ಕೃಷಿ ಸಚಿವಾಲಯ
ಲಾಕ್‌ಡೌನ್ ಸಂದರ್ಭದಲ್ಲಿ ಬೇಗ ಹಾಳಾಗುವ ವಸ್ತುಗಳ ಅಂತರ ರಾಜ್ಯಸಂಚಾರಕ್ಕೆ ನೆರವಾಗಲು ಅಖಿಲ ಭಾರತ ಕೃಷಿ ಸಾರಿಗೆ ಕಾಲ್ ಸೆಂಟರ್ ಸಂಖ್ಯೆಗಳಿಗೆ -18001804200 ಮತ್ತು 14488 -ಚಾಲನೆ ನೀಡಿದ ಕೃಷಿ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್
Posted On:
15 APR 2020 1:28PM by PIB Bengaluru
ಲಾಕ್ಡೌನ್ ಸಂದರ್ಭದಲ್ಲಿ ಬೇಗ ಹಾಳಾಗುವ ವಸ್ತುಗಳ ಅಂತರ ರಾಜ್ಯಸಂಚಾರಕ್ಕೆ ನೆರವಾಗಲು ಅಖಿಲ ಭಾರತ ಕೃಷಿ ಸಾರಿಗೆ ಕಾಲ್ ಸೆಂಟರ್ ಸಂಖ್ಯೆಗಳಿಗೆ -18001804200 ಮತ್ತು 14488 -ಚಾಲನೆ ನೀಡಿದ ಕೃಷಿ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್
ಕೋವಿಡ್ ಸಾಂಕ್ರಾಮಿಕದ ಲಾಕ್ಡೌನ್ನ ಪ್ರಸ್ತುತ ಪರಿಸ್ಥಿತಿಯಲ್ಲಿ ಬೇಗ ಹಾಳಾಗುವ ವಸ್ತುಗಳ ಅಂತರರಾಜ್ಯ ಸಂಚಾರಕ್ಕೆ ಅನುಕೂಲವಾಗುವಂತೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ಇಂದು ಕೃಷಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಅಖಿಲ ಭಾರತ ಕೃಷಿ ಸಾರಿಗೆ ಕಾಲ್ ಸೆಂಟರ್ ಗೆ ಚಾಲನೆ ನೀಡಿದರು. ಕಾಲ್ ಸೆಂಟರ್ ಸಂಖ್ಯೆಗಳು 18001804200 ಮತ್ತು 14488. ಈ ಸಂಖ್ಯೆಗಳಿಗೆ ಯಾವುದೇ ಮೊಬೈಲ್ ಅಥವಾ ಸ್ಥಿರ ದೂರವಾಣಿಯಿಂದ ಯಾವುದೇ ಸಮಯದಲ್ಲೂ ಕರೆ ಮಾಡಬಹುದು.
24x7 ಸೇವೆಯ ಅಖಿಲ ಭಾರತ ಕೃಷಿ ಸಾರಿಗೆ ಕಾಲ್ ಸೆಂಟರ್ ಕೃಷಿ, ಸಹಕಾರ ಮತ್ತು ರೈತ ಕಲ್ಯಾಣ ಇಲಾಖೆಯ (ಡಿಎಸಿ ಮತ್ತು ಎಫ್ಡಬ್ಲ್ಯು) ಉಪಕ್ರಮವಾಗಿದ್ದು, ಬೇಗ ಹಾಳಾಗುವ - ತರಕಾರಿಗಳು ಮತ್ತು ಹಣ್ಣುಗಳು, ಬೀಜಗಳು, ಕೀಟನಾಶಕಗಳು ಮತ್ತು ಗೊಬ್ಬರ ಇತ್ಯಾದಿ- ವಸ್ತುಗಳ ಅಂತರ-ರಾಜ್ಯ ಚಲನೆಗಾಗಿ ರಾಜ್ಯಗಳ ನಡುವೆ ಸಮನ್ವಯಕ್ಕಾಗಿ ಇದನ್ನು ಆರಂಭಿಸಲಾಗಿದೆ.
ಅಂತರ-ರಾಜ್ಯ ಸಂಚಾರದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವ ಟ್ರಕ್ ಚಾಲಕರು ಮತ್ತು ಸಹಾಯಕರು, ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳು, ಸಾಗಣೆದಾರರು ರೈತರು, ತಯಾರಕರು ಅಥವಾ ಇನ್ನಿತರ ಪಾಲುದಾರರು, ಕೃಷಿ, ತೋಟಗಾರಿಕೆ ಅಥವಾ ಇತರ ಯಾವುದೇ ಬೇಗ ಹಾಳಾಗುವ ಸರಕುಗಳು ಹಾಗೂ ಬೀಜಗಳು ಮತ್ತು ರಸಗೊಬ್ಬರಗಳ ಸಾಗಣೆಯಲ್ಲಿ ಸಮಸ್ಯೆ ಎದುರಿಸುತ್ತಿರುವವರು ಈಕಾಲ್ ಸೆಂಟರ್ ಗೆ ಕರೆ ಮಾಡುವ ಮೂಲಕ ಸಹಾಯ ಪಡೆಯಬಹುದು. ಕಾಲ್ ಸೆಂಟರ್ ನಿರ್ವಾಹಕರು ವಾಹನ ಮತ್ತು ರವಾನೆಯ ವಿವರಗಳನ್ನು ಅಗತ್ಯವಿರುವ ಸಹಾಯದೊಂದಿಗೆ ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ಸಮಸ್ಯೆ ಪರಿಹಾರಕ್ಕಾಗಿ ಕಳುಹಿಸುತ್ತಾರೆ.
ಹರಿಯಾಣದ ಫರೀದಾಬಾದ್ನಲ್ಲಿರುವ ತಮ್ಮ ಕಚೇರಿಗಳಿಂದ ಇಫ್ಕೊ ಕಿಸಾನ್ ಸಂಚಾರ್ ಲಿಮಿಟೆಡ್ (ಐಕೆಎಸ್ಎಲ್) ನಿರ್ವಹಿಸುತ್ತಿರುವ ಈ ಕಾಲ್ ಸೆಂಟರ್ ಮಾರ್ಗಗಳನ್ನು ಆರಂಭದಲ್ಲಿ 10 ಗ್ರಾಹಕ ನಿರ್ವಾಹಕರು ತಲಾ 8 ಗಂಟೆಗಳ 3 ಪಾಳಿಯಲ್ಲಿ ದಿನದ 24 ಗಂಟೆಯೂ ನಿರ್ವಹಿಸುತ್ತಾರೆ. ಕಾಲ್ ಸೆಂಟರ್ ಸೇವೆಯನ್ನು ಅವಶ್ಯಕತೆಗಳ ಆಧಾರದ ಮೇಲೆ 20 ಆಸನಗಳ ಪೂರ್ಣ ಸಾಮರ್ಥ್ಯಕ್ಕೆ ಹೆಚ್ಚಿಸಬಹುದು. ಕಾಲ್ ಸೆಂಟರ್ ನಿರ್ವಾಹಕರು ದಾಖಲೆಗಳನ್ನು ನಿರ್ವಹಿಸುತ್ತಾರೆ ಮತ್ತು ಸಮಸ್ಯೆಯ ವಿಲೇವಾರಿಯನ್ನೂ ಪರಿಶೀಲಿಸುತ್ತಾರೆ.
ಅಖಿಲ ಭಾರತ ಕೃಷಿ ಸಾರಿಗೆ ಕಾಲ್ ಸೆಂಟರ್ ಚಾಲನಾ ಸಮಾರಂಭದಲ್ಲಿ ರಾಜ್ಯ ಸಚಿವರು (ಕೃಷಿ ಮತ್ತು ರೈತ ಕಲ್ಯಾಣ) ಶ್ರೀ ಪರ್ಶೋತ್ತಂ ರೂಪಾಲಾ ಮತ್ತು ಕೃಷಿ, ಸಹಕಾರ ಮತ್ತು ರೈತ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಶ್ರೀ ಸಂಜಯ್ ಅಗರ್ವಾಲ್ ಮತ್ತು ಸಚಿವಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. 24x7 ಕಾಲ್ ಸೆಂಟರ್ ಸೇವೆಯು ಲಾಕ್ ಡೌನ್ ಅವಧಿಯಲ್ಲಿ ರೈತರಿಗೆ ಮತ್ತು ಕೃಷಿ ಚಟುವಟಿಕೆಗಳಿಗೆ ಕ್ಷೇತ್ರ ಮಟ್ಟದಲ್ಲಿ ಅನುಕೂಲವಾಗುವಂತೆ ಕೃಷಿ, ಸಹಕಾರ ಮತ್ತು ರೈತ ಕಲ್ಯಾಣ ಇಲಾಖೆಯು ಕೈಗೊಂಡ ಹಲವಾರು ಕ್ರಮಗಳ ಒಂದು ಭಾಗವಾಗಿದೆ.
***
(Release ID: 1614693)
Visitor Counter : 282
Read this release in:
Punjabi
,
English
,
Urdu
,
Hindi
,
Marathi
,
Bengali
,
Assamese
,
Gujarati
,
Tamil
,
Telugu
,
Malayalam