ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ

ಕೊವಿಡ್-19 ಬಿಕ್ಕಟ್ಟಿನಿಂದ ಸಿಬ್ಬಂದಿಯನ್ನು ರಕ್ಷಿಸಲು ಉತ್ತರ ಡಿಎಂಸಿ ಸಮಗ್ರ ಕ್ರಮಗಳನ್ನು ಕೈಗೊಂಡಿದೆ

Posted On: 22 APR 2020 11:46AM by PIB Bengaluru

ಕೊವಿಡ್-19 ಬಿಕ್ಕಟ್ಟಿನಿಂದ ಸಿಬ್ಬಂದಿಯನ್ನು ರಕ್ಷಿಸಲು ಉತ್ತರ ಡಿಎಂಸಿ ಸಮಗ್ರ ಕ್ರಮಗಳನ್ನು ಕೈಗೊಂಡಿದೆ

ಪ್ರತಿ ಕಂಟೈನ್ಮೆಂಟ್ ವಲಯದ ಹೊರಗೆ ಸಿಬ್ಬಂದಿಗೆ ಪಿಪಿಇ ಕಿಟ್ ಗಳನ್ನು ಒದಗಿಸಲು ಡಾಕಿಂಗ್ ಸ್ಥಳದ ವ್ಯವಸ್ಥೆ ಮಾಡಲಾಗಿದೆ

 

ಕೊವಿಡ್ -19 ಬಿಕ್ಕಟ್ಟಿನ ಈ ಸಂಕಷ್ಟದ ಸಮಯದಲ್ಲಿ, ಉತ್ತರ ದೆಹಲಿಯ ಪೌರಾಡಳಿತ (ಉತ್ತರ ಡಿಎಂಸಿ) ಅದರ ಸಿಬ್ಬಂದಿಗೆ ಸಂಪೂರ್ಣ ಸುರಕ್ಷತೆ ಮತ್ತು ಸಾಧ್ಯವಾದ ಎಲ್ಲ ರಕ್ಷಣೆಯನ್ನು ಖಚಿತಪಡಿಸಲು ಸಮಗ್ರ ಕ್ರಮಗಳನ್ನು ಕೈಗೊಂಡಿದೆ. ನಗರದಾದ್ಯಂತ ಗುರುತಿಸಲಾದ ಕಂಟೇನ್ ಮೆಂಟ್ ವಲಯಗಳ ಸೇವೆಗೆ ಸಂಬಂಧಿಸಿದಂತೆ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಪ್ರತಿ ಕಂಟೇನ್ ಮೆಂಟ್ ವಲಯದ ಹೊರಗೆ ಉತ್ತರ ಡಿಎಂಸಿ ಒಂದು ಡಾಕಿಂಗ್ ಸ್ಥಳವನ್ನು ಸ್ಥಾಪಿಸಿದೆ. ನೈರ್ಮಲ್ಯ, ಇಂಜಿನಯರಿಂಗ್, ಸಾರ್ವಜನಿಕ ಆರೋಗ್ಯ ಅಥವಾ ಯಾವುದೇ ಇಲಾಖೆಯ ಪ್ರತಿ ಸಿಬ್ಬಂದಿ ತಮ್ಮ ಕೆಲಸವನ್ನು ಈ ಡಾಕಿಂಗ್ ಸ್ಥಳಗಳಿಂದಲೇ ಆರಂಭಿಸಬೇಕು. ಅವರು ಇಲ್ಲಿಗೆ ಹಾಜರಾಗುತ್ತಾರೆ ಮತ್ತು ಅವರಿಗೆ ತಕ್ಕ ಪಿಪಿಇ ಕಿಟ್ ಗಳನ್ನು ಒದಗಿಸಲಾಗುತ್ತದೆ.

Description: Image

ಪ್ರತಿ ಸಿಬ್ಬಂದಿ ಸಂಪೂರ್ಣ ಸುರಕ್ಷತೆಯೊಂದಿಗೆ ಕಂಟೇನ್ ಮೆಂಟ್ ವಲಯದ ಒಳಗೆ ಪ್ರವೇಶಿಸುತ್ತಾರೆ ಎಂದು ಖಚಿತಪಡಿಸಲಾಗಿದೆ. ತಮ್ಮ ಕೆಲಸ ಪೂರ್ಣಗೊಳಿಸಿದ ನಂತರ, ಅವರು ಮತ್ತೆ ಡಾಕಿಂಗ್ ಸ್ಥಳಕ್ಕೆ ಹಾಜರಾಗುತ್ತಾರೆ ಅಲ್ಲಿ ಅವರು ಧರಿಸಿದ್ದ ಸುರಕ್ಷತಾ ಉಡುಪನ್ನು ಎಚ್ಚರಿಕೆಯಿಂದ ವಿಲೇವಾರಿ ಮಾಡಲಾಗುತ್ತದೆ ನಂತರ ಸಿಬ್ಬಂದಿ ಮನೆಗೆ ತೆರಳುವ ಮುನ್ನ ಸಂಪೂರ್ಣವಾಗಿ ಸ್ವಚ್ಛವಾಗುತ್ತಾರೆ, ಇದರಿಂದ ಅವರು ಯಾವುದೇ ಸೋಂಕನ್ನು ತಮ್ಮೊಂದಿಗೆ ಕೊಂಡೊಯ್ಯುವುದಿಲ್ಲ.

Description: ImageDescription: Image

ಕಂಟೇನ್ ಮೆಂಟ್ ವಲಯಗಳಲ್ಲಿ ಆಹಾರ ಸೇವನೆ ನಿಷೇಧಿಸಿರುವುದರಿಂದ, ತಮ್ಮ ಕೆಲಸ ಪೂರ್ಣಗೊಳಿಸಿದ ನಂತರ ಸಿಬ್ಬಂದಿ ಸದಸ್ಯರಿಗೆ ಪ್ರತ್ಯೇಕ ವ್ಯವಸ್ಥೆಯಲ್ಲಿ ಆಹಾರ ನೀಡಲಾಗುತ್ತದೆ. ಈ ವ್ಯವಸ್ಥೆಗಳಲ್ಲಿ ಸಾಮಾಜಿಕ ಅಂತರದ ಎಲ್ಲ ಮಾನದಂಡಗಳನ್ನು ಪಾಲಿಸಲಾಗುತ್ತದೆ. ರಕ್ಷಣಾ ಉಡುಪುಗಳನ್ನು ಹೇಗೆ ಧರಿಸಬೇಕು ಮತ್ತು ಸುರಕ್ಷಿತವಾಗಿ ಹೇಗೆ ವಿಲೇವಾರಿ ಮಾಡಬೇಕು ಎಂದು ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ.

***(Release ID: 1617266) Visitor Counter : 17