ರಕ್ಷಣಾ ಸಚಿವಾಲಯ

ಕೋವಿಡ್‌-19 ಸಶಸ್ತ್ರ ಪಡೆ ವೈದ್ಯಕೀಯ ಸೇವಾ ಕಾರ್ಯವನ್ನು ಪರಿಶೀಲಿಸಿದ ರಕ್ಷಣಾ ಸಚಿವ ಶ್ರೀ ರಾಜನಾಥ್‌ ಸಿಂಗ್

Posted On: 17 APR 2020 3:04PM by PIB Bengaluru

ಕೋವಿಡ್‌-19 ಸಶಸ್ತ್ರ ಪಡೆ ವೈದ್ಯಕೀಯ ಸೇವಾ ಕಾರ್ಯವನ್ನು ಪರಿಶೀಲಿಸಿದ ರಕ್ಷಣಾ ಸಚಿವ ಶ್ರೀ ರಾಜನಾಥ್ಸಿಂಗ್

 

ಇಂದು ನಡೆದ ಸಭೆಯಲ್ಲಿ ಭಾಗವಹಿಸಿದ್ದ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಅವರು, ಕೋವಿಡ್-19 ಹರಡುವಿಕೆ ನಿಯಂತ್ರಿಸಲು ಸಶಸ್ತ್ರ ಪಡೆಗಳ ವೈದ್ಯಕೀಯ ಸೇವಾ (ಎಎಫ್ಎಂಎಸ್) ಕಾರ್ಯವೈಖರಿ ಹಾಗೂ ನಾಗರಿಕ ಸೇವಾ ಅಧಿಕಾರಿಗಳಿಗೆ ನೀಡಿದ ಸಹಾಕರವನ್ನು ಪರಿಶೀಲಿಸಿದರು.

ರಕ್ಷಣಾ ಕಾರ್ಯದರ್ಶಿ ಶ್ರೀ. ಡಾ. ಅಜಯ್ ಕುಮಾರ್, ಎಎಫ್ಎಂಎಸ್ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಶ್ರೀ. ಅನುಪ್ ಬ್ಯಾನರ್ಜಿ, ಎಎಫ್ಎಂಎಸ್‌ (ಸಂಸ್ಥೆ ಮತ್ತು ಸಿಬ್ಬಂದಿ) ಮಹಾನಿರ್ದೇಶಕರಾದ ಲೆಫ್ಟಿನೆಂಟ್ ಜನರಲ್ ಶ್ರೀ .ಕೆ.ಹುಡಾ, ಮಹಾನಿರ್ದೇಶಕ ವೈದ್ಯಕೀಯ ಸೇವೆಗಳ (ನೌಕಾಪಡೆಯ) ಶಸ್ತ್ರಚಿಕಿತ್ಸಕ ವೈಸ್ ಅಡ್ಮಿರಲ್ ಎಂ.ವಿ.ಸಿಂಗ್ ಮತ್ತು ವೈದ್ಯಕೀಯ ಸೇವೆ (ನೌಕಾಪಡೆ) ಮಹಾನಿರ್ದೇಶಕರಾದ ಸರ್ಜನ್ ವೈಸ್ಅಡ್ಮಿರಲ್ಶ್ರೀ ಎಂ.ವಿ.ಸಿಂಗ್ಹಾಗೂ ವೈದ್ಯಕೀಯ ಸೇವೆಗಳ (ವಾಯುಪಡೆ) ಮಹಾನಿರ್ದೇಶಕರಾದ ಮಾರ್ಷಲ್ಶ್ರೀ ಎಂ.ಎಸ್‌. ಭುಟೋಲಾ ಭಾಗವಹಿಸಿದ್ದರು.

ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಸಲಹೆ ಸೂಚನೆ ನೀಡುವುದು, ಕ್ವಾರಂಟೀನ್ ಸೌಲಭ್ಯಗಳಿಗೆ ಸಂಬಂಧಿಸಿದಂತೆ ನಾಗರಿಕ ಸೇವಾ ಅಧಿಕಾರಿಗಳಿಗೆ ಸಹಾಯ ಒದಗಿಸುವುದು, ಪ್ರಸ್ತುತ ಪರಿಸ್ಥಿತಿಯಲ್ಲಿ ಆಸ್ಪತ್ರೆಗಳು ಹಾಗೂ ಆರೋಗ್ಯ ಸೇವೆ ಒದಗಿಸುವುದು ಮುಂತಾದ ವಿವಿಧ ಕ್ರಮಗಳ ಬಗ್ಗೆ ಅವರು ರಕ್ಷಣಾ ಸಚಿವರಿಗೆ ವಿವರಣೆ ನೀಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕೋರಿಕೆಯ ಮೇರೆಗೆ, ನಾಗರಿಕರಿಗೆ ಕ್ವಾರಂಟೀನ್ ಸೌಲಭ್ಯವನ್ನು ನೀಡಲಾಗುತ್ತಿದೆ. ಪ್ರಸ್ತುತ ಇಟಲಿ, ಇರಾನ್, ಚೀನಾ, ಮಲೇಷ್ಯಾ ಮತ್ತು ಜಪಾನ್‌ನ ನಿರಾಶ್ರಿತ ನಾಗರಿಕರಿಗೆ ಆರು ಕೇಂದ್ರಗಳಲ್ಲಿ ಈ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಇತರ ಕೇಂದ್ರಗಳಲ್ಲಿ ಸ್ಟ್ಯಾಂಡ್‌ಬೈ ಕ್ಯಾರೆಂಟೈನ್ ಸೌಲಭ್ಯಗಳನ್ನು ಸಹ ರಚಿಸಲಾಗಿದೆ. 2020ರ ಫೆಬ್ರವರಿ 1ರಿಂದ ಈ ಕೇಂದ್ರಗಳು 1,738 ವ್ಯಕ್ತಿಗಳಿಗೆ ಈ ಸೌಲಭ್ಯಗಳನ್ನು ನೀಡುತ್ತಿವೆ.

ಐಸಿಎಂಆರ್ ಸಹಾಯದ ಮೂಲಕ ಆರು ವೈರಲ್ ಪರೀಕ್ಷಾ ಪ್ರಯೋಗಾಲಯಗಳನ್ನು ಈಗಾಗಲೇ ಸ್ಥಾಪಿಸಲಾಗಿದ್ದು, ವಿವಿಧ ಎಎಫ್ಎಂಎಸ್ ಆಸ್ಪತ್ರೆಗಳಲ್ಲಿ ಅವು ಕಾರ್ಯನಿರ್ವಹಿಸುತ್ತಿವೆ.ರಕ್ಷಣಾ ಮಂತ್ರಿಗಳು ನೀಡಿರುವ ತುರ್ತು ಆರ್ಥಿಕ ಅಧಿಕಾರಗಳನ್ನು ಉಪಯೋಗಿಸಿಕೊಂಡು ಅಗತ್ಯ ಆರೋಗ್ಯ ಸಾಧನಗಳಾದ ಮುಖಗವುಸು, ಸ್ಯಾನಿಟೈಸರ್‌, ವೈಯಕ್ತಿಕ ರಕ್ಷಣಾ ಸಾಧನಗಳು (ಪಿಪಿಇಗಳು) ವೆಂಟಿಲೇಟರ್ಸೇರಿದಂತೆ ಇನ್ನಿತರ ಉಪಕರಣಗಳನ್ನು ಸರಾಗವಾಗಿ ಒದಗಿಸುತ್ತಿರುವುದನ್ನು ಸಶಸ್ತ್ರ ಪಡೆ ವೈದ್ಯಕೀಯ ಸೇವೆಗಳ ಮಹಾನಿರ್ದೇಶಕರಾದ ಲೆಫ್ಟಿನೆಂಟ್ಜನರಲ್ಶ್ರೀ ಅನುಪ್ಬ್ಯಾನರ್ಜಿ ಅವರು ರಕ್ಷಣಾ ಮಂತ್ರಿಗಳಿಗೆ ವಿವರಿಸಿದರು.

ಪ್ರಸ್ತುತ ನವದೆಹಲಿಯ ನರೇಲಾದಲ್ಲಿರುವ ಕ್ವಾರಂಟೀನ್ ಶಿಬಿರಕ್ಕೆ ಸೇನಾ ವೈದ್ಯಕೀಯ ದಳವು ವೈದ್ಯಕೀಯ ರಕ್ಷಣೆಯನ್ನು ಒದಗಿಸುತ್ತಿದೆ. ಅಲ್ಲಿ ಆರು ವೈದ್ಯಕೀಯ ಅಧಿಕಾರಿಗಳು ಮತ್ತು 18 ಅರೆವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಕೋವಿಡ್‌-19 ಪ್ರಕರಣಗಳಿಗೆ ಪ್ರತ್ಯೇಕತೆ ಹಾಗೂ ಚಿಕಿತ್ಸೆಯನ್ನು ನೀಡಲು (ಐಸಿಯು ಆಧರಿತ ಆರೈಕೆ ಸೇರಿದಂತೆ) ೫೦ ಎಎಫ್ಎಂಎಸ್ಆಸ್ಪತ್ರೆಗಳನ್ನು ಕೋವಿಡ್ಆಸ್ಪತ್ರೆಗಳೆಂದು ಮೀಸಲಿರಿಸಲಾಗಿದೆ. ಅವುಗಳನ್ನು ಮಿಶ್ರ ಕೋವಿಡ್ಆಸ್ಪತ್ರೆಗಳೆಂದು ಸೂಚಿಸಬೇಕೆಂದು ಆದೇಶ ಹೊರಡಿಸಲಾಗಿದೆ. ಆಸ್ಪತ್ರೆಗಳು ಒಟ್ಟು 9,038 ಹಾಸಿಗೆಯ ಸಾಮರ್ಥ್ಯವನ್ನು ಹೊಂದಿವೆ. ರಾಜ್ಯ ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸುವ ಸಾಮರ್ಥ್ಯದ ಆಧಾರದ ಮೇಲೆ ನಾಗರೀಕ ಕೋವಿಡ್19 ಪ್ರಕರಣಗಳನ್ನು ಇಲ್ಲಿ ದಾಖಲಿಸಿಕೊಳ್ಳಲಾಗುತ್ತಿದೆ.

ಲಕ್ನೋದ ಎಎಂಸಿ ಕೇಂದ್ರ ಮತ್ತು ಕಾಲೇಜು ಹಾಗೂ ಪುಣೆಯಲ್ಲಿರುವ ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿನಲ್ಲಿ ತರಬೇತಿ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ. ಎಎಫ್ಎಂಸಿಯಲ್ಲಿ ಸ್ನಾತಕೋತ್ತರ ತರಬೇತಿಗೆ ದಾಖಲಾಗುವ ಸುಮಾರು 650 ವೈದ್ಯಕೀಯ ಅಧಿಕಾರಿಗಳನ್ನು ಪರಿಸ್ಥಿತಿಗೆ ಅನುಗುಣವಾಗಿ ವೈದ್ಯಕೀಯ ಸೇವೆ ಒದಗಿಸಲು ಘಟಕಗಳಿಗೆ ಹಿಂತಿರುಗಿಸಲಾಗುತ್ತಿದೆ. ಕೋವಿಡ್ ವಾರ್ಡ್ಗಳನ್ನು ಸ್ಥಾಪಿಸಲಾಗುತ್ತಿರುವ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಲು ನೇಮಕಾತಿ ಸಂಸ್ಥೆಗಳ 100 ವೈದ್ಯಕೀಯ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

ನಿವೃತ್ತ ಎಎಂಸಿ ಅಧಿಕಾರಿಗಳು ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಅಗತ್ಯವಿದ್ದಲ್ಲಿ ಅವರು ತಮ್ಮ ಗೃಹ ಕೇಂದ್ರಗಳಲ್ಲಿರುವ ಎಎಫ್ಎಂಎಸ್ ಆಸ್ಪತ್ರೆಗಳಲ್ಲಿ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುವಂತೆ ಕೇಳಿಕೊಳ್ಳಬಹುದು. ಇದುವರೆಗೂ 43 ಅಧಿಕಾರಿಗಳು ಮತ್ತು 990 ಅರೆವೈದ್ಯರು ಸ್ವಯಂ ಸೇವಕರಾಗಿ ದಾಖಲಾಗಿದ್ದಾರೆ.

ಕೋವಿಡ್ನಿರ್ವಹಿಸುವ ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸಲು ಕುವೈತ್ ಸರ್ಕಾರಕ್ಕೆ ಸಹಾಯ ಮಾಡಲು 15 ಸದಸ್ಯರ ವೈದ್ಯಕೀಯ ತಂಡವನ್ನು ಪಿಸಿಆರ್ ಯಂತ್ರ ಮತ್ತು ರೋಗನಿರ್ಣಯದ ಕಿಟ್ಗಳೊಂದಿಗೆ ಕುವೈತ್ಗೆ ಕಳುಹಿಸಲಾಗಿದೆ.

ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳು ಪ್ರಾರಂಭಿಸಿರುವ ವಿವಿಧ ಕ್ರಮಗಳನ್ನು ಶ್ಲಾಘಿಸುತ್ತಾ ಮಾತನಾಡಿದ ಶ್ರೀ ರಾಜನಾಥ್ ಸಿಂಗ್ ಅವರು, ಕೋವಿಡ್-19 ಸವಾಲುಗಳನ್ನು ಎದುರಿಸಲು ನಾಗರಿಕ ಸೇವಾ ಅಧಿಕಾರಿಗಳಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವಂತೆ ನಿರ್ದೇಶಿಸಿದರು.

***



(Release ID: 1615571) Visitor Counter : 217