ಇಂಧನ ಸಚಿವಾಲಯ

ಸಿಪಿಎಸ್ ಯು ಮತ್ತು ಎನ್ ಟಿಪಿಸಿ ವಿದ್ಯುತ್ ಘಟಕಗಳ ಎಲ್ಲ 45 ಆಸ್ಪತ್ರೆಗಳು ಕೋವಿಡ್–19 ರೋಗಿಗಳ ಚಿಕಿತ್ಸೆಗೆ ಬಳಕೆ

Posted On: 16 APR 2020 3:27PM by PIB Bengaluru

ಸಿಪಿಎಸ್ ಯು ಮತ್ತು ಎನ್ ಟಿಪಿಸಿ ವಿದ್ಯುತ್ ಘಟಕಗಳ ಎಲ್ಲ 45 ಆಸ್ಪತ್ರೆಗಳು ಕೋವಿಡ್–19 ರೋಗಿಗಳ ಚಿಕಿತ್ಸೆಗೆ ಬಳಕೆ

168 ಐಸೋಲೇಶನ್ ಹಾಸಿಗೆಗಳನ್ನು ನಿರ್ಮಿಸಲಾಗಿದೆ: ಹೆಚ್ಚುವರಿ 122 ಹಾಸಿಗೆ ಲಭ್ಯವಾಗುವಂತೆ ಮಾಡಲು ಸಿದ್ಧತೆ

ಕೋವಿಡ್–19 ಹರಡುವಿಕೆ ಸಂದರ್ಭದಲ್ಲಿ ಪರಿಹಾರ ಒದಗಿಸಲು  ಮಹಾರತ್ನ ಪಿ ಎಸ್ ಯು ವ್ಯಾಪಕ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ

ದೆಹಲಿ ಮತ್ತು ಒಡಿಶಾದಲ್ಲಿ ಕೋವಿಡ್ ಪ್ರಕರಣಗಳನ್ನು ನಿರ್ವಹಿಸಲು 2 ಆಸ್ಪತ್ರೆಗಳನ್ನು ಪಿ ಎಸ್ ಯು ರಾಜ್ಯ ಸರ್ಕಾರಕ್ಕೆ ಸಮರ್ಪಿಸಿದೆ
 

ಕೇಂದ್ರದ ವಿದ್ಯುತ್ ಶಕ್ತಿ ಮತ್ತು ನವೀನ ಹಾಗೂ ನವೀಕರಿಸಬಹುದಾದ ಇಂಧನ ಖಾತೆ ಸಚಿವ ಶ್ರೀ ಎಸ್ ಕೆ ಸಿಂಗ್ ಅವರ ಕರೆಯ ಮೇರೆಗೆ ಇಂಧನ ಸಚಿವಾಲಯದ ಕೇಂದ್ರ ಪಿ ಎಸ್ ಯು ಆದಂತಹ ಎನ್ ಟಿ ಪಿ ಸಿ ನಿಯಮಿತ ಅಬಾಧಿತ ವಿದ್ಯುತ್ ಸರಬರಾಜು ಮತ್ತು ತನ್ನ ಮೂಲ ಸೌಕರ್ಯಗಳನ್ನು ಬಳಸುವ ಮೂಲಕ ಹಾಗೂ ಮಾನವೀಯ ಪರಿಹಾರ ಕ್ರಮಗಳಿಗಾಗಿ ಸಿ ಎಸ್ ಆರ್ ನಿಧಿಯನ್ನು ಬಳಸುವ ಮೂಲಕ ಕೊರೊನಾ ವೈರಾಣು (ಕೋವಿಡ್–19) ಹರಡುವಿಕೆಯ ಪರಿಣಾಮವನ್ನು ತಗ್ಗಿಸಲು ಸ್ವಯಂಪ್ರೇರಿತವಾಗಿ ಕಾರ್ಯನಿರ್ವಹಿಸುತ್ತಿದೆ

ಕೋವಿಡ್–19 ರೋಗದ ಜಾಗತಿಕ ಹರಡುವಿಕೆ ವಿರುದ್ಧ ಜಾಗರೂಕತೆಯನ್ನು ಹೆಚ್ಚಿಸಿದ ಎನ್ ಟಿ ಪಿ ಸಿ ಈಗಾಗಲೇ ತನ್ನ 45 ಆಸ್ಪತ್ರೆಗಳನ್ನು/ ಆರೋಗ್ಯ ಘಟಕಗಳನ್ನು ಐಸೋಲೇಶನ್ ಸೌಲಭ್ಯಗಳನ್ನು ಕಲ್ಪಿಸಲು ಬಳಸಿದೆ ಮತ್ತು ಇಂಥ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ವೈದ್ಯಕೀಯ ಸಿಬ್ಬಂದಿಗೆ ಅಗತ್ಯವಿರುವ ಸಾಧನಗಳನ್ನು ಸಂಗ್ರಹಿಸಿದೆ. ಎಲ್ಲ ಆಸ್ಪತ್ರೆಗಳು/ಆರೋಗ್ಯ ಘಟಕಗಳಲ್ಲಿ ಆಮ್ಲಜನಕ ಪೂರೈಕೆಯೊಂದಿಗೆ ಸುಮಾರು 168 ಪ್ರತ್ಯೇಕ ಹಾಸಿಗೆಗಳನ್ನು ನಿರ್ಮಿಸಲಾಗಿದೆ ಮತ್ತು ಅವವಶ್ಯಕತೆಗೆ ಅನುಸಾರ ಹೆಚ್ಚುವರಿಯಾಗಿ 122 ಹಾಸಿಗೆಗಳನ್ನು ಒದಗಿಸಬಹುದಾಗಿದೆ. ದೆಹಲಿಯಲ್ಲಿರುವ ಬದರ್ ಪುರ್ ಆಸ್ಪತ್ರೆ ಮತ್ತು ಒಡಿಶಾದ ಸುಂದರ್ ಘಡದಲ್ಲಿರುವ ವೈದ್ಯಕೀಯ ಕಾಲೇಜು ಆಸ್ಪತ್ರೆಯೂ ಸೇರಿದಂತೆ 2 ಆಸ್ಪತ್ರೆಗಳನ್ನು ಕೋವಿಡ್ ಪ್ರಕರಣಗಳ ನಿರ್ವಹಣೆಗೆ ರಾಜ್ಯ ಸರ್ಕಾರಗಳ ಸಿದ್ಧಪಡಿಸಿವೆ.    

ಸೂಕ್ತ ಆರೋಗ್ಯ ರಕ್ಷಣಾ ಪರಿಕರಗಳ ಲಭ್ಯತೆ ಮತ್ತು ಅದನ್ನು ಜನರಿಗೆ ತಲುಪಿಸುವುದು ಸದ್ಯದ ಅವಶ್ಯಕತೆಯಾಗಿದೆ, ಸಾಧನ ಸಾಮಗ್ರಿಗಳ ಸಂಗ್ರಹಕ್ಕಾಗಿ ರೂ. 3 ಕೋಟಿ ಹಂಚಿಕೆ ಮಾಡಲಾಗಿದೆ. ಎನ್ ಟಿ ಪಿ ಸಿ ಯ ಯೋಜನಾ ಆಸ್ಪತ್ರೆಗಳಲ್ಲಿ ಸದ್ಯಕ್ಕೆ 7 ವೆಂಟಿಲೇಟರ್ ಗಳಿವೆ. ಬೇರೆ ಬೇರೆ ಆಸ್ಪತ್ರೆಗಳಿಗಾಗಿ 18 ವೆಂಟಿಲೇಟರ್ ಸಹಿತ ಸುಧಾರಿತ ಆಂಬುಲೆನ್ಸ್ ಗಳು, ಮತ್ತೆ 18 ಬೇರೆ ವೆಂಟಿಲೇಟರ್ ಗಳು ಮತ್ತು 520 ಐಆರ್ ಥರ್ಮೊಮೀಟರ್ ಗಳು ಶೇಖರಣೆಯ ಹಂತದಲ್ಲಿವೆ.  

ಮಾರಣಾಂತಿಕ ಕೊರೊನಾ ವಿರುದ್ಧದ ಹೋರಾಟಕ್ಕೆ ವೈಯಕ್ತಿಕ ರಕ್ಷಣಾ ಸಾಮಗ್ರಿಗಳು ಮತ್ತು ಕೈಗಳ ನೈರ್ಮಲ್ಯೀಕರಣ ಅತ್ಯುತ್ತಮ ರೋಗ ತಡೆ ಪದ್ಧತಿಗಳಾಗಿ ಹೊರಹೊಮ್ಮಿವೆ, ಆದ್ದರಿಂದ ಎಂಒಹೆಚ್ ಎಫ್ ಡಬ್ಲ್ಯು ಹೊರಡಿಸಿದ ಪರೀಕ್ಷೆ, ಚಿಕಿತ್ಸೆ ಮತ್ತು ಸಾರಿಗೆ ಮಾರ್ಗಸೂಚಿಗಳನ್ನು ಎನ್ ಟಿ ಪಿ ಸಿ ಎಲ್ಲ ಸಿ ಎಂ ಒ ಗಳೊಂದಿಗೆ ಹಂದಿಕೊಂಡಿದೆ. ವೈಯಕ್ತಿಕ ರಕ್ಷಣಾ ಸಾಮಗ್ರಿಗಳನ್ನು (ಪಿಪಿಇ) ಬಳಸಲು ವಿಡಿಯೋ ಕಾಲ್ ಗಳ ಮೂಲಕ ವೈದ್ಯಕೀಯ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ನಂತರ ಎಲ್ಲ ಯೋಜನೆಗಳು ಮತ್ತು ಘಟಕಗಳಿಗೆ 1200 ಪಿಪಿಇ ಕಿಟ್ ಗಳು, 1,20,000  ಸರ್ಜಿಕಲ್ ಮಾಸ್ಕ್ ಗಳು, 33,000 ಕ್ಕೂ ಹೆಚ್ಚು ಕೈಗವಸುಗಳು, 5000  ಏಪ್ರನ್ ಗಳು, 8000  ಬೂಟಿನ ಕವರ್ ಗಳು, 535  ಲೀಟರ್ ಸ್ಯಾನಿಟೈಸರ್ ಸರಬರಾಜು ಮಾಡಲಾಗಿದೆ.  

 

https://ci3.googleusercontent.com/proxy/wDq65nItww0rtaswzroBz6L_QBqTAU2g-VCX3Y7rztnTlc9SWjyiJyQ0ALev03wXlZjyVNcLJU-cK_oIUKSKbQ80-FWoImwhLzTas3LaiKQQqAdR7kzw=s0-d-e1-ft#https://static.pib.gov.in/WriteReadData/userfiles/image/image001PO4D.jpg

ಈ ಹಂತದಲ್ಲಿ ತಡೆಗಟ್ಟುವಿಕೆ ನಿರ್ಣಾಯಕವಾಗಿ ಪರಿಣಮಿಸಿರುವುದರಿಂದ ಬಹಳಷ್ಟು ಎನ್ ಟಿ ಪಿ ಸಿ ಘಟಕಗಳು ತಡೆಗಟ್ಟುವಿಕೆ ಮತ್ತು ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಂಡಿವೆ ಮತ್ತು ರೂ 3.50 ಮೊತ್ತದ ನಿಧಿಯನ್ನು ಇಲ್ಲಿವರೆಗೆ ಈ ಉದ್ದೇಶಕ್ಕಾಗಿ ಮೀಸಲಿರಿಸಲಾಗಿದೆ

ಕೊರೊನಾ ವೈರಾಣು ವಿರುದ್ಧ ಹೋರಾಟದಲ್ಲಿ ರಾಜ್ಯ ಸರ್ಕಾರಕ್ಕೆ ಸಹಾಯ ಮಾಡುವ ಅದರ ಉಪಕ್ರಮದ ಅಂಗವಾಗಿ ಒಡಿಶಾ ಸರ್ಕಾರಕ್ಕೆ ಪ್ರತಿ ಭದ್ರಕ್ ನಲ್ಲಿರುವ ಸಾಲಂದಿ ಆಸ್ಪತ್ರೆಯ 120 ಹಾಸಿಗೆಗಳ ಬಾಡಿಗೆ ಮತ್ತು ಕೋವಿಡ್ 19 ಕಾಳಜಿ ಕೇಂದ್ರಗಳ ಸುಸೂತ್ರ ಕಾರ್ಯ ನಿರ್ವಹಣೆಗಾಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಯ ಲಾಡ್ಜಿಂಗ್ ಖರ್ಚು, ಊಟದ ಖರ್ಚು ನಿಭಾಯಿಸಲು ಪ್ರತಿ ತಿಂಗಳಿಗೆ 35 ಲಕ್ಷ ಸಹಾಯ ಧನ ನೀಡಲು ಮುಂದಾಗಿದೆ. ಕೋವಿಡ್ ಆರೋಗ್ಯ ಕೇಂದ್ರಗಳ ಚಾಲನೆ ಮತ್ತು ನಿರ್ವಹಣೆಗಾಗಿ ಒಟ್ಟು ರೂ. 1.05 ಕೋಟಿ ಆರ್ಥಿಕ ಹೊರೆಯೊಂದಿಗೆ ಈ ಧನಸಹಾಯವನ್ನು 3 ತಿಂಗಳವರೆಗೆ ನೀಡಲಾಗುವುದು.    

ಇಷ್ಟೆ ಅಲ್ಲದೆ ಈ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ವೈದ್ಯಕೀಯ ನೆರವಿನ ವ್ಯವಸ್ಥೆಗೆ ಮತ್ತು ಪಿಪಿಇ ಗಳು, ಆಹಾರ ಪೊಟ್ಟಣಗಳನ್ನು ಹಂಚಲು  ಜಿಲ್ಲಾಡಳಿತ/ಸ್ಥಳೀಯ ಆಡಳಿತಗಳಿಗೆ ಎನ್ ಟಿ ಪಿ ಸಿ ರೂ. 6.36 ಕೋಟಿ ಆರ್ಥಿಕ ನೆರವು ಒದಗಿಸುತ್ತಿದೆ. ಜೊತೆಗೆ ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಎನ್ ಟಿ ಪಿ ಸಿ ರಿಹಾಂದ್ ಬಡ ಕುಟುಂಬಗಳಿಗೆ ವಿತರಿಸಲು 2,800 ಮೂಟೆ ಆಹಾರ ಧಾನ್ಯಗಳನ್ನು ಮತ್ತು ರೂ. 17 ಲಕ್ಷ ಮೌಲ್ಯದ ಆಹಾರ ಪದಾರ್ಥಗಳ ಪೊಟ್ಟಣಗಳನ್ನು ನೀಡಿದೆ. ಸಿಂಗ್ರಾವುಲಿಯ ಭಾರತೀಯ ರೆಡ್ ಕ್ರಾಸ್ ಸೊಸೈಟಿಗೆ ಪರಿಹಾರ ಕಾರ್ಯಗಳಿಗಾಗಿ ಎನ್ ಟಿ ಪಿ ಸಿ ವಿಂಧ್ಯಾಚಲ  ರೂ 25 ಲಕ್ಷ ಮೊತ್ತವನ್ನು ನೀಡಲು ಬದ್ಧವಾಗಿದೆ.    

ಕೋವಿಡ್–19 ವಿರುದ್ಧ ಹೋರಾಡಲು ತನ್ನ ಸಿ ಎಸ್ ಆರ್ ನಿಧಿಯನ್ನು ಬಳಸಲು ಭಾರತ ಸರ್ಕಾರ ನೀಡಿದ ಅವಕಾಶವನ್ನು ಉಪಯೋಗಿಸಿಕೊಂಡು ಎನ್ ಟಿ ಪಿ ಸಿ ಪಿ ಪಿಎಂ ಕೇರ್ಸ್ ನಿಧಿಗೆ ರೂ 250 ಕೋಟಿ ದೇಣಿಗೆ ನೀಡುವ ಮೂಲಕ ಕೋವಿಡ್–19 ಜಾಗತಿಕ ಹರಡುವಿಕೆ ವಿರುದ್ಧ ತನ್ನ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಡಿಯಿರಿಸಿದೆ. ಹೆಚ್ಚುವರಿಯಾಗಿ ರೂ 7.50 ಕೋಟಿ ಮೊತ್ತವನ್ನು ಕಂಪನಿಯ ಉದ್ಯೋಗಿಗಳ ಸಂಬಳದ ಮೂಲಕ ದೇಣಿಗೆಯಾಗಿ ಪಿಎಂ ಕೇರ್ಸ್ ನಿಧಿಗೆ ನೀಡಲಾಗಿದೆ.     

***


(Release ID: 1615246) Visitor Counter : 288