ಹಣಕಾಸು ಆಯೋಗ

15ನೇ ಹಣಕಾಸು ಆಯೋಗದ ಸಲಹಾ ಮಂಡಳಿ ಸಭೆ 2020ರ ಏಪ್ರಿಲ್ 23 ಮತ್ತು 24

Posted On: 20 APR 2020 7:08PM by PIB Bengaluru

15ನೇ ಹಣಕಾಸು ಆಯೋಗದ ಸಲಹಾ ಮಂಡಳಿ ಸಭೆ 2020ರ ಏಪ್ರಿಲ್ 23 ಮತ್ತು 24

 

15ನೇ ಹಣಕಾಸು ಆಯೋಗದ ಆರ್ಥಿಕ ಸಲಹಾ ಮಂಡಳಿ ಸಭೆ 2020ರ ಏಪ್ರಿಲ್ 23 ಮತ್ತು 24ರಂದು ನಡೆಯಲಿದೆ. ಈ ಆನ್ ಲೈನ್ ಸಭೆಯ ಅಧ್ಯಕ್ಷತೆಯನ್ನು 15ನೇ ಆಯೋಗದ ಅಧ್ಯಕ್ಷ ಶ್ರೀ ಎನ್.ಕೆ. ಸಿಂಗ್ ಅವರು ವಹಿಸಲಿದ್ದು, ಆಯೋಗದ ಎಲ್ಲ ಸದಸ್ಯರು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಮಂಡಳಿಯ ಐವರು ಸದಸ್ಯರಾದ ಡಾ. ಕೃಷ್ಣಮೂರ್ತಿ ಸುಬ್ರಮಣ್ಯನ್, ಡಾ. ಸಾಜ್ಜಿದ್ ಝೆಡ್ ಚಿನೋಯ್, ಡಾ. ಪ್ರಾಚಿ ಮಿಶ್ರಾ, ಶ್ರೀ ನೀಲಕಾಂತ್ ಮಿಶ್ರಾ ಮತ್ತು ಡಾ. ಓಂಕಾರ್ ಗೋಸ್ವಾಮಿ ಅವರು 2020ರ ಏಪ್ರಿಲ್ 23ರಂದು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮಂಡಳಿಯ ಉಳಿದ ಸದಸ್ಯರ ಸಭೆ ಮರು ದಿನ ಅಂದರೆ 2020ರ ಏಪ್ರಿಲ್ 24ರಂದು ನಡೆಯಲಿದೆ.

ಸಲಹಾ ಮಂಡಳಿ ಸಭೆಯ ಪ್ರಮುಖ ಚರ್ಚಾ ವಿಷಯಗಳು ಇವುಗಳಾಗಲಿವೆ

  • 2020-21 ಮತ್ತು 2021-22ರ ಜಿಡಿಪಿ ಬೆಳವಣಿಗೆ ಮೇಲೆ ಸಾಂಕ್ರಾಮಿಕ ರೋಗದ ಪರಿಣಾಮಗಳು. ಕಾಲಾನುಕ್ರಮದಲ್ಲಿ ಸೂಕ್ಷ್ಮ ಆರ್ಥಿಕತೆಯ ಮೇಲೆ ಅನಿಶ್ಚಿತತೆ.
  • ಪ್ರಸಕ್ತ ವರ್ಷ ಮತ್ತು ಮುಂದಿನ ವರ್ಷದ ಆದಾಯ ಹಾಗೂ ತೆರಿಗೆ ಇಳಿಕೆ ಸಂಭಾವ್ಯ ಅಂದಾಜುಗಳು.
  • ಆರ್ಥಿಕತೆ ಬಲವರ್ಧನೆಗೆ ಸಾರ್ವಜನಿಕ ವೆಚ್ಚ ಏನಾಗಬೇಕು.

***



(Release ID: 1616546) Visitor Counter : 131