ಕೃಷಿ ಸಚಿವಾಲಯ
ಲಾಕ್ ಡೌನ್ ಸಮಯದಲ್ಲಿ 8.89 ಕೋಟಿ ರೈತರಿಗೆ ಪಿ ಎಂ ಕಿಸಾನ್ ಯೋಜನೆಯಡಿ ರೂ 17,793 ಕೋಟಿ ಬಿಡುಗಡೆ
Posted On:
20 APR 2020 7:57PM by PIB Bengaluru
ಲಾಕ್ ಡೌನ್ ಸಮಯದಲ್ಲಿ 8.89 ಕೋಟಿ ರೈತರಿಗೆ ಪಿ ಎಂ ಕಿಸಾನ್ ಯೋಜನೆಯಡಿ ರೂ 17,793 ಕೋಟಿ ಬಿಡುಗಡೆ
ಪಿಎಂಜಿಕೆವೈ ಅಡಿ 19.50 ಫಲಾನುಭವಿಗಳಿಗೆ ಆಹಾರಧಾನ್ಯ ವಿತರಣೆ
ಲಾಕ್ ಡೌನ್ ಅವಧಿಯಲ್ಲಿ ರೈತರು ಮತ್ತು ಕೃಷಿ ಚಟುವಟಿಕೆಗಳಿಗೆ ಕೃಷಿ ಭುಮಿ ಮಟ್ಟದಲ್ಲಿ ಕೆಲಸ ಮಾಡಲು ಅನುಕೂಲ ಕಲ್ಪಿಸಲು ಭಾರತ ಸರ್ಕಾರದ ಕೃಷಿ, ಸಹಕಾರ ಮತ್ತು ರೈತ ಕಲ್ಯಾಣ ಇಲಾಖೆ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಪರಿಷ್ಕರಿಸಿದ ಸ್ಥಿತಿ ಈ ಕೆಳಗಿನಂತಿದೆ :
- ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ (ಪಿ ಎಂ ಕಿಸಾನ್) ಯಡಿ 24.3.2020 ರಿಂದ ಇಲ್ಲಿವರೆಗಿನ ಲಾಕ್ ಡೌನ್ ಅವಧಿಯಲ್ಲಿ ಸುಮಾರು 8.89 ಕೋಟಿ ರೈತ ಕುಟುಂಬಗಳು ಲಾಭ ಪಡೆದುಕೊಂಡಿವೆ ಮತ್ತು ಇಲ್ಲಿವರೆಗೆ ರೂ 17,793 ಕೋಟಿ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ.
- ಕೋವಿಡ್ – 19 ಹರಡುವಿಕೆಯಿಂದ ಉಂಟಾದ ಪರಿಸ್ಥಿತಿಯಲ್ಲಿ ಆಹಾರ ಭದ್ರತೆ ಒದಗಿಸಲು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ (ಪಿಎಂಜಿಕೆವೈ ) ಅರ್ಹ ಫಲಾನುಭವಿಗಳಿಗೆ ಆಹಾರ ಧಾನ್ಯಗಳನ್ನು ವಿತರಿಸಲು ಸರ್ಕಾರ ನಿರ್ಧರಿಸಿದೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಇಲ್ಲಿವರೆಗೆ ಸುಮಾರು 107,077.85 ಮೆಟ್ರಿಕ್ ಟನ್ ವಿತರಿಸಿದೆ.
- ಪಿಎಂಜಿಕೆವೈ ಅಡಿ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ & ನಿಕೊಬಾರ್, ಆಂಧ್ರಪ್ರದೇಶ್, ಚಂಡೀಗಡ, ಛತ್ತೀಸ್ ಘಡ, ದಮನ್ &ದೀವ್, ಗೋವಾ, ಗುಜರಾತ್ ನಲ್ಲಿ ಫಲಾನುಭವಿಗಳಿಗೆ ಧಾನ್ಯಗಳ ವಿತರಣೆಯನ್ನು ಆರಂಭಿಸಲಾಗಿದೆ. ಇತರ ರಾಜ್ಯಗಳಾದ ಮಧ್ಯ ಪ್ರದೇಶ, ಪಂಜಾಬ್, ರಾಜಸ್ಥಾನ, ತೆಲಂಗಾಣ, ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಮತ್ತು ದೆಹಲಿ ಭಾಗಶಃ ದಾಸ್ತಾನು ಪಡೆದಿದ್ದು ತಮ್ಮ ಯೋಜನೆಯನುಸಾರ ಹಂತ ಹಂತವಾಗಿ ಫಲಾನುಭವಿಗಳಿಗೆ ವಿತರಿಸಲು ಸಿದ್ಧವಾಗಿವೆ.
- ಪಿಎಂಜಿಕೆವೈ ಅಡಿ 36 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಾದ್ಯಂತ 19.50 ಕೋಟಿ ಫಲಾನುಭವಿಗಳಿಗೆ ಧಾನ್ಯ ವಿತರಣೆಯ ಲಾಭ ದೊರೆತಿದೆ.
***
(Release ID: 1616597)
Visitor Counter : 283
Read this release in:
Punjabi
,
English
,
Urdu
,
Hindi
,
Marathi
,
Manipuri
,
Bengali
,
Assamese
,
Gujarati
,
Tamil
,
Telugu