ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಲಾಕ್‌ಡೌನ್ ಪ್ರಾರಂಭವಾದಾಗಿನಿಂದ 1.27 ಕೋಟಿಗೂ ಹೆಚ್ಚು ನಿರ್ಗತಿಕರು/ ಭಿಕ್ಷುಕರು/ ಮನೆಯಿಲ್ಲದವರಿಗೆ ಉಚಿತ ಆಹಾರವನ್ನು ಒದಗಿಸಿದೆ

Posted On: 15 APR 2020 5:48PM by PIB Bengaluru

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಲಾಕ್ಡೌನ್ ಪ್ರಾರಂಭವಾದಾಗಿನಿಂದ 1.27 ಕೋಟಿಗೂ ಹೆಚ್ಚು ನಿರ್ಗತಿಕರು/ ಭಿಕ್ಷುಕರು/ ಮನೆಯಿಲ್ಲದವರಿಗೆ ಉಚಿತ ಆಹಾರವನ್ನು ಒದಗಿಸಿದೆ

 

ಪ್ರಮುಖ ಮಹಾನಗರ ಪಾಲಿಕೆಗಳೊಂದಿಗೆ ಕೆಲಸ ಮಾಡುವ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಲಾಕ್‌ಡೌನ್ ಪ್ರಾರಂಭವಾದಾಗಿನಿಂದ (10.04.2020 ರವರೆಗೆ) 1.27 ಕೋಟಿಗೂ ಹೆಚ್ಚು ನಿರ್ಗತಿಕರು / ಭಿಕ್ಷುಕರು / ಮನೆಯಿಲ್ಲದ ವ್ಯಕ್ತಿಗಳಿಗೆ ಆಹಾರವನ್ನು ನೀಡಲು ವ್ಯವಸ್ಥೆ ಮಾಡಿದೆ. ಸಚಿವಾಲಯವು ಯೋಜನೆಯೊಂದರಲ್ಲಿ ಈಗಾಗಲೇ ದೆಹಲಿ, ಮುಂಬೈ, ಕೋಲ್ಕತಾ, ಚೆನ್ನೈ, ಹೈದರಾಬಾದ್, ಬೆಂಗಳೂರು, ಲಕ್ನೋ, ನಾಗ್ಪುರ, ಪಾಟ್ನಾ ಮತ್ತು ಇಂದೋರ್ ನಗರಗಳನ್ನು ಆಯ್ಕೆ ಮಾಡಿದೆ. ಭಿಕ್ಷಾಟನೆಯಲ್ಲಿ ತೊಡಗಿರುವ ವ್ಯಕ್ತಿಗಳನ್ನು ಗುರುತಿಸಿ ರಾಜ್ಯ ಸರ್ಕಾರಗಳು / ಕೇಂದ್ರಾಡಳಿತ ಪ್ರದೇಶಗಗಳು / ಸ್ಥಳೀಯ ನಗರ ಸಂಸ್ಥೆಗಳು ಮತ್ತು ಸ್ವಯಂಸೇವಕ ಸಂಸ್ಥೆಗಳು ಇತ್ಯಾದಿಗಳ ಬೆಂಬಲದೊಂದಿಗೆ ಕೌಶಲ್ಯ ಅಭಿವೃದ್ಧಿ, ಪುನರ್ವಸತಿ, ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಯೋಜನೆಯ ಅನುಷ್ಠಾನಕ್ಕಾಗಿ ಯೋಜನೆಯ ಅಡಿಯಲ್ಲಿ ಶೇ.100 ರಷ್ಟು ಸಹಾಯವನ್ನು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ  ಒದಗಿಸಲಾಗುತ್ತದೆ.

ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ದೇಶವು ಎದುರಿಸುತ್ತಿರುವ ಪ್ರಸ್ತುತ ಸನ್ನಿವೇಶಗಳಲ್ಲಿ ಮತ್ತು ದೇಶಾದ್ಯಂತ ಲಾಕ್ ಡೌನ್ ಇರುವುದರಿಂದ, ಭಿಕ್ಷಾಟನೆಯಲ್ಲಿ ತೊಡಗಿರುವ ಅನೇಕರು, ಅಲೆಮಾರಿಗಳು ಹಸಿವಿನಿಂದಾಗಿ ಗಂಭೀರ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂಬ ಆತಂಕವಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು, ಹತ್ತು ನಗರಗಳ ಮಹಾನಗರ ಪಾಲಿಕೆಗಳಿಗೆ ಭಿಕ್ಷುಕರು ಮತ್ತು ಅಲೆಮಾರಿಗಳಿಗೆ ಉಚಿತವಾಗಿ ಬಿಸಿ ಆಹಾರವನ್ನು ನೀಡುವುದನ್ನು ತ್ವರಿತವಾಗಿ ಜಾರಿಗೆ ತರಲು ಆಹಾರ ಕೇಂದ್ರಗಳನ್ನು ಸ್ಥಾಪಿಸುವಂತೆ ಸೂಚನೆ ನೀಡಲಾಯಿತು. ಈ ವ್ಯವಸ್ಥೆಯು ಭವಿಷ್ಯದಲ್ಲಿ ಸಮಗ್ರ ರಾಷ್ಟ್ರೀಯ ಯೋಜನೆಯಡಿ ತರಬಹುದಾದ ವ್ಯಕ್ತಿಗಳನ್ನು ಗುರುತಿಸಲು ಸಹಕಾರಿಯಾಗುತ್ತದೆ.

ಬಿಸಿ ಊಟವನ್ನು ಒದಗಿಸಿದ ನಿರ್ಗತಿಕ / ಭಿಕ್ಷುಕರು / ಮನೆಯಿಲ್ಲದ ವ್ಯಕ್ತಿಗಳ ನಗರವಾರು ವಿವರಗಳು ಹೀಗಿವೆ:

ಕ್ರ.ಸಂ.

ನಗರದ ಹೆಸರು

ಉಚಿತ ಆಹಾರ ಪಡೆದವರ ಸಂಖ್ಯೆ (ಲಕ್ಷಗಳಲ್ಲಿ)

1.

ದೆಹಲಿ

75.0

2.

ಮುಂಬೈ

9.8

3

ಕೋಲ್ಕತಾ

1.3

4.

ಚೆನ್ನೈ

3.5

5.

ಬೆಂಗಳೂರು

14.0

6.

ಹೈದರಾಬಾದ್

7.0

7.

ನಾಗಪುರ

0.8

8.

ಇಂದೋರ್

8.4

9.

ಲಕ್ನೋ

7.0

10.

ಪಾಟ್ನಾ

0.5

 

ಒಟ್ಟು

127.30

 

***



(Release ID: 1614861) Visitor Counter : 237