಶ್ರೀ ಮನ್ಸುಖ್ ಮಾಂಡವಿಯಾ  ಸ್ವಾಗತ


ಭಾರತೀಯ ಬಂದರುಗಳಲ್ಲಿ ಕಾರ್ಯ ನಿರ್ವಹಿಸುವ ನಾವಿಕರು ಆಗಮನ/ನಿರ್ಗಮನ ಮತ್ತು ಚಲನವಲನದ ಬಗ್ಗೆ ಗೃಹ ಸಚಿವಾಲಯ ಸಾಮಾನ್ಯ ಕಾರ್ಯಾಚರಣೆ ವಿಧಾನಗಳನ್ನು ಜಾರಿಮಾಡಿರುವುದನ್ನು ಬಂದರು ಖಾತೆ ಸಹಾಯಕ ಸಚಿವ ಶ್ರೀ ಮನ್ಸುಖ ಮಾಂಡವಿಯಾ ಸ್ವಾಗತಿಸಿದ್ದಾರೆ. ತಮ್ಮ ಟ್ವೀಟ್ ಸಂದೇಶದಲ್ಲಿ ಗೃಹ ಸಚಿವರಿಗೆ ಧನ್ಯವಾದ ತಿಳಿಸಿದ ಅವರು ಸಮುದ್ರ ಬಂದರುಗಳಲ್ಲಿ ಈಗ ಸಿಬ್ಬಂದಿ ಬದಲಾವಣೆ ಇದು ನೆರವಾಗಲಿದೆ ಎಂದು ಹೇಳಿದ್ದಾರೆ. ಸಾವಿರಾರು ನಾವಿಕರು ಅನುಭವಿಸುತ್ತಿರುವ ಕಷ್ಟಗಳಿಗೆ ಇದು ಅಂತ್ಯ ಹಾಡಲಿದೆ ಎಂದು ಅವರು ತಿಳಿಸಿದರು. 

https://ci4.googleusercontent.com/proxy/TwVX6H1IsDYn3OblltZk74QGkDb3gGwjYyCoG4uBTVKPP142lQ3BzxqAOH6wlZoKEpz04ywu-cgmZRU29EnJI464KrCuhZXeqwWb5sG2eLO8PxF7iPqT=s0-d-e1-ft#https://static.pib.gov.in/WriteReadData/userfiles/image/image0019XKU.jpg

 

ವ್ಯಾಪಾರಿ ಹಡಗುಗಳ ಕಾರ್ಯಾಚರಣೆಗೆ ಹಡಗು ಸಿಬ್ಬಂದಿ (ನಾವಿಕರು) ಬದಲಾವಣೆ ಒಂದು ಮಹತ್ವದ ಕ್ರಮವಾಗಿದೆ. 21 ಏಪ್ರಿಲ್ 2020 ರಂದು ಗೃಹ ಸಚಿವಾಲಯವು (ಎಂಹೆಚ್ಎ) ಸಾಮಾನ್ಯ ಕಾರ್ಯಾಚರಣೆ ವಿಧಾನಗಳನ್ನು (ಎಸ್ ಒ ಪಿ) ಜಾರಿಮಾಡಿದೆ. ವ್ಯಾಪಾರಿ ಹಡಗುಗಳಿಗಾಗಿ ಭಾರತೀಯ ಬಂದರುಗಳಲ್ಲಿ ಕಾರ್ಯ ನಿರ್ವಹಿಸುವ ನಾವಿಕರು ಆಗಮನ/ನಿರ್ಗಮನ ಮತ್ತು ಚಲನವಲನ ಕುರಿತು ಸಾಮಾನ್ಯ ಕಾರ್ಯಾಚರಣೆ ವಿಧಾನಗಳನ್ನು ಸಿದ್ಧಪಡಿಸಲಾಗಿದೆ. ಈ ಕೆಳಗಿನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ:      

I. ಸೈನ್ ಆನ್ ಗಾಗಿ

i. ಹಡಗು ಮಾಲೀಕರು/ನೇಮಕ ಮತ್ತು ಉದ್ಯೋಗ ಸೇವೆ (ಆರ್ ಪಿ ಎಸ್) ಸಂಸ್ಥೆ ಹಡಗಿನಲ್ಲಿ ಉದ್ಯೋಗಕ್ಕೆ ಸೇರಿಕೊಳ್ಳಲು ಭಾರತೀಯ ನಾವಿಕರನ್ನು ಗುರುತಿಸುತ್ತದೆ

ii. ನೌಕಾ ಮಹಾನಿರ್ದೇಶಕರು ನಿಗದಿಪಡಿಸಿದ ಕಾರ್ಯವಿಧಾನದಂತೆ ನಾವಿಕರು ಕಳೆದ 28 ದಿನಗಳ ತಮ್ಮ ಪ್ರಯಾಣ ಮತ್ತು ಸಂಪರ್ಕದ ವಿವರವನ್ನು ನೌಕಾ ಮಾಲೀಕರಿಗೆ /ಆರ್ ಪಿ ಎಸ್ ಎಜನ್ಸಿಗೆ ಈ ಮೇಲ್ ಮೂಲಕ ತಿಳಿಸುತ್ತಾರೆ.  

 iii. ಈ ಉದ್ದೇಶಕ್ಕಾಗಿ ನೀಡಲಾದ ಮಾರ್ಗಸೂಚಿಗಳ ಪ್ರಕಾರ ಡಿಜಿಎಸ್ ಅನುಮೋದಿತ ವೈದ್ಯಕೀಯ ಪರೀಕ್ಷಕರು ನಾವಿಕರನ್ನು ಪರೀಕ್ಷಿಸುತ್ತಾರೆ. ಅದೇ ವೇಳೆ ನಾವಿಕರನ್ನು ಪರಿಶೀಲಿಸಲಾಗುತ್ತದೆ ಮತ್ತು ಕಳೆದ 28 ದಿನಗಳ ಅವರ ಪ್ರಯಾಣ ಮತ್ತು ಸಂಪರ್ಕದ ವಿವರವನ್ನು ಪರಿಶೀಲಿಸಲಾಗುತ್ತದೆ. ಕೋವಿಡ್ – 19 ಲಕ್ಷಣಗಳು ಕಂಡುಬರದ ನಾವಿಕರು ಮತ್ತು ಸೂಕ್ತವಾದವರನ್ನು ಸೈನ್ ಆನ್ ಗೆ ಪರಿಷ್ಕರಿಸಲಾಗುವುದು.    

  1. . ನಾವಿಕರು ವಾಸಿಸುವ ಸ್ಥಳದಿಂದ ಹಡಗು ಪ್ರಯಾಣಿಸುವ ಸ್ಥಳದವರೆಗೆ ಸಂಚಾರಕ್ಕೆ ಪಾಸ್ ನೀಡಲು ಸೈನ್ ಆನ್ ಮಾಡಲು ಅವರು ಅರ್ಹರಾಗಿದ್ದಾರೆ ಎಂದು ನಾವಿಕರು ವಾಸಿಸುವ ಸ್ಥಳೀಯ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕಾಗುತ್ತದೆ 
  2. . ನಾವಿಕರು ವಾಸಿಸುವ ಸ್ಥಳದಿಂದ ರಸ್ತೆ ಮಾರ್ಗವಾಗಿ ಅವರು ಪ್ರಯಾಣಿಸಲು ನಾವಿಕ ಮತ್ತು ಒಬ್ಬ ವಾಹನ ಚಾಲಕನಿಗೆ ಪಾಸ್ ನ್ನು ರಾಜ್ಯ ಸರ್ಕಾರ/ಕೇಂದ್ರಾಡಳಿತ ಪ್ರದೇಶ ನೀಡಬಹುದಾಗಿದೆ. 

vi. ಒಂದು ನಿರ್ದಿಷ್ಟ ಮಾರ್ಗಕ್ಕೆ ನಿಗದಿತ ಸಿಂಧುತ್ವದೊಂದಿಗೆ ಸಂಚಾರ ಪಾಸ್ (ಹೋಗಿ ಬರುವ) ನ್ನು ನೀಡಲಾಗುವುದು ಮತ್ತು ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ.    ಪ್ರಯಾಣ ಮಾರ್ಗದಲ್ಲಿ ಈ ಪಾಸ್ ಅನ್ನು ರಾಜ್ಯ /ಕೇಂದ್ರಾಡಳಿತ ಪ್ರದೇಶ ಆಡಳಿತ ಮಾನ್ಯ ಮಾಡುತ್ತವೆ.

vii. ಈ ಮಾರ್ಗದಲ್ಲಿ ಸಾಮಾನ್ಯ ಆರೋಗ್ಯ ಶಿಷ್ಟಾಚಾರಗಳ ಪ್ರಕಾರ ಸಾಮಾಜಿಕ ದೂರ ಕಾಯ್ದುಕೊಳ್ಳುವುದು ಹಾಗೂ ನೈರ್ಮಲ್ಯದ ಮಾನದಂಡಗಳನ್ನು ಅನುಸರಿಸುವ ಮೂಲಕ ನಾವಿಕರನ್ನು ಅವರ ಸ್ಥಳಕ್ಕೆ ತಲುಪಿಸಲಾಗುತ್ತದೆ

viii. ಪ್ರಯಾಣಿಸುವ ಬಂದರಿನಲ್ಲಿ ನಾವಿಕರನ್ನು ಕೋವಿಡ್ – 19 ಪರೀಕ್ಷೆಗೆ ಒಳಪಡಿಸಲಾಗುವುದು ; ಕೋವಿಡ್ – 19 ಪರೀಕ್ಷೆ ನೆಗೆಟಿವ್ ಬಂದರೆ ಮಾತ್ರ ನಾವಿಕರು ಸೈನ್ ಆನ್ ಮಾಡಲು ಸಿದ್ಧರಾಗುತ್ತಾರೆ, ವಿಫಲವಾದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾರ್ಗಸೂಚಿಗಳಂತೆ ಕ್ರಮ ಕೈಗೊಳ್ಳಲಾಗುವುದು.

  1. ಸೈನ್ ಆಫ್ ಗಾಗಿ
  1. ನೌಕೆಯ ಮುಖ್ಯಸ್ಥ ಯಾವುದೇ ವಿದೇಶೀ ಬಂದರಿನಿಂದ ಬರುತ್ತಿದ್ದರೆ, ಅಥವಾ ಸಮುದ್ರ ನೌಕೆ ಯಾವುದೇ ಭಾರತೀಯ ಬಂದರಿನಿಂದ ಬರುತ್ತಿದ್ದರೆ ಭಾರತದಲ್ಲಿ ತಮ್ಮ ಗಮ್ಯದ ಬಂದರಿಗೆ ಬಂದು ತಲುಪಿದಾಗ ಆ ನೌಕೆಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯದ ಸ್ಥಿತಿಯ ಅರಿವಿರಬೇಕು ಮತ್ತು ಬಂದರಿನ ಆರೋಗ್ಯ ಅಧಿಕಾರಿಗಳು ಹಾಗೂ ಬಂದರು ಅಧಿಕಾರಿಗಳಿಗೆ ಆರೋಗ್ಯದ ಘೋಷಣಾ ಪತ್ರವನ್ನು ಸಲ್ಲಿಸಬೇಕು. ಜೊತೆಗೆ ಬಂದರು ಆರೋಗ್ಯ ಅಧಿಕಾರಿಗಳ ನಿರ್ದೇಶನದಂತೆ ನೌಕೆಯ ಮುಖ್ಯಸ್ಥ ಬಂದರಿನ ಸ್ಥಳೀಯ ಆರೋಗ್ಯ ಅಧಿಕಾರಿಗಳಿಗೆ ತಾಪಮಾನದ ಚಾರ್ಟ್, ವೈಯಕ್ತಿಕ ಆರೋಗ್ಯ ಘೋಷಣೆ ಇತ್ಯಾದಿಗಳ ಕುರಿತು ಮಾಹಿತಿ ಒದಗಿಸಬೇಕು. ಅಗತ್ಯ ಆರೋಗ್ಯ ಶಿಷ್ಟಾಚಾರದಂತೆ ಬಂದರು ಆರೋಗ್ಯ ಅಧಿಕಾರಿಗಳು ಹಡಗನ್ನು ಒರಗುದಾಣದಲ್ಲಿ ನಿಲ್ಲಿಸುವ ಮುಂಚೆ ಪರವಾಣಿಗೆ ನೀಡುತ್ತಾರೆ            

ii. ಅವಳು/ಅವನು ಕೋವಿಡ್ – 19 ನೆಗೆಟಿವ್ ಆಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನೌಕೆಯಲ್ಲಿ ಬಂದಿಳಿಯುವ ಭಾರತೀಯ ನಾವಿಕರು ಕೋವಿಡ್ – 19  ಪರೀಕ್ಷೆಗೆ ಒಳಪಡಬೇಕಾಗುತ್ತದೆ.  ನಾವಿಕರು ನೌಕೆಯಿಂದ ಇಳಿದ ನಂತರ ಬಂದರಿನ ಆವರಣದ ಒಳಗೆ ಪರೀಕ್ಷಾ ಸೌಲಭ್ಯದವರೆಗೆ ತಲುಪುವ ಸಮಯದವರೆಗೆ ಗುಣಮಟ್ಟದ ಆರೋಗ್ಯ ಶಿಷ್ಟಾಚಾರದಂತೆ ಎಲ್ಲ ಸುರಕ್ಷತಾ ಮುಂಜಾಗೃತೆಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ನೌಕಾ ಮಾಲೀಕರು ಖಚಿತಪಡಿಸಬೇಕಾಗುತ್ತದೆ.  

iii. ನಾವಿಕರ ಪರೀಕ್ಷಾ ವರದಿಗಳು ಬರುವವರೆಗೆ ಅವರನ್ನು ಬಂದರು/ರಾಜ್ಯ ಆರೋಗ್ಯ ಪ್ರಾಧಿಕಾರ ಕ್ವಾರೈಂಟೈನ್ ಸೌಲಭ್ಯದಲ್ಲಿ ಇರಸಬೇಕು

  1. . ನಾವಿಕರು ಕೋವಿಡ್ – 19 ಪರೀಕ್ಷೆಯಲ್ಲಿ ಪಾಸಿಟಿವ್ ಬಂದರೆ ಎಂ ಒ ಹೆಚ್ ಎಫ್ ಡಬ್ಲ್ಯೂ ನಿಗದಿಪಡಿಸಿದ ಕಾರ್ಯವಿಧಾನಗಳ ಪ್ರಕಾರ ಅವನು/ಅವಳನ್ನು ನಿಭಾಯಿಸಬೇಕಾಗುತ್ತದೆ.

v. ನಾವಿಕನ ಪರೀಕ್ಷೆ ಫಲಿತಾಂಶ ನೆಗೆಟಿವ್ ಬಂದಲ್ಲಿ, ಸ್ಥಳೀಯ ಪ್ರಾಧಿಕಾರಕ್ಕೆ ಯಾವ ಪ್ರದೇಶದಲ್ಲಿ ನಾವಿಕ ಅವನ/ಅವಳು ಯಾವ ಸ್ಥಳದಲ್ಲಿ ಸೈನ್ ಆಫ್ ಮಾಡಬೇಕು ಎಂಬುದರ ಕುರಿತು ಮತ್ತು ಇಳಿಯುವ ಸ್ಥಳದಿಂದ ಅವನ/ಅವಳ ವಾಸಸ್ಥಳಕ್ಕೆ ತೆರಳಲು ಎಲ್ಲಿ ಪಾಸ್ ಪಡೆಯಬೇಕು ಎಂಬ ಮಾಹಿತಿ ನೀಡುತ್ತದೆ  

vi. ನಾವಿಕರು ಇಳಿಯುವ ಸ್ಥಳದಿಂದ ರಸ್ತೆ ಮಾರ್ಗವಾಗಿ ಅವರು ಪ್ರಯಾಣಿಸಲು ನಾವಿಕ ಮತ್ತು ಒಬ್ಬ ವಾಹನ ಚಾಲಕನಿಗೆ ಪಾಸ್ ನ್ನು ರಾಜ್ಯ ಸರ್ಕಾರ/ಕೇಂದ್ರಾಡಳಿತ ಪ್ರದೇಶ ನೀಡಬಹುದಾಗಿದೆ. 

vii. ಒಂದು ನಿರ್ದಿಷ್ಟ ಮಾರ್ಗಕ್ಕೆ ನಿಗದಿತ ಸಿಂಧುತ್ವದೊಂದಿಗೆ ಸಂಚಾರ ಪಾಸ್ (ಹೋಗಿ ಬರುವ) ನ್ನು ನೀಡಲಾಗುವುದು ಮತ್ತು ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ.    ಪ್ರಯಾಣ ಮಾರ್ಗದಲ್ಲಿ ಈ ಪಾಸ್ ಅನ್ನು ರಾಜ್ಯ /ಕೇಂದ್ರಾಡಳಿತ ಪ್ರದೇಶ ಆಡಳಿತ ಮಾನ್ಯ ಮಾಡುತ್ತವೆ.

viii. ಈ ಮಾರ್ಗದಲ್ಲಿ ಸಾಮಾನ್ಯ ಆರೋಗ್ಯ ಶಿಷ್ಟಾಚಾರಗಳ ಪ್ರಕಾರ ಸಾಮಾಜಿಕ ದೂರ ಕಾಯ್ದುಕೊಳ್ಳುವುದು ಹಾಗೂ ನೈರ್ಮಲ್ಯದ ಮಾನದಂಡಗಳನ್ನು ಅನುಸರಿಸುವ ಮೂಲಕ ನಾವಿಕರನ್ನು ಅವರ ಸ್ಥಳಕ್ಕೆ ತಲುಪಿಸಲಾಗುತ್ತದೆ

ಈ ಮೇಲಿನ ಪ್ರಕರಣಗಳಲ್ಲಿ ಸೈನ್ ಇನ್ ಮತ್ತು ಸೈನ್ ಆಫ್ ಮಾಡಲು ಯಾವ ಶಿಷ್ಟಾಚಾರಗಳನ್ನು ಪಾಲಿಸಬೇಕು ಎಂಬುದರ ವಿವರಗಳನ್ನು ಶಿಪ್ಪಿಂಗ್ ಮಹಾ ನಿರ್ದೇಶಕರು ಸೂಚಿಸುತ್ತಾರೆ.

***


(Release ID: 1617548) Visitor Counter : 257