ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ನೋವೆಲ್ ಕೊರೊನಾ ವೈರಸ್ ಎದುರಿಸಲು ಭಾರತೀಯ ಔಷಧ ಸಂಶೋಧನಾ ಕೇಂದ್ರದ ಪ್ರಯತ್ನಗಳು

Posted On: 18 APR 2020 12:26PM by PIB Bengaluru

ನೋವೆಲ್ ಕೊರೊನಾ ವೈರಸ್ ಎದುರಿಸಲು ಭಾರತೀಯ ಔಷಧ ಸಂಶೋಧನಾ ಕೇಂದ್ರದ ಪ್ರಯತ್ನಗಳು

ಕೋವಿಡ್-19 ರೋಗಿಗಳಿಂದ ಪಡೆದಿರುವ ಸೋಂಕಿನ ಎಳೆಗಳನ್ನು ಬಿಡಿಸಿಡಲು ಪ್ರಯತ್ನ

 

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ(ಸಿಎಸ್ಐಆರ್), ಕೇಂದ್ರೀಯ ಔಷಧ ಸಂಶೋಧನಾ ಸಂಸ್ಥೆ(ಸಿಡಿಆರ್ ಐ) ರಚಿಸಿರುವ ಐದು ವಿಭಾಗಗಳ ಪೈಕಿ ಮೂರು ವಿಭಾಗಗಳು ಕಾರ್ಯ ನಿರ್ವಹಿಸುತ್ತಿದ್ದು, ಅವು ಕಿಂಗ್ಸ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯ(ಕೆಜಿಎಂಯು)ದ ಜೊತೆ ಉತ್ತರ ಪ್ರದೇಶದಲ್ಲಿ ಕೋವಿಡ್ ರೋಗಿಗಳಿಂದ ಪಡೆದಿರುವ ಸೋಂಕಿನ ಎಳೆಗಳ ಅನುಕ್ರಮಗಳನ್ನು ಬಿಡಿಸಿಡುವ ಕೆಲಸ ಮಾಡುತ್ತಿದೆ. ಆರಂಭಿಕವಾಗಿ ಲಖನೌ ಮೂಲದ ಪ್ರಯೋಗಾಲಯ ಕೆಲವು ರೋಗಿಗಳ ಮಾದರಿಗಳಿಂದ ಪಡೆದ ವೈರಾಣು ಎಳೆಗಳನ್ನು ಅನುಕ್ರಮಗೊಳಿಸಲಿದೆ. ಈ ಚಟುವಟಿಕೆಯನ್ನು ಮೊದಲ ವಿಭಾಗ ‘ಡಿಜಿಟಲ್ ಮತ್ತು ಮಾಲಿಕ್ಯೂಲರ್ ಸರ್ವೈಲೆನ್ಸ್’ ಅದರಡಿ ಕೈಗೆತ್ತಿಕೊಳ್ಳಲಾಗಿದೆ.

ಸದ್ಯಕ್ಕೆ ಕೋವಿಡ್-19 ಸೋಂಕಿಗೆ ಎಂಟು ನಾನಾ ಬಗೆಯ ವೈರಸ್ ಗಳು ಕಾರಣ ಎಂದು ತಿಳಿದುಬಂದಿದೆ. ಈ ಸೋಂಕಿನ ವೈರಾಣುಗಳಲ್ಲಿ ಬದಲಾವಣೆಗಳಿವೆಯೇ ಎಂಬುದನ್ನು ಪತ್ತೆಹಚ್ಚಲು ಮತ್ತು ಉದ್ದೇಶಿತ ಚಿಕಿತ್ಸಾ ಕಾರ್ಯತಂತ್ರಗಳ ಪರಿಣಾಮಗಳನ್ನು ವಿಶ್ಲೇಷಿಸಲು ಒಂದು ತಂಡ ಕಾರ್ಯೋನ್ಮುಖವಾಗಿದೆ.

ಎರಡನೇ ವಿಭಾಗದಲ್ಲಿ ಕೋವಿಡ-19 ವಿರುದ್ಧ ಹೋರಾಡಲು ಔಷಧಗಳು ಅಥವಾ ಚಿಕಿತ್ಸೆಗಳು ಅಥವಾ ಥೆರಪಿಗಳ ಕುರಿತು ಅಧ್ಯಯನ ನಡೆಯುತ್ತಿದ್ದು, ಅದರಲ್ಲಿ ಸಿಡಿಆರ್ ಐ ಕೂಡ ಸೇರ್ಪಡೆಯಾಗಿದೆ. ಇದರಡಿ ಸಂಶೋಧಕರು ಕ್ಲಿನಿಕ್ ಗಳಲ್ಲಿ ಈಗಾಗಲೇ ಬಳಕೆಯಲ್ಲಿರುವ ಔಷಧಗಳ ಉದ್ದೇಶ ಪುನರ್ ಸ್ಥಾಪನೆಗೆ ಪ್ರಯತ್ನಿಸುತ್ತಿದ್ದಾರೆ. “ಕೋವಿಡ್-19 ಸೋಂಕಿನ ವಿರುದ್ಧ ಈಗಾಗಲೇ ತಿಳಿದಿರುವ ಔಷಧಗಳನ್ನು ಬಳಕೆ ಮಾಡಿ, ರೋಗಿಗೆ ತ್ವರಿತ ವೇಗದಲ್ಲಿ ಚಿಕಿತ್ಸೆಗಳನ್ನು ನೀಡುವ ಮಾರ್ಗಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಇಲ್ಲಿ ಸಿಡಿಆರ್ ಐ ಉದ್ದೇಶಕ್ಕಾಗಿ ಹಲವು ಅಭ್ಯರ್ಥಿಗಳು ಅಭಿವೃದ್ಧಿಪಡಿಸಿರುವ ಔಷಧಿಗಳನ್ನು ಬಳಕೆ ಮಾಡುತ್ತಿದೆ. ಅವುಗಳನ್ನು ಸಹಭಾಗಿತ್ವದಲ್ಲಿ ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು’’ ಎಂದು ಸಿಎಸ್ ಐಆರ್- ಸಿಡಿಆರ್ ಐನ ನಿರ್ದೇಶಕ ಪ್ರೊ|| ತಪಸ್ ಕುಮಾರ್ ಹೇಳಿದ್ದಾರೆ.

ಈ ಸಂಸ್ಥೆ ಮಾಲಿಕ್ಯೂಲ್ಸ್ (ಅಣು ಅಥವಾ ಕಣಗಳಿಗೆ) ಸಂಬಂಧಿಸಿದಂತೆ ವಿಶೇಷ ಗ್ರಂಥಾಲಯವನ್ನು ಹೊಂದಿದೆ. ಮೂರನೇ ವಿಭಾಗ ‘ಗುರಿ ಆಧಾರಿತ ತಪಾಸಣಾ ವ್ಯವಸ್ಥೆ’ಯಲ್ಲಿ ಸಾರ್ಸ್ – ಸಿಒವಿ-2ನಿಂದ ಉದ್ದೇಶಿತ ಔಷಧಗಳಿಗೆ ವಿರುದ್ಧವಾಗಿ ಇನ್ ಸಿನ್ಸಿಕೋ ಬಳಕೆ ಮಾಡುವ ಕುರಿತು ಅಧ್ಯಯನ ನಡೆಯುತ್ತಿದ್ದು, ಗುರುತಿಸಲಾದ ಔಷಧಗಳನ್ನು ಪ್ರಾಥಮಿಕ ಔಷಧ ಗುರಿ ಆಧಾರಿತ ತಪಾಸಣೆ(ಪ್ರಾಥಮಿಕ ತಪಾಸಣೆ) ಅಲ್ಲಿ ಅವುಗಳ ಮೌಲ್ಯಮಾಪನ ಮಾಡಲಾಗುವುದು. “ಎಂ-ಪ್ರೊಟೀಸ್, ಸಿಎಲ್-ಪ್ರೊಟೆನೈಸ್ ಮತ್ತು ಆರ್ ಎನ್ಎ ಪಾಲಿಮರ್ಸ್, ಸ್ಪೈಕ್ ಪ್ರೋಟೀನ್, ಎಸಿಇ2 ವ್ಯವಸ್ಥೆ ಮತ್ತು ಇತರೆ ಗುರಿಗಳನ್ನು ಪ್ರಸ್ತುತ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಅವುಗಳ ಒಳಗೊಳ್ಳುವಿಕೆ/ಸೇರ್ಪಡೆಯ ಬಗ್ಗೆ ವಿಟ್ರೊ ಮತ್ತು ವಿವೊ ವ್ಯವಸ್ಥೆಗಳಲ್ಲಿ ಸೋದರ ಪ್ರಯೋಗಾಲಯಗಳು ಮತ್ತು ಕೆಜಿಎಂಯು ಸಹಾಯದಿಂದ ಮೌಲ್ಯಮಾಪನ ಮಾಡಲಾಗುವುದು” ಎಂದು ಡಾ|| ಕುಮಾರ್ ತಿಳಿಸಿದರು.

ಪ್ರೊ|| ಅಮಿತಾ ಜೈನ್, ಅವರು ಕೆಜಿಎಂಯು ವಿಜ್ಞಾನಿಗಳ ತಂಡವನ್ನು ಮುನ್ನಡೆಸಿದರೆ, ಪ್ರೊ|| ಆರ್. ರವಿಶಂಕರ್ ಸಿಎಸ್ಐಆರ್- ಸಿಡಿಆರ್ ಐ ವಿಜ್ಞಾನಿಗಳ ತಂಡವನ್ನು ಮುನ್ನಡೆಸುವರು. ಸಿಡಿಆರ್ ಐನ ಸೂಕ್ಷ್ಮ ರೋಗಾಣುಶಾಸ್ತ್ರಜ್ಞ ಮತ್ತು ಕೆಜಿಎಂಯು ಹಳೆಯ ವಿದ್ಯಾರ್ಥಿ ಡಾ|| ರಾಜ್ ಕಮಲ್ ತ್ರಿಪಾಠಿ, ಸಿಎಸ್ಐಆರ್- ಸಿಡಿಆರ್ ಐನಲ್ಲಿ ತಪಾಸಣೆಗೆ ಸಂಬಂಧಿಸಿದ ಕೆಲಸಗಳ ನೇತೃತ್ವ ವಹಿಸಲಿದ್ದಾರೆ.

***



(Release ID: 1615889) Visitor Counter : 178