ರೈಲ್ವೇ ಸಚಿವಾಲಯ
ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಆರೋಗ್ಯ ಆರೈಕೆ ವೃತ್ತಿಪರರ ರಕ್ಷಣೆಗೆ ಭಾರೀ ಉತ್ತೇಜನ; ಏಪ್ರಿಲ್ 2020ರಲ್ಲಿ ಸುಮಾರು 30,000 ಸಂಪೂರ್ಣ ರಕ್ಷಾ ಕವಚ(ಪಿಪಿಇ)ಗಳ ಉತ್ಪಾದನೆಗೆ ಭಾರತೀಯ ರೈಲ್ವೆ ಯೋಜನೆ
Posted On:
15 APR 2020 2:23PM by PIB Bengaluru
ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಆರೋಗ್ಯ ಆರೈಕೆ ವೃತ್ತಿಪರರ ರಕ್ಷಣೆಗೆ ಭಾರೀ ಉತ್ತೇಜನ; ಏಪ್ರಿಲ್ 2020ರಲ್ಲಿ ಸುಮಾರು 30,000 ಸಂಪೂರ್ಣ ರಕ್ಷಾ ಕವಚ(ಪಿಪಿಇ)ಗಳ ಉತ್ಪಾದನೆಗೆ ಭಾರತೀಯ ರೈಲ್ವೆ ಯೋಜನೆ
ಸಮರೋಪಾದಿಯಲ್ಲಿ ಮೇ 2020ರಲ್ಲಿ 1,00,000 ಪಿಪಿಇಗಳ ಉತ್ಪಾದನೆಗಳಿಗೆ ರೈಲ್ವೆ ಯೋಜನೆ
ಆರೋಗ್ಯ ಕಾರ್ಯಕರ್ತರಿಗೆ ಸಂಪೂರ್ಣ ರಕ್ಷಣಾ ಉಪಕರಣಗಳ ಉತ್ಪಾದನೆ ಮಾಡುವಲ್ಲಿ ಇತರೆಯವರಿಗೆ ಮಾದರಿಯಾಗಲಿರುವ ರೈಲ್ವೆ
ದೊಡ್ಡ ಸಂಖ್ಯೆಯಲ್ಲಿ ಸಂಪೂರ್ಣ ದೇಹ ಮುಚ್ಚುವ ಪಿಪಿಇಗಳ ಉತ್ಪಾದನೆಗೆ ಸಜ್ಜಾದ ಭಾರತೀಯ ರೈಲ್ವೆಯ ಉತ್ಪಾದನಾ ಘಟಕಗಳು, ವಲಯ ರೈಲ್ವೆ ಕಾರ್ಯಗಾರಗಳು ಮತ್ತು ಕ್ಷೇತ್ರ ಘಟಕಗಳು
ಕೋವಿಡ್-19 ರೋಗಿಗಳ ಜೊತೆಯಲ್ಲಿ ಕೆಲಸ ಮಾಡುವ ಮತ್ತು ನೇರವಾಗಿ ಸೋಂಕಿಗೆ ಎದುರಾಗುವ ವೈದ್ಯಕೀಯ ಮತ್ತು ಆರೋಗ್ಯ ಆರೈಕೆ ಸಿಬ್ಬಂದಿಗೆ ಸಂಪೂರ್ಣ ದೇಹವನ್ನು ಮುಚ್ಚುವಂತಹ ವೈಯಕ್ತಿಕ ರಕ್ಷಣಾ ಉಪಕರಣ(ಪಿಪಿಇ) ಉತ್ಪಾದನೆಯನ್ನು ಭಾರತೀಯ ರೈಲ್ವೆಯ ಉತ್ಪಾದನಾ ಘಟಕಗಳು, ಕಾರ್ಯಾಗಾರಗಳು ಮತ್ತು ಕ್ಷೇತ್ರ ಘಟಕಗಳು ಆರಂಭಿಸಿವೆ.
ಭಾರತೀಯ ರೈಲ್ವೆ ಏಪ್ರಿಲ್ 2020ರಲ್ಲಿ ಸಂಪೂರ್ಣ ದೇಹ ರಕ್ಷಿಸುವ 30,000 ಪಿಪಿಇಗಳನ್ನು ಮತ್ತು ಮೇ 2020ರಲ್ಲಿ 1,00,000 ಪಿಪಿಇಗಳನ್ನು ಉತ್ಪಾದಿಸುವ ಯೋಜನೆ ಹಾಕಿಕೊಂಡಿದೆ. ಈ ಪ್ರೊಟೊಟೈಪ್ ಸಂಪೂರ್ಣ ದೇಹ ರಕ್ಷಿಸುವ ಉಪಕರಣವನ್ನು ಈಗಾಗಲೇ ನಿಗದಿತ ಪರೀಕ್ಷೆಗಳ ಮೂಲಕ ಅನುಮೋದನೆ ದೊರೆತಿದ್ದು, ಗ್ವಾಲಿಯರ್ ನ ಡಿಆರ್ ಡಿಒ ಪ್ರಯೋಗಾಲಯ ಆ ಮಾದರಿ ಪಿಪಿಇಗಳಿಗೆ ಒಪ್ಪಿಗೆ ನೀಡಿದೆ.
ಭಾರತೀಯ ರೈಲ್ವೆಯ ವೈದ್ಯರು, ವೈದ್ಯಕೀಯ ವೃತ್ತಿಪರರು, ಇತರೆ ಆರೋಗ್ಯ ಕಾರ್ಯಕರ್ತರು ಮತ್ತು ಆರೈಕೆ ಮಾಡುವವರು ಕೋವಿಡ್-19 ವಿರುದ್ಧ ಅವಿರತವಾಗಿ ಹೋರಾಡುತ್ತಿದ್ದಾರೆ. ಈ ಸಿಬ್ಬಂದಿ ನೇರವಾಗಿ ಕೋವಿಡ್-19 ಸೋಂಕಿತ ರೋಗಿಗಳೊಂದಿಗೆ ಕಾರ್ಯನಿರ್ವಹಣೆಯಲ್ಲಿ ತೊಡಗಿದ್ದಾಗ ನೇರವಾಗಿ ಸೋಂಕಿಗೆ ತೆರೆದು ಕೊಳ್ಳುತ್ತಾರೆ. ಈ ಪಿಪಿಇ ಕೊರೊನಾ ಸೋಂಕು ಹರಡುವುದರ ವಿರುದ್ಧ ಇದು ಮೊದಲ ಹಂತದ ರಕ್ಷಣಾ ಉಪಕರಣವಾಗಿದೆ. ಸೋಂಕು ತಡೆಗೆ ಈ ವಿಶೇಷ ಮಾದರಿಯ ಸಂಪೂರ್ಣ ದೇಹ ರಕ್ಷಿಸುವ ಉಪಕರಣಗಳ ಅಗತ್ಯತೆ ಅವರಿಗಿದೆ. ಪ್ರತಿಯೊಂದು ಸಂಪೂರ್ಣ ದೇಹ ರಕ್ಷಿಸುವ ಪಿಪಿಇಗಳನ್ನು ಒಮ್ಮೆ ಬಳಸಬಹುದಾಗಿರುವುದರಿಂದ ಅವುಗಳನ್ನು ದೊಡ್ಡ ಸಂಖ್ಯೆಯಲ್ಲಿ ಅಗತ್ಯತೆ ಇದೆ. ಕೋವಿಡ್-19 ರೋಗ ಹೆಚ್ಚಳವಾಗುತ್ತಿರುವುದರಿಂದ ವ್ಯವಸ್ಥಿತ ರೀತಿಯಲ್ಲಿ ಅದನ್ನು ನಿಯಂತ್ರಿಸುತ್ತಿದ್ದರೂ ಸಹ ಪಿಪಿಇಗಳ ಅಗತ್ಯತೆ ದ್ವಿಗುಣಗೊಳ್ಳುತ್ತಿದೆ.
ಪಿಪಿಇಗಳ ಅಗತ್ಯತೆ ಮತ್ತು ಲಭ್ಯತೆ ನಡುವಿನ ಅಂತರವನ್ನು ತುಂಬಲು ಉತ್ತರ ರೈಲ್ವೆಯ ಜಗಧಾರಿ ಕಾರ್ಯಾಗಾರ ಸಂಪೂರ್ಣ ದೇಹ ರಕ್ಷಿಸುವ ಪ್ರೊಟೊಟೈಪ್ ಪಿಪಿಇ ವಿನ್ಯಾಸ ಮತ್ತು ಉತ್ಪಾದನಾ ಕಾರ್ಯದಲ್ಲಿ ತೊಡಗಿದೆ. ಈ ಪ್ರೊಟೊಟೈಪ್ ಸಂಪೂರ್ಣ ದೇಹ ರಕ್ಷಿಸುವ ಉಪಕರಣಕ್ಕೆ ಗ್ವಾಲಿಯರ್ ನ ಡಿಆರ್ ಡಿಒದ ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆಯ ಪ್ರಯೋಗಾಲಯ ಪರೀಕ್ಷಿಸಿದೆ. ಅಂತಹ ಪರೀಕ್ಷೆ ನಡೆಸಲು ಅದಕ್ಕೆ ಅಧಿಕೃತ ಮಾನ್ಯತೆ ಇದೆ. ಡಿಆರ್ ಡಿಇ ನಡೆಸಿದ ಎಲ್ಲ ಪರೀಕ್ಷೆಗಳಲ್ಲಿ ಉತ್ತಮ ದರ್ಜೆಯೊಂದಿಗೆ ಈ ಸಂಪೂರ್ಣ ದೇಹ ರಕ್ಷಿಸುವ ಪಿಪಿಇ ಮಾದರಿಗಳು ತೇರ್ಗಡೆಯಾಗಿವೆ.
ಈ ಕ್ರಮವನ್ನು ಮುಂದುವರಿಸಿಕೊಂಡು ಭಾರತೀಯ ರೈಲ್ವೆ, ಈ ತಿಂಗಳು(ಏಪ್ರಿಲ್ 2020) 30,000ಕ್ಕೂ ಅಧಿಕ ಸಂಪೂರ್ಣ ದೇಹ ರಕ್ಷಿಸುವ ಪಿಪಿಇಗಳ ಉತ್ಪಾದನೆಗೆ ಅಗತ್ಯ ಕಚ್ಚಾ ಸಾಮಗ್ರಿಗಳನ್ನು ಖರೀದಿಸಿ, ಎಲ್ಲ ಕಾರ್ಯಾಗಾರಗಳು ಮತ್ತು ಘಟಕಗಳಿಗೆ ವಿತರಿಸಿದೆ. ಪಿಪಿಇಗಳ ಉತ್ಪಾದನೆ ಕಾರ್ಯ ಈಗಾಗಲೇ ಆರಂಭವಾಗಿದ್ದು, ಭಾರತೀಯ ರೈಲ್ವೆಯ ತನ್ನದೇ ವೈದ್ಯರಿಗೆ ಈಗಾಗಲೇ ಅವುಗಳನ್ನು ಬಳಕೆ ಮಾಡಲು ನೀಡುತ್ತಿದೆ ಮತ್ತು ಆ ಪಿಪಿಇಗಳ ಉತ್ಪಾದನೆಯನ್ನು ಹೆಚ್ಚಿಸಲು ನಡೆಸುತ್ತಿರುವ ಪ್ರಯತ್ನಗಳಿಗೆ ಆ ವೈದ್ಯರನ್ನೂ ಬಳಸಿಕೊಳ್ಳಲಾಗುತ್ತಿದೆ. ಹೆಚ್ಚುತ್ತಿರುವ ಅಗತ್ಯತೆಗಳನ್ನು ಪೂರೈಸಲು ಭಾರತೀಯ ರೈಲ್ವೆ, ಮೇ 2020ರಲ್ಲಿ ಮತ್ತೆ 1,00,000 ಸಂಪೂರ್ಣ ದೇಹ ರಕ್ಷಿಸುವ ಪಿಪಿಇಗಳ ಉತ್ಪಾದನೆ ಗುರಿ ಹೊಂದಿದೆ ಮತ್ತು ಅದಕ್ಕಾಗಿ ಅಗತ್ಯ ಕಚ್ಚಾ ಸಾಮಗ್ರಿಗಳನ್ನು ಹೊಂದಿಸುವ ಕಾರ್ಯ ಆರಂಭವಾಗಿದೆ.
ಒಟ್ಟಾರೆ ಜಾಗತಿಕವಾಗಿ ಸಂಪೂರ್ಣ ದೇಹ ರಕ್ಷಿಸುವ ಪಿಪಿಇಗಳ ಉತ್ಪಾದನೆಗೆ ಕಚ್ಚಾ ಸಾಮಗ್ರಿ ಮತ್ತು ಯಂತ್ರೋಪಕರಣಗಳ ಕೊರತೆಯ ನಡುವೆಯೂ ಈ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರ ಹಿಂದೆ ಭಾರತೀಯ ರೈಲ್ವೆಯ ಸಾಮರ್ಥ್ಯ ಮತ್ತು ಅದರ ಕಾರ್ಯಾಗಾರಗಳು ಉತ್ಪಾದನಾ ಘಟಕಗಳು, ವಿಶ್ವದಲ್ಲಿಯೇ ಅತ್ಯಂತ ಸುರಕ್ಷಿತ ರೈಲ್ವೆ ನಡೆಸುತ್ತಿರುವ ನಿರ್ವಹಣೆಗೆ ಹೆಸರಾಗಿದೆ. ಅದೇ ಸಾಮರ್ಥ್ಯ ಪರಿಣಿತಿ ಮತ್ತು ಶಿಷ್ಟಾಚಾರ ಹಾಗೂ ನಿಯಮಗಳನ್ನು ಸಾಮಾನ್ಯವಾಗಿ ವಿನ್ಯಾಸ, ಉತ್ಪಾದನೆ ಮತ್ತು ದಾಸ್ತಾನು ಬಳಕೆ ವೇಳೆ ಅನುಸರಿಸಲಾಗುತ್ತಿದ್ದು, ಕ್ಷೇತ್ರ ಘಟಕಗಳು ಕಾರ್ಯಾಗಾರಗಳನ್ನು ಬಳಸಿಕೊಂಡು ಉನ್ನತ ಗುಣಮಟ್ಟದ ಸಂಪೂರ್ಣ ದೇಹ ರಕ್ಷಿಸುವ ಪಿಪಿಇಗಳನ್ನು ಅತ್ಯಂತ ತ್ವರಿತಗತಿಯಲ್ಲಿ ಉತ್ಪಾದಿಸುವ ಕಾರ್ಯ ನಡೆದಿದೆ.
ಅದೇ ಬದ್ಧತೆಯೊಂದಿಗೆ ಭಾರತೀಯ ರೈಲ್ವೆ ಈಗಾಗಲೇ ಸುಮಾರು 5000ಕ್ಕೂ ಅಧಿಕ ತನ್ನ ಪ್ಯಾಸೆಂಜರ್ ರೈಲುಗಳನ್ನು ಅತ್ಯಲ್ಪ ಅವಧಿಯಲ್ಲಿಯೇ ಸಂಚಾರಿ ಕ್ವಾರಂಟೈನ್/ ಐಸೋಲೇಶನ್ ಸೌಕರ್ಯಗಳ ಬೋಗಿಗಳನ್ನಾಗಿ ಪರಿವರ್ತಿಸಿರುವುದು ಇಲ್ಲಿ ಉಲ್ಲೇಖಾರ್ಹ.
****
(Release ID: 1614948)
Visitor Counter : 226
Read this release in:
English
,
Urdu
,
Hindi
,
Marathi
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam