ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಎಸ್.ಎಸ್.ಸಿ ಯಿಂದ ಪರೀಕ್ಷಾ ವೇಳಾಪಟ್ಟಿ ಪ್ರಕಟ

Posted On: 16 APR 2020 12:47PM by PIB Bengaluru

ಎಸ್.ಎಸ್.ಸಿ ಯಿಂದ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಪಿಎಂ ಕೇರ್ಸ್ ನಿಧಿಗೆ ಎಸ್.ಎಸ್.ಸಿ. ಯ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಸದಸ್ಯರಿಂದ ಒಂದು ದಿನದ ವೇತನ ದೇಣಿಗೆ

 

ಕೊರೊನಾ ವೈರಾಣು ಮಹಾಮಾರಿಯಿಂದ ಎದುರಾಗಿರುವ ಪರಿಸ್ಥಿತಿಯ ಬಗ್ಗೆ ಪರಾಮರ್ಶಿಸಲು ಸಿಬ್ಬಂದಿ ನೇಮಕಾತಿ ಆಯೋಗದ ವಿಶೇಷ ಸಭೆ ನಡೆಸಲಾಯಿತು.

ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮಗಳೂ ಸೇರಿದಂತೆ ಪ್ರಸಕ್ತ ಲಾಕ್ ಡೌನ್ ನಿರ್ಬಂಧಗಳ ಹಿನ್ನೆಲೆಯಲ್ಲಿ ಹಾಗೂ ದೇಶದ ವಿವಿಧ ಭಾಗಗಳಿಂದ ಅಭ್ಯರ್ಥಿಗಳು ಪರೀಕ್ಷೆಗಾಗಿ ಪ್ರಯಾಣ ಮಾಡಬೇಕಾಗಿ ಬರುವ ಕಾರಣ ಎಲ್ಲ ಪರೀಕ್ಷೆಗಳ ದಿನಾಂಕವನ್ನು ಕಾಲಕಾಲಕ್ಕೆ ಪರಾಮರ್ಶಿಸಲು ನಿರ್ಧರಿಸಲಾಯಿತು. ಸಂಯುಕ್ತ ಪ್ರೌಢ ಶಿಕ್ಷಣ (10 + 2) ಮಟ್ಟದ ಪರೀಕ್ಷೆ (ಶ್ರೇಣಿ -1) 2019, ಕಿರಿಯ ಎಂಜಿನಿಯರ್ (ಪೇಪರ್ -1) ಪರೀಕ್ಷೆ, 2019, ಶೀಘ್ರ ಲಿಪಿಕಾರರು ಗ್ರೇಡ್ 'ಸಿ' ಮತ್ತು 'ಡಿ' ಪರೀಕ್ಷೆ, 2019 ರ ಉಳಿದ ದಿನಗಳ ಹೊಸ ದಿನಾಂಕಗಳ ಕುರಿತಂತೆ ನಿರ್ಧಾರ ಮತ್ತು ಸಂಯುಕ್ತ ಪ್ರೌಢ ಶಿಕ್ಷಣ ಮಟ್ಟದ ಪರೀಕ್ಷೆ, 2018ರ ಕೌಶಲ್ಯ ಪರೀಕ್ಷೆಯ ದಿನಾಂಕವನ್ನು 2020ರ ಮೇ 3 ರ ನಂತರ ಅಂದರೆ, ಎರಡನೇ ಹಂತದ ಲಾಕ್‌ಡೌನ್ ಪೂರ್ಣಗೊಂಡ ನಂತರ ತೆಗೆದುಕೊಳ್ಳಲಾಗುವುದು.

ಈ ಪರೀಕ್ಷೆಗಳ ಪುನರ್ ನಿಗದಿ ಮಾಡಿದ ದಿನಾಂಕಗಳನ್ನು ಆಯೋಗದ ಅಂತರ್ಜಾಲ ತಾಣದಲ್ಲಿ ಮತ್ತು ಆಯೋಗದ ಪ್ರಾದೇಶಿಕ/ಉಪ ಪ್ರಾದೇಶಿಕ ಕಚೇರಿಗಳಲ್ಲಿ ಪ್ರಕಟಿಸಲಾಗುವುದು. ಆಯೋಗವು ಅಧಿಸೂಚಿಸಿರುವ ಪರೀಕ್ಷೆಗಳ ವಾರ್ಷಿಕ ವೇಳಾಪಟ್ಟಿಯನ್ನು ಇತರ ಪರೀಕ್ಷೆಗಳ ವೇಳಾಪಟ್ಟಿಗಳಿಗೆ ಅನುಗುಣವಾಗಿ ಪರಿಶೀಲಿಸಲಾಗುತ್ತದೆ.

ಜೊತೆಗೆ, ಎಸ್.ಎಸ್.ಸಿ. ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಸದಸ್ಯರು ತಮ್ಮ ಒಂದು ದಿನದ ವೇತನವನ್ನು ಪ್ರಧಾನಮಂತ್ರಿಯವರ ನಾಗರಿಕ ನೆರವು ಮತ್ತು ತುರ್ತು ಪರಿಸ್ಥಿತಿ ಪರಿಹಾರ ನಿಧಿ (ಪಿಎಂ ಕೇರ್ಸ್ ನಿಧಿ)ಗೆ ದೇಣಿಗೆ ನೀಡಲು ನಿರ್ಧರಿಸಿದ್ದಾರೆ.

***



(Release ID: 1614973) Visitor Counter : 231