ಕೃಷಿ ಸಚಿವಾಲಯ
ಕನಿಷ್ಟ ಬೆಂಬಲ ಬೆಲೆ ನೀಡಿ ರೈತರಿಂದ ನೇರವಾಗಿ ದ್ವಿದಳ ಧಾನ್ಯಗಳು ಮತ್ತು ಎಣ್ಣೆ ಕಾಳುಗಳ ಖರೀದಿ
प्रविष्टि तिथि:
18 APR 2020 6:03PM by PIB Bengaluru
ಕನಿಷ್ಟ ಬೆಂಬಲ ಬೆಲೆ ನೀಡಿ ರೈತರಿಂದ ನೇರವಾಗಿ ದ್ವಿದಳ ಧಾನ್ಯಗಳು ಮತ್ತು ಎಣ್ಣೆ ಕಾಳುಗಳ ಖರೀದಿ
ಕೇಂದ್ರದ ನೋಡಲ್ ಎಜನ್ಸಿಗಳಾದ ನಾಫೆಡ್ ಮತ್ತು ಎಫ್ ಸಿ ಐ ಮೂಲಕ ರೈತರಿಗೆ ಉತ್ತಮ ಆದಾಯವನ್ನು ನೀಡುವುದನ್ನು ಖಚಿತಪಡಿಸುವ ಕುರಿತು ಭಾರತ ಸರ್ಕಾರ ಪ್ರಯತ್ನಿಸುತ್ತಿದೆ. 2020-21 ರ ಹಿಂಗಾರು ಋತುವಿನಲ್ಲಿ ಹಲವಾರು ರಾಜ್ಯಗಳ ರೈತರಿಂದ ಕನಿಷ್ಠ ಬೆಂಬಲ ಬೆಲೆ (ಎಂ ಎಸ್ ಪಿ) ನೀಡಿ ಅಧಿಸೂಚಿತ ಸರಕುಗಳ ಖರೀದಿ ಕಾರ್ಯ ಆರಂಭವಾಗಿದೆ. ಲಾಕ್ ಡೌನ್ ಸಮಯದಲ್ಲಿ ರೈತರಿಗೆ ಸಕಾಲದಲ್ಲಿ ಮಾರುಕಟ್ಟೆ ಬೆಂಬಲವನ್ನು ನೀಡಲಾಗುತ್ತಿದೆ. ಕೋವಿಡ್ -19 ಹರಡುವಿಕೆ ನಿರ್ವಹಣೆಗೆ ನೀಡಲಾದ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಸಂಖ್ಯೆಯ ರೈತರಿಗೆ ಸೇವೆ ಒದಗಿಸಲಾಗುತ್ತಿದೆ.
2020-21 ರ ಹಿಂಗಾರು ಋತುವಿನಲ್ಲಿ ಬೆಂಬಲ ಬೆಲೆ ಯೋಜನೆ (ಪಿ ಎಸ್ ಎಸ್) ಅಡಿ ಬೆಂಬಲ ಬೆಲೆ ನೀಡಿ ದ್ವಿದಳ ಧಾನ್ಯಗಳು ಮತ್ತು ಎಣ್ಣೆ ಕಾಳುಗಳ ಖರೀದಿ ಕಾರ್ಯ ಪ್ರಸ್ತುತ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ ಜಾರಿಯಲ್ಲಿದೆ. 16 ಏಪ್ರೀಲ್ 2020 ರಂದು ರೂ 784.77 ಕೋಟಿ ಮೌಲ್ಯದ 1,33,987.65 ಮೆಟ್ರಿಕ್ ಟನ್ ದ್ವಿದಳ ಧಾನ್ಯಗಳು ಮತ್ತು 29,264.17 ಮೆಟ್ರಿಕ್ ಟನ್ ಎಣ್ಣೆ ಕಾಳುಗಳನ್ನು ನಾಫೆಡ್/ಎಫ್ ಸಿ ಐ ಮೂಲಕ ಖರೀದಿಸಲಾಗಿದೆ ಮತ್ತು ಇದರಿಂದ 1,14,338 ರೈತರು ಲಾಭ ಪಡೆದಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ಪಿ ಎಸ್ ಎಸ್ ಯೋಜನೆಯಡಿ 97,337.35 ಮೆಟ್ರಿಕ್ ಟನ್ ನಷ್ಟು ಹಿಂಗಾರು ಹಂಗಾಮಿನ ದ್ವಿದಳ ಧಾನ್ಯಗಳು ಮತ್ತು ಎಣ್ಣೆ ಕಾಳುಗಳನ್ನು ಖರೀದಿ ಮಾಡಲಾಗಿದೆ.
ದ್ವಿದಳ ಧಾನ್ಗಳ ದಾಸ್ತಾನು ಕಾಯ್ದಿರಿಸಲು ಧಾನ್ಯಗಳ ಬೆಲೆ ಸ್ಥಿರೀಕರಣ ನಿಧಿ (ಪಿ ಎಸ್ ಎಫ್) ಅಡಿ ನಾಫೆಡ್ ಮೂಲಕ ಬೆಂಬಲ ಬೆಲೆ ನೀಡಿ ರೈತರಿಂದ ತೊಗರಿಯನ್ನು ಖರೀದಿಸಲಾಗುತ್ತಿದೆ. ಮಹಾರಾಷ್ಟ್ರ,ತಮಿಳುನಾಡು, ಗುಜರಾತ್ ಆಂಧ್ರಪ್ರದೇಶದಲ್ಲಿ, ತೆಲಂಗಾಣ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಪಿ ಎಸ್ ಎಸ್/ಪಿ ಎಸ್ ಎಫ್ ಅಡಿ 2019-20 ರ ಮುಂಗಾರು ಹಂಗಾಮಿನಲ್ಲಿ ತೊಗರಿ ಖರೀದಿ ಪ್ರಗತಿಯಲ್ಲಿದೆ. 2019-20 ರ ಮುಂಗಾರು ಮಾರುಕಟ್ಟೆ ಹಂಗಾಮಿನಲ್ಲಿ ಒಟ್ಟು ತೊಗರಿ ಬೆಳೆ ಸಂಗ್ರಹ 5,32,849 ಮೆಟ್ರಿಕ್ ಟನ್ ಇದರಲ್ಲಿ 29,328.62 ಮೆಟ್ರಿಕ್ ಟನ್ ನಷ್ಟು ಲಾಕ್ ಡೌನ್ ಅವಧಿಯಲ್ಲಿ ಸಂಗ್ರಹಿಸಲಾಗಿದೆ.
ಲಾಕ್ ಡೌನ್ ಘೋಷಣೆಯಾದ ನಂತರ ರಾಜಸ್ಥಾನದಲ್ಲಿ ಕೋಟಾ ವಿಭಾಗದಲ್ಲಿ ದ್ವಿದಳ ಧಾನ್ಯಗಳು ಮತ್ತು ಎಣ್ಣೆ ಕಾಳುಗಳ ಖರೀದಿ ಸ್ಥಗಿತಗೊಂಡಿದೆ. 15-04-2020 ರಿಂದ ಕೋಟಾ ವಿಭಾಗದ 54 ಕೇಂದ್ರಗಳು ಕಾರ್ಯನಿರ್ವಹಿಸಲಾರಂಭಿಸಿವೆ ಮತ್ತು ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಖರೀದಿ ಕೇಂದ್ರಗಳ ಕಾರ್ಯಾರಂಭ ಮಾಡಲಾಗುವುದು. 2020 ರ ಮೇ ಮೊದಲ ವಾರದಿಂದ ರಾಜಸ್ಥಾನದ ಇನ್ನುಳಿದ ವಿಭಾಗಗಳಲ್ಲಿ ಖರೀದಿಯನ್ನು ಪ್ರಸ್ತಾಪಿಸಲಾಗಿದೆ. ಖರೀದಿ ಕೇಂದ್ರಗಳಿಗೆ ದಿನಕ್ಕೆ ಅತಿ ಹೆಚ್ಚು 10 ಜನ ರೈತರನ್ನು ಕರೆಸಲಾಗುವುದು ಮತ್ತು ಅದರಂತೆ ರೈತರಿಗೆ ಮಾಹಿತಿ ನೀಡಲಾಗುವುದು.
15-04-2020 ರಿಂದ ಹರಿಯಾಣದ 163 ಕೇಂದ್ರಗಳಲ್ಲಿ ಸಾಸಿವೆ ಮತ್ತು ಕಡಲೆ ಖರೀದಿ ಆರಂಭಿಸಲಾಗಿತ್ತು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಪ್ರತಿದಿನ ನಿಯಮಿತ ರೈತರನ್ನು ಕರೆಯಲಾಗುತ್ತಿದೆ. ಮೊದಲ 2 ದಿನಗಳಲ್ಲಿ 10,111 ರೈತರಿಂದ ಸುಮಾರು 27,276.77 ಮೆಟ್ರಿಕ್ ಟನ್ ಸಾಸಿವೆಯನ್ನು ಖರೀದಿಸಲಾಗಿದೆ.
ಮಧ್ಯಪ್ರದೇಶದಲ್ಲಿ ಕಡಲೆ, ಮಸೂರ್ ಮತ್ತು ಮಧ್ಯಪ್ರದೇಶದಲ್ಲಿ ಸಾಸಿವೆ ಖರೀದಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಮತ್ತು ಖರೀದಿ ಕೇಂದ್ರಗಳಿಗೆ ತಮ್ಮ ಉತ್ಪನ್ನವನ್ನು ತರುವಂತೆ ರೈತರಿಗೆ ಮಾಹಿತಿ ನೀಡಲಾಗಿದೆ.
***
(रिलीज़ आईडी: 1616033)
आगंतुक पटल : 295