ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ಬಡವರಿಗೆ ಉಚಿತ ಉಜ್ವಲ ಗ್ಯಾಸ್ ಪೂರೈಕೆಗೆ 1000 ಕ್ಕೂ ಅಧಿಕ ಅಡುಗೆ ಗ್ಯಾಸ್ ವಿತರಕರೊಂದಿಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ವಿಡಿಯೋ ಸಂವಾದ
Posted On:
22 APR 2020 10:17AM by PIB Bengaluru
ಬಡವರಿಗೆ ಉಚಿತ ಉಜ್ವಲ ಗ್ಯಾಸ್ ಪೂರೈಕೆಗೆ 1000 ಕ್ಕೂ ಅಧಿಕ ಅಡುಗೆ ಗ್ಯಾಸ್ ವಿತರಕರೊಂದಿಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ವಿಡಿಯೋ ಸಂವಾದ
ದೇಶಾದ್ಯಂತದ 1000 ಕ್ಕೂ ಹೆಚ್ಚು ಅಡುಗೆ ಅನಿಲ ವಿತರಕರೊಂದಿಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಮಂಗಳವಾರ ಸಂಜೆ ವಿಡಿಯೋ ಸಮಾವೇಶ ಮೂಲಕ ಸಂವಾದ ನಡೆಸಿದರು.
ಮಹಾಮಾರಿ ಕೋವಿಡ್ 19 ಪಿಡುಗು ವಿರುದ್ದದ ಲಾಕ್‌ಡೌನ್ ಸಮಯದಲ್ಲಿ ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಪಿ.ಎಂ.ಯು.ವೈ ಫಲಾನುಭವಿಗಳಿಗೆ ಮೂರು ಉಚಿತ ಅಡುಗೆ ಸಿಲಿಂಡರ್‌ಗಳನ್ನು ಗರಿಷ್ಠವಾಗಿ ತಲುಪಿಸಲು ಸಚಿವರು ವಿತರಕರಿಗೆ ಮನವಿ ಮಾಡಿದರು. ಅಡುಗೆ ಅನಿಲ ಸಿಲಿಂಡರ್ ಗಳನ್ನು ಮನೆ ಬಾಗಿಲಿಗೆ ವಿತರಣೆ ಮಾಡುವ ಕಾರ್ಯವನ್ನು ಖಾತರಿಪಡಿಸುತ್ತಾ ಅವರ ಉತ್ತಮ ವಿತರಣಾ ಕಾರ್ಯವನ್ನು ಸಚಿವರು ಶ್ಲಾಘಿಸಿದರು.
ನೋವೆಲ್ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಅಡುಗೆ ಸಿಲಿಂಡರ್‌ಗಳ ಶುಚಿತ್ವ ಸೇರಿದಂತೆ ವಿತರಣಾ ಸಿಬ್ಬಂದಿ ಮತ್ತು ಗ್ರಾಹಕರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದಕ್ಕಾಗಿ ಸಚಿವ ಶ್ರೀ ಪ್ರಧಾನ್ ಅವರು ಎಲ್ಲರನ್ನು ಅಭಿನಂದಿಸಿದರು. ಗ್ರಾಹಕರಿಗೆ ಫೇಸ್ ಮಾಸ್ಕ್, ಆರೋಗ್ಯ ಸೇತು ಆ್ಯಪ್, ಕೈಗಳನ್ನು ಸ್ವಚ್ಛಗೊಳಿಸುವುದು ಮತ್ತು ಸಾಂಕ್ರಾಮಿಕ ರೋಗವನ್ನು ಸೋಲಿಸುವಲ್ಲಿ ಸಾಮಾಜಿಕ ಅಂತರವನ್ನು ಬಳಸುವುದರ ಮಹತ್ವದ ಬಗ್ಗೆ ಅರಿವು ಮೂಡಿಸುವ ಕುರಿತು ಅನಿಲ ವಿತರಣಾ ಸಿಬ್ಬಂದಿಗಳನ್ನು ತರಬೇತುಗೊಳಿಸಿ ಸದಾ ಮುಂದುವರಿಸಲು ಸಚಿವರು ವಿತರಕರಿಗೆ ಈ ಸಂದರ್ಭದಲ್ಲಿ ತಿಳಿಸಿದರು. ಈ ಉಪಯುಕ್ತ ಮಾಹಿತಿಯನ್ನು ಗ್ರಾಹಕರಲ್ಲಿ ಪ್ರಚಾರ ಮಾಡಲು ವಿತರಣಾ ಸಿಬ್ಬಂದಿಗಳು ಅತ್ಯಂತ ಪರಿಣಾಮಕಾರಿಯಾಗಿದ್ದಾರೆ ಮತ್ತು ಇವರು ಮುಂಚೂಣಿಯ ಯೋಧರು ಎಂದು ಸಾಬೀತುಪಡಿಸಿದ್ದಾರೆ ಎಂದು ಸಚಿವರು ಹೇಳಿದರು. ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಮತ್ತು ಉತ್ತಮ ಕೆಲಸವನ್ನು ಮುಂದುವರಿಸಲು, ಕೆಲಸದ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಪಾಡಬೇಕು, ನೈರ್ಮಲ್ಯ ಮತ್ತು ವಸ್ತು ಖರೀದಿ ಕೇಂದ್ರಗಳಲ್ಲಿ ನೈರ್ಮಲ್ಯ – ಅಂತರ ವ್ಯವಸ್ಥೆ ಕಡ್ಡಾಯವಾಗಿ ಅನುಸರಿಸ ಬೇಕು ಎಂದು ಸಚಿವರು ವಿತರಕರನ್ನು ಕೋರಿದರು. ಅಲ್ಲದೆ, ಅಡುಗೆ ಅನಿಲ ವ್ಯವಸ್ಥೆಯಲ್ಲಿ ವಿತರಣಾ ಸಿಬ್ಬಂದಿ ಮುಂಚೂಣಿಯ ಯೋಧರಾಗಿದ್ದು, ಅವರ ಬಗ್ಗೆ ಅನುಭೂತಿ ಹೊಂದಬೇಕು ಮತ್ತು ಎಲ್ಲ ರೀತಿಯ ಕಾಳಜಿ ವಹಿಸಬೇಕು ಎಂದು ಸಚಿವರು ತಿಳಿಸಿದರು.
***
(Release ID: 1617065)
Visitor Counter : 277
Read this release in:
English
,
Urdu
,
Marathi
,
Hindi
,
Manipuri
,
Assamese
,
Punjabi
,
Gujarati
,
Tamil
,
Telugu
,
Malayalam