ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ

ದೇಶದಲ್ಲಿ ಕಾರ್ಮಿಕರ ಕುಂದುಕೊರತೆಗಳನ್ನು ಪರಿಹರಿಸಲು ಸಂಘಟಿತ ಪ್ರಯತ್ನಗಳಿಗಾಗಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡುವಂತೆ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಶ್ರೀ ಗಂಗ್ವಾರ್ ಪತ್ರ ಬರೆದಿದ್ದಾರೆ

Posted On: 18 APR 2020 2:30PM by PIB Bengaluru

ದೇಶದಲ್ಲಿ ಕಾರ್ಮಿಕರ ಕುಂದುಕೊರತೆಗಳನ್ನು ಪರಿಹರಿಸಲು ಸಂಘಟಿತ ಪ್ರಯತ್ನಗಳಿಗಾಗಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡುವಂತೆ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಶ್ರೀ ಗಂಗ್ವಾರ್ ಪತ್ರ ಬರೆದಿದ್ದಾರೆ

 

ಕೋವಿಡ್ – 19 ಹರಡುವಿಕೆ ತಡೆಯಲು ಲಾಕ್ ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಕಾರ್ಮಿಕರು/ ಕೆಲಸಗಾರರ ಸಮಸ್ಯೆಗಳನ್ನು ಪರಿಹರಿಸಲು  ನಿಯಂತ್ರಣಾ ಕೊಠಡಿಯೊಂದಿಗೆ ಕಾರ್ಯನಿರ್ವಹಿಸಲು ಕಾರ್ಮಿಕ ಇಲಾಖೆಯಿಂದ ನೋಡಲ್ ಅಧಿಕಾರಿಗಳನ್ನು ನೇಮಿಸುವಂತೆ ಕೇಂದ್ರದ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ಶ್ರೀ ಸಂತೋಷ್ ಗಂಗ್ವಾರ್ ವಿವಿಧ ರಾಜ್ಯ/ ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳಿಗೆ ಮನವಿ ಮಾಡಿದ್ದಾರೆ. ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ನಿನ್ನೆ ಪತ್ರವೊಂದನ್ನು ಬರೆದ ಶ್ರೀ ಗಂಗ್ವಾರ್ ಕಾರ್ಮಿಕ ಇಲಾಖೆಯಲ್ಲಿನ ಅಧಿಕಾರಿಗಳು ಈ 20 ನಿಯಂತ್ರಣಾ ಕೊಠಡಿಗಳಿಗೆ ಸಂವೇದನಶೀಲರಾಗಿರಬೇಕು ಎಂದು ಹೇಳಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಘಟಿತ ಪ್ರಯತ್ನದ ಅಗತ್ಯವನ್ನು ಒತ್ತಿ ಹೇಳಿದ ಶ್ರೀ ಗಂಗ್ವಾರ್ ಅವರು ಕಾರ್ಮಿಕರ ಕುಂದುಕೊರತೆಗಳನ್ನು ಪರಿಹರಿಸಲು ಕೇದ್ರ ಮತ್ತು ರಾಜ್ಯ ಸರ್ಕಾರಗಳ ಸಂಘಟಿತ ಪ್ರಯತ್ನಗಳು ಅತ್ಯಗತ್ಯವಾಗಿವೆ”  ಎಂದು ಹೇಳಿದರು.   

ಕೋವಿಡ್ -19 ರ ಹಿನ್ನೆಲೆಯಲ್ಲಿ ಉಂಟಾದ ಕಾರ್ಮಿಕರ ಸಮಸ್ಯೆಗಳಿಂದಾಗಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಇತ್ತೀಚೆಗೆ ಭಾರತದಾದ್ಯಂತ ಮುಖ್ಯ ಕಾರ್ಮಿಕ ಆಯುಕ್ತರ ಸುಪರ್ದಿಯಲ್ಲಿ 20 ನಿಯಂತ್ರಣಾ ಕೊಠಡಿಗಳನ್ನು ಆರಂಭಿಸಿದೆಆರಂಭದಲ್ಲಿ ಈ ನಿಯಂತ್ರಣ ಕೊಠಡಿಗಳು ಕೇಂದ್ರ ವಲಯಕ್ಕೆ ಸಂಬಂಧಿಸಿದ ವೇತನ ಸಂಬಂಧಿ ಕುಂದುಕೊರತೆ ಮತ್ತು ವಲಸೆ ಕಾರ್ಮಿಕರ ಸಮಸ್ಯೆಗಳಿಗೆ ಮಾತ್ರ ಸಂಬಂಧಿಸಿದ್ದಾಗಿದ್ದವು.  

ಆದರೂ ಕಳೆದ ಕೆಲ ದಿನಗಳಲ್ಲಿ ನಿಯಂತ್ರಣ ಕೊಠಡಿಗಳ ಕಾರ್ಯಾಚರಣೆ ನಂತರ ನಿನ್ನೆವರೆಗೆ 20 ನಿಯಂತ್ರಣ ಕೊಠಡಿಗಳಲ್ಲಿ ಒಟ್ಟು 2100 ಕುಂದುಕೊರತೆಗಳನ್ನು ಸ್ವೀಕರಿಸಲಾಗಿದೆ, ಅದರಲ್ಲಿ 1400 ವಿವಿಧ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದ್ದಾಗಿವೆ. ಕಾರ್ಮಿಕ ಸಮಸ್ಯೆಯೆಂಬುದು ಪ್ರಸ್ತುತ ಸಾರ್ವತ್ರಿಕ ಸಮಸ್ಯೆಯಾದ್ದರಿಂದ ಕುಂದುಕೊರತೆಗಳನ್ನು ಪರಿಹರಿಸಲು ವಿವಿಧ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಮನ್ವಯತೆ ಸಾಧಿಸುವುದು ಬಹುಮುಖ್ಯವಾಗಿದೆ. ತಕ್ಷಣದ ಪರಾಮರ್ಶೆಗಾಗಿ ಕೇಂದ್ರ ಸರ್ಕಾರ ನೇಮಿಸಿದ ಅಧಿಕಾರಿಗಳ ಹೆಸರುಗಳೊಂದಿಗೆ 20 ನಿಯಂತ್ರಣ ಕೊಠಡಿಗಳ ಪಟ್ಟಿಯನ್ನು ಸಚಿವರು ಕಳುಹಿಸಿದ್ದಾರೆ.

*****


(Release ID: 1615939) Visitor Counter : 212