ಪ್ರಧಾನ ಮಂತ್ರಿಯವರ ಕಛೇರಿ

ಭಾರತ ಮತ್ತು ಆಫ್ಘಾನಿಸ್ತಾನ ಏಕಮತ್ಯ ಮತ್ತು ಹಂಚಿಕೆಯ ಸಂಕಲ್ಪದೊಂದಿಗೆ ಒಗ್ಗೂಡಿ ಕೋವಿಡ್ -19 ವಿರುದ್ಧ ಹೋರಾಡಲಿದೆ: ಪ್ರಧಾನಮಂತ್ರಿ ಹೇಳಿಕೆ

Posted On: 20 APR 2020 7:37PM by PIB Bengaluru

ಭಾರತ ಮತ್ತು ಆಫ್ಘಾನಿಸ್ತಾನ ಏಕಮತ್ಯ ಮತ್ತು ಹಂಚಿಕೆಯ ಸಂಕಲ್ಪದೊಂದಿಗೆ ಒಗ್ಗೂಡಿ ಕೋವಿಡ್ -19 ವಿರುದ್ಧ ಹೋರಾಡಲಿದೆ: ಪ್ರಧಾನಮಂತ್ರಿ ಹೇಳಿಕೆ

 

ಭಾರತ ಮತ್ತು ಆಫ್ಘಾನಿಸ್ತಾನ ಏಕಮತ್ಯ ಮತ್ತು ಹಂಚಿಕೆಯ ಸಂಕಲ್ಪದೊಂದಿಗೆ ಕೋವಿಡ್ 19ರ ವಿರುದ್ಧ ಒಗ್ಗೂಡಿ ಹೋರಾಟ ನಡೆಸಲಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ತಿಳಿಸಿದ್ದಾರೆ.

ಆಫ್ಘಾನಿಸ್ತಾನಕ್ಕೆ ಅತ್ಯಾವಶ್ಯಕವಾದ ಹೈಡ್ರಾಕ್ಸಿಕ್ಲೋರೋಕ್ವಿನ್, ಪ್ಯಾರಸೆಟಮಾಲ್ ಮತ್ತು ಇತರ ವಸ್ತುಗಳನ್ನು ಒದಗಿಸಿದ ಭಾರತಕ್ಕೆ ಕೃತಜ್ಞತೆ ಅರ್ಪಿಸಿ ಆಫ್ಘಾನಿಸ್ತಾನ ಅಧ್ಯಕ್ಷ ಡಾ. ಅಷರಫ್ ಘನಿ ಅವರು ಮಾಡಿದ್ದ ಟ್ವೀಟ್ ಗೆ ಪ್ರಧಾನಮಂತ್ರಿ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತ ಮತ್ತು ಆಫ್ಘಾನಿಸ್ತಾನ ಇತಿಹಾಸಿಕ ನಂಟಿನಿಂದ, ಭೌಗೋಳಿಕವಾಗಿ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ವಿಶೇಷ ಬಾಂಧವ್ಯವನ್ನು ಹಂಚಿಕೊಂಡಿವೆ, ಭಯೋತ್ಪಾದನೆಯೆಂಬ ಉಪದ್ರವದ ವಿರುದ್ಧ ನಾವು ದೀರ್ಘಕಾಲದಿಂದ ಜಂಟಿಯಾಗಿ ಹೋರಾಡಿದ್ದೇವೆ. ಅದೇ ರೀತಿ ಒಗ್ಗಟ್ಟಿನಿಂದ ಮತ್ತು ಹಂಚಿಕೆಯ ಸಂಕಲ್ಪದೊಂದಿಗೆ ನಾವು ಕೋವಿಡ್-19 ವಿರುದ್ಧವೂ ಒಟ್ಟಿಗೆ ಹೋರಾಡುತ್ತೇವೆ ಎಂದು ಆಫ್ಘಾನಿಸ್ತಾನದ ಅಧ್ಯಕ್ಷರಿಗೆ ತಮ್ಮ ಟ್ವೀಟ್ ಮೂಲಕ ಉತ್ತರ ನೀಡಿರುವ ಪ್ರಧಾನಮಂತ್ರಿ ಮೋದಿ ತಿಳಿಸಿದ್ದಾರೆ.

Narendra Modi@narendramodi

India and Afghanistan share a special friendship, based on ties of history, geography, and culture.

For long, we have fought jointly against the scourge of terrorism. We will similarly combat COVID-19 together, with solidarity and shared resolve. @ashrafghani https://twitter.com/ashrafghani/status/1252203477016678400 …

Ashraf Ghani@ashrafghani

Thank you my friend Prime Minister @narendramodi , and thank you India for providing 500K tablets of hydroxychloroquine, 100K tablets of paracetamol, and 75,000 metric tons of wheat that the first consignment of it (5,000) will reach AFG in a day or so, for the Afghan people.

26.6K

6:34 PM - Apr 20, 2020

Twitter Ads info and privacy

4,834 people are talking about this

 

***


(Release ID: 1616564) Visitor Counter : 204