ರೈಲ್ವೇ ಸಚಿವಾಲಯ

ರೈಲ್ವೆಗೆ ಆದಾಯ ತರುತ್ತಿರುವ ಪಾರ್ಸೆಲ್ ರೈಲುಗಳು; ಲಾಕ್‌ಡೌನ್ ಪ್ರಾರಂಭವಾದಾಗಿನಿಂದ 20,400 ಟನ್‌ಗೂ ಹೆಚ್ಚು ಸರಕುಗಳ ಸಾಗಣೆ, ಸುಮಾರು 7.54 ಕೋಟಿ ರೂ. ಗಳಿಕೆ

Posted On: 15 APR 2020 3:46PM by PIB Bengaluru

ರೈಲ್ವೆಗೆ ಆದಾಯ ತರುತ್ತಿರುವ ಪಾರ್ಸೆಲ್ ರೈಲುಗಳು; ಲಾಕ್ಡೌನ್ ಪ್ರಾರಂಭವಾದಾಗಿನಿಂದ 20,400 ಟನ್ಗೂ ಹೆಚ್ಚು ಸರಕುಗಳ ಸಾಗಣೆ, ಸುಮಾರು 7.54 ಕೋಟಿ ರೂ. ಗಳಿಕೆ

ಲಾಕ್ ಡೌನ್ ಸಮಯದಲ್ಲಿ ಸರಬರಾಜು ಸರಪಳಿಗೆ ಪೂರಕವಾಗಿ ಸಣ್ಣ ಗಾತ್ರದ ಅಗತ್ಯ ವಸ್ತುಗಳ ಪಾರ್ಸೆಲ್ ತ್ವರಿತವಾಗಿ ಸಾಗಿಸಲು ರೈಲ್ವೆಯಿಂದ ಪಾರ್ಸೆಲ್ ವ್ಯಾನ್ಗಳ ಸೌಲಭ್ಯ

65 ಮಾರ್ಗಗಳಲ್ಲಿ ರೈಲುಗಳನ್ನು ಓಡಿಸಲಾಗುತ್ತಿದೆ; ಒಟ್ಟು 507 ರೈಲುಗಳು ಏಪ್ರಿಲ್ 14 ರವರೆಗೆ ಸಂಚರಿಸಿವೆ

 

ಕೋವಿಡ್-19 ಸಾಂಕ್ರಾಮಿಕದಿಂದಾಗಿ ಲಾಕ್‌ಡೌನ್ ಸಮಯದಲ್ಲಿ ವೈದ್ಯಕೀಯ ಸರಬರಾಜು, ವೈದ್ಯಕೀಯ ಉಪಕರಣಗಳು, ಆಹಾರ ಇತ್ಯಾದಿ ಅಗತ್ಯ ಸಾಮಗ್ರಿಗಗಳನ್ನು ಸಣ್ಣ ಪಾರ್ಸೆಲ್ ಗಾತ್ರಗಳಲ್ಲಿ ಸಾಗಿಸುವುದು ಬಹಳ ಮುಖ್ಯವಾಗಿದೆ. ಈ ಮಹತ್ವದ ಅಗತ್ಯವನ್ನು ಪೂರೈಸುವ ಸಲುವಾಗಿ, ಭಾರತೀಯ ರೈಲ್ವೆಯು, ರೈಲ್ವೆ ಪಾರ್ಸೆಲ್ ವ್ಯಾನ್‌ಗಳನ್ನು ಇ-ಕಾಮರ್ಸ್ ಘಟಕಗಳು ಮತ್ತು ರಾಜ್ಯ ಸರ್ಕಾರಗಳು ಸೇರಿದಂತೆ ಇತರ ಗ್ರಾಹಕರಿಗೆ ತ್ವರಿತ ಸಾಮೂಹಿಕ ಸಾಗಣೆಗೆ ಲಭ್ಯವಾಗುವಂತೆ ವ್ಯವಸ್ಥೆ ಮಾಡಿದೆ. ಅಗತ್ಯ ವಸ್ತುಗಳ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಆಯ್ದ ಮಾರ್ಗಗಳಲ್ಲಿ ವೇಳಾಪಟ್ಟಿಯೊಂದಿಗೆ ಪಾರ್ಸೆಲ್ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ.

ಈ ಪಾರ್ಸೆಲ್ ವಿಶೇಷ ರೈಲುಗಳ ಮಾರ್ಗಗಳನ್ನು ವಲಯ ರೈಲ್ವೆಯು ನಿಯಮಿತವಾಗಿ ಗುರುತಿಸಿ, ಕಾರ್ಯಾಚರಿಸುತ್ತದೆ.  ಪ್ರಸ್ತುತ ಈ ರೈಲುಗಳನ್ನು ಅರವತ್ತೈದು ಮಾರ್ಗಗಳಲ್ಲಿ ಓಡಿಸಲಾಗುತ್ತಿದೆ. ಈ ಕೆಳಕಂಡ ಮಾರ್ಗಗಳನ್ನು ಸೇರಿಸಲು ಗುರುತಿಸಲಾಗಿದೆ:

i)          ದೇಶದ ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಕೋಲ್ಕತಾ, ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್ ನಡುವೆ ನಿಯಮಿತ ಸಂಪರ್ಕ

ii)         ರಾಜ್ಯ-ರಾಜಧಾನಿಗಳು / ಪ್ರಮುಖ ನಗರಗಳಿಂದ ರಾಜ್ಯದ ಎಲ್ಲಾ ಭಾಗಗಳಿಗೆ ಸಂಪರ್ಕ

iii)        ದೇಶದ ಈಶಾನ್ಯ ಭಾಗಕ್ಕೆ ಸಂಪರ್ಕವನ್ನು ಖಚಿತಪಡಿಸುವುದು

iv)        ಹೆಚ್ಚುವರಿ ಪ್ರದೇಶಗಳಿಂದ (ಗುಜರಾತ್, ಆಂಧ್ರ ಪ್ರದೇಶ) ಹಾಲು ಮತ್ತು ಡೈರಿ ಉತ್ಪನ್ನಗಳನ್ನು ಹೆಚ್ಚು ಬೇಡಿಕೆಯ ಪ್ರದೇಶಗಳಿಗೆ ಸರಬರಾಜು ಮಾಡುವುದು

v)         ಉತ್ಪಾದನಾ ಪ್ರದೇಶಗಳಿಂದ ದೇಶದ ಇತರ ಭಾಗಗಳಿಗೆ ಇತರ ಅಗತ್ಯ ವಸ್ತುಗಳ (ಕೃಷಿ ಸಲಕರಣೆಗಳು, ಔಷಧಿಗಳು, ವೈದ್ಯಕೀಯ ಉಪಕರಣಗಳು, ಇತ್ಯಾದಿ) ಸರಬರಾಜು

14.04.2020 ರ 18:00 ಗಂಟೆಯವರೆಗೆ, ಎಪ್ಪತ್ತೇಳು ರೈಲುಗಳನ್ನು ಓಡಿಸಲಾಗಿದ್ದು, ಅದರಲ್ಲಿ ಎಪ್ಪತ್ತೈದು) ರೈಲುಗಳು ನಿಗದಿತ ವೇಳಾಪಟ್ಟಿಯ ಪಾರ್ಸೆಲ್ ವಿಶೇಷ ರೈಲುಗಳಾಗಿವೆ. 1835 ಟನ್ ಸಾಮಗ್ರಿಗಳನ್ನು ಲೋಡ್ ಮಾಡಲಾಗಿದ್ದು, ಒಂದೇ ದಿನದಲ್ಲಿ ರೈಲ್ವೆಗೆ 63 ಲಕ್ಷ ರೂ. ಆದಾಯ ತಂದಿದೆ.

14.04.2020 ರ 18:00 ಗಂಟೆಯವರೆಗೆ ಒಟ್ಟು 522 ರೈಲುಗಳು ಸಂಚರಿಸಿದ್ದು, ಈ ಪೈಕಿ 458 ರೈಲುಗಳು ಸಮಯ ನಿಗದಿತ ವೇಳಾಪಟ್ಟಿಯ ರೈಲುಗಳಾಗಿವೆ. 20, 474 ಟನ್ ಸರಕುಗಳನ್ನು ಲೋಡ್ ಮಾಡಲಾಗಿದ್ದು, ಇದರಿಂದ ಸುಮಾರು 7.54 ಕೋಟಿ ರೂ. ಗಳಿಕೆಯಾಗಿದೆ.

***



(Release ID: 1614800) Visitor Counter : 227