ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ

ಆಮದಿಗೆ ಪರ್ಯಾಯ ಕಾರ್ಯನಿರ್ವಹಿಸುವಂತೆ ಹಾಗು ಸ್ಪರ್ಧಾತ್ಮಕವಾಗಿ ಉಳಿಯಲು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಂತೆ ಉದ್ಯಮಗಳಿಗೆ ಶ್ರೀ ನಿತಿನ್ ಗಡ್ಕರಿ ಕರೆ

Posted On: 17 APR 2020 6:20PM by PIB Bengaluru

ಆಮದಿಗೆ ಪರ್ಯಾಯ ಕಾರ್ಯನಿರ್ವಹಿಸುವಂತೆ ಹಾಗು ಸ್ಪರ್ಧಾತ್ಮಕವಾಗಿ ಉಳಿಯಲು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಂತೆ ಉದ್ಯಮಗಳಿಗೆ ಶ್ರೀ ನಿತಿನ್ ಗಡ್ಕರಿ ಕರೆ

ಕೆಲವು ಪ್ರದೇಶಗಳಲ್ಲಿ ಏಪ್ರೀಲ್ 20 ರಿಂದ ಲಾಕ್ ಡೌನ್ ಸಡಿಲಗೊಳ್ಳುವುದರಿಂದ ಅಲ್ಲಿಯ ಆರ್ಥಿಕ ಚಟುವಟಿಕೆಗಳ ಪುನರುಜ್ಜೀವನದ ಕುರಿತು ಚರ್ಚಿಸಲು ಸಚಿವರು ಕೈಗಾರಿಕಾ ಸಂಸ್ಥೆಗಳೊಂದಿಗೆ ಸಭೆ ನಡೆಸಿದರು

 

ಎಂಎಸ್ಎಂಇ ಮತ್ತು ಆರ್ ಟಿ ಮತ್ತು ಹೆಚ್ ಕೇಂದ್ರ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರು ವಿದೇಶೀಯ ಆಮದನ್ನು ದೇಶೀಯ ಉತ್ಪನ್ನಗಳಿಗೆ ಬದಲಾಯಿಸಿ ಆಮದಿಗೆ ಪರ್ಯಾಯವನ್ನು ಹುಡುಕುವತ್ತ ಗಮನಹರಿಸಬೇಕೆಂಬುದರ ಕುರಿತು  ಒತ್ತು ನೀಡಿದ್ದಾರೆ. ಉದ್ಯಮಗಳು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕೆಂದು ಮನವಿ ಮಾಡಿಕೊಂಡ ಅವರು ಸಂಶೋಧನೆ, ಆವಿಷ್ಕಾರ ಮತ್ತು ಗುಣಮಟ್ಟ ವೃದ್ಧಿ ಔದ್ಯಮಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದರು. ನಾಗ್ಪುರ್ ನ ಯಂಗ್ ಪ್ರೆಸಿಡೆಂಟ್ಸ್ ಸಂಸ್ಥೆ (ವಾಯ್ ಪಿ ಒ), ಇಂಡಿಯಾ ಎಸ್ ಎಂ ಇ ವೇದಿಕೆ (ಐ ಎಸ್ ಎಫ್) ಮತ್ತು  ವಿವಿಧ ವಲಯಗಳ ಉದ್ಯಮಗಳ ಪ್ರತಿನಿಧಿಗಳೊಂದಿಗೆ ವಿಡಿಯೊ ಕಾನ್ಫೆರೆನ್ಸಿಂಗ್ ಮೂಲಕ ಇಂದು ಸಭೆ ನಡೆಸಿ ಮಾತನಾಡಿದರು.     

ಲಾಕ್ ಡೌನ್ ಸಡಿಲಗೊಂಡು ಆರ್ಥಿಕ ಚಟುವಟಿಕೆ ಹೆಚ್ಚಳದತ್ತ ಗಮನಹರಿದಾಗ, ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸಿ ಕ್ಷೇತ್ರದ ಪುನರುಜ್ಜೀವನ ಮತ್ತು  ಸುಸ್ಥಿರ ಆರ್ಥಿಕ ಬೆಳವಣಿಗೆಗೆ ದಾರಿ ಮಾಡಿಕೊಡುತ್ತದೆ.

ಎಂಎಸ್ಎಂಇ ವಲಯದ ಪುನರುಜ್ಜೀವನದ ಕುರಿತು ಮಾತನಾಡಿದ ಸಚಿವರು ಈ ಉದ್ಯಮ ರಫ್ತು ಹೆಚ್ಚಳದತ್ತ ವಿಶೇಷ ಗಮನಹರಿಸಬೇಕು ಮತ್ತು ಇಂಧನ ವೆಚ್ಚವನ್ನು ಕಡಿಮೆಗೊಳಿಸಲು ಅವಶ್ಯಕ ಅಭ್ಯಯಾಸಗಳನ್ನು ಅಳವಡಿಸಿಕೊಳ್ಳಬೇಕು, ಜಾಗತಿಕ ಮಾರುಕಟ್ಟೆಗೆ ಹೋಲಿಸಿದಲ್ಲಿ ಸಾಗಾಣೆ ವೆಚ್ಚ ಮತ್ತು ಉತ್ಪಾದನಾ ವೆಚ್ಚ ಸ್ಪರ್ಧಾತ್ಮಕವಾಗಿರಬೇಕು ಎಂದು ಉಲ್ಲೇಖಿಸಿದ್ದಾರೆ.     

ಸರ್ಕಾರ ಕೆಲವು ಉದ್ಯಮಕ್ಷೇತ್ರಗಳಿಗೆ ಕಾರ್ಯಾರಂಭಕ್ಕೆ ಅನುಮತಿ ನೀಡಿದ್ದರೂ ಕೋವಿಡ್ – 19 ತಡೆಗಟ್ಟಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಉದ್ಯಮಗಳು ಖಚಿತಪಡಿಸಬೇಕಿದೆ ಎಂದು  ಶ್ರೀ ಗಡ್ಕರಿ ತಿಳಿಸಿದ್ದಾರೆ. ಪಿಪಿಇ (ಮಾಸ್ಕ್ ಗಳು, ಸ್ಯಾನಿಟೈಸರ್, ಕೈಗವಸು ಇತ್ಯಾದಿ )ಅವರು ಒತ್ತು ನೀಡಿದ್ದಾರೆ ಮತ್ತು ಕಚೇರಿಗಳಲ್ಲಿ/ ವ್ಯವಹಾರ ಮಾಡುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಇದೇ ವೇಳೆ ಜಪಾನ್ ಸರ್ಕಾರ ತನ್ನ ಉದ್ಯಮಗಳನ್ನು ಮತ್ತು ಹೂಡಿಕೆಯನ್ನು ಚೀನಾದಿಂದ ಹೊರತುಪಡಿಸಿ ಬೇರೆಡೆಗೆ ವರ್ಗಾಯಿಸಲು ನೀಡಿರುವ ವಿಶೇಷ ಪ್ಯಾಕೇಜ್ ಕುರಿತು ಕೂಡಾ ಸಚಿವರು ಒತ್ತಿ ಹೇಳಿದ್ದಾರೆ. ಇದು ಭಾರತಕ್ಕೆ ಒಂದು ಅವಕಾಶವಾಗಿದ್ದು ಇದರ ಸದ್ಭಳಕೆ ಮಾಡಿಕೊಳ್ಳಬೇಕೆಂದು ಅಭಿಪ್ರಾಯಪಟ್ಟರು.

ದೆಹಲಿ ಮುಂಬೈ ಎಕ್ಸಪ್ರೆಸ್ ಹೆದ್ದಾರಿಯಲ್ಲಿ ಈಗಾಗಲೇ ಕೆಲಸ ಆರಂಭವಾಗಿದ್ದು ಉದ್ಯಮಗಳು ಇಲ್ಲಿಯ ಔದ್ಯಮಿಕ ಸಮೂಹಕ್ಕಾಗಿ, ಔದ್ಯಮಿಕ ಪಾರ್ಕ್ ಗಳಲ್ಲಿ, ಸ್ಮಾರ್ಟ್ ಗ್ರಾಮಗಳು ಮುಂತಾದವುಗಳಿಗಾಗಿ  ಭವಿಷ್ಯದ ಹೂಡಿಕೆಯನ್ನು ಮಾಡಲು ಇದೊಂದು ಸದಾವಕಾಶವಾಗಿದೆ ಮತ್ತು ಇಂಥ ಪ್ರಸ್ತಾವಣೆಗಳನ್ನು ಎನ್ ಹೆಚ್ ಎ ಐ ಗೆ ಸಲ್ಲಿಸಬೇಕೆಂದು    ಶ್ರೀ ಗಡ್ಕರಿ ಹೇಳಿದ್ದಾರೆ.

ಎಂಎಸ್ಎಂಇ ಗಳಿಗೆ ಹಣ ಪಾವತಿ ಮಾಡಲು ಎಲ್ಲ ಪ್ರಯತ್ನಗಳನ್ನು ಮಾಡಬೇಕೆಂದು ಅವರು ಮನವಿ ಮಾಡಿದರು ಮತ್ತು ಎಲ್ಲ ಸರ್ಕಾರಿ ಇಲಾಖೆಗಳಿಗೆ ಈ ಕುರಿತು ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು. ಕೋವಿಡ್ – 19 ಹರಡುವಿಕೆ ತಡೆಗಾಗಿ ಲಾಕ್ ಡೌನ್ ಘೋಷಣೆಯಿಂದ ಉಂಟಾದ ಸವಾಲುಗಳನ್ನು ಎದುರಿಸಲು ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.   

ಕೋವಿಡ್–19 ಹರಡುವಿಕೆ ಮಧ್ಯೆ ಎಂಎಸ್ಎಂಇ ಗಳು ಎದುರಿಸುತ್ತಿರುವ ವಿವಿಧ ಸವಾಲುಗಳ ಬಗ್ಗೆ ಸಭೆಯ ವೇಳೆ, ಆತಂಕ ವ್ಯಕ್ತಪಡಿಸಿದ ಪ್ರತಿನಿಧಿಗಳು ಸಲಹೆಗಳನ್ನು ನೀಡಿದರು ಮತ್ತು ಎಂಎಸ್ಎಂಇ ವಲಯವನ್ನು ಮುನ್ನಡೆಯುವಂತೆ ಮಾಡಲು ಸರ್ಕಾರದ ಸಹಾಯ ಕೋರಿದರು

ಪ್ರತಿನಿಧಿಗಳು ಸೂಚಿಸಿದ ಕೆಲವು ಸಮಸ್ಯೆಗಳು ಮತ್ತು ನೀಡಿದ ಸಲಹೆಗಳಲ್ಲಿ ಈ ಅಂಶಗಳಿವೆ: ಕನಿಷ್ಠ 6 ತಿಂಗಳಿಗೆ  ನಿಷೇಧವನ್ನು ವಿಸ್ತರಿಸುವುದು, ಎಂಎಸ್ಎಂಇ ಗಳಿಗೆ ಕಾರ್ಯನಿರತ ಬಂಡವಾಳ ಸಾಲದ ಮಿತಿಯನ್ನು ಹೆಚ್ಚಿಸುವುದು, ಯುಟಿಲಿಟಿ ಬಿಲ್ ಗಳ ಮನ್ನಾ, ಕಂಪ್ಯೂಟರ್ ಹಾರ್ಡ್ ವೇರ್ ವಲಯ ಸೇರಿದಂತೆ ಅವಶ್ಯಕ ಸಾಮಗ್ರಿಗಳ ವಿಭಾಗದಲ್ಲಿ ಕೆಲವು ಸರಕುಗಳನ್ನು ಸೇರಿಸುವುದು, ಲಾಕ್ ಡೌನ್ ಸಮಯದಲ್ಲಿ ಕಾರ್ಯಕರ್ತರಿಗೆ ಇಎಸ್ಐ ಮತ್ತು ಭವಿಷ್ಯ ನಿಧಿಗಳಿಂದ ಸಂಬಳ ಪಾವತಿಸುವುದು, ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳಿಗಾಗಿ ಮಾಡಿದ ಎಲ್ಲ  ವೆಚ್ಚಗಳಿಗೆ ಸಂಪೂರ್ಣ ತೆರಿಗೆ ವಿನಾಯ್ತಿ ಇತ್ಯಾದಿ.   

ಕೇಂದ್ರ ಹಣಕಾಸು ಸಚಿವರು ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ನೊಂದಿಗೆ ಈ ವಿಷಯಗಳನ್ನು ಚರ್ಚಿಸುವುದಾಗಿ ಶ್ರೀ ಗಡ್ಕರಿ ಭರವಸೆ ನೀಡಿದ್ದಾರೆ

ಕೋವಿಡ್–19 ಸಂದಿಗ್ಧ ಪರಿಸ್ಥಿತಿ ತೆರವಾದ ನಂತರ ಎಲ್ಲ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ಉದ್ಯಮಗಳು ಒಗ್ಗೂಡಿ ಕೆಲಸ ಮಾಡಬೇಕು ಎಂದೂ ಸಹ ಶ್ರೀ ಗಡ್ಕರಿ ತಿಳಿಸಿದ್ದಾರೆ.

***

 


(Release ID: 1615673) Visitor Counter : 261