ರಕ್ಷಣಾ ಸಚಿವಾಲಯ
ಕೋವಿಡ್ – 19 ಹರಡುವಿಕೆ ವಿರುದ್ಧ ಹೋರಾಡಲು ರಕ್ಷಣಾ ಪಿ ಎಸ್ ಯು ಹಾಗು ಒ ಎಫ್ ಬಿ ಗಳು ತಮ್ಮ ಸಂಪನ್ಮೂಲಗಳನ್ನು ಸಿದ್ಧಪಡಿಸಿಕೊಂಡಿವೆ
Posted On:
18 APR 2020 10:20AM by PIB Bengaluru
ಕೋವಿಡ್ – 19 ಹರಡುವಿಕೆ ವಿರುದ್ಧ ಹೋರಾಡಲು ರಕ್ಷಣಾ ಪಿ ಎಸ್ ಯು ಹಾಗು ಒ ಎಫ್ ಬಿ ಗಳು ತಮ್ಮ ಸಂಪನ್ಮೂಲಗಳನ್ನು ಸಿದ್ಧಪಡಿಸಿಕೊಂಡಿವೆ
ಕೋವಿಡ್ – 19 ಹರಡುವಿಕೆ ವಿರುದ್ಧ ಹೋರಾಡಲು ನಾಗರಿಕ ಆಡಳಿತಕ್ಕೆ ಸಹಾಯ ಮಾಡಲು ರಕ್ಷಣಾ ಸಾರ್ವಜನಿಕ ವಲಯದ ಸಂಸ್ಥೆಗಳು (ಡಿಪಿಎಸ್ ಯುಗಳು) ಮತ್ತು ಆರ್ಡನನ್ಸ್ ಕಾರ್ಖಾನೆ ಮಂಡಳಿ ತಮ್ಮದೇ ಆದ ಪಾತ್ರವನ್ನು ವಹಿಸಿವೆ. ರಾಷ್ಟ್ರ ಮಾರಣಾಂತಿಕ ವೈರಾಣುವನ್ನು ವಿರುದ್ಧ ಹೋರಾಡಲು ರಕ್ಷಣಾ ಉತ್ಪಾದನಾ ಇಲಾಖೆ (ಡಿಡಿಪಿ), ರಕ್ಷಣಾ ಸಚಿವಾಲಯದ ಪ್ರಮುಖ ಸಂಸ್ಥೆಗಳು ತಮ್ಮ ಎಲ್ಲಾ ಸಂಪನ್ಮೂಲಗಳನ್ನು ತಾಂತ್ರಿಕ ಜ್ಞಾನ ಮತ್ತು ಮಾನವಶಕ್ತಿಯನ್ನು ಮೀಸಲಿರಿಸಿವೆ. ಒ ಎಫ್ ಬಿ ಮತ್ತು ಡಿಪಿಎಸ್ ಯುಗಳ ವಿಜ್ಞಾನಿಗಳು ಮತ್ತು ಸಿಬ್ಬಂದಿಯ ಪ್ರಯತ್ನಗಳ ಪ್ರತಿಫಲ ಕೆಳಗಿನಂತಿವೆ.
ರಕ್ಷಣಾ ಪಿ ಎಸ್ ಯು ಭಾಗವಾದ ಬೆಂಗಳೂರಿನ ಹಿಂದುಸ್ತಾನ್ ಎರೊನಾಟಿಕ್ಸ್ ಲಿಮಿಟೆಡ್ (ಹೆಚ್ ಎ ಎಲ್) ಐಸೋಲೇಶನ್ ವಾರ್ಡ್ ವ್ಯವಸ್ಥೆಯನ್ನು ಸ್ಥಾಪಿಸಿದ್ದು ತುರ್ತು ಚಿಕಿತ್ಸಾ ಘಟಕದಲ್ಲಿ 3 ಹಾಸಿಗೆಗಳು ಮತ್ತು ವಾರ್ಡ್ ಗಳಲ್ಲಿ 30 ಹಾಸಿಗೆಗಳನ್ನು ಒದಗಿಸಿದೆ. ಇದರ ಜೊತೆಗೆ 30 ಕೊಠಡಿಗಳಿರುವ ಕಟ್ಟಡವನ್ನು ಸಿದ್ಧಪಡಿಸಲಾಗಿದೆ. ಒಟ್ಟಾರೆ ಹೆಚ್ ಎ ಎಲ್ ಕಲ್ಪಿಸಿದ ಸೌಲಭ್ಯಗಳಲ್ಲಿ 93 ಜನರಿಗೆ ಚಿಕಿತ್ಸೆ ನೀಡಬಹುದಾಗಿದೆ. ಬೆಂಗಳೂರಿನ ವಿವಿಧ ಆಸ್ಪತ್ರೆಗಳ ಕೋವಿಡ್ – 19 ರೋಗಿಗಳಿಗೆ ಚಿಕಿತ್ಸೆ ನೀಡಲು ಅಧಿಕಾರ ಹೊಂದಿರುವ ವೈದ್ಯರುಗಳಿಗೆ ಹೆಚ್ ಎ ಎಲ್ 25 ಪಿಪಿಇಗಳನ್ನು ತಯಾರಿಸಿ ವಿತರಿಸಿದೆ. ಬೆಂಗಳೂರು, ಮೈಸೂರು, ಮುಂಬೈ, ಪುಣೆ, ಉತ್ತರ ಪ್ರದೇಶ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ವಿವಿಧ ಸರ್ಕಾರೀ ಆಸ್ಪತ್ರೆಗಳಿಗೆ ತಾವು ತಯಾಇಸಿದದ 160 ಎರೋಸೋಲ್ ಪೆಟ್ಟಿಗೆಗಳನ್ನು ವಿತರಿಸಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (ಎಂಒಹೆಚ್&ಎಫ್ ಡಬ್ಲ್ಯು) ನಿರ್ದೇಶನದಂತೆ ಭಾರತ್ ಎಲೆಕ್ಟ್ರಾಮಿಕ್ಸ್ ನಿಯಮಿತ (ಬಿಇಎಲ್) 2 ತಿಂಗಳೊಳಗೆ ದೇಶದ ಐಸಿಯುಗಳಿಗಾಗಿ 30,000 ವೆಂಟಿಲೇಟರ್ ಗಳನ್ನು ತಯಾರಿಸಿ ಸರಬರಾಜು ಮಾಡಲು ಮುಂದೆ ಬಂದಿದೆ. ಈ ವೆಂಟಿಲೇಟರ್ ಗಳ ವಿನ್ಯಾಸವನ್ನು ಮೂಲತಃ ಡಿ ಆರ್ ಡಿ ಒ ಅಭಿವೃದ್ಧಿಪಡಿಸಿದ್ದು, ಮೈಸೂರಿನ ಮೆ/ಎಸ್ ಸ್ಕಾನ್ರೆ, ಬಿಇಎಲ್ ಜೊತೆಗೂಡಿ ಇದಕ್ಕೆ ಹೊಸ ರೂಪ ನೀಡಿದೆ. ಏಪ್ರಿಲ್ 20 ರಿಂದ 24 2020 ರ ಮಧ್ಯೆ ಬಿಇಎಲ್ ವೆಂಟಿಲೇಟರ್ ಗಳ ತಯಾರಿಕೆ ಆರಂಭಿಸುವ ಸಾಧ್ಯತೆಯಿದೆ. ಅಂದಾಜಿನಂತೆ ಬಿಇಎಲ್ ಏಪ್ರಿಲ್ ವೇಳೆಗೆ 5,000, ಮೇ ದಲ್ಲಿ 10,000 ಮತ್ತು ಜೂನ್ ನಲ್ಲಿ 15,000 ಉತ್ಪಾದಿಸುವ ನಿರೀಕ್ಷೆಯಿದೆ. ಡಿ ಆರ್ ಡಿ ಒ ನೆರವಿನಿಂದ ಈ ಭಾಗಗಳನ್ನು ಸ್ಥಳೀಯವಾಗಿ ತಯಾರಿಸುವ ಪ್ರಯತ್ನ ನಡೆಸಿದೆ.
ಭಾರತ್ ಡೈನಾಮಿಕ್ಸ್ ನಿಯಮಿತ (ಬಿಡಿಎಲ್) ಹೊಸ ಬಗೆಯ ವೆಂಟಿಲೇಟರ್ ನ್ನು ಅಭಿವೃದ್ಧಿಪಡಿಸುತ್ತಿದ್ದು ತಾವು ಉತ್ಪಾದನೆ ಆರಂಭಿಸುವ ಮುನ್ನ ಮೇ ಮೊದಲನೇ ವಾರದೊಳಗೆ ಇದರ ಪರೀಕ್ಷೆ ನಡೆಸಿ ಪ್ರಮಾಣೀಕರಿಸುವ ಸಾಧ್ಯತೆಯಿದೆ. ಪುಣೆಯಲ್ಲಿರುವ ಖಾಸಗಿ ಸ್ಟಾರ್ಟ್ ಅಪ್ ಕಂಪನಿ ಸಹಾಯದೊಂದಿಗೆ ಈ ಯೋಜನೆಯ ಕುರಿತು ಕಾರ್ಯನಿರ್ವಹಿಸುತ್ತಿದೆ.
ರಕ್ಷಣಾ ಪಿ ಎಸ್ ಯು ಮೆ/ಎಸ್ ಬಿಇಎಲ್ ಹೆಚ್ಚಿನ ಪ್ರಮಾಣದಲ್ಲಿ ವೆಂಟಿಲೇಟರ್ ಗಳನ್ನು ಉತ್ಪಾದಿಸುವ ಪ್ರಯತ್ನಕ್ಕೆ ಕೈ ಜೋಡಿಸಿದೆ. ಮೈಸೂರಿನ ಮೆ/ಎಸ್ ಸ್ಕಾನ್ರೆ ತಯರಿಸುತ್ತಿರುವ ವೆಂಟಿಲೇಟರ್ ಗಳಿಗಾಗಿ ಭಾರತ್ ಅರ್ತ್ ಮೂವರ್ಸ್ (ಬಿಇಎಂಎಲ್) 5 ಭಾಗಗಳನ್ನು ಹೊಂದಿದ 25 ಸೆಟ್ ಗಳನ್ನು ಉತ್ಪಾದಿಸಲಿದೆ.
ದೇಶದ 40 ಆಯುಧ ತಯಾರಿಕಾ ಕಾರ್ಖಾನೆಗಳ ನೇತೃತ್ವವಹಿಸಿರುವ ಆಯುಧ ತಯಾರಿಕಾ ಕಾರ್ಖಾನೆ ಮಂಡಳಿ ಐ ಎಸ್ ಒ ಕ್ಲಾಸ್ 3 ಗುಣಮಟ್ಟ ಹೊಂದಿರುವ ಉತ್ಪನ್ನಗಳನ್ನು ಸರಬರಾಜು ಮಾಡಲು ಆರಂಭಿಸಿದೆ. ಹೆಚ್ ಎಲ್ ಎಲ್ ಲೈಫ್ ಕೇರ್ ನಿಯಮಿತ (ಹೆಚ್ ಎಲ್ ಎಲ್) ಪಡೆದ 1.10 ಲಕ್ಷ ದ ಪ್ರಥಮ ಆರ್ಡರ್ ನ ಕೆಲಸ ಭರದಿಂದ ಸಾಗಿದೆ, ಈ ಆರ್ಡರ್ 40 ದಿನಗಳೊಳಗೆ ಪೂರ್ಣಗೊಳ್ಳಲಿದೆ.
ಕಾನ್ಪುರ್, ಶಾಹಾಜಹಾನ್ಪುರ್, ಹಜ್ರತ್ ಪುರ (ಫಿರೋಜಾಬಾದ್) ಮತ್ತು ಚೆನ್ನೈ ನಲ್ಲಿ ನೆಲೆಸಿರುವ ಈ 5 ಆಯುಧ ಸಲಕರಣೆಗಳ ತಯಾರಿಕಾ ಕಾರ್ಖಾನೆ ಗುಂಪು ಕವರ್ ಆಲ್ ಗಳ ಉತ್ಪಾದನೆಯಲ್ಲಿ ತೊಡಗಿವೆ. ಪ್ರಸ್ತುತ ಉತ್ಪಾದನಾ ಸಂಖ್ಯೆ ಪ್ರತಿದಿನಕ್ಕೆ 800. ಪ್ರತಿದಿನದ ಸಾಮರ್ಥ್ಯವನ್ನು 1500 ಕ್ಕೆ ಹೆಚ್ಚಿಸುವ ಪ್ರಯತ್ನಗಳು ನಡೆಯುತ್ತಿವೆ. ಕವರ್ ಆಲ್ ಗಳು ಮತ್ತು ಮಾಸ್ಕ್ ಗಳ ಗುಣಮಟ್ಟ ಪರೀಕ್ಷೆಗೆ 3 ಬಗೆಯ ಯಂತ್ರಗಳನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಇವುಗಳನ್ನು ದಕ್ಷಿಣ ಭಾರತ ಜವಳಿ ಸಂಶೋಧನಾ ಸಂಸ್ಥೆ (ಸಿಟ್ರಾ) ಯಿಂದ ಅನುಮೋದಿಸಲ್ಪಟ್ಟಿದ್ದು ಗುಣಮಟ್ಟ ಕಾಪಾಡಿಕೊಳ್ಳಲು ಉತ್ಪಾದನೆಯಲ್ಲಿ ಬಳಸಲಾಗುತ್ತದೆ.
ಶಸ್ತ್ರಾಸ್ತ ಕಾರ್ಖಾನೆಗಳ ಮಂಡಳಿ 5,870 ಪಿಪಿಇಗಳನ್ನು ಉತ್ಪಾದಿಸಿದ್ದು, ಇವುಗಳನ್ನು ತಮ್ಮ ಶಸ್ತ್ರಾಸ್ತ ಕಾರ್ಖಾನೆಗಳ ಆಸ್ಪತ್ರೆಗಳೂ ಸೇರಿದಂತೆ ಹೆಚ್ ಎಲ್ ಎಲ್, ಸಿಎಂಒ, ಫಿರೋಜಾಬಾದ್ ಗೆ ವಿತರಿಸುತ್ತಿದೆ.
ಕಾರ್ಖಾನೆಗಳ ಮಂಡಳಿ ವಿಶೇಷ 2 ಮೀಟರ್ ಗಳ ಟೆಂಟ್ ಗಳನ್ನು ಅಭಿವೃದ್ಧಿಪಡಿಸಿದ್ದು ಇವುಗಳನ್ನು ವೈದ್ಯಕೀಯ ತುರ್ತು ಸ್ಥಿತಿ, ಸ್ಕ್ರೀನಿಂಗ್ ಮಾಡಲು, ಆಸ್ಪತ್ರೆಯ ಚಿಕಿತ್ಸಾ ಸರದಿಯನ್ನು ನಿರ್ಧರಿಸಲು ಮತ್ತು ಕ್ವಾರಂಟೈನ್ ಉದ್ದೇಶಗಳಿಗಾಗಿ ಬಳಸಬಹುದಾಗಿದೆ. ಇವುಗಳನ್ನು ವಾಟರ್ ಪ್ರೂಫ್ ವಸ್ತ್ರ, ಮೃದುವಾದ ಉಕ್ಕು ಮತ್ತು ಅಲ್ಯುಮಿನಿಯಂ ಮಿಶ್ರಲೋಹದಿಂದ ತಯಾರಿಸಲಾಗಿದೆ. ಇವುಗಳ ಸರಬರಾಜು ಈಗ ಆರಂಭವಾಗಿದೆ. ವಿವಿಧ ಬಗೆಯ 420 ಟೆಂಟ್ ಗಳನ್ನು ಈಗಾಗಲೇ ಒಡಿಶಾ ರಾಜ್ಯ ವೈದ್ಯಕೀಯ ನಿಗಮ, ಡೆಹ್ರಾಡೂನ್ ನ ಜೊಲಿ ಗ್ರಾಂಟ್ ಆಸ್ಪತ್ರೆ, ಅರುಣಾಚಲ ಪ್ರದೇಶದ ಡಿಎಂಎ ಮತ್ತು ಚಂಡೀಗಢದ ಪಂಜಾಬ್ ಪೋಲಿಸರಿಗೆ ವಿತರಿಸಲಾಗಿದೆ. ಈ ವೆಂಟಿಲೇಟರ್ ಗಳ ರಿಪೇರಿ ಕೆಲಸವನ್ನೂ ಸಹ ಒ ಎಫ್ ಬಿ ಕೈಗೊಳ್ಳುತ್ತದೆ. ಇಲ್ಲಿವರೆಗೆ 53 ವೆಂಟಿಲೇಟರ್ ಗಳನ್ನು ಸರಿಪಡಿಸಿ ತೆಲಂಗಾಣದ ಟಿ ಎಸ್ ಐ ಎಂ ಡಿಸಿ ಗೆ ನೀಡಲಾಗಿದೆ.
ಪ್ರಸ್ತುತ ಕೇಂದ್ರೀಕೃತ ಶೇಖರಣೆಗಾಗಿ ಭಾರತ ಸರ್ಕಾರ ನೇಮಿಸಿದ ನೋಡಲ್ ಏಜೆನ್ಸಿ ಎಚ್ ಎಲ್ ಎಲ್ ನೀಡಿದ 28000 ಲೀ. ಆರ್ಡರ್ ಗೆ ಸಂಬಂಧಿಸಿದಂತೆ, 7500 ಲೀ. ಗಳ ಸ್ಯಾನಿಟೈಜರ್ ಗಳ ಉತ್ಪಾದನೆಯಲ್ಲಿ ಶಸ್ತ್ರಾಸ್ತ್ರಗಳ ಕಾರ್ಖಾನೆ (ಒ ಎಫ್ ಎಸ್) ತೊಡಗಿದೆ. ಒ ಎಫ್ ಎಸ್ ಈಗಾಗಲೇ 5148 ಲೀ. ಗಳ ಸ್ಯಾನಿಟೈಜರ್ ಅನ್ನು ಸರಬರಾಜು ಮಾಡಿದ್ದು, 15000 ಲೀ. ಗಳು ಸರಬರಾಜಿಗೆ ಸಿದ್ಧವಾಗಿದ್ದು ಹೆಚ್ ಎಲ್ ಎಲ್ ಆರ್ಡರ್ ಗಾಗಿ ಕಾಯುತ್ತಿವೆ. ಇಲ್ಲಿವರೆಗೆ ಒ ಡಫ್ ಡಿ 60230 ಲೀ. ಗಳ ಸ್ಯಾನಿಟೈಜರ್ ಗಳನ್ನು ಉತ್ಪಾದನೆ ಮಾಡಿದ್ದು ಶಸ್ತ್ರಾಸ್ತ್ರ ಕಾರ್ಖಾನೆಗಳಲ್ಲಿರುವ ಆಸ್ಪತ್ರೆಗಳೂ ಸೇರಿದಂತೆ, ಇಂದೋರ್, ಬೆಳಗಾವಿ, ತಿರುವನಂತಪುರಂ, ಕೇಂದ್ರ ರೈಲ್ವೇ, ಎಂ ಇ ಸಿ ಎಲ್, ನಾಗ್ಪುರ ಜಿಲ್ಲಾ ಆಡಳಿತ, ಉತ್ತರಾಖಂಡ್, ಬಿಹಾರ್, ಕಂಟೋನ್ ಮೆಂಟ್ ಬೋರ್ಡ್ ವಿಲ್ಲಿಂಗ್ ಟನ್, ಡಿ ಎಂ ನಾಗ್ಪುರ್, ಡಿ ಆರ್ ಎಂ ಸೋಲ್ಲಾಪೂರದ ಹೆಚ್ ಎಲ್ ಎಲ್ ಘಟಕಗಳಿಗೆ ವಿತರಿಸಲಾಗಿದೆ. ರಕ್ತ ಪರೀಕ್ಷೆಗಾಗಿ 2 ಪರೀಕ್ಷಾ ಸೌಲಭ್ಯಗಳನ್ನು ಆರಂಭಿಸಲಾಗಿದ್ದು, ಒಂದು ಚೆನ್ನೈ ನಲ್ಲಿ ಮತ್ತೊಂದು ಕಾನ್ಪುರ್ ನಲ್ಲಿ ಕಾರ್ಯನಿರ್ವಹಿಸುತ್ತಿವೆ.
ಇಲ್ಲಿವರೆಗೆ ಒ ಎಫ್ ಬಿ 38,520, 3 ಪದರಿನ ವೈದ್ಯಕೀಯ ಮಾಸ್ಕ್ ಗಳೂ ಸೇರಿದಂತೆ ಒಟ್ಟು 1,11,405 ಮಾಸ್ಕ್ ಗಳನ್ನು ಉತ್ಪಾದಿಸಿದೆ. ಇವುಗಳನ್ನು ತಮಿಳುನಾಡು ಪೊಲೀಸ್, ಫಿರೊಜಾಬಾದ್ ಮತ್ತು ಆಗ್ರಾ ಜಿಲ್ಲಾ ನಾಗರಿಕ ಮತ್ತು ಪೊಲೀಸ್ ಅಧಿಕಾರಿಗಳಿಗೆ, ಶಾಹ್ಜಹಾನ್ಪುರದ ಕಂಟೋನ್ಮೆಂಟ್ ಮಂಡಳಿಗೆ, ಉತ್ತರಾಖಂಡ್ ಸರ್ಕಾರಕ್ಕೆ, ಶಾಹ್ಜಹಾನ್ಪುರದ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ, ಮಿಲಿಟರಿ ಇಂಟೆಲಿಜೆನ್ಸ್ ಮುಂತಾದವುಗಳಿಗೆ ವಿತರಿಸಲಾಗಿದೆ.
***
(Release ID: 1615709)
Visitor Counter : 296
Read this release in:
Punjabi
,
English
,
Urdu
,
Marathi
,
Hindi
,
Manipuri
,
Bengali
,
Assamese
,
Gujarati
,
Tamil
,
Telugu