ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಎಲ್ಲಾ ಅಂಚೆ ಸಿಬ್ಬಂದಿಗೆ ರೂ.10 ಲಕ್ಷ ಪರಿಹಾರ
Posted On:
18 APR 2020 12:56PM by PIB Bengaluru
ಎಲ್ಲಾ ಅಂಚೆ ಸಿಬ್ಬಂದಿಗೆ ರೂ.10 ಲಕ್ಷ ಪರಿಹಾರ
ದಿನಾಂಕ 15-04-2020 ರ ಪರಿಚ್ಛೇದ – 11 (iii) ರ MHA OM No. 40-3/2020-DM-I ನಲ್ಲಿ ಪುನರುಚ್ಚರಿಸಿದಂತೆ ಅಂಚೆ ಇಲಾಖೆ ಅಗತ್ಯ ಸೇವೆಗಳ ಅಡಿಯಲ್ಲಿ ಬರುತ್ತದೆ. ಗ್ರಾಹಕರಿಗೆ ಅಂಚೆ ವಿತರಣೆ, ಅಂಚೆ ಕಚೇರಿ ಉಳಿತಾ ಬ್ಯಾಂಕ್, ಅಂಚೆ ಜೀವ ವಿಮೆ, ಎಇಪಿಎಸ್ ಸೌಲಭ್ಯದ ಅಡಿಯಲ್ಲಿ, ಯಾವುದೇ ಬ್ಯಾಂಕು ಮತ್ತು ಯಾವುದೇ ಶಾಖೆಯಿಂದ ಆತ/ಆಕೆ ಮನೆ ಬಾಗಿಲಲ್ಲೇ ಹಣ ಹಿಂಪಡೆಯಲು ಸುಲಭವಾಗುವಂತೆ, ಗ್ರಾಮೀಣ ಅಂಚೆ ಸೇವಕರು ಸೇರಿದಂತೆ ಅಂಚೆ ಸಿಬ್ಬಂದಿ ವಿವಿಧ ಸೇವೆಗಳನ್ನು ಸಲ್ಲಿಸುತ್ತಿದ್ದಾರೆ. ಇದರ ಜೊತೆಗೆ, ಕೊವಿಡ್-19 ಕಿಟ್ ಗಳು, ಆಹಾರ ಪೊಟ್ಟಣಗಳು, ಪಡಿತರ ಮತ್ತು ಅವಶ್ಯಕ ಔಷಧಿಗಳು ಇತ್ಯಾದಿಯನ್ನು ರಾಜ್ಯ ಆಡಳಿತ ಮತ್ತು ಪೊಲೀಸರ ಸಹಕಾರದೊಂದಿಗೆ ದೇಶಾದ್ಯಂತ ವಿತರಿಸುವ ಕಾರ್ಯವನ್ನು ಅಂಚೆ ಕಚೇರಿ ನಿರ್ವಹಿಸುತ್ತಿದೆ. ಹೀಗೆ, ಅಂಚೆ ಕಚೇರಿ ತನ್ನ ದೈನಂದಿನ ಇಲಾಖಾ ಕರ್ತವ್ಯವನ್ನು ನಿರ್ವಹಿಸುವುದರ ಜೊತೆಗೆ ಕೊವಿಡ್-19 ಬಿಕ್ಕಟ್ಟಿನ ಸಮಯದಲ್ಲಿ ಸಾಮಾಜಿಕ ಒಳಿತಿಗೂ ಸೇವೆ ಸಲ್ಲುಸುತ್ತಿದೆ.
ಕೊವಿಡ್-19 ಬಿಕ್ಕಟ್ಟಿನ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಕರ್ತವ್ಯದಲ್ಲಿರುವಾಗ ರೋಗಕ್ಕೆ ತುತ್ತಾದ ಗ್ರಾಮೀಣ ಅಂಚೆ ಸೇವಕರು (ಜಿಡಿಎಸ್) ಸೇರಿದಂತೆ ಎಲ್ಲ ಅಂಚೆ ಸಿಬ್ಬಂದಿಗೆ ರೂ. 10 ಲಕ್ಷ ಪರಿಹಾರದ ಪಾವತಿಯನ್ನು ನಿರ್ಧರಿಸಲಾಗಿದೆ. ನಿರ್ದೇಶನಗಳು ತಕ್ಷಣವೇ ಜಾರಿಗೆ ಬರಲಿದ್ದು, ಕೊವಿಡ್-19 ಬಕ್ಕಟ್ಟಿನ ಅವಧಿ ಮುಗಿಯುವವರೆಗೂ ಮುಂದುವರೆಯಲಿದೆ.
***
(Release ID: 1615938)
Visitor Counter : 219
Read this release in:
Marathi
,
English
,
Urdu
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam