ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ರಪ್ತುದಾರರಿಗೆ ಕೊರೊನಾ ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಎದುರಾಗಿರುವ ಕಠಿಣ ಪರಿಸ್ಥಿತಿಯಲ್ಲಿ ನೆರವಾಗಲು ವಿವಿಧ ಅನುಸರಣೆಗಳಿಗಾಗಿ ಇರುವ ಅಂತಿಮ  ಗಡುವನ್ನು ವಿಸ್ತರಿಸಿದ  ವಾಣಿಜ್ಯ ಇಲಾಖೆ

Posted On: 11 APR 2020 6:16PM by PIB Bengaluru

ರಪ್ತುದಾರರಿಗೆ ಕೊರೊನಾ ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಎದುರಾಗಿರುವ ಕಠಿಣ ಪರಿಸ್ಥಿತಿಯಲ್ಲಿ ನೆರವಾಗಲು ವಿವಿಧ ಅನುಸರಣೆಗಳಿಗಾಗಿ ಇರುವ ಅಂತಿಮ  ಗಡುವನ್ನು ವಿಸ್ತರಿಸಿದ  ವಾಣಿಜ್ಯ ಇಲಾಖೆ
 

ನೊವೆಲ್ ಕೊರೊನಾವೈರಸ್ ಉಂಟು ಮಾಡಿರುವ ಒತ್ತಡದಿಂದ ಬಾಧಿತರಾಗಿರುವ ವ್ಯಕ್ತಿಗಳು ಮತ್ತು ವ್ಯಾಪಾರೋದ್ಯಮ ಸಂಸ್ಥೆಗಳಿಗೆ ನೆರವಾಗಲು ವಾಣಿಜ್ಯ ಸಚಿವಾಲಯದ ವಾಣಿಜ್ಯ ಇಲಾಖೆಯು ತನ್ನ ವಿವಿಧ ಯೋಜನೆಗಳ ಮತ್ತು ಕಾರ್ಯಚಟುವಟಿಕೆಗಳ ಅಡಿಯಲ್ಲಿ ಹಲವಾರು ಅಂತಿಮ ಗಡುವಿನ ದಿನಗಳನ್ನು ಒಂದೋ ವಿಸ್ತರಿಸಿದೆ ಇಲ್ಲವೇ ಸಡಿಲಿಕೆ ಮಾಡಿದೆ. ವಾಣಿಜ್ಯ ಇಲಾಖೆಯು ಒದಗಿಸಿರುವ ಪ್ರಮುಖ ರಿಯಾಯತಿಗಳು ಈ ಕೆಳಗಿನಂತಿವೆ.:

  1. ವಿದೇಶಿ ವ್ಯಾಪಾರ ನೀತಿ  (ಎಫ್.ಟಿ.ಪಿ.) 2015-20 ರಡಿಯಲ್ಲಿ ಡಿ.ಜಿ.ಎಫ್.ಟಿ. ಸವಲತ್ತುಗಳು

1. ವಿದೇಶಿ ವ್ಯಾಪಾರ ನೀತಿ (ಎಫ್.ಟಿ.ಪಿ.) 2015-20 ರ ಅಡಿಯಲ್ಲಿ ಡಿ.ಜಿ.ಎಫ್.ಟಿ.ಯಿಂದ ಸವಲತ್ತುಗಳು

2020 ರ ಮಾರ್ಚ್ 31, ಬಳಿಕವೂ ಎಫ್.ಟಿ.ಪಿ. ವಿಸ್ತರಣೆ: ವಿದೇಶಿ ವ್ಯವಹಾರ ನೀತಿ (ಎಫ್.ಟಿ.ಪಿ.) 2015-2020 ಮತ್ತು 2020 ರ ಮಾರ್ಚ್ 31 ರವರೆಗೆ ಚಾಲ್ತಿಯಲ್ಲಿದ್ದ ಪ್ರಕ್ರಿಯೆಗಳ ಹ್ಯಾಂಡ್ ಬುಕ್ (ಎಚ್.ಬಿ.ಪಿ.) ನ್ನು ಒಂದು ವರ್ಷ ಕಾಲ 2021ರ ಮಾರ್ಚ್ 31 ರವರೆಗೆ ವಿಸ್ತರಿಸಲಾಗಿದೆ.

2. ಮುಂಗಡ ಅಧಿಕಾರಪತ್ರ ಮತ್ತು ಇ.ಪಿ.ಸಿ.ಜಿ. ಅಧಿಕಾರ ಪತ್ರ: ರಪ್ತು ಕರಾರು  ಅವಧಿ ವಿಸ್ತರಣೆ.

(i) ವಿಸ್ತರಿತ ರಫ್ತು ಕರಾರು ಅವಧಿ ಮುಕ್ತಾಯಗೊಂಡ ಪ್ರಕರಣಗಳಲ್ಲಿ ಮುಂಗಡ ಅಧಿಕಾರ ಪತ್ರ ನೀಡಿಕೆ ಮತ್ತು ಇ.ಪಿ.ಸಿ.ಜಿ. ಅಧಿಕಾರ ಪತ್ರ ನೀಡಿಕೆಗಳಿಗೆ ಸಂಬಂಧಿಸಿ ಆ ಅವಧಿ ಈಗಾಗಲೇ ಮುಕ್ತಾಯಗೊಂಡಿದ್ದರೆ ಅಥವಾ ಅದು 2020 ರ ಫೆಬ್ರವರಿ 1 ರಿಂದ 2020 ರ ಜುಲೈ 31 ರೊಳಗೆ ಮುಕ್ತಾಯಗೊಳ್ಳುವಂತಿದ್ದರೆ ರಪ್ತು ಕರಾರು ಅವಧಿಯನ್ನು ಆ ಅವಧಿ ಮುಕ್ತಾಯಗೊಳ್ಳುವಲ್ಲಿಂದ ಆರು ತಿಂಗಳ ಕಾಲ ವಿಸ್ತರಿಸಲಾಗಿದೆ

(ii) ಮುಂಗಡ ಅಧಿಕಾರ ಪತ್ರ ಮತ್ತು ಇ.ಪಿ.ಸಿ.ಜಿ. ಅಧಿಕಾರ ಪತ್ರಗಳಿಗೆ ಸಂಬಂಧಿಸಿದಂತೆ ಆಮದು ಅವಧಿ ಈಗಾಗಲೇ ಮುಕ್ತಾಯಗೊಂಡಿದ್ದರೆ ಅಥವಾ ಅದು 2020 ರ ಫೆಬ್ರವರಿ 1 ರಿಂದ 2020 ರ ಜುಲೈ 31 ರ ನಡುವೆ ಮುಕ್ತಾಯಗೊಳ್ಳುವುದಿದ್ದರೆ ಆಮದು ಅವಧಿಯನ್ನು ಆ ಅವಧಿ ಮುಕ್ತಾಯಗೊಳ್ಳುವ ದಿನಾಂಕದಿಂದ ಆರು ತಿಂಗಳ ಕಾಲ ವಿಸ್ತರಿಸಲಾಗುವುದು.

(iii) .ಪಿ.ಸಿ.ಜಿ.ಅಧಿಕಾರ ಪತ್ರಗಳಿಗೆ ಸಂಬಂಧಿಸಿ ಘಟಕ ಅವಧಿಯು ಘಟಕವಾರು ರಫ್ತು ಕರಾರಿನ ಅವಧಿ ಈಗಾಗಲೇ ಮುಕ್ತಾಯಗೊಂಡಿದ್ದರೆ ಅಥವಾ ಅಥವಾ ಅದು 2020ರ ಫೆಬ್ರವರಿ 1 ರಿಂದ 2020ರ ಜುಲೈ 31 ರ ನಡುವೆ ಮುಕ್ತಾಯಗೊಳ್ಳುವುದಿದ್ದರೆ ಘಟಕ ಅವಧಿಯನ್ನು ಆ ಅವಧಿ ಮುಕ್ತಾಯಗೊಳ್ಳುವ ದಿನಾಂಕದಿಂದ ಆರು ತಿಂಗಳ ಕಾಲ ವಿಸ್ತರಿಸಲಾಗುವುದು.

(iv) .ಪಿ.ಸಿ.ಜಿ. ಅಧಿಕಾರ ಪತ್ರಗಳಿಗೆ ಸಂಬಂಧಿಸಿ ಅಳವಡಿಕೆ ಪ್ರಮಾಣಪತ್ರವನ್ನು ಸಂಬಂಧಿತ ಆರ್.. ಎದುರು ಹಾಜರು ಪಡಿಸಲು ನೀಡಲಾದ ಅವಧಿ            ಈಗಾಗಲೇ ಮುಕ್ತಾಯಗೊಂಡಿದ್ದರೆ ಅಥವಾ ಅಥವಾ ಅದು 2020ರ ಫೆಬ್ರವರಿ 1 ರಿಂದ 2020ರ ಜುಲೈ 31 ರ ನಡುವೆ ಮುಕ್ತಾಯಗೊಳ್ಳುವುದಿದ್ದರೆ ಆ ಅವಧಿಯನ್ನು  ಮುಕ್ತಾಯಗೊಳ್ಳುವ ದಿನಾಂಕದಿಂದ ಆರು ತಿಂಗಳ ಕಾಲ ವಿಸ್ತರಿಸಲಾಗುವುದು.

 

  1. 2020 ರ ಮಾರ್ಚ್ 31 ರಾಚೆಗೂ ನೊಂದಾವಣೆ ಮತ್ತು ಸದಸ್ಯತ್ವ ಪ್ರಮಾಣ ಪತ್ರದ ಮಾನ್ಯತಾ ಅವಧಿ ವಿಸ್ತರಣೆ (ಆರ್.ಸಿ.ಎಂ.ಸಿ.): ಡಿ.ಜಿ.ಎಫ್.ಟಿ. ಯ ಪ್ರಾದೇಶಿಕ ಪ್ರಾಧಿಕಾರಿಗಳು (ಆರ್..ಗಳು) ಮಾನ್ಯತಾ ಅವಧಿ ಇರುವ ಆರ್.ಸಿ.ಎಂ.ಸಿ. ಗಳಿಗಾಗಿ (ಒಂದು ವೇಳೆ ಅವುಗಳ ಮಾನ್ಯತಾ ಅವಧಿ 2020 ರ ಮಾರ್ಚ್ 31 ರಂದು ಅಥವಾ ಅದಕ್ಕೆ ಮುಂಚಿತವಾಗಿ ಮುಕ್ತಾಯಗೊಂಡಿದ್ದರೆ ) 2020 ರ ಸೆಪ್ಟೆಂಬರ್ 30 ರವರೆಗೆ ಯಾವುದೇ ಪ್ರೋತ್ಸಾಹ ಧನ/ ಅಧಿಕಾರಪತ್ರಗಳಿಗಾಗಿ ಅರ್ಜಿದಾರರನ್ನು ಮಾನ್ಯತೆ ಇರುವ ಆರ್.ಸಿ.ಎಂ.ಸಿ.ಗಾಗಿ ಒತ್ತಾಯ ಮಾಡುವಂತಿಲ್ಲ.

4. ಭಾರತ ಯೋಜನೆ ಅಡಿಯಲ್ಲಿ ಸೇವಾ ರಫ್ತು (ಎಸ್...ಎಸ್.) ; ಎಸ್...ಎಸ್. ಅಡಿಯಲ್ಲಿ ವಾರ್ಷಿಕ ಕ್ಲೇಮುಗಳ ಸಲ್ಲಿಕೆಗಾಗಿರುವ ಕೊನೆಯ ದಿನಾಂಕ ಕ್ಲೇಮ್ ಅವಧಿಯು ಆಯಾ ಹಣಕಾಸು ವರ್ಷದ  ಕೊನೆಯ ದಿನಾಂಕದಿಂದ ೧೨ ತಿಂಗಳ ಕಾಲ ಆಗಿರುತ್ತದೆ. ಅಂದರೆ 2018-19ರ  ಕ್ಲೇಮುಗಳ ಅವಧಿ 2020 ರ ಮಾರ್ಚ್ 31 ಕ್ಕೆ ಅಂತ್ಯಗೊಳ್ಳುತ್ತದೆ, ಅದನ್ನೀಗ 2020 ರ ಡಿಸೆಂಬರ್ 31 ರವರೆಗೆ ವಿಸ್ತರಿಸಲಾಗಿದೆ.

5. ಭಾರತ ಯೋಜನೆಯಿಂದ ವ್ಯಾಪಾರಿ ರಫ್ತುಗಳು (ಎಂ...ಎಸ್.): ಎಂ...ಎಸ್. ಕ್ಲೇಮುಗಳ ಸಲ್ಲಿಕೆಗೆ ಅಂತಿಮ ದಿನವು ಪ್ರತೀ ಶಿಪ್ಪಿಂಗ್ ಬಿಲ್ಲಿನ ರಫ್ತು ಮಾಡುವ ಆದೇಶ (ಎಲ್...) ದಿನಾಂಕದಿಂದ ಒಂದು ವರ್ಷದವರೆಗೆ ಇರುತ್ತದೆ. ಮತ್ತು ವಿಳಂಬ ಅವಧಿ ಆ ಬಳಿಕವೂ ಎರಡು ವರ್ಷದವರೆಗೆ ಇರುತ್ತದೆ. ಎಲ್ಲಾ ಶಿಪ್ಪಿಂಗ್ ಬಿಲ್ಲುಗಳಿಗೆ ಎಂ...ಎಸ್. ಕ್ಲೇಮುಗಳ ಸಲ್ಲಿಕೆಗೆ ವಿಳಂಬ ರಹಿತವಾಗಿರುವ ಒಂದು ವರ್ಷದ ಅವಧಿಯನ್ನು ಅದು 2020 ರ ಫೆಬ್ರವರಿ 1 ರಂದು ಅಥವಾ ಆ ಬಳಿಕ ಮುಕ್ತಾಯಗೊಂಡಿದ್ದರೆ  ಮತ್ತು ಅದು 2020 ರ ಮೇ 31 ರೊಳಗೆ ಮುಕ್ತಾಯಗೊಳ್ಳುವುದಿದ್ದರೆ ಆ ಕೊನೆಯ ದಿನಾಂಕದಿಂದ ಆರಂಭಿಕ ಒಂದು ವರ್ಷದ ಅವಧಿಯನ್ನು ಮತ್ತೆ ಮೂರು ತಿಂಗಳು ವಿಸ್ತರಿಸಲಾಗಿದೆ.

6. ರಾಜ್ಯ ಮತ್ತು ಕೇಂದ್ರೀಯ ತೆರಿಗೆಗಳು ಮತ್ತು ಲೆವಿಗಳಲ್ಲಿ ರಿಯಾಯತಿ (ಆರ್..ಎಸ್.ಸಿ.ಟಿ.ಎಲ್.):2020 ರ ಜೂನ್ 30  2019 ರೊಳಗೆ  ಮಾರ್ಚ್ 7 ರಿಂದ 31 ಡಿಸೆಂಬರ್ ವರೆಗೆ ಸಲ್ಲಿಸಬೇಕಾದ  ಆರ್. .ಎಸ್.ಸಿ.ಟಿ.ಎಲ್ ಕ್ಲೇಮುಗಳಿಗೆ ಅವಧಿಯನ್ನು 2020 ರ ಡಿಸೆಂಬರ್ 31 ರ ವರೆಗೆ ವಿಸ್ತರಿಸಲಾಗಿದೆ.

7. ಸ್ಥಾನಮಾನ ಹೊಂದುವಿಕೆ: ಎಫ್.ಟಿ.ಪಿ.2015-20  ಅಡಿಯಲ್ಲಿ ಐ..ಸಿ. ಹೊಂದಿರುವವರಿಗೆ ಒದಗಿಸಲಾಗಿರುವ ಎಲ್ಲಾ ಸ್ಥಾನ ಮಾನ ಪ್ರಮಾಣ ಪತ್ರಗಳ ಮಾನ್ಯತಾ ಅವಧಿಯನ್ನು 2021 ರ ಮಾರ್ಚ್ 31 ರವರೆಗೆ ವಿಸ್ತರಿಸಲಾಗಿದೆ.

8. ಪ್ರಕ್ರಿಯಾ ಕೈಪಿಡಿಯಲ್ಲಿ ಒದಗಿಸಲಾಗಿರುವ ಪ್ರಸ್ತಾವನೆಯನ್ವಯ ರಿಯಾಯತಿಗಳು (ಎಚ್.ಬಿ.ಪಿ.)

  1. ಪ್ರಕ್ರಿಯಾ ಕೈಪಿಡಿ (ಎಚ್.ಪಿ.ಬಿ.) ಪ್ಯಾರಾ 4.12 (vi ) ಅಡಿಯಲ್ಲಿ ಮಾನ್ಯತಾ ಮಾನದಂಡಗಳನ್ನು 31.03.2020 ರವರೆಗೆ ಅಥವಾ ಮೂರು ವರ್ಷಗಳವರೆಗೆ , ಯಾವುದು ನಂತರವೋ  ಅದು ಮಾತ್ರವೇ ಮಿತಿಗೊಳಪಟ್ಟು ದೃಢೀಕರಿಸಲಾಗಿದೆ . ಇದನ್ನು ಸಡಿಲಿಕೆ ಮಾಡಿ  ವಿದೇಶಿ ವ್ಯವಹಾರ ನೀತಿಯ ವಿಸ್ತರಣಾ ದಿನಾಂಕ ಅಂತ್ಯಗೊಳ್ಳುವವರೆಗೆ  / 3  ವರ್ಷಗಳು ಯಾವುದು ನಂತರವೋ ಅದರವರೆಗೆ ವಿಸ್ತರಿಸಲಾಗಿದೆ.
  2. ಪ್ರಕ್ರಿಯಾ ಕೈಪಿಡಿ (ಎಚ್.ಪಿ.ಬಿ.) ಪ್ಯಾರಾ 4.41 () ಅಡಿಯಲ್ಲಿ ಆಮದಿಗೆ ಮುಂಗಡ ಅಧಿಕಾರಪತ್ರ ನೀಡಿಕೆ ಮಾನ್ಯತೆ 12 ತಿಂಗಳಿಗೆ ಮಿತಿಗೊಂಡಿರುತ್ತದೆ. ಈಗ ಈ ಆಮದಿನ ಅಧಿಕಾರ ಪತ್ರದ ಮಾನ್ಯತಾ ಅವಧಿಯು ತನ್ನಿಂದ ತಾನೇ ಆರು ತಿಂಗಳು ವಿಸ್ತರಿಸಲ್ಪಟ್ಟಿರುತ್ತದೆ. ಅಧಿಕಾರ ಪತ್ರಗಳ ಮಾನ್ಯತಾ ಅವಧಿಯು 2020 ರ ಫೆಬ್ರವರಿ 1 ರ ಬಳಿಕ ಮುಕ್ತಾಯಗೊಳ್ಳುತ್ತಿದ್ದರೆ ಈ ಪ್ರಯೋಜನ ಲಭಿಸುತ್ತದೆ. ಮಾನ್ಯತಾ ಅವಧಿಯ ಇನ್ನಷ್ಟು ವಿಸ್ತರಣೆ ಪ್ಯಾರಾ 4.41 (ಸಿ) ಅಡಿಯಲ್ಲಿ ಪಡೆಯಲು ಅವಕಾಶವಿದೆ.
  3. ಪ್ರಕ್ರಿಯಾ ಕೈಪಿಡಿ (ಎಚ್.ಪಿ.ಬಿ.) ಪ್ಯಾರಾ 4.42 () ಮತ್ತು (ಸಿ) ಅಡಿಯಲ್ಲಿ ರಫ್ತು ನಿಬಂಧನೆ (..) ಅವಧಿಯು ಮುಂಗಡ ಅಧಿಕಾರಪತ್ರ ಯೋಜನೆ ಅಡಿಯಲ್ಲಿ ಅನುಕ್ರಮವಾಗಿ 18 ಅಥವ 24 ತಿಂಗಳು ಆಗಿರುತ್ತದೆ. ಈ ಪ್ಯಾರಾದಡಿ ಇ.. ಅವಧಿಯು ತನ್ನಿಂದತಾನೇ (ಸ್ವಯಂ) 6 ತಿಂಗಳು ವಿಸ್ತರಣೆಯಾಗುತದೆ. 2020 ರ ಫೆಬ್ರವರಿ 1 ರ ಬಳಿಕ ಅವಧಿ ತೀರುವ ಅಧಿಕಾರ ಪತ್ರಗಳಿಗೆ ಈ ಸವಲತ್ತು ದೊರೆಯುತ್ತದೆ. ಎಚ್.ಬಿ.ಪಿ. 4.42 () ಮತ್ತು (ಎಫ್) ಅನ್ವಯ ಮುಂದಿನ ವಿಸ್ತರಣೆಯ ಅವಕಾಶ ಈ ಅವಧಿ ತೀರಿದ ಬಳಿಕವೂ  ಲಭ್ಯ ಇರುತ್ತದೆ.
  4. ಪ್ರಕ್ರಿಯಾ ಕೈಪಿಡಿ (ಎಚ್.ಪಿ.ಬಿ.) ಪ್ಯಾರಾ 4.42 (ಡಿ) ಅಡಿಯಲ್ಲಿ 4 ಜೆ ಅಡಿಯಲ್ಲಿ ಪಟ್ಟಿ ಮಾಡಲಾದ ವಸ್ತುಗಳಿಗೆ ಇ.. ವಿಸ್ತರಣೆಯು ಈ ಮೊದಲು ಇ..ದಲ್ಲಿಒದಗಿಸಲಾದ ಕಾಲಾವಧಿಯ ಅರ್ಧದಷ್ಟಾಗಿರುತ್ತದೆ. ಅಪೆಂಡಿಕ್ಸ್ 4 ಜೆ. ಅಡಿಯಲ್ಲಿ ಬರುವ ವಸ್ತುಗಳಿಗೆ 2020 ರ ಫೆಬ್ರವರಿ 1  ರಂದು ಅದರ ಅಧಿಕಾರ ಪತ್ರಗಳ ಅವಧಿ ಮುಕ್ತಾಯಗೊಂಡಿದ್ದರೆ ಇ.. ಅವಧಿಯು ಈಗ ತನ್ನಿಂದ ತಾನೇ ಆರು ತಿಂಗಳು ವಿಸ್ತರಣೆಯಾಗುತ್ತದೆ
  5. ಪ್ರಕ್ರಿಯಾ ಕೈಪಿಡಿ (ಎಚ್.ಪಿ.ಬಿ.) ಪ್ಯಾರಾ 4.80 (ಸಿ)  (ಡಿ) (ಅಡಿಯಲ್ಲಿ ಪ್ರದರ್ಶನ ರಫ್ತಿಗೆ  ಕಾಲಾವಕಾಶವನ್ನು 60/90/120/45/365 ದಿನಗಳಿಗೆ ಮಿತಿಗೊಳಿಸಲ್ಪಟ್ಟಿರುತ್ತದೆ (ಅಲ್ಲಿ ಉಲ್ಲೇಖಿತವಾಗಿರುವ ನಿಯಮಗಳನ್ವಯ) . ಇದು ಅದರಲ್ಲಿ ಬಳಸಲಾದ ಅಮೂಲ್ಯ ಲೋಹಗಳ ಒಳಸುರಿಗಳ ಮರುಪೂರಣಕ್ಕೆ ಸಂಬಂಧಿಸಿದುದಾಗಿರುತ್ತದೆ. ಎಚ್.ಬಿ.ಪಿ.ಯ  ಈ ಪ್ಯಾರಾದಡಿ ಉಲ್ಲೇಖಿಸಲಾದ ಎಲ್ಲಾ ಅವಧಿಗಳೂ ಈಗ 2020 ರ ಫೆಬ್ರವರಿ 1 ರ ಬಳಿಕ ಅವಧಿ ತೀರುವ ಪ್ರಕರಣಗಳಲ್ಲಿ ಆರು ತಿಂಗಳು ವಿಸ್ತರಣೆ ಪಡೆಯುತ್ತವೆ.
  6. ಪ್ರಕ್ರಿಯಾ ಕೈಪಿಡಿ (ಎಚ್.ಪಿ.ಬಿ.) ಪ್ಯಾರಾ 4.82 (ಸಿಮತ್ತು (ಡಿ), 4.83 (ಬಿ) , 4.84 (ಸಿ) ಅಡಿಯಲ್ಲಿ ಮರುಪೂರಣ ಯೋಜನೆ/ಖರೀದಿ / ಸಾಲ ಆಧಾರದಲ್ಲಿ ರಫ್ತು ಅನುಷ್ಟಾನಕ್ಕೆಒದಗಿಸಲಾಗಿದ್ದ ಅವಧಿಯು 90, 180,ದಿನಗಳಿಗೆ ಅಥವಾ ಸಾಲ ನಿಬಂಧನೆಗಳಿಗೆ ಅನುಗುಣವಾಗಿ 120ದಿನಗಳು   150 ದಿನಗಳು.. ಇತ್ಯಾದಿಗಳಂತಿತ್ತು. ಎಚ್.ಬಿ.ಪಿ.ಯ ಈ ಪ್ಯಾರಾಗಳಡಿಯಲ್ಲಿ ಉಲ್ಲೇಖಿಸಿದ ಎಲ್ಲಾ ಅವಧಿಗಳೂ 2020 ರ ಫೆಬ್ರವರಿ 1 ರ ಬಳಿಕ ಅವಧಿ ತೀರುವ ಮತ್ತು ಆ ಅವಕಾಶ ನೀಡಿರುವ ಪ್ರಕರಣಗಳಲ್ಲಿ ಅವಧಿಯು ಆರು ತಿಂಗಳು ಕಾಲ ವಿಸ್ತರಣೆಯಾಗಲಿದೆ.
  7. ಪ್ರಕ್ರಿಯಾ ಕೈಪಿಡಿ (ಎಚ್.ಪಿ.ಬಿ.) ಪ್ಯಾರಾ 4.85 (ಬಿ) ಮತ್ತು (ಸಿ) ಅಡಿಯಲ್ಲಿ , ಮುತ್ತುರತ್ನಗಳು  ಮತ್ತು ಆಭರಣಗಳಿಗೆ ಸಂಬಂಧಿಸಿ  ಮುಂಗಡ ಅಧಿಕಾರಪತ್ರ ಅವಧಿ ಅನುಕ್ರಮವಾಗಿ 120 ಮತ್ತು 90 ದಿನಗಳಾಗಿರುತ್ತವೆ. ಎಲ್ಲಾ ಇ.. ಅವಧಿಗಳನ್ನು ಈಗ ಈ ಪ್ಯಾರಾಗಳಡಿಯಲ್ಲಿ ಬರುವ ಪ್ರಕರಣಗಳಲ್ಲಿ ಆರು ತಿಂಗಳು ವಿಸ್ತರಣೆ ಮಾಡಲಾಗಿದೆ. 2020  ರ ಫೆಬ್ರವರಿ 1 ರ ಬಳಿಕ  ಅವಧಿ ತೀರುವ ಪ್ರಕರಣಗಳಿಗೆ ಇದು ಅನ್ವಯಿಸುತ್ತದೆ

ಇದರ ಜೊತೆಗೆ ಕೋವಿಡ್ -19 ರ ಹಿನ್ನೆಲೆಯಲ್ಲಿ ಇತರ ಇಲಾಖೆಗಳ ಮಾಹಿತಿ ಮತ್ತು ಮನವಿ ಪಡೆದು, ಹಿಮ್ಮಾಹಿತಿ ಆಧರಿಸಿ ಈ ಕೆಳಗಿನ ಬದಲಾವಣೆಗಳನ್ನು ಜಾರಿಗೆ ತರಲಾಗಿದೆ

  1. ಮುತ್ತುರತ್ನಗಳು ಮತ್ತು ಆಭರಣಗಳಿಗೆ ಸಂಬಂಧಿಸಿ ಪ್ಯಾರಾ 4.59  () ಅಡಿಯಲ್ಲಿ ಮರುಪೂರಣ ಯೋಜನೆಯನ್ನು 6 ತಿಂಗಳು ವಿಸ್ತರಿಸಲಾಗಿದೆ.
  2. ವಜ್ರ ರಫ್ತಿಗೆ ಮತ್ತು ವಿದೇಶಿ ಖರೀದಿದಾರ ಜಿ ಮತ್ತು ಜೆ ಕ್ಷೇತ್ರದಲ್ಲಿ ಪೂರೈಸುವ ರಫ್ತಿಗೆ ಪ್ಯಾರಾ 4.75 (ಸಿ) ಮತ್ತು ಪ್ಯಾರಾ 4.77 (ಸಿ) ಅಡಿಯಲ್ಲಿ ಆರು ತಿಂಗಳು ವಿಸ್ತರಣೆ ಒದಗಿಸಲಾಗಿದೆ.
  3. ಕಂದಾಯ ಇಲಾಖೆಯ ಅನುಮೋದನೆ ಮೇರೆಗೆ ಮುಂಗಡ ಅಧಿಕಾರ ಪತ್ರದಡಿ ಐ.ಜಿ.ಎಸ್.ಟಿ ಮತ್ತು ಪರಿಹಾರ ಸೆಸ್ ವಿನಾಯಿತಿ , .ಪಿ.ಸಿ.ಜಿ. ಯೋಜನೆ ಮತ್ತು ಇ..ಯು.ಗಳನ್ನು 31.03.2021 ರವರೆಗೆ ಅಧಿಸೂಚಿಸಲಾಗಿದೆ.

 

9. ಪ್ರಕ್ರಿಯಾ ಕೈಪಿಡಿ (ಎಚ್.ಪಿ.ಬಿ.)ಯ ಅಧ್ಯಾಯ 6-..ಯು/.ಎಚ್.ಟಿ.ಪಿ./ಬಿ.ಟಿ.ಪಿ

  1. ಕೈಪಿಡಿ (ಎಚ್.ಪಿ.ಬಿ.)ಯ ಪ್ಯಾರಾ 6.01(ಬಿ)(ii) ಅನ್ವಯ ಎಫ್.ಟಿ.ಪಿ. ಅಡಿಯಲ್ಲಿ ನೀಡಲಾದ ಎಲ್..ಪಿ/ಎಲ್...ಗಳ ಆರಂಭಿಕ ಮಾನ್ಯತಾ ಅವಧಿ 2 ವರ್ಷ  ಇರುತ್ತದೆ. ಇಂತಹ ಮಾನ್ಯತಾ ಅವಧಿಯನ್ನು ಸಂಬಂಧಿತ ಪ್ರಾಧಿಕಾರವು ವಿಸ್ತರಿಸಬಹುದು.ಈಗ ಅಂತಹ ಎಲ್ಲಾ ಎಲ್..ಪಿ.ಗಳು/ಎಲ್..ಎಲ್.ಗಳು ಅವುಗಳ ಮೂಲ ಅಥವಾ ವಿಸ್ತರಿತ ಮಾನ್ಯತಾ ಅವಧಿ 2020 ರ ಮಾರ್ಚ್ 1 ರಂದು ಅಥವಾ ಆ  ಬಳಿಕ ಮುಕ್ತಾಯಗೊಳ್ಳುವುದಿದ್ದರೆ , ಅವುಗಳ ಅವಧಿ 2020 ರ ಡಿಸೆಂಬರ್ 31 ರವರೆಗೆ ಚಾಲ್ತಿಯಲ್ಲಿರುತ್ತದೆ ಎಂದು ಪರಿಗಣಿಸತಕ್ಕದ್ದು
  2. ಪ್ಯಾರಾ 6.06 (ಸಿ) ಅಡಿಯಲ್ಲಿ : ಕೆಲವು ಸೂಕ್ಷ್ಮ ಉತ್ಪಾದನೆಗಳ ಪ್ರಕರಣಗಳಲ್ಲಿ ರಫ್ತು ಬಾಧ್ಯತೆಗಾಗಿ ಅಲ್ಪಾವಧಿಗೆ ಅವಕಾಶ ನೀಡಲು ವಿಶೇಷ ನಿಯಮಗಳನ್ನು ಅಳವಡಿಸಲಾಗಿದೆ. ಅಂತಹ ಪ್ರಕರಣಗಳಲ್ಲಿ ರಫ್ತು ಬಾಧ್ಯತಾ ಅವಧಿ 2020 ರ ಮಾರ್ಚ್ 1 ರಿಂದ 2020 ರ ಜೂನ್ 30 ಅವಧಿಯಲ್ಲಿ ಅಂತ್ಯಗೊಳ್ಳುವುದಿದ್ದಲ್ಲಿ ಅದನ್ನು 2020 ರ ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ.

10. ಪ್ರಕ್ರಿಯಾ ಕೈಪಿಡಿ (ಎಚ್.ಪಿ.ಬಿ.)ಯ ಅಧ್ಯಾಯ ೭-ಪರಿಗಣಿತ ರಫ್ತುಗಳು:ಎಚ್.ಪಿ.ಬಿ.ಯ  ಪ್ಯಾರಾ 7.05 () ಅಡಿಯಲ್ಲಿ ಟಿ..ಡಿ/ ಹಿಂಪಡೆಯುವಿಕೆಗೆ ಮರುಪಾವತಿ  ಅರ್ಜಿಯನ್ನು ಪೂರೈಕೆ ಅನುಷ್ಟಾನಗೊಂಡ ದಿನಾಂಕದಿಂದ 12 ತಿಂಗಳೊಳಗೆ ಸಲ್ಲಿಸಬಹುದು. ಈಗ ಇಂತಹ ಎಲ್ಲಾ ಪ್ರಕರಣಗಳಲ್ಲಿ ಮೇಲ್ಕಾಣಿಸಿದ ದಿನಾಂಕಗಳು 2020 ರ ಮಾರ್ಚ್ 1 ಅಥವಾ ಆ ಬಳಿಕ ಬರುತ್ತವಾದರೆ ಟಿ..ಡಿ/ ಹಿಂಪಡೆಯುವಿಕೆಗೆ ಮರುಪಾವತಿ  ಅರ್ಜಿಯನ್ನು ಸಲ್ಲಿಕೆ ದಿನಾಂಕವನ್ನು ಈಗ 2020 ರ ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ ಎಂದು ಪರಿಗಣಿಸತಕ್ಕದ್ದು.

11. ಪ್ರಕ್ರಿಯಾ ಕೈಪಿಡಿ (ಎಚ್.ಪಿ.ಬಿ.)ಯ ಅಧ್ಯಾಯ 7 (): ಸಾರಿಗೆ ಮತ್ತು ಮಾರುಕಟ್ಟೆ ಸಹಾಯ(ಟಿ.ಎಂ..) ಯೋಜನೆ: ಎಚ್.ಬಿ.ಪಿ.ಯ  7A.01(ಡಿ) ಪ್ಯಾರಾ ಅನ್ವಯ , ಟಿ.ಎಂ..ಗಾಗಿರುವ ಕ್ಲೇಮಿನ ಅರ್ಜಿಯನ್ನು ತ್ರೈಮಾಸಿಕ ಅಂತ್ಯಗೊಂಡ ದಿನಾಂಕದಿಂದ ಒಂದು ವರ್ಷದೊಳಗೆ ಸಲ್ಲಿಸಬಹುದು. ಈಗ 2019  ರ ಮಾರ್ಚ್ 31 ಕ್ಕೆ ಮತ್ತು 2019 ರ ಜೂನ್ 30 ಕ್ಕೆ ಅಂತ್ಯಗೊಳ್ಳುವ ತ್ರೈಮಾಸಿಕದ ಕ್ಲೇಮುಗಳ ಮರುಪಾವತಿಗಾಗಿ ಅರ್ಜಿಯನ್ನು 2020 ರ ಸೆಪ್ಟೆಂಬರ್ 30 ರವರೆಗೆ ಸಲ್ಲಿಸಬಹುದು.

12. ಪ್ರಕ್ರಿಯಾ ಕೈಪಿಡಿ (ಎಚ್.ಪಿ.ಬಿ.)ಯ ಅಧ್ಯಾಯ 9-ಇತರ ವಿಷಯಗಳು: ಎಚ್.ಬಿ.ಪಿ.ಯ ಪ್ಯಾರಾ 9.02 ಅನ್ವಯ, ವಿಳಂಬಕ್ಕೆ ಸಂಬಂಧಿಸಿ ನಿಬಂಧನೆಗಳನ್ನು ಅಳವಡಿಸಿಕೊಳ್ಳಲಾಗಿದೆ. ಕೊನೆಯ ದಿನಾಂಕದ ಬಳಿಕ ಸಲ್ಲಿಕೆಯಾಗುವ ಅರ್ಜಿಗಳ ವಿಷಯದಲ್ಲಿ ಅಂತಹ ಅರ್ಜಿಗಳಿಗೆ ಈ ನಿಬಂಧನೆಗಳು ಅನ್ವಯಿಸುತ್ತವೆ. ಈಗ ವಿಳಂಬವಾಗಿ ಅರ್ಜಿಗಳನ್ನು ಸಲ್ಲಿಕೆ ಮಾಡುವಂತಹ ಸಂದರ್ಭಗಳಲ್ಲಿ ವಿಳಂಬ ಸಲ್ಲಿಕೆಯ ಕೊನೆಯ ದಿನಾಂಕವನ್ನು ಕೂಡಾ ಮೇಲೆ ನಿಗದಿತ ಅರ್ಜಿ ಸಲ್ಲಿಕೆಗೆ ಅವಕಾಶ ವಿಸ್ತರಿಸಿರುವ ರೀತಿಯಲ್ಲೇ ವಿಸ್ತರಿಸಲಾಗಿದೆ.

  1. ವಿಶೇಷ ಆರ್ಥಿಕ ವಲಯದಲ್ಲಿ (ಎಸ್..ಝಡ್.) ಘಟಕಗಳಿಗೆ ಸವಲತ್ತುಗಳು
  1. ಎಸ್..ಝಡ್ ಅಭಿವೃದ್ದಿಗಾರರು/ಸಹ ಅಭಿವೃದ್ದಿಗಾರರು/ ಘಟಕಗಳಿಗೆ ಸಡಿಲಿಕೆ, ರಿಯಾಯತಿಗಳಿಗೆ ಸಂಬಂಧಿಸಿ ಈ ಕೆಳಗಿನ ಕ್ರಮಗಳನ್ನು , ನಿಯಮಗಳನ್ನು ಅನುಸರಿಸಿದ್ದರೆ ಆಗ ಅವುಗಳಿಗೆ ಸಡಿಲಿಕೆ ಮಾಡಬಹುದು. :
    1.   ತ್ರೈಮಾಸಿಕ ಪ್ರಗತಿ ವರದಿ (ಕ್ಯು.ಪಿ.ಆರ್.) ಅಗತ್ಯವನ್ನು ಅಭಿವೃದ್ದಿಗಾರರು/ ಸಹ ಅಭಿವೃದ್ದಿಗಾರರು ಸ್ವತಂತ್ರ ಚಾರ್ಟರ್ಡ್ ಇಂಜಿನಿಯರ ಅವರಿಂದ ದೃಢೀಕರಿಸಿ ಸಲ್ಲಿಸಿರಬೇಕು.
    2. ಸಾಫ್ಟೆಕ್ ಅರ್ಜಿಯನ್ನು ಐ.ಟಿ/.ಟಿ..ಎಸ್. ಘಟಕಗಳಿಂದ ಭರ್ತಿ ಮಾಡಲ್ಪಟ್ಟಿರಬೇಕು
    3. ಎಸ್..ಝಡ್ ಘಟಕಗಳಿಂದ ವಾರ್ಷಿಕ ಸಾಧನಾ ವರದಿಗಳು (.ಪಿ.ಆರ್.) ಸಲ್ಲಿಕೆಯಾಗಿರಬೇಕು

ಎಲ್ಲಾ ವಿಸ್ತರಣಾ ಅನುಮೋದನಾ ಪತ್ರಗಳು (ಎಲ್...) ಮತ್ತು ಇತರ ನಿಯಮ ಬದ್ದತೆಗಳನ್ನು ಕಾಲಮಿತಿಯಾಧಾರದಲ್ಲಿ ಇಲೆಕ್ಟ್ರಾನಿಕ್ ಮಾದರಿಯಲ್ಲಿ ಒದಗಿಸುವಂತೆ ಅಭಿವೃದ್ದಿ ಆಯುಕ್ತರಿಗೆ ನಿರ್ದೇಶನಗಳನ್ನು ನೀಡಲಾಗಿದೆ. ಇಲೆಕ್ಟ್ರಾನಿಕ್ ಮಾದರಿಯಲ್ಲಿ ವಿಸ್ತರಣೆ ಒದಗಿಸುವುದು ಸಾಧ್ಯವಾಗದ ಪ್ರಕರಣಗಳಿದ್ದಲ್ಲಿ ಅಥವಾ ದೈಹಿಕವಾಗಿ ಸಭೆ / ಮಾತುಕತೆ ನಡೆಯಬೇಕಾದ ಆವಶ್ಯಕತೆ ಇರುವಲ್ಲಿ ಅಭಿವೃದ್ದಿ ಆಯುಕ್ತರು ಈ ಅವ್ಯವಸ್ಥೆಯ ಅವಧಿಯಲ್ಲಿ ಅಭಿವೃದ್ದಿಗಾರರು/ ಸಹ ಅಭಿವೃದ್ದಿಗಾರರು/ ಘಟಕಗಳು ಮಾನ್ಯತೆ ಅವಧಿ ಮುಕ್ತಾಯಗೊಳ್ಳುವುದರಿಂದ ಯಾವುದೇ ಸಂಕಷ್ಟ ಅನುಭವಿಸದಂತೆ ಖಾತ್ರಿಪಡಿಸಿಕೊಳ್ಳಬೇಕು. ಮತ್ತು ತಾತ್ಕಾಲಿಕ ವಿಸ್ತರಣೆಯನ್ನು ಯಾವುದೇ ಪೂರ್ವಗ್ರಹ ಇಲ್ಲದೆ 30-6-2020 ರವರೆಗೆ ಒದಗಿಸಬೇಕು. ಅಥವಾ ಈ ವಿಷಯದಲ್ಲಿ ಇಲಾಖೆಯ ಮುಂದಿನ ಸೂಚನೆಗಳನ್ನು ಅನುಸರಿಸಬೇಕು. ಇವೆರಡರಲ್ಲಿ ಯಾವುದು ಮೊದಲೋ ಅದನ್ನು ಜಾರಿಗೆ ತರಬೇಕು. ಇಂತಹ ವಿಸ್ತರಣೆಗಳು ಈ ಕೆಳಗಿನ ಮಾದರಿಯ ಪ್ರಕರಣಗಳನ್ನು ಒಳಗೊಂಡಿರುತ್ತವೆ.

    1. ಅಭಿವೃದ್ದಿಗಾರರು/ ಸಹ ಅಭಿವೃದ್ದಿಗಾರರು ಎಸ್..ಝಡ್.ಗಳನ್ನು ಅಭಿವೃದ್ದಿಪಡಿಸುತ್ತಿರುವ ಪ್ರಕ್ರಿಯೆಯಲ್ಲಿ ತೊಡಗಿದ್ದರೆ ಮತ್ತು ಅವುಗಳ ಕಾರ್ಯಾಚರಣೆಯಲ್ಲಿ ನಿರತರಾಗಿದ್ದರೆ
    2. ಎನ್..ಎಫ್. ಮೌಲ್ಯಮಾಪನಕ್ಕೆ ಅವುಗಳ 5 ವರ್ಷಗಳ ಗಡುವನ್ನು ಪೂರ್ಣಗೊಳಿಸುವ ಹಂತದಲ್ಲಿರುವ ಘಟಕಗಳಿಗೆ.
    3. ಇನ್ನಷ್ಟೇ ಕಾರ್ಯಾಚರಣೆ ಆರಂಭಿಸಲಿರುವ ಘಟಕಗಳು
  1. ಅದೇ ರೀತಿ ರಫ್ತು ಆಧಾರಿತ ಘಟಕ (..ಯು.) ಗಳಿಗೆ ಸಂಬಂಧಿಸಿ ಕೂಡಾ ಎಲ್..ಪಿ.ಗಳ ಮಾನ್ಯತಾ ಅವಧಿ ಮುಗಿದಿದ್ದರೆ ಲಾಕ್ ಡೌನ್ ಅವಧಿಯಲ್ಲಿ ಇ..ಯು.ಗಳಿಗೆ ಯಾವುದೇ ಸಂಕಷ್ಟ ಎದುರಾಗದಂತೆ ಖಾತ್ರಿಪಡಿಸಬೇಕು ಮತ್ತು ಎಲ್..ಪಿ. ಗಳ ಅವಧಿ ವಿಸ್ತರಣೆಯನ್ನು ಕಾಲಮಿತಿ ಆಧಾರದಲ್ಲಿ ಇಲೆಕ್ಟ್ರಾನಿಕ್ ಮಾದರಿಯಲ್ಲಿ ಒದಗಿಸಬೇಕು ಎಂದು ಡಿ.ಸಿ.ಗಳಿಗೆ ನಿರ್ದೇಶನ ನೀಡಲಾಗಿದೆ. ಇಲೆಕ್ಟ್ರಾನಿಕ್ ಮಾದರಿಯಲ್ಲಿ ವಿಸ್ತರಣೆ ನೀಡಲು ಸಾಧ್ಯವಾಗದೇ ಇದ್ದಲ್ಲಿ ಅಥವಾ ವ್ಯಕ್ತಿಗತ ಸಭೆ ಅವಶ್ಯ ಎಂದಾದಲ್ಲಿ , ಅಂತಹ ಪ್ರಕರಣಗಳಲ್ಲಿ ಇ..ಯು.ಗಳ ಮಾನ್ಯತಾ ಅವಧಿಯನ್ನು ಸೂಕ್ತ ರೀತಿಯಲ್ಲಿ 2020 ರ ಜೂನ್ 30 ರವರೆಗೆ ಮುಂದುವರೆಸಬಹುದು. ಇಂತಹ ವಿಸ್ತರಣೆಗಳು ಈ ಕೆಳಗಿನ ಮಾದರಿಯ ಪ್ರಕರಣಗಳನ್ನು ಒಳಗೊಳ್ಳುತ್ತವೆ.  
    1.   ಹಾಲಿ ಇ..ಯು.ಗಳ ಅನುಮತಿ ಪತ್ರ (ಎಲ್..ಪಿ.) ಅದರ ಎನ್.ಎಫ್.. ಲೆಕ್ಕಾಚಾರದ ಐದು ಅವಧಿಗಳನ್ನು ಲಾಕ್ ಡೌನ್ ಅವಧಿಯಲ್ಲಿ ಪೂರೈಸಿದ್ದರೆ.
    2. ..ಯು.ಗಳ ಎಲ್..ಪಿ.ಯ ಮಾನ್ಯತಾ ಅವಧಿ ಲಾಕ್ ಡೌನ್ ಅವಧಿಯಲ್ಲಿ ಮುಕ್ತಾಯಗೊಳ್ಳುತ್ತಿದ್ದರೆ.
  2. ಎಸ್..ಝಡ್ ನಲ್ಲಿರುವ ಸಿ.ಟಿ/.ಟಿ..ಎಸ್. ಘಟಕಗಳ ಜೊತೆ ಐ.ಟಿ/.ಟಿ..ಎಸ್.ಯೇತರ ಘಟಕಗಳು ಕೂಡಾ ಮನೆಯಿಂದ ಕೆಲಸ ಮಾಡುವುದಕ್ಕಾಗಿ ಡೆಸ್ಕ್ ಟಾಪ್, / ಲ್ಯಾಪ್ ಟಾಪ್ ಗಳನ್ನು ಎಸ್..ಝಡ್. ನಿಂದ ಹೊರಗೆ ತೆಗೆದುಕೊಂಡು ಹೋಗಲು ಅವಕಾಶ ನೀಡಬಹುದು.
  3. ಮುಖಗವಸುಗಳು , ಸ್ಯಾನಿಟೈಸರ್ ಗಳು, ಗೌನುಗಳು ಮತ್ತು ಇತರ ಸುರಕ್ಷಾ, ಪ್ರತಿಬಂಧಕ ಉತ್ಪನ್ನಗಳು/ ಸಲಕರಣೆಗಳಂತಹ ಅವಶ್ಯಕ ಸಾಮಗ್ರಿಗಳನ್ನು ತಯಾರಿಸುತ್ತಿರುವ ಸಂಸ್ಥೆಗಳಿಗೆ ಯು..ಸಿ.ಯಿಂದ ಘಟನೋತ್ತರ  ಅನುಮೋದನೆ ನೀಡಲು ಅಭಿವೃದ್ದಿ ಅಯುಕ್ತರಿಗೆ ಅಧಿಕಾರ ನೀಡಲಾಗಿದೆ.
  4. ಎಲ್ಲಾ ಡಿ.ಸಿ.ಗಳಿಗೆ ಇಲೆಕ್ಟ್ರಾನಿಕ್ ಕೆಲಸದ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವಂತೆ ಮತ್ತು ಔಷಧಿ, ಅವಶ್ಯಕ ಸಾಮಗ್ರಿಗಳು ಇತ್ಯಾದಿಗಳನ್ನು ತಯಾರಿಸುವ ಘಟಕಗಳಿಗೆ ಬೆಂಬಲ ವಿಸ್ತರಿಸುವಂತೆ ಹಾಗು ಕೋವಿಡ್ ಮಾರ್ಗದರ್ಶಿಗಳನ್ನು ಅನುಸರಿಸುವಂತೆ ಸೂಕ್ಷ್ಮತ್ವವನ್ನು ಮೂಡಿಸಲಾಗಿದೆ.
  5. ಇಲಾಖೆಯು , ಅಭಿವೃದ್ದಿ ಆಯುಕ್ತರೊಂದಿಗೆ ಸಮನ್ವಯದಲ್ಲಿ ಪರಿಸ್ತಿತಿಯನ್ನು ದೈನಂದಿನ ಆಧಾರದಲ್ಲಿ ಅವಲೋಕಿಸುತ್ತಿದೆ. ಇಂದಿನವರೆಗೆ ಔಷಧಿ, ವೈದ್ಯಕೀಯ ಸಲಕರಣೆಗಳು , ಇತ್ಯಾದಿ ಜೀವನಾವಶ್ಯಕ ವಸ್ತುಗಳ ಉತ್ಪಾದನೆಗಳಲ್ಲಿ ತೊಡಗಿಕೊಂಡಿರುವ 403 ಘಟಕಗಳು ಕಾರ್ಯಾಚರಿಸುತ್ತಿವೆ. ಇದರ ಜೊತೆಗೆ ಐ.ಟಿ./.ಟಿ..ಎಸ್. ಗಳಲ್ಲಿ ಮತ್ತು ಇತರ ವಲಯಗಳಲ್ಲಿರುವ 2055 ಘಟಕಗಳಿಗೆ ಮನೆಯಿಂದ ಕೆಲಸ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ.
  1. .ಸಿ.ಜಿ.ಸಿ.ಯಿಂದ ಸವಲತ್ತುಗಳು
  1. ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಅಂತಿಮ ದಿನಾಂಕ ಹೊಂದಿರುವ ವಿಮಾ ಸುರಕ್ಷೆಯಡಿ ಘೋಷಣೆಗಳು, ವಿಸ್ತರಣೆ ಅರ್ಜಿಗಳು, ಡಿಫಾಲ್ಟ್ ವರದಿಗಳು . ಇತ್ಯಾದಿ ರಿಟರ್ನ್ ಗಳ ಸಲ್ಲಿಕೆ ಅವಧಿಯನ್ನು 2020 ರ ಮೇ 31 ರವರೆಗೆ ವಿಸ್ತರಿಸಲಾಗಿದೆ.
  2. ಈ ಅವಧಿಯಲ್ಲಿ ಕ್ಲೇಮು/ಉತ್ತರಗಳನ್ನು ಸಲ್ಲಿಸಲು ಅವಧಿಯನ್ನು 2020 ರ ಜೂನ್ 30 ರ ವರೆಗೆ ವಿಸ್ತರಿಸಲಾಗಿದೆ
  3. ಮುಂಗಡ ಮಿತಿ ಅರ್ಜಿ ಶುಲ್ಕವನ್ನು 2020 ರ ಜೂನ್ 30 ರ ವರೆಗೆ ಮನ್ನಾ ಮಾಡಲಾಗಿದೆ.
  4. ಪಾಲಿಸಿ  ಪ್ರಸ್ತಾಪ ಪ್ರಕ್ರಿಯಾ ಶುಲ್ಕ 2020 ರ ಮಾರ್ಚ್ 1 ರಿಂದ ಜೂನ್ 30 ರವರೆಗೆ ನವೀಕರಣಕ್ಕೆ ಬಾಕಿ ಇರುವ ಪಾಲಿಸಿಗಳಿಗೆ ಶೇಖಡಾ 50 ರಷ್ಟು ಕಡಿತ.
  5. ಮೊದಲು ಒಪ್ಪಿಕೊಳ್ಳಲಾದ ಶಿಪ್ ಮೆಂಟ್ ಗೆ ಖರೀದಿದಾರರಿಂದ ಪಾವತಿ ದಿನ ವಿಸ್ತರಣೆ ರಫ್ತುದಾರರ ವಿವೇಚನಾಧಿಕಾರಕ್ಕೆ.
  6. ನಿಗದಿತ ಸ್ಥಳ ತಲುಪಿದ ಆದರೆ ಆ ದೇಶಗಳಲ್ಲಿ ಲಾಕ್ ಡೌನ್ ಕಾರಣಕ್ಕೆ   ಸಾಗರೋತ್ತರ  ಖರೀದಿದಾರರು ಶಿಪ್ ಮೆಂಟ್ ( ಮರು ಮಾರಾಟ/ ಮರು ಆಮದು/ ಅಥವಾ ಕೈಬಿಡುವ) ಪಡೆದುಕೊಂಡಿಲ್ಲದೇ ಇದ್ದರೆ , ಅದರ ಬಗ್ಗೆ ವಿವೇಚನಾಧಿಕಾರ ಬಳಸಿ ನಿರ್ಧಾರ
  7. ವಿಮಾ ಸುರಕ್ಷೆಯಡಿ ಕ್ಲೇಮು ಅರ್ಹತೆ ಅವಧಿ ಈಗಿರುವ 4  ತಿಂಗಳಿಂದ  1  ತಿಂಗಳ ಅವಧಿಗೆ ಇಳಿಕೆ.

 

  1. ಕೃಷಿ ರಫ್ತುದಾರರಿಂದ , ಕೃಷಿ ಮತ್ತು ಸಂಸ್ಕರಿತ ಉತ್ಪನ್ನಗಳ ರಫ್ತು ಅಭಿವೃದ್ದಿ ಪ್ರಾಧಿಕಾರ (.ಪಿ..ಡಿ..) ದಿಂದ ಸವಲತ್ತುಗಳು
  1. ರಫ್ತುದಾರರನ್ನು ಉತ್ತೇಜಿಸಲು ಎ.ಪಿ..ಡಿ..ಯು ಪ್ಯಾಕ್ ಹೌಸ್ ಗಳುನೆಲಗಡಲೆ ಸಂಸ್ಕರಣ ಘಟಕ, ಮಾಂಸ ಘಟಕಗಳ ಆರ್.ಸಿ.ಎಂ.ಸಿ, ಮಾನ್ಯತೆ/ ನೊಂದಾವಣೆಗಳ ಮಾನ್ಯತಾ ಅವಧಿಯು 2020 ರ ಏಪ್ರಿಲ್ 30 ರವರೆಗಿನ ಅವಧಿಯಲ್ಲಿ ಮುಕ್ತಾಯಗೊಳ್ಳುವುದಿದ್ದಲ್ಲಿ ಅದನ್ನು  ವಿಸ್ತರಿಸಿದೆ.
  2. ಸಾವಯವ ಉತ್ಪನ್ನಗಳ ರಫ್ತುದಾರರಿಗೆ ಒಂದು ಬಾರಿಯ ಅವಕಾಶವಾಗಿ ಪ್ರಮಾಣ ಪತ್ರದ ಮಾನ್ಯತಾ ಅವಧಿಯನ್ನು ಹೆಚ್ಚುವರಿಯಾಗಿ 1 ತಿಂಗಳು ವಿಸ್ತರಿಸುವುದಕ್ಕೆ ಸಲಹಾ ಮಾರ್ಗದರ್ಶಿಗಳನ್ನು ನೀಡಲಾಗಿದೆ.
  3. ಹೋರ್ಟಿನೆಟ್/ಗ್ರೇಪ್ನೆಟ್ ಗಳಲ್ಲಿ ಅಧಿಕಾರ ಪತ್ರ/ಮಾನ್ಯತೆ ಪಡೆದಿರುವ ಎಲ್ಲಾ ಪ್ರಯೋಗಾಲಯಗಳು ಹಾಗು ಎ.ಪಿ..ಡಿ..ಯ ನಿರ್ದಿಷ್ಟ ಉತ್ಪನ್ನಗಳಿಗೆ 28/03/2020 ರಂದು ಸಲಹಾಸೂಚಿಯನ್ನು ಹೊರಡಿಸಲಾಗಿದೆ. ಇದು ತಾಜಾ ಹಣ್ಣುಗಳು ಮತ್ತು ತರಕಾರಿಗಳ ಮಾದರಿ ಸಂಗ್ರಹ ಹಾಗು ವಿಶ್ಲೇಷಣೆಯನ್ನು ನಡೆಸುದಕ್ಕೆ ಸಂಬಂಧಿಸಿದುದಾಗಿರುತ್ತದೆ. ಮಾದರಿಗಳ ಸಾಗಾಟಗಾರರಿಗೆ  ಮತ್ತು ಪ್ರಯೋಗಾಲಯಗಳ ಸಿಬ್ಬಂದಿಗಳ ಚಲನವಲನಗಳಿಗೆ ಅಡ್ಡಿಯುಂಟಾದರೆ ಅದನ್ನು ತಕ್ಷಣವೇ ಪರಿಹರಿಸಲು ಎ.ಪಿ..ಡಿ.. ಮತ್ತು ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತರಬಹುದಾಗಿದೆ.
  4. .ಪಿ..ಡಿ.. ಪ್ರಮಾಣೀಕರಣ ಮಂಡಳಿಗಳಿಗೆ  ಸಾವಯವ ಪ್ರಮಾಣಪತ್ರ ಮಾನ್ಯತಾ ಅವಧಿ ವಿಸ್ತರಣೆಗೆ ಸಲಹೆ ಮಾಡಲಾಗಿದೆ. ಇದರಿಂದ ರೈತರಿಗೆ ಸಾವಯವ ಸ್ಥಾನಮಾನ ಲುಪ್ತವಾಗದೆ ಆ ಪ್ರಮಾಣಪತ್ರದೊಂದಿಗೆ ಮುಂದುವರಿಯಲು ಸಾಧ್ಯವಾಗುತ್ತದೆ.
  5. ಭೌತಿಕ ಪರಿವೀಕ್ಷಣೆ ನಡೆಸಲು ಸಾಧ್ಯವಾಗಿರದ ಆಹಾರ ಸಂಸ್ಕರಣಗಾರರು ಮತ್ತು ರಫ್ತುದಾರರ ಪ್ರಮಾಣ ಪತ್ರಗಳ ಮಧ್ಯಂತರ ಯಾ ತಾತ್ಕಾಲಿಕ ವಿಸ್ತರಣೆಗೆ ಅವಕಾಶ ಮಾಡಿಕೊಡಲಾಗಿದೆ.
  6. .ಪಿ..ಡಿ.. ಮದ್ಯಪ್ರವೇಶದೊಂದಿಗೆ ನವಿ ಮುಂಬಯಿಯಲ್ಲಿರುವ ಕೆಲವು ಪ್ಯಾಕಿಂಗ್ ಘಟಕಗಳು ಪೂರೈಕೆಗೆ ಅವಶ್ಯವಾದ ಪ್ಯಾಕೇಜಿಂಗ್ ಸಾಮಗ್ರಿಗಳ ಉತ್ಪಾದನೆಗೆ ಕಾರ್ಯಾರಂಭ ಮಾಡಲು ಅನುಮತಿ ಪಡೆಯಲು ಸಫಲವಾಗಿವೆ.
  1. ತಂಬಾಕು ಮಂಡಳಿಯಿಂದ ಸೌಲಭ್ಯಗಳು :

ವಿವಿಧ ವ್ಯಾಪಾರಿಗಳಿಗೆ ಫೆಬ್ರವರಿ ತಿಂಗಳ ರಿಟರ್ನ್ ಸಲ್ಲಿಕೆಗೆ ಮಾರ್ಚ್ 15 ಕೊನೆಯ ದಿನವಾಗಿತ್ತು. ಮಾರ್ಚ್ ತಿಂಗಳ ರಿಟರ್ನ್ ಸಲ್ಲಿಕೆಗೆ 2020  ರ ಏಪ್ರಿಲ್ 15 ಅಂತಿಮ ದಿನವಾಗಿತ್ತು. ತಂಬಾಕು ಮಂಡಳಿಯು ಈ ದಿನಾಂಕಗಳನ್ನು 2020 ರ ಏಪ್ರಿಲ್ 30 ರವರೆಗೆ ವಿಸ್ತರಿಸಿದೆ. ತಂಬಾಕು ಮಂಡಳಿಯು ರಾಜ್ಯ ಸರಕಾರಗಳು ಮತ್ತು ಇತರ ಭಾಗೀದಾರರ ಜೊತೆ ಸಮಾಲೋಚಿಸಿ ತಂಬಾಕು ಬೆಳೆ ನಷ್ಟ ತಡೆಯಲು 2020 ರ ಏಪ್ರಿಲ್ 15 ರಿಂದ ತಂಬಾಕು ಏಲಂ ಮಾಡಲು ಯೋಜನೆ ಹಾಕಿಕೊಂಡಿದೆ.

 

  1. ಚಹಾ ಮಂಡಳಿಯಿಂದ ಸವಲತ್ತುಗಳು :

Sl.No.

ಕ್ರಮ ಸಂಖ್ಯೆ

ಹೆಸರು

ಈ ನಿಯಮದಡಿ

ಅವಧಿ/ ಕಾಲಮಿತಿ

ಭಾಗೀದಾರರು

ಅಂತಿಮ ದಿನಾಂಕ

ಉದ್ದೇಶ

ನೀಡಲಾದ ವಿಸ್ತರಣೆ

1

ಉತ್ಪಾದನೆ ರಿಟರ್ನ್ (ಫಾರಂ )

ಟಿ.ಎಂ.ಸಿ..

ಮಾಸಿಕ

ಚಹಾ ಉತ್ಪಾದಕರು

07.04.2020

ತಿಂಗಳ ಉತ್ಪಾದನೆ, ಹಸಿರು ಎಲೆ ದರವನ್ನು ಬೆಳೆಗಾರರಿಗೆ ಪಾವತಿಸಿ, ಚಹಾ ತ್ಯಾಜ್ಯದ ಪ್ರಮಾಣ ಮತ್ತು ಅದರ ವಿಲೇವಾರಿ ವಿವರದತ್ತಾಂಶಗಳನ್ನು ಒಳಗೊಂಡಿರುತ್ತದೆ , ಇದನ್ನು  ಐ..ಪಿ.ಗೂ ಬಳಸಬೇಕು.

30 04.2020 ರವರೆಗೆ ಪರಿಷ್ಕರಿಸಲಾಗಿದೆ

2

ಖರೀದಿದಾರ ರಿಟರ್ನ್

(ಫಾರಂ ಎಫ್)

ಟಿ.ಎಂ.ಸಿ..

ತ್ರೈಮಾಸಿಕ

ಚಹಾ ಖರೀದಿದಾರರು

31.03.2020

ಚಹಾ ಖರೀದಿ ಮತ್ತು ಮಾರಾಟ ದತ್ತಾಂಶಗಳನ್ನೊಳಗೊಂಡಿರುತ್ತದೆ.

30.04.2020  ರವರೆಗೆ ಪರಿಷ್ಕರಣೆ

3

ಇನ್ ಸ್ಟ್ಯಾಂಟ್  ಚಹಾ ರಿಟರ್ನ್

ಟಿ.ಎಂ.ಸಿ..

ಮಾಸಿಕ

ಇನ್ ಸ್ಟ್ಯಾಂಟ್  ಚಹಾ ಉತ್ಪಾದಕರು

07.04.2020

ಇನ್ ಸ್ಟ್ಯಾಂಟ್  ಚಹಾ ಉತ್ಪಾದನೆ ದತ್ತಾಂಶ.

30.04.2020  ರವರೆಗೆ ಪರಿಷ್ಕರಣೆ

4

ದಾಸ್ತಾನುಗಾರ ರಿಟರ್ನ್

(ಫಾರಂ ಎಂ.)

ಟಿ.ಡಬ್ಲ್ಯು.ಸಿ..

ಮಾಸಿಕ

ಚಹಾ ದಾಸ್ತಾನುಗಾರಗಳು

07.04.2020

ಚಹಾ ದಾಸ್ತಾನು ಮತ್ತು ವಿಲೇವಾರಿ ವಿವರಗಳು.

30.04.2020  ರವರೆಗೆ ಪರಿಷ್ಕರಣೆ

5

ರಫ್ತು ರಿಟರ್ನ್

ಟಿ.ಡಿ..ಸಿ.

ಮಾಸಿಕ

ಚಹಾ ರಫ್ತುದಾರರು.

07.04.2020

ಮಾಸಿಕ ರಫ್ತು ಪ್ರಮಾಣ, ಮೌಲ್ಯ, ಶಿಪ್ಮೆಂಟ್ ಮಾಡಿದ ಬಂದರು, ರಫ್ತು ಮಾಡಲಾದ ಚಹಾದ ಗುಣಮಟ್ಟ ಅನುಸಾರ ವಿವರ.

30.04.2020  ರವರೆಗೆ ಪರಿಷ್ಕರಣೆ

6

ಆಮದು ರಿಟರ್ನ್

ಟಿ.ಡಿ..ಸಿ.

ಮಾಸಿಕ

ಚಹಾ ಆಮದುದಾರರು

ದಿನಾಂಕ ಇಲ್ಲ.

ಮಾಸಿಕ ಆಮದು ಪ್ರಮಾಣ ಮತ್ತು ಸಿ..ಎಫ್. ಮೌಲ್ಯ, ಯಾವ ಉದ್ದೇಶಕ್ಕಾಗಿ ಆಮದು ಮಾಡಲಾಗಿದೆ ಎಂಬ ವಿವರ.

30.04.2020 ರವರೆಗೆ ಪರಿಷ್ಕರಣೆ

7

ವಾರ್ಷಿಕ ರಿಟರ್ನ್

ಚಹಾ ಕಾಯ್ದೆ

ವಾರ್ಷಿಕ

ಚಹಾ ತೋಟಗಳ ಮಾಲಕರು

31.03.2020

ಆ ವರ್ಷದಲ್ಲಿ ಕೈಗೊಂಡ ಅಭಿವೃದ್ದಿ ಚಟುವಟಿಕೆಗಳು, ಗಿಡಗಳ ವಯಸ್ಸು, ಕಾರ್ಮಿಕ ಸಿಬ್ಬಂದಿಗಳ ಸಂಖ್ಯೆ ಮತ್ತು ಅವರ ಕಲ್ಯಾಣ ಕಾರ್ಯಕ್ರಮಗಳ ವಿವರಗಳಿರಬೇಕು.

31.05.2020ರವರೆಗೆ ಪರಿಷ್ಕರಣೆ

 ಚಹಾ ಮಂಡಳಿಯು ವಿವಿಧ ಸಮಯ ಮಿತಿಗಳನ್ನು ಈ ಕೆಳಗಿನಂತೆ ವಿಸ್ತರಿಸಿದೆ :

ಎಂ.ಎಚ್..ಯು ದಿನಾಂಕ 24.03.2020  ರ ಅಧಿಸೂಚನೆಯ ಮೂಲಕ  ಗರಿಷ್ಟ 50 % ಕಾರ್ಮಿಕರೊಂದಿಗೆ ಪ್ಲಾಂಟೇಶನ್ ಸಹಿತ ಚಹಾ ಕೈಗಾರಿಕೆ ಕಾರ್ಯಾರಂಭಕ್ಕೆ ಅವಕಾಶ ನೀಡಿದೆ.

  1. ನಾವಿಕ/ ಸಾಗರ  ಉತ್ಪನ್ನಗಳ ರಫ್ತು ಅಭಿವೃದ್ದಿ ಪ್ರಾಧಿಕಾರದಿಂದ (ಎಂ.ಪಿ..ಡಿ..) ಸವಲತ್ತುಗಳು : ಎಂ. ಪಿ..ಡಿ.. ಯು 2020 ರ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಅಮೆರಿಕಾ ಮಾರುಕಟ್ಟೆಗೆ ಬಹುತೇಕ ರಫ್ತುಗಳ ಪ್ರಮಾಣಪತ್ರಗಳನ್ನು ಅಂದರೆ - ಡಿ.ಎಸ್. 2301 ಪ್ರಮಾಣಪತ್ರಗಳನ್ನು ಆನ್ ಲೈನ್ ಮೂಲಕ ನೀಡಲು ಆರಂಭಿಸಿದೆ. ಅಮೆರಿಕಾಕ್ಕೆ ಸಿಗಡಿಗಳನ್ನು ರಫ್ತು ಮಾಡಬೇಕಿದ್ದರೆ  ಇದು ಅತ್ಯಾವಶ್ಯಕ ಪ್ರಮಾಣ ಪತ್ರ. ಇದನ್ನು ಆನ್ ಲೈನ್ ಮಾಡುವ ಮೂಲಕ , ರಫ್ತುದಾರರ ದೈಹಿಕ ಚಲನವಲನ ಕಡಿಮೆಯಾದಂತಾಗಿದೆ. ಲಾಕ್ ಡೌನ್ ಜಾರಿಗೆ ಬಂದ ಮೇಲೆ ಇನ್ನೊಂದು ಪ್ರಮಾಣ ಪತ್ರ ಏಶ್ಯಾ-ಫೆಸಿಫಿಕ್ ವ್ಯಾಪಾರ ಒಪ್ಪಂದ (.ಪಿ.ಟಿ..) ಕೂಡಾ ಆನ್ ಲೈನ್ ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ.
  1. ಕೋವಿಡ್ -19  ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸರಕಾರಿ ಇ-ಮಾರುಕಟ್ಟೆಯಲ್ಲಿ (ಜಿ..ಎಂ.) ಖರೀದಿಗೆ ಸಂಬಂಧಿಸಿ ಸರಕಾರ ಕೈಗೊಂಡ ಕ್ರಮಗಳು

ಕೋವಿಡ್ -19  ಸಂಬಂಧಿ ವಸ್ತುಗಳ ಖರೀದಿಗಾಗಿ ಕೈಗೊಂಡ ವಿವಿಧ ಮಧ್ಯಪ್ರವೇಶ ಕಾರ್ಯಕ್ರಮಗಳ ವಿವರಗಳು ಮತ್ತು ಸ್ಥಿತಿ-ಗತಿ ಈ ಕೆಳಗಿನಂತಿದೆ:  

      1. ಕೋವಿಡ್ -19  ವರ್ಗವನ್ನು ಗುರುತಿಸಲು ಮತ್ತು ಮಾರಾಟಗಾರರ  ಸಂಖ್ಯೆಯನ್ನು ತಿಳಿಯಲು ಹೊಸ ಪುಟವನ್ನು ಆರಂಭಿಸಲಾಗಿದೆ.
      2. ಅಲ್ಪಾವಧಿ ಬಿಡ್ ಗಳನ್ನು ಕಡಿಮೆ ಪೂರೈಕೆ ಅವಧಿಯವುಗಳಿಗೆ  ಅವಕಾಶ ನೀಡಲಾಗಿದೆ. ಕೋವಿಡ್ -19  ಸಂಬಂಧಿ ವರ್ಗಗಳಿಗಾಗಿರುವ ಬಿಡ್ ವರ್ತುಲ ಅವಧಿಯನ್ನು ಹಾಲಿ ಇರುವ 10 ದಿನಗಳಿಂದ 3 ದಿನಗಳಿಗೆ ಇಳಿಸಲಾಗಿದೆ. ಖರೀದಿದಾರರಿಗೆ ಇಂತಹ ಸಾಮಗ್ರಿಗಳ ಪೂರೈಕೆ ಅವಧಿಯನ್ನು ಅವುಗಳ ಸಂಕೀರ್ಣ ಸ್ವಭಾವವನ್ನು ಅನುಸರಿಸಿ 2 ದಿನಗಳಿಗೆ ಇಳಿಸ ಬಹುದಾಗಿದೆ.
      3. ಸ್ಥಳೀಯ ಪೂರೈಕೆದಾರರಿಗೆ  ತ್ವರಿತವಾಗಿ ಪೂರೈಕೆ ಮಾಡಲು ಮತ್ತು ಖರೀದಿದಾರರು ಆಯ್ಕೆ ಮಾಡಿದ ಪೂರೈಕೆಗಾಗಿರುವ  ಉತ್ಪಾದನಾ ಅವಧಿಗಾಗಿ ಶೋಧಕವನ್ನು ಅಳವಡಿಸಲಾಗಿದೆ. ಇದರಿಂದ ತ್ವರಿತ ಪೂರೈಕೆಗೆ ಅನುಕೂಲವಾಗಲಿದೆ.
      4. ಕೋವಿಡ್ ನಿರ್ದಿಷ್ಟ ವರ್ಗಗಳ ಉತ್ಪನ್ನ/ ಬ್ರಾಂಡ್ ಅನುಮೋದನೆಯಲ್ಲಿ ಆದ್ಯತೆಯನ್ನು ನೀಡಲಾಗುತ್ತದೆ.
      5. ನ್ಯಾಯೋಚಿತವಲ್ಲದ ಬೆಲೆ ಏರಿಕೆ ತಡೆಯಲು ಹೊಸ ವ್ಯಾಪಾರ ನಿಯಮವನ್ನು ಜಾರಿಗೆ ತರಲಾಗಿದೆ.
      6. ಮೂಲ ಪೂರೈಕೆ ಅವಧಿ ಮುಕ್ತಾಯಗೊಂಡಿದ್ದರೆ ಅದರಾಚೆಗೆ 30 ದಿನಗಳ ಪೂರೈಕೆ ಅವಧಿ ವಿಸ್ತರಣೆಗೆ ಅವಕಾಶ ನೀಡಲಾಗುತ್ತದೆ.
      7. ನಿರ್ದಿಷ್ಟ ವರ್ಗದ ದಾಸ್ತಾನನ್ನು ಅಧಿಸೂಚನೆ ಮಾಡಿದ  48 ಗಂಟೆಗಳ ಒಳಗೆ ಸಕಾಲಿಕಗೊಳಿಸದ ಮಾರಾಟಗಾರರ ಮೇಲೆ ಕ್ರಮಕೈಗೊಳ್ಳಲು ಹೊಸ ವ್ಯಾಪಾರ ನಿಯಮ.
      8. ಎಂಟು ಹೊಸ ಕೋವಿಡ್ ವರ್ಗದ ಮೂಲ ಸಲಕರಣೆ ತಯಾರಕರು (..ಎಂ.ಗಳು) ಮತ್ತು ಮಾರಾಟಗಾರರನ್ನು ಗುರುತಿಸಲಾಗಿದೆ
      9. ಎಂ.ಎಸ್.ಪಿ. ಮತ್ತು ಜಿ..ಎಂ. ಗಳಿಗೆ ನಿರಂತರ ವ್ಯವಸ್ಥೆ ಕಾರ್ಯಾಚರಣೆಗಾಗಿ ನಿರಂತರ ವ್ಯಾಪಾರ ಯೋಜನೆಯನ್ನು ಜಾರಿಗೆ ತರಲಾಗಿದೆ

 

  1. ಕೋವಿಡ್ -19  ಜಾಗತಿಕ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಆದ್ಯತಾ ರಫ್ತುಗಳಿಗಾಗಿ ಅನುಕೂಲಗಳನ್ನು ಒದಗಿಸಲು ಇಲಾಖೆ ಕೈಗೊಂಡ ಕ್ರಮಗಳು
  1. ಲಾಕ್ ಡೌನ್ ಹಿನ್ನೆಲೆಯಲ್ಲಿ, ಭಾರತದ ಆದ್ಯತಾ ರಫ್ತುಗಳಿಗೆ ಉಚಿತ ವ್ಯಾಪಾರ ಒಪ್ಪಂದ (ಎಫ್.ಟಿ..ಗಳು )ಗಳನ್ನು ನೀಡಲು ಅಧಿಕಾರ ಪತ್ರ ಪಡೆದಿರುವ ಏಜೆನ್ಸಿಗಳು ಒಂದೋ ಕಾರ್ಯನಿರತವಾಗಿಲ್ಲದಿರಬಹುದು  ಅಥವಾ ಅತಿ ಕಡಿಮೆ ಸಿಬ್ಬಂದಿಗಳೊಂದಿಗೆ ಕಾರ್ಯ ನಿರ್ವಹಿಸುತ್ತಿರಬಹುದು. ಈ ಕಾರಣದಿಂದಾಗಿ ವಾಣಿಜ್ಯ ಇಲಾಖೆಯು ಕೆಲವು ನಿರ್ದಿಷ್ಟ ಎಫ್.ಟಿ..ಗಳನ್ನು ಈ ಡಿಜಿಟಲ್ ವೇದಿಕೆಗೆ ಅಳವಡಿಕೆ ಮಾಡಿದೆ. ಅವು ರಫ್ತುದಾರರು ಈ ಪ್ರಮಾಣಪತ್ರಗಳಿಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡುತ್ತವೆ. ವ್ಯಾಪಾರ ನೋಟೀಸು 1 ದಿನಾಂಕ 7.4.2020 ನ್ನು ಭಾರತದ ಪ್ರಮುಖ ಎಫ್.ಟಿ..ಗಳಲ್ಲಿ ಅಸಿಯಾನ್, ಜಪಾನ್, ಸಾರ್ಕ್ ದೇಶಗಳ ಮತ್ತು ಏಶ್ಯಾ ಫೆಸಿಫಿಕ್ ವ್ಯಾಪಾರ ಒಪ್ಪಂದ (.ಪಿ.ಟಿ..) ಗಳ ಜೊತೆ ಈ ಡಿಜಿಟಲ್ ವೇದಿಕೆಯಲ್ಲಿ ಸೇರಿಸಲಾಗಿದೆ. ಸಂಬಂಧಿತ ವ್ಯಾಪಾರ ನೊಟೀಸ್ 62, ದಿನಾಂಕ 6.4.2020,ರಲ್ಲಿ ಏಜೆನ್ಸಿಗಳಿಗೆ ಡಿಜಿಟಲ್ ಸಹಿ ಇರುವ ಪ್ರಮಾಣಪತ್ರಗಳನ್ನು ಈ ವೇದಿಕೆಯಲ್ಲಿ ರಫ್ತುದಾರರಿಗೆ ನೀಡಲು ಸೂಚಿಸಿದೆ. ಮತ್ತು ಅವುಗಳನ್ನು ಪೂರ್ವಾನ್ವಯಗೊಂಡಂತೆ ನೀಡಿದ್ದರೂ ಅವುಗಳಿಗೆ ಏಕರೂಪದ ಶುಲ್ಕವನ್ನು ನಿಗದಿ ಮಾಡುವಂತೆ ಸೂಚಿಸಲಾಗಿದೆ.  ಈ ವೇದಿಕೆಯು ಡಿಜಿಟಲ್ ಸಹಿ ಇರುವ ಪ್ರಮಾಣ ಪತ್ರಗಳನ್ನು ನೀಡಲಿದೆ ಮತ್ತು ನಾವು ಈ ಡಿಜಿಟಲ್ ಸಹಿ ಇರುವ ಪ್ರಮಾಣಪತ್ರಗಳನ್ನು ಅಂಗೀಕರಿಸುವ ವ್ಯಾಪಾರಿ ಸಹಭಾಗಿಗಳನ್ನು ಹೊಂದುವಲ್ಲಿ ಯಶಸ್ವಿಯಾಗಿದ್ದೇವೆ. ಇದು ನಮ್ಮ ಆದ್ಯತಾ ರಫ್ತುಗಳನ್ನು ಲಾಕ್ ಡೌನ್ ಅವಧಿಯಲ್ಲೂ ಖಾತ್ರಿಪಡಿಸುವುದಕ್ಕೆ ಅವಕಾಶ ಮಾಡಿಕೊಡುತ್ತದೆ.
  • ii. ಒಕ್ಕೂಟಕ್ಕೆ (.ಯು.) ರಫ್ತು ಮಾಡುವವರಲ್ಲಿ ಹೆಚ್ಚಿನವರು ಯುರೋಪಿಯನ್ ಯೂನಿಯನ್ನಿನ ಸಾಮಾನ್ಯ ಆದ್ಯತೆಗಳ ವ್ಯವಸ್ಥೆಯ (ಜಿ.ಎಸ್.ಪಿ.) ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. .ಯು. ಜಿ.ಎಸ್.ಪಿ.ಯು ಸ್ವಯಂ ಪ್ರಮಾಣೀಕರಣ ಆಧಾರದಲ್ಲಿದೆಯಾದರೂ ರಫ್ತುದಾರರು ರೆಕ್ಸ್ (ನೊಂದಾಯಿತ ರಫ್ತುದಾರರು ) ಸಂಖ್ಯೆಯನ್ನು ಪಡೆಯಲು ಭಾರತದಲ್ಲಿ ಆಯ್ದ ಏಜೆನ್ಸಿಗಳಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ಏಜೆನ್ಸಿಗಳ ಕಚೇರಿಗಳು ಮುಚ್ಚಲ್ಪಟ್ಟಿರುವುದರಿಂದ , ವ್ಯಾಪಾರ ನೊಟೀಸು 61. ದಿನಾಂಕ 2.4.2020 ನ್ನು ರೆಕ್ಸ್ ಸಂಖ್ಯೆ ಪಡೆಯಲು ಅಂಗೀಕಾರಾರ್ಹ ಸ್ಕ್ಯಾನ್ ಮಾಡಲ್ಪಟ್ತ ದಾಖಲೆ ಎಂದು ಪರಿಗಣಿಸಲಾಗುತದೆ. ಇದರಿಂದ ರಫ್ತುದಾರರು ಏಜೆನ್ಸಿ ಜೊತೆ ಭೌತಿಕ / ದೈಹಿಕ ಮುಖಾಮುಖಿಯಾಗಬೇಕಾದ ಅನಿವಾರ್ಯತೆ ಇಲ್ಲ. ಇದು ಇ.ಯು.ಗೆ ಇ.ಯು.ಜಿ.ಎಸ್.ಪಿ. ಅಡಿಯಲ್ಲಿ ರಫ್ತು ಮಾಡುವ ರಫ್ತುದಾರರು ರೆಕ್ಸ್ ಸಂಖ್ಯೆ ಲಭಿಸದೇ ಇದಲ್ಲಿ ಇಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಏಜೆನ್ಸಿಗಳಿಗೆ ಅರ್ಜಿ ಸಲ್ಲಿಸುವುದನ್ನು ಖಾತ್ರಿಪಡಿಸುತ್ತದೆ ( ಇದಕ್ಕೆ ನೊಂದಾವಣೆಗಾಗಿರುವ ಸ್ಥಳೀಯಾಡಳಿತ ಎಂದೂ ಹೇಳಲಾಗುತ್ತದೆ.)

 

  1. ವ್ಯಾಪಾರ ಪರಿಹಾರಗಳ ಮಹಾ ನಿರ್ದೇಶಕರಿಂದ ಸವಲತ್ತುಗಳು (ಡಿ.ಜಿ.ಟಿ.ಆರ್.)

ವ್ಯಾಪಾರ ಪರಿಹಾರಗಳ ತನಿಖಾ ಪ್ರಕ್ರಿಯೆಯಲ್ಲಿ ದಾಖಲೆಗಳ ಸಲ್ಲಿಕೆ ಆನ್ ಲೈನ್ ನಲ್ಲಿ ನಡೆಯುತ್ತದೆ ಅಥವಾ ಕಾಗದ ರೂಪದಲ್ಲಿಯ ಪ್ರತಿಗಳನ್ನು ಸಲ್ಲಿಸುವುದಕ್ಕೆ ಬದಲು ಡಿಜಿಟಲ್ ವರ್ಗಾವಣೆ ಮೂಲಕ ಮಾಡಬೇಕಾಗುತ್ತದೆ. ಇದು ಹೊಸ ತನಿಖೆಗಳು ಮತ್ತು ಈಗಾಗಲೇ ಚಾಲ್ತಿಯಲ್ಲಿರುವ ತನಿಖೆಗಳಿಗೆ ಅನುಕೂಲ ಮಾಡಿಕೊಡುತ್ತದೆ. ಮತ್ತು ವಿಚಾರಣೆ ಹಾಗು ಸಲಹಾ ಸಮಾಲೋಚನೆಗಳನ್ನು ವೀಡಿಯೋ ಕಾನ್ಪರೆನ್ಸ್ ಮೂಲಕ ನೀಡಲಾಗುತ್ತದೆ.

***



(Release ID: 1615250) Visitor Counter : 310