ನಾಗರೀಕ ವಿಮಾನಯಾನ ಸಚಿವಾಲಯ

ದೇಶಾದ್ಯಂತ ಜನರಿಗೆ ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ಒದಗಿಸುಲು ಸರ್ಕಾರ ಮತ್ತು ವಾಯುಯಾನ ಉದ್ಯಮ ಬದ್ಧವಾಗಿದೆ

Posted On: 14 APR 2020 7:47PM by PIB Bengaluru

ದೇಶಾದ್ಯಂತ ಜನರಿಗೆ ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ಒದಗಿಸುಲು ಸರ್ಕಾರ ಮತ್ತು ವಾಯುಯಾನ ಉದ್ಯಮ ಬದ್ಧವಾಗಿದೆ

ವಿಶೇಷವಾಗಿ ಈಶಾನ್ಯ ಸೇರಿದಂತೆ ದೂರದ ಪ್ರದೇಶಗಳಿಗೆ ಎಡೆಬಿಡದ ಸರಬರಾಜನ್ನು ಖಚಿತಪಡಿಸಲು ಕೊವಿಡ್ ಯೋಧರು ಶ್ರಮಿಸುತ್ತಿದ್ದಾರೆ

 

ಭಾರತದಲ್ಲಿ ಮತ್ತು ವಿದೇಶಗಳಿಗೆ ವೈದ್ಯಕೀಯ ಸರಕುಗಳನ್ನು ಪರಿಣಾಮಕಾರಿ ಮತ್ತು ಕಡಿಮೆ ಬೆಲೆಯಲ್ಲಿ ಸಾಗಿಸುವ ಮೂಲಕ ಕೊವಿಡ್ – 19 ರ ವಿರುದ್ಧದ ಭಾರತದ ಹೋರಾಟಕ್ಕೆ ಬೆಂಬಲ ನೀಡಲು ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ವಾಯುಯಾನ ಉದ್ಯಮ ದೃಢ ನಿರ್ಧಾರ ಕೈಗೊಂಡಿವೆ. ಕೊವಿಡಗ – 19 ವಿರುದ್ಧದ ಭಾರತದ ಹೋರಾಟವನ್ನು ಬೆಂಬಲಿಸಲು ‘ಲೈಫ್ ಲೈನ್ ಉಡಾನ್’ ಮೂಲಕ ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ದೇಶದ ದೂರದ ಭಾಗಗಳಿಗೆ ಸಾಗಿಸುವ ಕಾರ್ಯವನ್ನ ನಾಗರಿಕ ವಿಮಾನಯಾನ ಸಚಿವಾಲಯ ನಿರ್ವಹಿಸಿದೆ. ಏರ್ ಇಂಡಿಯಾ, ಅಲಯೆನ್ಸ್ ಏರ್ ಐಎಎಫ್, ಮತ್ತು ಖಾಸಗಿ ಸಂಸ್ಥೆಗಳು ಲೈಫ್ ಲೈನ್ ಉಡಾನ್ ಅಡಿಯಲ್ಲಿ 227 ವಿಮಾನಗಳನ್ನು ನಿರ್ವಹಿಸಿವೆ. ಇವುಗಳಲ್ಲಿ 138 ವಿಮಾನಗಳು ಏರ್ ಇಂಡಿಯಾ ಮತ್ತು ಅಲಯೆನ್ಸ್ ಏರ್ ಸಂಸ್ಥೆಗಳದ್ದಾಗಿವೆ. ಇಲ್ಲಿಯವರೆಗೆ ಸುಮಾರು 407.40 ಟನ್ ಗಳಷ್ಟು ಸರಕುಗಳನ್ನು ಸಾಗಿಸಲಾಗಿದೆ. ಇಂದಿನವರೆಗೆ ಲೈಫ್ ಲೈನ್ ಉಡಾನ್ ವಿಮಾನಗಳು ಸುಮಾರು 2,20,129 ಕಿ. ಮೀ. ಗಳ ವ್ಯಾಪ್ತಿಯನ್ನ ಕ್ರಮಿಸಿವೆ. ವಿಶೇಷವಾಗಿ ಈಶಾನ್ಯ ಸೇರಿದಂತೆ ದೂರದ ಪ್ರದೇಶಗಳಿಗೆ ಎಡೆಬಿಡದ ಸರಬರಾಜನ್ನು ಖಚಿತಪಡಿಸಲು ಕೊವಿಡ್ ಯೋಧರು ಶ್ರಮಿಸುತ್ತಿದ್ದಾರೆ.

 

ಕ್ರಮಿಸಿದ ಒಟ್ಟು ಕಿಲೋಮೀಟರ್

2,20,129 ಕಿ. ಮೀ.

12.04.2020 ರಂದು ಸಾಗಿಸಿದ ಸರಕುಗಳ ತೂಕ

29.90 ಟನ್ ಗಳು

12.04.2020 ರ ವರೆಗೆ ಸಾಗಿಸಿದ ಸರಕುಗಳ ಒಟ್ಟು ತೂಕ

377.50 + 29.90 = 407.40 ಟನ್ ಗಳು

 

ಲೈಫ್ ಲೈನ್ ಉಡಾನ್ ವಿಮಾನಗಳ ದಿನಾಂಕವಾರು ವಿಂಗಡನೆ ಕೆಳಗಿನಂತಿದೆ:

ಕ್ರಮ ಸಂಖ್ಯೆ

ದಿನಾಂಕ

ಏರ್ ಇಂಡಿಯಾ

ಮೈತ್ರಿ

ಐಎಎಫ್

ಇಂಡಿಗೊ

ಸ್ಪೈಸ್ ಜೆಟ್

ನಿರ್ವಹಿಸಿದ ಒಟ್ಟು ವಿಮಾನಗಳು

1

26.3.2020

2

-

-

-

2

4

2

27.3.2020

4

9

1

-

-

14

3

28.3.2020

4

8

-

6

-

18

4

29.3.2020

4

9

6

-

-

19

5

30.3.2020

4

-

3

-

-

7

6

31.3.2020

9

2

1

-

-

12

7

01.4.2020

3

3

4

-

-

10

8

02.4.2020

4

5

3

-

-

12

9

03.4.2020

8

-

2

-

-

10

10

04.4.2020

4

3

2

-

-

9

11

05.4.2020

-

-

16

-

-

16

12

06.4.2020

3

4

13

-

-

-

13

07.4.2020

4

2

3

-

-

9

14

08.4.2020

3

-

3

-

-

6

15

09.4.2020

4

8

1

-

-

13

16

10.4.2020

2

4

2

-

-

8

17

11.4.2020

5

4

18

-

-

27

18

12.4.2020

2

2

-

-

-

4

19

13.4.2020

3

3

3

 

 

9

 

ಒಟ್ಟು

72

66

81

6

2

227

 

ಪವನ್ ಹನ್ಸ್ ನಿಯಮಿತ ಸಂಸ್ಥೆ ಸೇರಿದಂತೆ ಹೆಲಿಕಾಪ್ಟರ್ ಸೇವೆಗಳು ಜಮ್ಮು ಮತ್ತು ಕಾಶ್ಮೀರ, ಲದಾಖ್, ದ್ವೀಪಗಳು ಮತ್ತು ಈಶಾನ್ಯ ಪ್ರದೇಶಗಳಿಗೆ ನಿರ್ಣಾಯಕ ವೈದ್ಯಕೀಯ ಸಾಮಗ್ರಿಗಳು ಮತ್ತು ರೋಗಿಗಳನ್ನು ಸಾಗಿಸಲು ಕಾರ್ಯನಿರ್ವಹಿಸುತ್ತಿವೆ.

ದೇಶೀಯ ಲೀಫ್ ಲೈನ್ ಉಡಾನ್ ಸಾಗಾಣೆ ಮಾಡುವ ಸರಕುಗಳಲ್ಲಿ, ಕೊವಿಡ್ – 19 ಗೆ ಸಂಬಂಧಿಸಿದ ಕಾರಕಗಳು, ಕಿಣ್ವಗಳು, ವೈದ್ಯಕೀಯ ಉಪಕರಣಗಳು, ಪರೀಕ್ಷಾ ಕಿಟ್ ಗಳು ಮತ್ತು ವೈಯಕ್ತಿಕ ರಕ್ಷಣಾ ಸಾಧನಗಳು (ಪಿಪಿಇ), ಮಾಸ್ಕ್ ಗಳು, ಕೈಗವಸುಗಳು ಮತ್ತು ಹೆಚ್ ಎಲ್ ಎಲ್ ಹಾಗೂ ಐ ಸಿ ಎಮ್ ಆರ್ ನ ಇತರ ಉಪಕರಣಗಳೂ ಸೇರಿದಂತೆ, ರಾಜ್ಯ ಮತ್ತು ಕೇಂದ್ರಾಡಳಿತ ಸರ್ಕಾರಗಳಿಂದ ಮನವಿ ಪಡೆಯಲಾದ ಸರಕುಗಳು ಮತ್ತು ಅಂಚೆ ಪ್ಯಾಕೆಟ್ ಗಳನ್ನು ಸಹ ಒಳಗೊಂಡಿದೆ.

ದೇಶೀಯ ಸರಕು ಸಾಗಿಸುವ ವಿಮಾನಯಾನ ನಿರ್ವಾಹಕರಾದ; ಬ್ಲೂ ಡಾರ್ಟ್, ಸ್ಪೈಸ್ ಜೆಟ್ ಮತ್ತು ಇಂಡಿಗೊ ವಾಣಿಜ್ಯ ಆಧಾರದ ಮೇಲೆ ಕಾರ್ಗೊ ವಿಮಾನಗಳ ಹಾರಾಟ ನಿರ್ವಹಿಸುತ್ತಿವೆ. ಸ್ಪೈಸ್ ಜೆಟ್ 4,50,139 ಕಿ. ಮೀ. ದೂರವನ್ನು ಮತ್ತು 2645 ಟನ್ ಗಳಷ್ಟು ಸರಕುಗಳನ್ನು 315 ಕಾರ್ಗೊ ವಿಮಾನಗಳ ಮೂಲಕ ಸಾಗಾಟ ನಡೆಸಿತು. ಇವುಗಳಲ್ಲಿ 100 ವಿದೇಶೀ ಕಾರ್ಗೊ ವಿಮಾನಗಳಾಗಿವೆ. ಬ್ಲೂ ಡಾರ್ಟ್ 1,01,042 ಕಿ. ಮೀ. ದೂರವನ್ನು ಮತ್ತು 1636 ಟನ್ ಗಳಷ್ಟು ಸರಕುಗಳನ್ನು 104 ದೇಶೀಯ ಕಾರ್ಗೊ ವಿಮಾನಗಳ ಮೂಲಕ, 25 ಮಾರ್ಚ್ ರಿಂದ 13 ಏಪ್ರಿಲ್ 2020 ರ ನಡುವೆ ಸಾಗಾಟ ನಡೆಸಿತು. ಇಂಡಿಗೊ 21,906 ಕಿ. ಮೀ. ದೂರವನ್ನು ಮತ್ತು 21.77 ಟನ್ ಗಳಷ್ಟು ಸರಕುಗಳನ್ನು 25 ಕಾರ್ಗೊ ವಿಮಾನಗಳ ಮೂಲಕ 3 ರಿಂದ 13 ಏಪ್ರಿಲ್ 2020 ರ ನಡುವೆ ಸಾಗಾಟ ನಡೆಸಿತು. ಇದರಲ್ಲಿ ಸರ್ಕಾರಕ್ಕಾಗಿ ಉಚಿತವಾಗಿ ಸಾಗಿಸಲಾದ ವೈದ್ಯಕೀಯ ಸಾಮಗ್ರಿಗಳೂ ಒಳಗೊಂಡಿವೆ.

 

ಅಂತಾರಾಷ್ಟ್ರೀಯ ವಲಯ

ಏಪ್ರಿಲ್ 13 ರಂದು ಏರ್ ಇಂಡಿಯಾ ಮುಂಬೈ ಮತ್ತು ಲಂಡನ್ ನಡುವೆ 28.95 ಟನ್ ಗಳಷ್ಟು ಹಣ್ಣು ಮತ್ತು ತರಕಾರಿಗಳನ್ನು ಲಂಡನ್ ಗೆ ಸಾಗಿಸಿತು ಮತ್ತು ಅಲ್ಲಿಂದ 15.6 ಟನ್ ಗಳಷ್ಟು ಸಾಮಾನ್ಯ ಸರಕುಗಳೊಂದಿಗೆ ಮರಳಿ ಬಂತು. ಅವಶ್ಯಕತೆಗೆ ಅನುಗುಣವಾಗಿ, ನಿರ್ಣಾಯಕ ವೈದ್ಯಕೀಯ ಉಪಕರಣಗಳನ್ನು ಇತರ ದೇಶಗಳಿಗೆ ಸಾಗಿಸಲು ಏರ್ ಇಂಡಿಯಾ ನಿಯಮಿತ ಕಾರ್ಗೊ ವಿಮಾನಗಳನ್ನು ಮೀಸಲಿರಿಸಿದೆ. ದಕ್ಷಿಣ ಏಷ್ಯಾ ದಲ್ಲಿ ಮಾತ್ರ ಏಪ್ರಿಲ್ 7, 2020 ರಂದು 9 ಟನ್ ಗಳು ಮತ್ತು ಏಪ್ರಿಲ್ 8, 2020 ರಂದು 4 ಟನ್ ಗಳಷ್ಟು ಸಾಮಗ್ರಿಗಳನ್ನು ಏರ್ ಇಂಡಿಯಾ ಕೊಲಂಬೊಗೆ ಸಾಗಿಸಿತ್ತು.

 

ಔಷಧಿಗಳು, ವೈದ್ಯಕೀಯ ಉಪಕರಣಗಳು ಮತ್ತು ಕೊವಿಡ್ – 19 ಪರಿಹಾರ ಸಾಮಗ್ರಿಗಳನ್ನು ಸಾಗಿಸಲು, ಏಪ್ರಿಲ್ 4, 2020 ರಿಂದ ಜಾರಿಗೆ ಬರುವಂತೆ ಏರ್-ಬ್ರಿಡ್ಜ್ ಅನ್ನು ಪ್ರಾರಂಭಿಸಲಾಗಿದೆ. ತರಲಾದ ವೈದ್ಯಕೀಯ ಸರಕುಗಳ ದಿನಾಂಕವಾರು ಪ್ರಮಾಣ ಈ ಕೆಳಗಿನಂತಿದೆ:

 

ಕ್ರಮ ಸಂಖ್ಯೆ

ದಿನಾಂಕ

ಇಂದ

ಪ್ರಮಾಣ (ಟನ್ ಗಳಲ್ಲಿ)

1

04.4.2020

ಶಾಂಘಾಯ್

21

2

07.4.2020

ಹಾಂಗ್ ಕಾಂಗ್

6

3

09.4.2020

ಶಾಂಘಾಯ್

22

4

10.4.2020

ಶಾಂಘಾಯ್

18

5

11.4.2020

ಶಾಂಘಾಯ್

18

6

12.4.2020

ಶಾಂಘಾಯ್

24

 

 

ಒಟ್ಟು

109

 

 

ಸ್ಪೈಸ್ ಜೆಟ್ ನಿಂದ ದೇಶೀಯ ಕಾರ್ಗೊ ಸಾಗಣೆ (13.04.2020 ರಂತೆ)

 

ದಿನಾಂಕ

ವಿಮಾನಗಳ ಸಂಖ್ಯೆ

ಟನ್ನುಗಳು

ಕಿ. ಮೀ. ಗಳು

13-04-2020

10

111.14

9,900

 

ಸ್ಪೈಸ್ ಜೆಟ್ ನಿಂದ ಅಂತಾರಾಷ್ಟ್ರೀಯ ಕಾರ್ಗೊ ಸಾಗಣೆ (13.04.2020 ರಂತೆ)

ದಿನಾಂಕ

ವಿಮಾನಗಳ ಸಂಖ್ಯೆ

ಟನ್ನುಗಳು

ಕಿ. ಮೀ. ಗಳು

13-04-2020

5

55.86

13,706

 

ಬ್ಲೂ ಡಾರ್ಟ್ ಕಾರ್ಗೊಯಿಂದ ಸಾಗಣೆ (13.04.2020 ರಂತೆ)

 

ದಿನಾಂಕ

ವಿಮಾನಗಳ ಸಂಖ್ಯೆ

ಟನ್ನುಗಳು

ಕಿ. ಮೀ. ಗಳು

13-04-2020

10

156.40

8,967.25

 

*****

 


(Release ID: 1614650) Visitor Counter : 179