ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಕೋವಿಡ್–19 ಪ್ರಕರಣಗಳಲ್ಲಿ ತೀವ್ರವಲ್ಲದ ಸ್ಥಿತಿಯಿಂದ ತೀವ್ರವಾಗುವ ಪ್ರಗತಿಯ ಮುನ್ಸೂಚನೆಗಾಗಿ ಬಯೋಮಾರ್ಕರ್ ಗಳನ್ನು ಗುರುತಿಸುವ ಅಧ್ಯಯನವು ಪರಿಸ್ಥಿತಿ ಸುಧಾರಣೆಗೆ ಸಹಾಯಕವಾಗಲಿದೆ

Posted On: 15 APR 2020 7:33PM by PIB Bengaluru

ಕೋವಿಡ್–19 ಪ್ರಕರಣಗಳಲ್ಲಿ ತೀವ್ರವಲ್ಲದ ಸ್ಥಿತಿಯಿಂದ ತೀವ್ರವಾಗುವ ಪ್ರಗತಿಯ ಮುನ್ಸೂಚನೆಗಾಗಿ ಬಯೋಮಾರ್ಕರ್ ಗಳನ್ನು ಗುರುತಿಸುವ ಅಧ್ಯಯನವು ಪರಿಸ್ಥಿತಿ ಸುಧಾರಣೆಗೆ ಸಹಾಯಕವಾಗಲಿದೆ

 

ಬಯೋಮಾರ್ಕರ್ ಗಳ ನಿರ್ಣಯದ ಆಧಾರದ ಮೇಲೆ ಕೋವಿಡ್–19 ರ ತೀವ್ರ ಮತ್ತು ತೀವ್ರವಲ್ಲದ ಪ್ರಕರಣಗಳ ಮಧ್ಯೆ ವ್ಯತ್ಯಾಸವನ್ನು ಗುರುತಿಸಲು ಆಸಕ್ತಿಕರ ವಿಧಾನವಾಗಿದೆ…..ಇದರಲ್ಲಿ ಯಶಸ್ಸು ಕಂಡುಬಂದಲ್ಲಿ ಸುಧಾರಿತ ರೋಗ ನಿರ್ಣಯ ಮತ್ತು ಚಿಕಿತ್ಸಾ ತಂತ್ರಗಳಲ್ಲಿ ಸಾಕಷ್ಟು ಸಕಾಯಕರವಾಗಬಲ್ಲದು.”

ಮುಂಬೈಯಲ್ಲಿರುವ ಕೆಲವು ಆಸ್ಪತ್ರೆಗಳ ಜೊತೆಗೂಡಿ ಐಐಟಿ ಬಾಂಬೆ ಆಯೋಜಿಸಲಾದ ಕೋವಿಡ್ – 19 ಸೋಂಕಿನ ರೋಗಿಗಳಲ್ಲಿ ಚಯಾಪಚಯ ಬದಲಾವಣೆಯ ಪರಿಶೋಧನೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನ ಶಾಸನಬದ್ಧ ಸಂಸ್ಥೆಯಾದ ವಿಜ್ಞಾನ ಮತ್ತು ಇಂಜೀನಿಯರಿಂಗ್ ಸಂಶೋಧನೆ ಮಂಡಳಿ (ಎಸ್ ಇ ಆರ್ ಬಿ) ಸಹಾಯ ಮಾಡಲಿದೆ.  

ರೋಗಿಗಳಲ್ಲಿ ಕೋವಿಡ್ – 19 ಸೋಂಕು ಸಾಮಾನ್ಯದಿಂದ ತೀವ್ರವಾಗಿ ಪರಿಣಮಿಸುವ ಅಭಿವೃದ್ಧಿಯ ಮುನ್ಸೂಚಣೆ ನೀಡುವಲ್ಲಿ  ಸಂಭಾವ್ಯ ಬಯೋಮಾರ್ಕರ್ ಅಭ್ಯರ್ಥಿಗಳನ್ನು ಈ ಅಧ್ಯಯನದಲ್ಲಿ ಗುರುತಿಸಲಾಗುವುದು. ಸಂಭಾವ್ಯ ರೋಗ ನಿರ್ಣಯಕ್ಕಾಗಿ ರೋಗಿಗಳ ಹುಡುಕಾಟದಲ್ಲಿ ವಿವಿಧ ತೊಡಕುಗಳನ್ನು ಹೊಂದಿದ ಬೇರೆ ಬೇರೆ ರೋಗಿಗಳ ಗುಂಪುಗಳ ಮೆಟಬೊಲೈಟ್ ಪ್ರೊಫೈಲ್ ನ್ನು ಪರೀಕ್ಷಿಸಲಾಗುತ್ತದೆ. ಮೆಟಬೊಲೈಟ್ಸ್ ಎಂದರೆ ಸಣ್ಣ ಜೈವಿಕ ಅಣುಗಳು, ಇವು ಎಲ್ಲ ಜೀವಿಗಳಲ್ಲಿ ವಿವಿಧ ನಡವಳಿಯ ಮಾರ್ಗಗಳನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದಿರುತ್ತವೆ.          

ಐಐಟಿ ಬಾಂಬೆಯಲ್ಲಿ ಪ್ರೊಫೆಸರ್ ಆಗಿರುವ ಡಾ. ಸಂಜೀವ್ ಶ್ರೀವಾಸ್ತವ ಅವರು, ಅತ್ಯಾಧುನಿಕ ಮಾಸ್ ಸ್ಪಕ್ಟ್ರೊಮೆಟ್ರಿ ಆಧಾರಿತ ತಂತ್ರಜ್ಞಾನಗಳನ್ನು ಬಳಸುವ ಪರಿಣಿತಿ ಹೊಂದಿದ್ದು, ಮುಂಬೈಯ ಜಸ್ಲೋಕ್ ಆಸ್ಪತ್ರೆಯ ಸೋಂಕಿತ ರೋಗಗಳ ವಿಭಾಗದ ನಿರ್ದೇಶಕರಾದ ಡಾ. ಓಂ ಶ್ರೀವಾಸ್ತವ್, ಟಿ ಎನ್ ವೈದ್ಯಕೀಯ ಕಾಲೇಜು ಮತ್ತು ನೈರ್ ಆಸ್ಪತ್ರೆಯ (ಸೂಕ್ಷ್ಮ ಜೀವ ವಿಜ್ಞಾನ) ಮುಖ್ಯಸ್ಥರಾದ ಪ್ರೊಫೆಸರ್ ಡಾ ಜಯಂತಿ ಎಸ್ ಶಾಸ್ತ್ರಿ ಮತ್ತು ಕಸ್ತೂರ್ ಬಾ, ನೈಯ್ಯರ್ ಮತ್ತು ಜಸ್ಲೋಕ್  ಆಸ್ಪತ್ರೆಯ ಸೋಂಕಿತ ರೋಗಗಳ ತಜ್ಞರಾದ ಡಾ. ಮಾಲಾ ವಿನೋದ್ ಕನೇರಿಯಾ ಅವರನ್ನೊಳಗೊಂಡ ತಂಡದೊಂದಿಗೆ ಈ ಸಂಶೋಧನಾ ಕಾರ್ಯದಲ್ಲಿ ನಿರತರಾಗಿದ್ದಾರೆಹೈಬ್ರಿಡ್ ಮತ್ತು ಟ್ರೈಹೈಬ್ರಿಡ್ ಸ್ಪೆಕ್ಟೋಮೀಟರ್ ಗಳುಳ್ಳ ಸುಧಾರಿತ ಮಾಸ್ ಸ್ಪೆಕ್ಟೋಮೆಟ್ರಿ ಆಧಾರಿತ ರಾಷ್ಟ್ರೀಯ ಸೌಲಭ್ಯವು ಮೂಗು ಮತ್ತು ಗಂಟಲಿನ ದ್ರವದ ಸ್ವ್ಯಾಬ್ ಮತ್ತು ಪ್ಲಾಸ್ಮಾ ಮಾದರಿಗಳ ವಿಶ್ಲೇಷಣೆಗೆ ಅನುಕೂಲ ಕಲ್ಪಿಸಲಿದೆ. ಪ್ರೊಟಿಯೊಮಿಕ್ಸ್ ಮತ್ತು ಮೆಟಾಬೊಲೊಮಿಕ್ಸ್ ಪರೀಕ್ಷೆಗಾಗಿ ಹೆಚ್ಚಿನ ಸಂಖ್ಯೆಯ ವಿವಿಧ ರೀತಿಯ ಮಾನವರ ಜೈವಿಕ ಮಾದರಿಗಳು ನಿರ್ವಹಿಸುವಲ್ಲಿ ಪರಿಣಿತಿ ಹೊಂದಿರುವ 20 ಕ್ಕೂ ಹೆಚ್ಚು ಜನ ಸಂಶೋಧಕರ ತಂಡವು ಈ ಕುರಿತು ಕಾರ್ಯ ನಿರ್ವಹಿಸಲಿದೆ

ವಿವರವಾದ ಚಯಾಪಚಯ ಮತ್ತು ಪ್ರೊಟಿಯೋಮ್ ಪರೀಕ್ಷೆಗಳ ಮೂಲಕ ಬಯೋಮಾರ್ಕರ್ ಗಳ ಇತ್ಯರ್ಥವನ್ನು ಆಧರಿಸಿ ತೀವ್ರವಲ್ಲದ ಮತ್ತು ತೀವ್ರವಾದ ಕೋವಿಡ್ – 19 ಪ್ರಕರಣಗಳಲ್ಲಿ ವ್ಯತ್ಯಾಸವನ್ನು ಕಂಡುಹಿಡಿಯುವಲ್ಲಿ ಇದು ಬಹಳ ಆಸಕ್ತಿಕರ ವಿಧಾನವಾಗಿದೆ. ಇದರಲ್ಲಿ ಯಶಸ್ಸು ಕಂಡುಬಂದಲ್ಲಿ ಸುಧಾರಿತ ರೋಗ ನಿರ್ಣಯ ಮತ್ತು ಚಿಕಿತ್ಸಾ ತಂತ್ರಗಳಲ್ಲಿ ಸಾಕಷ್ಟು ಸಕಾಯಕರವಾಗಬಲ್ಲದು.”  ಎಂದು ಡಿ ಎಸ್ ಟಿ ಕಾರ್ಯದರ್ಶಿ ಪ್ರೊಫೆಸರ್ ಆಶುತೋಷ್ ಶರ್ಮಾ ಹೇಳುತ್ತಾರೆ.          

ಈ ಅಧ್ಯಯನವು ಕೋವಿಡ್ – 19 ಖಚಿತಪಟ್ಟ ರೋಗಿಗಳ ಸೌಮ್ಯ ಮತ್ತು ವಿಶಿಷ್ಟ ಉಸಿರಾಟದ ಅಂಗಭಾಗದ ರೋಗಲಕ್ಷಣಗಳನ್ನು ತೀವ್ರವಲ್ಲದ ಗುಂಪಾಗಿ ಮತ್ತು ಉಸಿರಾಟದ ತೊಂದರೆ ಅಥವಾ ಬಹು ಅಂಗಾಂಗಗಳ ವೈಫಲ್ಯವನ್ನು ತೀವ್ರ ಗುಂಪುಗಳಾಗಿ ಒಳಗೊಂಡಿರುತ್ತದೆ. ಫ್ಲು ಲಕ್ಷಣಗಳು ಮತ್ತು ಆರ್ ಟಿ ಪಿ ಸಿ ಆರ್ ನೆಗಟಿವ್ ಬಂದವರು ನಿಯಂತ್ರಣಗಳಾಗಿ ಕಾರ್ಯನಿರ್ವಹಿಸುತ್ತಾರೆ. ರೋಗಿಯ ಪ್ಲಾಸ್ಮಾ ಮತ್ತು ಸ್ವ್ಯಾಬ್ ಮಾದರಿಯ ಸಹಾಯದಿಂದ ಈ ಗುಂಪುಗಳ ಮಧ್ಯೆ ಚಯಾಪಚಯ ಕ್ರಿಯೆಯ ಹೋಲಿಕೆ ಸೋಂಕಿನ ವಿಷಯದಲ್ಲಿ ಪ್ರಗತಿಯನ್ನು ಅರ್ಥೈಸಿಕೊಳ್ಳಲು ಮತ್ತು ಪರೀಕ್ಷೆಗೆ ಒಳಪಡುವ ರೋಗಿಯ ಮೆಟಮೊಲೈಟ್ ಪ್ರೊಫೈಲ್ ನಲ್ಲಿಯ ಬದಲಾವಣೆಗಳನ್ನು ನಿರ್ಧರಿಸಲು ಇದು ಒಂದು ನವೀನ ವಿಧಾನವಾಗಿದೆ. ತೀವ್ರತೆಯ ಆಧಾರದ ಮೇಲೆ ಪ್ರತ್ಯೇಕ ರೋಗಿಗಳನ್ನು ಗುರುತಿಸುವ ಮೂಲಕ ಸಂಭಾವ್ಯ ಮಾರ್ಕರ್ ಗಳನ್ನು ಪತ್ತೆಹಚ್ಚಿ ಚಿಕಿತ್ಸೆಗಾಗಿ ಹೊಸ ಅವಕಾಶಗಳನ್ನು ಹುಡುಕಲು ಈ ಅಧ್ಯಯನವು ಸಹಾಯ ಮಾಡುತ್ತದೆ.   

ಕೋವಿಡ್ – 19 ಸಮಸ್ಯೆ ಕುರಿತು ಜಾಗತಿಕ ಮಟ್ಟದಲ್ಲಿ ಹಲವಾರು ಸಂಶೋಧನಾ ತಂಡಗಳು ಕಾರ್ಯನಿರ್ವಹಿಸುತ್ತಿವೆ ಹಾಗೂ ಇವರ ಅಧ್ಯನವು ಹೆಚ್ಚಾಗಿ ಸೆಲ್ ಲೈನ್ ಆಧಾರಿತ ಪರೀಕ್ಷೆಗೆ ಸೀಮಿತಗೊಂಡಿದೆ. ಆದರೂ ಕೋವಿಡ್ – 19 ತೀವ್ರತೆಯನ್ನು ಪತ್ತೆಹಚ್ಚಲು ಕೋವಿಡ್ – 19+ ರೋಗಿಗಳ ಚಿಕಿತ್ಸಕ ಮಾದರಿಗಳನ್ನು ವಿವರವಾದ ಚಯಾಪಚಯ ಅಥವಾ ಪ್ರೊಟಿಯೋಂ ಪರೀಕ್ಷೆಗೆ ಒಳಪಡಿಸಬೇಕಿದೆ.   

ಸೌಮ್ಯದಿಂದ ತೀವ್ರ ರೋಗ ಲಕ್ಷಣಗಳನ್ನು ಹೊಂದಿರುವ ವಿವಿಧ ರೋಗಿಗಳ ಗುಂಪುಗಳ ಪರೀಕ್ಷೆಯು, ರೋಗಿಗಳ ಲಕ್ಷಣರಹಿತ ತಂಡವನ್ನು ಗುರುತಿಸಲು ಆರಂಭಿಕ ಸೂಚನೆಗಳನ್ನು ಮತ್ತು  ಸೋಂಕಿನ ಕಾರ್ಯವಿಧಾನವನ್ನು ಅರ್ಥಮಾಡಿಕೊಳ್ಳಲು ಹಾಗೂ ಕೋವಿಡ್ – 19 ರ ತೀವ್ರ ಪ್ರಕರಣಗಳು ಮತ್ತು ತೀವ್ರವಲ್ಲದ ಪ್ರಕರಣಗಳ ಮಧ್ಯೆ ವ್ಯತ್ಯಾಸವನ್ನು ಜೀವಿಗಳ ನಡವಳಿಕೆಯ ಮಾರ್ಗದಿಂದ ಗುರುತಿಸಲು ನೆರವಾಗುತ್ತದೆ. ಭವಿಷ್ಯದ ಚಿಕಿತ್ಸಾ ವಿಧಾನಗಳಿಗೆ ಇದು ಸಹಾಯವಾಗಬಹುದು.

ಹೆಚ್ಚಿನ ವಿವರಗಳಿಗಾಗಿ ದಯಮಾಡಿ ಸಂಪರ್ಕಿಸಿ : ಡಾ. ಸಂಜೀವ್ ಶ್ರೀವಾಸ್ತವ ಐಐಟಿ ಬಾಂಬೆ

ಮಿಂಚಂಚೆ: sanjeeva@iitb.ac.in, ಮೊಬೈಲ್ : 9167111637

 

https://ci6.googleusercontent.com/proxy/qKjlOI98QMODj4rIaUydJiZWqvSNaxdTGmE0vkcEGxirHIdWqR-aqv2AMec3kemzxLbjF_ZxmIh3MKjB09nxubd2h3nFxdsuU0TE-D_0p0AeV9D1Qrcp=s0-d-e1-ft#https://static.pib.gov.in/WriteReadData/userfiles/image/image001OOHA.gif

ಡಾ. ಸಂಜೀವ್ ಶ್ರೀವಾಸ್ತವ, ಡಾ ಮಾಲಾ ವಿನೋದ್ ಕನೇರಿಯಾ ಮತ್ತು ಡಾ. ಜಯಂತಿ ಶಾಸ್ತ್ರಿ (ಚಿತ್ರದಲ್ಲಿ ಎಡದಿಂದ ಬಲಕ್ಕೆ).

****

 


(Release ID: 1614939) Visitor Counter : 182