ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ಕೋವಿಡ್–19 ಎದುರಿಸಲು ಭಾರತದ ಉಪಕ್ರಮ
Posted On:
20 APR 2020 4:31PM by PIB Bengaluru
ಕೋವಿಡ್–19 ಎದುರಿಸಲು ಭಾರತದ ಉಪಕ್ರಮ
ರೋಗಾಣುಗಳಿಂದ ಹರಡುವ ಕಾಯಿಲೆಗಳಿಗೆ ತುತ್ತಾಗಿ ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳ ಜೀವ ಉಳಿಸುವ ನಿಟ್ಟಿನಲ್ಲಿ ಔಷಧವನ್ನು ಸಿದ್ಧಪಡಿಸುವ ಯತ್ನಗಳಿಗೆ ಸಿಎಸ್ಐಆರ್ ಬೆಂಬಲ
ಗಂಭೀರ ಪರಿಸ್ಥಿತಿಯಲ್ಲಿರುವ ಕೋವಿಡ್–19 ರೋಗಿಗಳ ಸಾವಿನ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ ಔಷಧದ ಕ್ಲಿನಿಕಲ್ ಪ್ರಯೋಗ ಕೈಗೊಳ್ಳಲಾಗುತ್ತಿದೆ. ಸಿಎಸ್ಐಆರ್ ಈ ನಿಟ್ಟನಲ್ಲಿ ವಿವಿಧ ರೀತಿಯ ಕ್ರಮಗಳನ್ನು ಕೈಗೊಂಡಿದೆ.
ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನ (ಡಿಸಿಜಿಐ) ಪ್ರಯೋಗ ಕೈಗೊಳ್ಳಲು ಅನುಮೋದನೆ ನೀಡಿದ್ದು ಅತಿ ಶೀಘ್ರದಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ಆರಂಭವಾಗಲಿದೆ
ಇದು ರೋಗಿಗಳಿಗೆ ಅತ್ಯಂತ ಸುರಕ್ಷಿತ ಎನ್ನುವುದು ಗೊತ್ತಾಗಿದೆ ಹಾಗು ಇದನ್ನು ಬಳಸುವುದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳಾಗುತ್ತಿಲ್ಲ
ರೋಗಾಣುಗಳಿಂದ ಹರಡುವ ಕಾಯಿಲೆಗಳಿಗೆ ತುತ್ತಾಗಿ ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳ ಜೀವ ಉಳಿಸುವ ನಿಟ್ಟಿನಲ್ಲಿ ಔಷಧವನ್ನು ಸಿದ್ಧಪಡಿಸುವ ಯತ್ನಗಳಿಗೆ ಭಾರತೀಯ ತಂತ್ರಜ್ಞಾನ ನಾಯಕತ್ವ ಕ್ರಮಗಳ(ಎನ್ಎಂಐಟಿಎಲ್ಐ) ಮೂಲಕ ಅಹಮದಾಬಾದ್ನ ಕ್ಯಾಡಿಲಾ ಫರ್ಮಾಸುಟಿಕಲ್ಸ್ ಲಿಮಿಟೆಡ್ಗೆ 2007ರಿಂದ ವೈಜ್ಞಾನಿಕ ಮತ್ತು ಕೈಗಾರಿಕೆ ಸಂಶೋಧನೆ ಪರಿಷತ್ (ಸಿಎಸ್ಐಆರ್) ಬೆಂಬಲ ನೀಡಿದೆ. ಸಿಎಸ್ಐಆರ್ ನೇಮಿಸಿದ ಉಸ್ತುವಾರಿ ಸಮಿತಿಯು ಔಷಧ ಅಭಿವೃದ್ಧಿಪಡಿಸುವ ಯೋಜನೆ ಮೇಲೆ ನಿಗಾವಹಿಸಿ ಪರಿಶೀಲನೆ (ಪ್ರಿ–ಕ್ಲಿನಿಕಲ್ ಮತ್ತು ಕ್ಲಿನಿಕಲ್ ಅಧ್ಯಯನ) ನಡೆಸುತ್ತಿದೆ. ಅತಿ ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳು ಸಾವಿಗೀಡಾಗುವುದನ್ನು ತಪ್ಪಿಸಲು ಈ ಔಷಧ ತಯಾರಿಸಲಾಗುತ್ತಿದೆ. ಜತೆಗೆ ತ್ವರಿತಗತಿಯಲ್ಲಿ ಗುಣಮುಖರಾಗಲು ಸಹ ನೆರವಾಗಲಿದೆ. ಭಾರತದಲ್ಲಿ ಇದನ್ನು ಮಾರಾಟ ಮಾಡಲು ಅನುಮೋದನೆ ದೊರೆತಿದೆ. ಕ್ಯಾಡಿಲಾ ಫರ್ಮಾಸುಟಿಕಲ್ಸ್ ಲಿಮಿಟೆಡ್ ಮೂಲಕ ‘ಸೆಪ್ಸಿವಾಕ್’ ಹೆಸರಿನಲ್ಲಿ ಇದು ಮಾರಾಟಕ್ಕೆ ಲಭ್ಯವಿದೆ.
ಎಲ್ಲರಿಗೂ ಇದು ಹೆಮ್ಮೆಯ ಸಂಗತಿ. ಅತ್ಯುತ್ತಮ ಪ್ರಯತ್ನಗಳ ನಡುವೆಯೂ ರೋಗಾಣುಗಳಿಂದ ಹರಡುವ ಕಾಯಿಲೆಗಳಿಗೆ ತುತ್ತಾಗಿ ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳ ಜೀವ ಉಳಿಸುವ ಬೇರೆ ಯಾವುದೇ ಔಷಧಕ್ಕೆ ಅನುಮೋದನೆ ದೊರೆತಿರಲಿಲ್ಲ.
ರೋಗಾಣುಗಳಿಂದ ಹರಡುವ ಕಾಯಿಲೆಗಳಿಗೆ ತುತ್ತಾಗಿ ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳ ಜೀವ ಉಳಿಸಲು ನಿರೋಧಕ ಶಕ್ತಿಯಲ್ಲಿಯೂ ಬದಲಾವಣೆಗಳಾಗುತ್ತವೆ. ಇದರಿಂದ ಸೈಟೊಕಿನ್ ಪ್ರೊಫೈಲ್ನಲ್ಲೂ ಅಪಾರ ಬದಲಾವಣೆಗಳಾಗುತ್ತವೆ. ಈ ಔಷಧವು ದೇಹದ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಮೂಲಕ ಸಾವಿಗೀಡಾಗುವುದನ್ನು ತಪ್ಪಿಸುತ್ತದೆ ಮತ್ತು ತ್ವರಿತಗತಿಯಲ್ಲಿ ಗುಣಮುಖರಾಗಲು ನೆರವಾಗುತ್ತದೆ.
ಇದೇ ರೀತಿಯಲ್ಲಿ ಕೋವಿಡ್–19ನಿಂದ ರೋಗಿಗಳು ಪರದಾಡುತ್ತಿರುವವರು ಮತ್ತು ರೋಗಾಣುಗಳಿಂದ ಗಂಭೀರ ಪರಿಸ್ಥಿತಿ ಎದುರಿಸುತ್ತಿರುವ ಲಕ್ಷಗಳು ಕ್ಲಿನಿಕಲ್ ಪ್ರಯೋಗದಲ್ಲಿ ಒಂದೇ ರೀತಿಯ ಹೋಲಿಕೆ ಕಾಣಿಸಿಕೊಂಡಿವೆ. ಹೀಗಾಗಿ, ಸಿಎಸ್ಐಆರ್, ಗಂಭೀರ ಪರಿಸ್ಥಿತಿಯಲ್ಲಿರುವ ಕೋವಿಡ್–19 ರೋಗಿಗಳು ಸಾವಿಗೀಡಾಗುವುದನ್ನು ಕಡಿಮೆ ಮಾಡಲು ನಿಟ್ಟಿನಲ್ಲಿ ಔಷಧದ ಕ್ಲಿನಿಕಲ್ ಪ್ರಯೋಗ ಕೈಗೊಳ್ಳಲಾಗುತ್ತಿದೆ. ಸಿಎಸ್ಐಆರ್ ಈ ನಿಟ್ಟನಲ್ಲಿ ವಿವಿಧ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನ (ಡಿಸಿಜಿಐ) ಪ್ರಯೋಗ ಕೈಗೊಳ್ಳಲು ಅನುಮೋದನೆ ನೀಡಿದ್ದು ಮತ್ತು ಅತಿ ಶೀಘ್ರದಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ಆರಂಭವಾಗಲಿದೆ.
ಈ ಔಷಧವು ಮೈಕೊಬೆಕ್ಟೆರಿಯಮ್ ಅನ್ನು ಒಳಗೊಂಡಿದೆ. ರೋಗಿಗಳಿಗೆ ಇದು ಸಂಪೂರ್ಣ ಸುರಕ್ಷಿತ ಎಂದು ಪ್ರತಿಪಾದಿಸಲಾಗಿದೆ. ಇದರಿಂದ, ಯಾವುದೇ ರೀತಿಯ ಅಡ್ಡಪರಿಣಾಮಗಳಿಲ್ಲ. ಯಾವುದೇ ನಿರ್ಬಂಧಗಳು ಇಲ್ಲದೆಯೇ ಇದನ್ನು ಉಪಯೋಗಿಸಬಹುದಾಗಿದೆ. ರಕ್ಷಣಾ ನಿರೋಧಕ ಶಕ್ತಿಯನ್ನು ಇದು ಒಳಗೊಂಡಿದೆ.
ಆಸ್ಪತ್ರೆಗೆ ದಾಖಲಾಗಿರುವ ಕೋವಿಡ್–19 ರೋಗಿಗಳು ಶೀಘ್ರ ಗುಣಮುಖರಾಗಲು ಮತ್ತು ಇವರಿಂದ ಇನ್ನೊಬ್ಬರಿಗೆ ಹರಡುವುದನ್ನು ತಡೆಯುವನ್ನು ಕಡಿಮೆ ಮಾಡಲು ಮೈಕೋಬೆಕ್ಟೆರಿಯಮ್ ಮೂಲಕ ಮೌಲ್ಯಮಾಪನ ಮಾಡುತ್ತಿದೆ. ಈ ರೋಗಿಗಳ ಸಂಪರ್ಕಕ್ಕೆ ಬರುವ ಆರೋಗ್ಯ ಕಾರ್ಯಕರ್ತರು ಮತ್ತು ಕುಟುಂಬದ ಸದಸ್ಯರಿಗೆ ಪ್ರೊಫಿಲಾಕ್ಸಿಸ್ ಒದಗಿಸಲಾಗುತ್ತಿದೆ.
***
(Release ID: 1616603)
Visitor Counter : 321