ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್‌–19 ಪ್ರಸ್ತುತ ಪರಿಸ್ಥಿತಿ ಮತ್ತು ನಿರ್ವಹಣೆಯ ಕ್ರಮಗಳನ್ನು ಪರಾಮರ್ಶಿಸಿದ ಸಚಿವರ ತಂಡ

Posted On: 17 APR 2020 5:30PM by PIB Bengaluru

ಕೋವಿಡ್‌–19 ಪ್ರಸ್ತುತ ಪರಿಸ್ಥಿತಿ ಮತ್ತು ನಿರ್ವಹಣೆಯ ಕ್ರಮಗಳನ್ನು ಪರಾಮರ್ಶಿಸಿದ ಸಚಿವರ ತಂಡ

ಸಕಾಲಕ್ಕೆ ಚಿಕಿತ್ಸೆ ಪಡೆಯುವುದೇ ‍ಪ್ರಮುಖ ಅಸ್ತ್ರ: ಸಚಿವರ ತಂಡ

ಕೋವಿಡ್‌–19ಕ್ಕೆ ಸಂಬಂಧಿಸಿದಂತೆ ಆರೋಗ್ಯ ರಕ್ಷಣೆಯ ಸವಾಲುಗಳನ್ನು ಎದುರಿಸಲು ತಕ್ಷಣಕ್ಕೆ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು; ವಸ್ತುಗಳ ತಯಾರಿಕೆಯಲ್ಲಿ ಗುಣಮಟ್ಟು ಮತ್ತು ನಿರ್ದಿಷ್ಟ ಮಾನದಂಡಗಳನ್ನು ಪೂರೈಸಲು ಗಮನಹರಿಸಬೇಕು: ಡಾ. ಹರ್ಷ ವರ್ಧನ್‌
 


ಕೋವಿಡ್‌–19 ಕುರಿತಾದ ಸಚಿವರ ತಂಡದ 12ನೇ ಸಭೆಯು ನಿರ್ಮನ್ಭವನದಲ್ಲಿ ಇಲ್ಲಿ ನಡೆಯಿತು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀ ಡಾ. ಹರ್ಷ ವರ್ಧನ್ಸಭೆಯ ಅಧ್ಯಕ್ಷತೆ ವಹಿಸಿದ್ದರು. ನಾಗರಿಕ ವಿಮಾನಯಾನ ಸಚಿವ ಶ್ರೀ ಹರದೀಪ್ಎಸ್‌. ಪುರಿ, ವಿದೇಶಾಂಗ ಸಚಿವ ಶ್ರೀ ಡಾ. ಎಸ್‌. ಜೈಶಂಕರ್‌, ಗೃಹ ಖಾತೆ ರಾಜ್ಯ ಸಚಿವ ಶ್ರೀ ನಿತ್ಯಾನಂದ ರೈ, ಬಂದರು, ರಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಶ್ರೀ ಮನ್ಸುಕ್ಮಂಡವಿಯಾ, ಶ್ರೀ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವರಾದ ಅಶ್ವಿನಿ ಕುಮಾರ್ಚೌಬೆ ಹಾಗೂ ನೀತಿ ಆಯೋಗದ ಸದಸ್ಯ ಡಾ. ವಿನೋದ್ಕೆ. ಪೌಲ್‌ (ಆರೋಗ್ಯ), ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಶ್ರೀ ಬಿಪಿನ್ರಾವತ್ ಸಭೆಯಲ್ಲಿ ಪಾಲ್ಗೊಂಡಿದ್ದರು.

ಕೋವಿಡ್‌–19 ನಿರ್ವಹಣೆ ಮತ್ತು ನಿಯಂತ್ರಣ ಕುರಿತು ಸಚಿವರ ತಂಡ ಸುದೀರ್ಘವಾಗಿ ಸಮಾಲೋಚನೆ ನಡೆಸಿತು. ಇದುವರೆಗೆ ಕೈಗೊಂಡ ಕ್ರಮಗಳ ಬಗ್ಗೆಯೂ ಚರ್ಚಿಸಲಾಯಿತು. ಪ್ರಸ್ತುತ ಎದುರಾಗಿರುವ ಸಮಸ್ಯೆಗಳು, ಸಾಮಾಜಿಕ ಅಂತರವನ್ನು ಯಾವ ರೀತಿ ಕಾಪಾಡಲಾಗುತ್ತಿದೆ ಹಾಗೂ ಕೋವಿಡ್‌–19 ಹರಡುವುದನ್ನು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವ ರೀತಿಯ ಕ್ರಮಗಳನ್ನು ಕೈಗೊಂಡಿವೆ ಎನ್ನುವ ಬಗ್ಗೆ ಪರಾಮರ್ಶಿಸಲಾಯಿತು. ಕೋವಿಡ್‌ –19 ನಿಯಂತ್ರಿಸಲು ಯೋಜನೆಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಎಲ್ಲ ಜಿಲ್ಲೆಗಳಿಗೆ ಸೂಚಿಸಿರುವುದನ್ನು ಸಚಿವರ ತಂಡದ ಗಮನಕ್ಕೆ ತರಲಾಯಿತು. ಕೋವಿಡ್‌–19ಕ್ಕಾಗಿಯೇ ಪ್ರತ್ಯೇಕ ಆಸ್ಪತ್ರೆಗಳು, ವೈದ್ಯಕೀಯ ಸಂಸ್ಥೆಗಳಲ್ಲಿ ವೈಯಕ್ತಿಕ ರಕ್ಷಣಾ ಉಪಕರಣಗಳು (ಪಿಪಿಇ), ವೆಂಟಿಲೇಟರ್ಗಳು ಮತ್ತು ಇತರ ಅಗತ್ಯ ಉಪಕರಣಗಳು ಸೇರಿದಂತೆ ಇತರ ಸಂಪನ್ಮೂಲಗಳನ್ನು ಕ್ರೋಡಿಕರಿಸಿಕೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಈಗಾಗಲೇ ರೂಪಿಸಲಾಗಿರುವ ನಿಯಮಾವಳಿಗಳ ಅನ್ವಯ ಕೋವಿಡ್‌–19 ಕೇಂದ್ರಗಳು ಅಥವಾ ಆಸ್ಪತ್ರೆಗಳನ್ನು ಗುರುತಿಸುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚಿಸಲಾಯಿತು.

ಸದ್ಯಕ್ಕೆ ಸಾವಿಗೀಡಾಗುವವರ ಸಂಖ್ಯೆ ಶೇಕಡ 3ರಷ್ಟಿದೆ. ಗುಣಮುಖರಾಗುವವರ ಸಂಖ್ಯೆ ಶೇಕಡ 12ರಷ್ಟು ಇದೆ. ಇದು ಬೇರೆ ದೇಶಗಳಿಗಿಂತಲೂ ಅತ್ಯುತ್ತಮವಾಗಿದೆ. ಲಾಕ್ಡೌನ್ಅನ್ನು ಪರಿಣಾಮಕಾರಿ ಜಾರಿಗೊಳಿಸಿದ್ದು ಮತ್ತು ಕ್ಲಸ್ಟರ್ ನಿರ್ವಹಣೆ ಹಾಗೂ ಕಂಟೇನ್ಮೆಂಟ್ಕಾರ್ಯತಂತ್ರವೂ ಇದಕ್ಕೆ ಕಾರಣಗಳಾಗಿವೆ ಎಂದು ಸಭೆಯಲ್ಲಿ ವಿಶ್ಲೇಷಿಸಲಾಯಿತು. ದೇಶದಲ್ಲಿ ಸದ್ಯ ಕೈಗೊಳ್ಳುತ್ತಿರುವ ತಪಾಸಣೆ ಕಾರ್ಯ ಮತ್ತು ಹಾಟ್ಸ್ಪಾಟ್ಗಳು ಹಾಗೂ ಕ್ಲಸ್ಟರ್ನಿರ್ವಹಣೆ ಮುಂತಾದ ಯೋಜನೆಗಳ ಬಗ್ಗೆ ಸಚಿವರ ತಂಡ ಪರಾಮರ್ಶಿಸಿತು. ದೇಶದಲ್ಲಿ 170 ಜಿಲ್ಲೆಗಳನ್ನು ಕೆಂಪು ವಲಯದಲ್ಲಿ (ಹಾಟ್ಸ್ಪಾಟ್ಗಳು) ಮತ್ತು 123 ಜಲ್ಲೆಗಳನ್ನು ಹಾಗೂ 47 ಜಿಲ್ಲೆಗಳನ್ನು ಕ್ಲಸ್ಟರ್ಗಳು ಎಂದು ಗುರುತಿಸಲಾಗಿದೆ. 207 ಜಿಲ್ಲೆಗಳನ್ನು ಹಾಟ್ಸ್ಪಾಟ್ಇಲ್ಲದ ಜಿಲ್ಲೆಗಳು ಎಂದು ಗುರುತಿಸಲಾಗಿದೆ. 353 ಜಿಲ್ಲೆಗಳು ಹಸಿರು ವಲಯದಲ್ಲಿವೆ ಎಂದು ಗುರುತಿಸಲಾಗಿದೆ. ಜಿಲ್ಲೆಗಳಲ್ಲಿ ಸೋಂಕು ಪ್ರಕರಣಗಳು ಪತ್ತೆಯಾಗಿಲ್ಲ. 14 ದಿನಗಳಲ್ಲಿ ಸೋಂಕಿನ ಯಾವುದೇ ಪ್ರಕರಣ ಪತ್ತೆಯಾಗದಿದ್ದರೆ ಕೆಂಪು ವಲಯದ ಜಿಲ್ಲೆಯನ್ನು ಕಿತ್ತಳೆ ವಲಯದಲ್ಲಿ ನಿಗದಿಪಡಿಸಲಾಗುವುದು. ಮತ್ತೆ ಮುಂದಿನ 14 ದಿನಗಳಲ್ಲಿ ಸೋಂಕಿನ ಯಾವುದೇ ಪ್ರಕರಣಗಳು ಪತ್ತೆಯಾಗದಿದ್ದರೆ ಹಸಿರು ವಲಯದಲ್ಲಿಡಲಾಗುವುದು ಎಂದು ವಿವರಿಸಲಾಯಿತು.

ಪಿಪಿಇಗಳು, ಮಾಸ್ಕ್ಗಳು, ವೆಂಟಿಲೇಟರ್ಗಳು, ಔಷಧಗಳು ಮತ್ತು ಇತರ ಅಗತ್ಯ ಉಪಕರಣಗಳು ಅಗತ್ಯ ಪ್ರಮಾಣದಲ್ಲಿ ಲಭ್ಯವಿರುವುದನ್ನು ಸಚಿವರ ತಂಡಕ್ಕೆ ವಿವರಿಸಲಾಯಿತು. ಪಿಪಿಇಗಳನ್ನು ತಯಾರಿಸಲು ದೇಶಿಯ ತಯಾರಕರನ್ನು ಗುರುತಿಸಲಾಗಿದ್ದು, ಈಗಾಗಲೇ ಕಾರ್ಯಾದೇಶ ಸಹ ಮಾಡಲಾಗಿದೆ. ಜತೆಗೆ, ಹೆಚ್ಚುವರಿಯಾಗಿ, ವೆಂಟಿಲೇಟರ್ಗಳನ್ನು ಖರೀದಿಸಲು ಸಹ ಆದೇಶಿಸಲಾಗಿದೆ. ಕೋವಿಡ್‌–19 ಪರೀಕ್ಷೆ ನಡೆಸಲು ಹೆಚ್ಚುವರಿಯಾಗಿರುವ ಸರ್ಕಾರಿ ಮತ್ತು ಖಾಸಗಿ ಪ್ರಯೋಗಾಲಯಗಳ ಬಗ್ಗೆ ಸಭೆಯಲ್ಲಿ ವಿವರಿಸಲಾಯಿತು. ಪ್ರಯೋಗಾಲಯಗಳ ಮೂಲಕ ಪ್ರತಿ ದಿನ ಪರೀಕ್ಷೆ ನಡೆಸುತ್ತಿರುವ ವಿವರಗಳನ್ನು ಸಭೆಗೆ ನೀಡಲಾಯಿತು.

ಕೋವಿಡ್‌–19 ತಪಾಸಣೆ, ಔಷಧಗಳು ಮತ್ತು ಲಸಿಕೆ ಅಭಿವೃದ್ಧಿಪಡಿಸುವ ಕುರಿತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ(ಡಿಎಸ್ಟಿ), ಜೈವಿಕ ತಂತ್ರಜ್ಞಾನ ಇಲಾಖೆ(ಡಿಬಿಟಿ), ವೈಜ್ಞಾನಿಕ ಮತ್ತು ಕೈಗಾರಿಕೆ ಸಂಶೋಧನೆ ಸಂಸ್ಥೆಗಳು (ಸಿಎಸ್ಐಆರ್‌) ವಿಸ್ತೃತವಾಗಿ ವಿವರಿಸಿದವು. ಕೋವಿಡ್‌–19 ನಿಯಂತ್ರಿಸಲು ಎಲ್ಲ ಸಂಸ್ಥೆಗಳು ಐಸಿಎಂಆರ್ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜತೆ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ. ಕೇಂದ್ರ ಆರೋಗ್ಯ ಸಚಿವರು ಇತ್ತೀಚೆಗೆ ಸಿಎಸ್ಐಆರ್ಮಹಾನಿರ್ದೇಶಕ ಡಾ. ಶೇಖರ್ಸಿ. ಮಂಡೆ ಹಾಗೂ ಸಿಎಸ್ಐಆರ್ಪ್ರಯೋಗಾಲಯಗಳ ನಿರ್ದೇಶಕರ ಜತೆ ಸಮಾಲೋಚನೆ ನಡೆಸಿದ್ದರು. 38 ಪ್ರಯೋಗಾಲಯಗಳ ನಿರ್ದೇಶಕರು ವಿಡಿಯೊ ಕಾನ್ಫೆರೆನ್ಸ್ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು. ತಂತ್ರಜ್ಞಾನ ಅಭಿವೃದ್ಧಿ ಕುರಿತು ಸಂದರ್ಭದಲ್ಲಿ ಸಮಾಲೋಚನೆ ನಡೆಸಲಾಯಿತು. ಸಕಾಲಕ್ಕೆ ಪರಿಹಾರ ರೂಪಿಸುವುದು ಪ್ರಮುಖ ಸೂತ್ರವಾಗಿದೆ ಎಂದು ವಿಶ್ಲೇಷಿಸಲಾಯಿತು.

ಪಿಪಿಇಗಳು, ಮಾಸ್ಕ್ಗಳು, ವೆಂಟಿಲೇಟರ್ಗಳು ಮತ್ತು ಇತರ ಉಪಕರಣಗಳ ತಯಾರಿಕೆಯಲ್ಲಿ ಗುಣಮಟ್ಟ ಕಾಪಾಡಬೇಕು. ವಿಷಯದಲ್ಲಿ ರಾಜಿಯಾಗಬಾರದು ಎಂದು ಸಚಿವರ ತಂಡದ ಅಧ್ಯಕ್ಷತೆವಹಿಸಿದ್ದ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ಸೂಚಿಸಿದರು. ಕಳಪೆ ಪಿಪಿಇಗಳು, ಮಾಸ್ಕ್ಗಳು, ವೆಂಟಿಲೇಟರ್ಗಳು ಮತ್ತು ಇತರ ಉಪಕರಣಗಳನ್ನು ತಯಾರಿಸುವವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

ಯಾರು, ಯಾವ ರೀತಿಯ ಮಾಸ್ಕ್‌, ಪಿಪಿಇಗಳನ್ನು ಉಪಯೋಗಿಸಬೇಕು ಎನ್ನುವ ಕುರಿತು ಸಲಹೆಗಳು ಮತ್ತು ಮಾರ್ಗದರ್ಶಿ ಸೂತ್ರಗಳನ್ನು ಸಚಿವಾಲಯದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಬಗ್ಗೆ ಪ್ರಚಾರವನ್ನು ಸಹ ಕೈಗೊಳ್ಳಲಾಗಿದೆ. ಕೋವಿಡ್‌–19 ನಿಯಂತ್ರಿಸಲು ಸಾಮಾಜಿಕ ಅಂತರ ಮತ್ತು ಐಸೋಲೇಷನ್ಎರಡು ಪ್ರಮುಖ ಪರಿಣಾಮಕಾರಿ ಸಾಮಾಜಿಕ ಲಸಿಕೆಗಳಾಗಿವೆ. ಲಾಕ್ಡೌನ್ಸಂದರ್ಭದಲ್ಲಿ ಪ್ರತಿಯೊಬ್ಬರು ಶಿಷ್ಟಾಚಾರ ಮತ್ತು ವೈಯಕ್ತಿಕ ಸ್ವಚ್ಛತೆ ಪಾಲಿಸಬೇಕು ಎಂದು ಡಾ. ಹರ್ಷ ವರ್ಧನ್ತಿಳಿಸಿದರು.

ಪ್ರೀತಿ ಸುದಾನ್‌, ಕಾರ್ಯದರ್ಶಿ (ಎಚ್ಎಫ್ಡಬ್ಲ್ಯೂ), ರವಿ ಕಪೂರ್‌, ಕಾರ್ಯದರ್ಶಿ (ಜವಳಿ), ಪ್ರದೀಪ್ ಸಿಂಗ್ಖರೋಲಾ, ಕಾರ್ಯದರ್ಶಿ (ವಿಮಾನ ಯಾನ), ಪಿ.ಡಿ. ವಘೇಲಾ, ಕಾರ್ಯದರ್ಶಿ (ಫರ್ಮಾಸುಟಿಕಲ್ಸ್‌), ಡಾ. ರೇಣು ಸ್ವರೂಪ್‌, ಕಾರ್ಯದರ್ಶಿ, ಜೈವಿಕ ತಂತ್ರಜ್ಞಾನ, ಪ್ರೊ. ಅಶುತೋಷ್ಶರ್ಮಾ, ಕಾರ್ಯದರ್ಶಿ, ವಿಜ್ಞಾನ ಮತ್ತು ತಂತ್ರಜ್ಞಾನ, ಡಾ. ಶೇಖರ್ಸಿ. ಮಂಡೆ, ಮಹಾನಿರ್ದೇಶಕ, ಸಿಎಸ್ಐಆರ್ಮತ್ತು ಡಿಎಸ್ಐಆರ್ಕಾರ್ಯದರ್ಶಿ, ಸಂಜೀವ್ಕುಮಾರ್‌, ವಿಶೇಷ ಕಾರ್ಯದರ್ಶಿ (ಆರೋಗ್ಯ), ಅನೀಲ್ಮಲಿಕ್‌, ಹೆಚ್ಚುವರಿ ಕಾರ್ಯದರಶಿ (ಎಂಎಚ್), ಆನಂದ್ಸ್ವರೂಪ್‌, ಡಿಜಿ, ಐಟಿಬಿಪಿ, ಡಾ. ರಾಜೀವ್ಗರ್ಗ, ಡಿಜಿಎಚ್ಎಸ್‌, ಡಾ.ರಮನ್ಆರ್‌. ಗಂಗಾಖೇಡ್ಕರ್‌, ಐಸಿಎಂಆರ್ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥರು, ಲವ್ ಅಗರವಾಲ್‌, ಜಂಟಿ ಕಾರ್ಯದರ್ಶಿ (ಆರೋಗ್ಯ ಸಚಿವಾಲಯ) ಸೇರಿದಂತೆ ಸೇನೆ, ಐಟಿಬಿಪಿ, ಫರ್ಮಾ, ಡಿಜಿಸಿಎ ಮತ್ತು ಜವಳಿ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಯಾವುದೇ ಮಾಹಿತಿ ಬೇಕಾಗಿದ್ದರೆ ಅಥವಾ ಪ್ರಶ್ನೆಗಳಿದ್ದರೆ ಸಂಪರ್ಕಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ಸಚಿವಾಲಯದ ಸಹಾಯವಾಣಿ ಸಂಖ್ಯೆ: +91–11–23978046 ಅಥವಾ 1075 (ಟೋಲ್ಫ್ರಿ). ಕೋವಿಡ್‌–19 ಕುರಿತ ಮಾಹಿತಿ ರಾಜ್ಯಗಳು ಮತ್ತು ಕೇಂದ್ರಾಡಳಿ ಪ್ರದೇಶಗಳ ಸಹಾಯವಾಣಿ ಸಂಖ್ಯೆಗಳು https://www.mohfw.gov.in/pdf/coronvavirushelplinenumber.pdf  ಇಲ್ಲಿ ಲಭ್ಯ.

***



(Release ID: 1615692) Visitor Counter : 174