ನಾಗರೀಕ ವಿಮಾನಯಾನ ಸಚಿವಾಲಯ

ಲಾಕ್ ಡೌನ್ ಸಮಯದಲ್ಲಿ 247 ಲೈಫ್ ಲೈನ್ ಉಡಾನ್ ವಿಮಾನಗಳು, 418 ಟನ್ ಗಳಷ್ಟು ವೈದ್ಯಕೀಯ ಸಾಮಗ್ರಿಗಳನ್ನು  ದೇಶಾದ್ಯಂತ ಸರಬರಾಜು ಮಾಡಿವೆ

Posted On: 16 APR 2020 7:26PM by PIB Bengaluru

ಲಾಕ್ ಡೌನ್ ಸಮಯದಲ್ಲಿ 247 ಲೈಫ್ ಲೈನ್ ಉಡಾನ್ ವಿಮಾನಗಳು, 418 ಟನ್ ಗಳಷ್ಟು ವೈದ್ಯಕೀಯ ಸಾಮಗ್ರಿಗಳನ್ನು  ದೇಶಾದ್ಯಂತ ಸರಬರಾಜು ಮಾಡಿವೆ

 

ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ದೇಶದ ದೂರದ ಭಾಗಗಳಿಗೆ ಸಾಗಿಸುವ ಮೂಲಕ ಕೊವಿಡ್ – 19 ವಿರುದ್ಧದ ಭಾರತದ ಹೋರಾಟಕ್ಕೆ ನೆರವು ಒದಗಿಸಲು ಲೈಫ್ ಲೈನ್ ಉಡಾನ್ ಉಪಕ್ರಮವನ್ನು ಪ್ರಮುಖ ಪಾಲುದಾರರೊಂದಿಗೆ ನಾಗರಿಕ ವಿಮಾನಯಾನ ಸಚಿವಾಲಯ ಮೂಲ ತಂಡ ರಚಿಸಲಾಗಿತ್ತು ಮತ್ತು ಹಬ್ ಅಂಡ್ ಸ್ಪೋಕ್ ಲೈಫ್ ಲೈನ್ ಸೇವೆಗಳನ್ನು 26 ಮಾರ್ಚ್ 2020 ರಿಂದ ಆರಂಭಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಎಡಿಜಿ (ಮಾಧ್ಯಮ), ಶ್ರೀ ರಾಜೀವ್ ಜೈನ್ ತಿಳಿಸಿದ್ದಾರೆ. ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ ಶ್ರೀ ರಾಜೀವ್ ಜೈನ್ ಅವರು, ಲಾಕ್ ಡೌನ್ ಅವಧಿಯಲ್ಲಿ ಎಂ ಒ ಸಿ ಎ ಕೈಗೊಂಡ ಉಪಕ್ರಮದ ಲೈಫ್ ಲೈನ್ ಉಡಾನ್ ಕುರಿತು ವಿಸ್ತೃತ ಮಾಹಿತಿ ನೀಡಿದರು ಮತ್ತು ಏರ್ ಇಂಡಿಯಾ, ಅಲಯೆನ್ಸ್ ಏರ್, ಐಎಎಫ್, ಮತ್ತು ಖಾಸಗಿ ಸಂಸ್ಥೆಗಳ 247 ವಿಮಾನಗಳು ಲೈಫ್ ಲೈನ್ ಉಡಾನ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂಬ ಮಾಹಿತಿ ನೀಡಿದರು. ಇವುಗಳಲ್ಲಿ 154 ವಿಮಾನಗಳನ್ನು ಏರ್ ಇಂಡಿಯಾ ಮತ್ತು ಅಲಯೆನ್ಸ್ ಏರ್ ಸಂಸ್ಥೆಗಳು ನಿರ್ವಹಿಸುತ್ತಿವೆ. ಇಲ್ಲಿವರೆಗೆ 418 ಟನ್ ಗಳಿಗೂ ಹೆಚ್ಚು ಸರಕುಗಳನ್ನು ಸಾಗಿಸಲಾಗಿದೆ. ಇಂದಿನವರೆಗೆ ಲೈಫ್ ಲೈನ್ ಉಡಾನ್ ವಿಮಾನಗಳು ಸುಮಾರು 2.45 ಲಕ್ಷ ಕಿ. ಮೀ. ಗಳ ವ್ಯಾಪ್ತಿಯನ್ನ ಕ್ರಮಿಸಿವೆ.

ಈಶಾನ್ಯ ಪ್ರದೇಶ, ದ್ವೀಪ ಪ್ರದೇಶಗಳು ಮತ್ತು ಬೆಟ್ಟ ಪ್ರದೇಶದ ರಾಜ್ಯಗಳಿಗೆ ವಿಶೇಷ ಗಮನಹರಿಸಲಾಗಿದ್ದು, ಏರ್ ಇಂಡಿಯಾ, ಅಲಯೆನ್ಸ್ ಏರ್, ಐಎಎಫ್, ಮತ್ತು ಖಾಸಗಿ ವಿಮಾನಗಳು, ವೈದ್ಯಕೀಯ ಸಾಮಗ್ರಿಗಳು ಸೇರಿದಂತೆ ಅವಶ್ಯಕ ಸರಕುಗಳನ್ನು ಸರಬರಾಜು ಮಾಡುವ ಕಾರ್ಯದಲ್ಲಿ ತೊಡಗಿವೆ. ಮುಖ್ಯವಾಗಿ ಜಮ್ಮು ಮತ್ತು ಕಾಶ್ಮೀರ, ಲದಾಖ್, ಈಶಾನ್ಯ ಪ್ರದೇಶ ಮತ್ತು ದ್ವೀಪ ಪ್ರದೇಶಗಳಿಗೆಂದೇ ಏರ್ ಇಂಡಿಯಾ ಮತ್ತು ಐಎಎಫ್ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ. ಪವನ್ ಹನ್ಸ್ ನಿಯಮಿತ ಸಂಸ್ಥೆ ಸೇರಿದಂತೆ ಹೆಲಿಕಾಪ್ಟರ್ ಸೇವೆಗಳು ಜಮ್ಮು ಮತ್ತು ಕಾಶ್ಮೀರ, ಲದಾಖ್, ದ್ವೀಪಗಳು ಮತ್ತು ಈಶಾನ್ಯ ಪ್ರದೇಶಗಳಿಗೆ ನಿರ್ಣಾಯಕ ವೈದ್ಯಕೀಯ ಸಾಮಗ್ರಿಗಳು ಮತ್ತು ರೋಗಿಗಳನ್ನು ಸಾಗಿಸಲು ಕಾರ್ಯನಿರ್ವಹಿಸುತ್ತಿವೆ.

ಅಂತಾರಾಷ್ಟ್ರೀಯ ವಲಯದಲ್ಲಿ ಔಷಧಿಗಳು, ವೈದ್ಯಕೀಯ ಉಪಕರಣಗಳು ಮತ್ತು ಕೊವಿಡ್ – 19 ಪರಿಹಾರ ಸಾಮಗ್ರಿಗಳ ಸಾಗಣೆಗೆ ಏಪ್ರಿಲ್ 4, 2020 ರಿಂದ ಚೀನಾದೊಂದಿಗೆ ಏರ್ ಬ್ರಿಡ್ಜ್ ಅನ್ನು ಸ್ಥಾಪಿಸಲಾಗಿದೆ. ದಕ್ಷಿಣ ಏಷ್ಯಾ ದಲ್ಲಿ ಮಾತ್ರ ವೈದ್ಯಕೀಯ ಸಾಮಗ್ರಿಗಳನ್ನು ಏರ್ ಇಂಡಿಯಾ ಕೊಲಂಬೊಗೆ ಸಾಗಿಸಿತ್ತು.

ಕೃಷಿ ಉಡಾನ್ ಯೋಜನೆಯಡಿಯಲ್ಲಿ, ಏಪ್ರಿಲ್ 13, 2020 ರಂದು ಏರ್ ಇಂಡಿಯಾ ಮೊದಲ ಹಾರಾಟವನ್ನು, ಮುಂಬೈ ಮತ್ತು ಲಂಡನ್ ನಡುವೆ ನಡೆಸಿತು. 29 ಟನ್ ಗಳಷ್ಟು ಹಣ್ಣು ಮತ್ತು ತರಕಾರಿಗಳನ್ನು ಲಂಡನ್ ಗೆ ಸಾಗಿಸಿ, ಅಲ್ಲಿಂದ 15.6 ಟನ್ ಗಳಷ್ಟು ಸಾಮಾನ್ಯ ಸರಕುಗಳೊಂದಿಗೆ ಮರಳಿ ಬಂತು. ಕೃಷಿ ಉಡಾನ್ ಯೋಜನೆಯಡಿಯಲ್ಲಿ, ಏಪ್ರಿಲ್ 15, 2020 ರಂದು ಏರ್ ಇಂಡಿಯಾ ತನ್ನ ಎರಡನೆಯ ಹಾರಾಟವನ್ನು, ಮುಂಬೈನಿಂದ ಫ್ರಾಂಕ್ ಫರ್ಟ್ ಗೆ ನಡೆಸಿತು. 27 ಟನ್ ಗಳಷ್ಟು ಆಯಾ ಋತುಮಾನದಲ್ಲಿ ಬೆಳೆಯುವ ಹಣ್ಣು ಮತ್ತು ತರಕಾರಿಗಳನ್ನು ಫ್ರಾಂಕ್ ಫರ್ಟ್ ಗೆ ಕೊಂಡೊಯ್ದು ಅಲ್ಲಿಂದ 10 ಟನ್ ಗಳಷ್ಟು ಸಾಮಾನ್ಯ ಸರಕುಗಳೊಂದಿಗೆ ಮರಳಿ ಬಂತು.

****


(Release ID: 1615315) Visitor Counter : 175