ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
ಕೇಂದ್ರ ಔಷಧ ಕಾರ್ಯದರ್ಶಿ ಅವರಿಂದ ಔಷಧಗಳು ಮತ್ತು ಔಷಧಿ ತಯಾರಕ ಪ್ರತಿನಿಧಿಗಳು ಹಾಗು ಸಂಘಟನೆಗಳ ಜೊತೆ ವೀಡಿಯೋ ಕಾನ್ಫರೆನ್ಸ್
Posted On:
13 APR 2020 7:05PM by PIB Bengaluru
ಕೇಂದ್ರ ಔಷಧ ಕಾರ್ಯದರ್ಶಿ ಅವರಿಂದ ಔಷಧಗಳು ಮತ್ತು ಔಷಧಿ ತಯಾರಕ ಪ್ರತಿನಿಧಿಗಳು ಹಾಗು ಸಂಘಟನೆಗಳ ಜೊತೆ ವೀಡಿಯೋ ಕಾನ್ಫರೆನ್ಸ್
ಔಷಧಿ ಮತ್ತು ಸಲಕರಣೆಗಳು ಸಾಕಷ್ಟು ಪ್ರಮಾಣದಲ್ಲಿ ಲಭಿಸುವಂತೆ ಮತ್ತು ಸಾಕಷ್ಟು ಉತ್ಪಾದನೆಯಾಗುವಂತೆ ಖಾತ್ರಿಪಡಿಸಲಾಯಿತು
ದೇಶೀಯ ಆವಶ್ಯಕತೆಯನ್ನು ಪೂರೈಸುವಷ್ಟು ಪ್ರಮಾಣದಲ್ಲಿ ಮತ್ತು ರಫ್ತು ಬದ್ದತೆಯನ್ನು ಪೂರೈಸಲು ಸಾಕಾಗುವಷ್ಟು ಪ್ರಮಾಣದಲ್ಲಿ ಭಾರತೀಯ ಔಷಧ ತಯಾರಕ ಉದ್ದಿಮೆ ಎಚ್.ಸಿ.ಕ್ಯು. ಸಹಿತ ಅವಶ್ಯ ಔಷಧಿಗಳನ್ನು ಉತ್ಪಾದಿಸುತ್ತಿದೆ. ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳೊಂದಿಗೆ ಕೈಜೋಡಿಸಿ ಇಲಾಖೆಯು ದೇಶಾದ್ಯಂತ ಅದರ ಉತ್ಪಾದನೆ ಮತ್ತು ಸಾಗಾಟವನ್ನು ಖಾತ್ರಿಪಡಿಸುತ್ತಿದೆ. ಔಷಧ ಇಲಾಖೆಯ ಕಾರ್ಯದರ್ಶಿ ಡಾ. ಪಿ.ಡಿ. ವಘೇಲಾ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ವೀಡಿಯೋ ಕಾನ್ಫರೆನ್ಸ್ ನಲ್ಲಿ ಈ ಸ್ಥಿತಿಯ ಬಗ್ಗೆ ಚಿತ್ರಣ ದೊರೆಯಿತು. ಔಷಧಿಗಳು ಮತ್ತು ವೈದ್ಯಕೀಯ ಸಲಕರಣೆಗಳ ಉದ್ಯಮದ ಕಾರ್ಯಾಚರಣೆಗಳನ್ನು ಪರಾಮರ್ಶಿಸಲು ಈ ವೀಡಿಯೋ ಕಾನ್ಫರೆನ್ಸ್ ಆಯೋಜಿಸಲಾಗಿತ್ತು. ಶ್ರೀ ನವದೀಪ ರಿನ್ವಾ, ಜೆ.ಎಸ್. (ನೀತಿ), ಮತ್ತು ಐ.ಪಿ.ಎ., ಐ.ಡಿ.ಎಂ.ಎ., ಒ.ಪಿ.ಪಿ.ಐ., ಬಿ.ಡಿ.ಎಂ.ಎ., ಎ.ಐ.ಎಂ.ಇ.ಡಿ, ಎಂ.ಟಿ.ಎ.ಎಲ್, ಫಾರ್ಮೆಕ್ಸಿಲ್, ಸಿ.ಐ.ಐ. , ಎಫ್.ಐ.ಸಿ.ಸಿ.ಐ. ಮತ್ತು ಅಖಿಲ ಭಾರತ ರಾಸಾಯನಿಕಗಳು ಮತ್ತು ಔಷಧಿ ಸಂಘಟನೆಯ ವೈದ್ಯಕೀಯ ಸಲಕರಣೆಗಳ ತಯಾರಕ ಸಂಸ್ಥೆಗಳು ಸಹಿತ ವಿವಿಧ ಔಷಧಿ ಹಾಗು ವೈದ್ಯಕೀಯ ಸಲಕರಣೆಗಳ ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಬಡ್ಡಿ (ಎಚ್.ಪಿ.), ಝಿರಾಕ್ ಪುರ (ಪಂಜಾಬ್) , ದಮನ್ ಮತ್ತು ಸಿಲ್ವಾಸ ಹಾಗು ಈಶಾನ್ಯ ಭಾಗದಲ್ಲಿ ಉದ್ಯಮ ಎದುರಿಸುತ್ತಿರುವ ನಿರ್ದಿಷ್ಟ ವಿಷಯಗಳ ಬಗ್ಗೆ ಉದ್ಯಮ ವಲಯ ಹಿಮ್ಮಾಹಿತಿ ಒದಗಿಸಿತು. ಝಿರಾಕ್ ಪುರವು ಇಡೀ ಪಂಜಾಬ್, ಹರ್ಯಾಣಾ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಲಡಾಖ್ ಗಳಿಗೆ ಔಷದಿಗಳನ್ನು ಪೂರೈಸುವ ಪ್ರಮುಖ ವಿತರಕ ಸಂಸ್ಥೆಯಾಗಿದೆ. ಅದೇ ರೀತಿ ಬಡ್ಡಿ, ದಾಮನ್ ಮತ್ತು ಸಿಲ್ವಾಸಗಳು ಔಷದಿ ತಯಾರಿಕೆಯ ಪ್ರಮುಖ ಕೇಂದ್ರಗಳಾಗಿವೆ. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳ ವಿವಿಧ ಇಲಾಖೆಗಳ ಸಮನ್ವಯದ ಪ್ರಯತ್ನಗಳ ಫಲವಾಗಿ ಈಶಾನ್ಯಕ್ಕೆ ಔಷಧಿಗಳ ಪೂರೈಕೆಗೆ ಸಂಬಂಧಿಸಿ ಇದ್ದ ಪ್ರಮುಖ ವಿಷಯಗಳು ಇತ್ಯರ್ಥಗೊಂಡಿವೆ. ಔಷಧಿಗಳ ಇಲಾಖೆಯು ಕೈಗಾರಿಕೆಗಳು, ರಾಜ್ಯಗಳು, ಮತ್ತು ಇತರ ಇಲಾಖೆಗಳ ಜೊತೆಯಲ್ಲಿ ಮಿಂಚಂಚೆ ಮೂಲಕ , ವಾಟ್ಸಾಪ್ ಗುಂಪುಗಳ ಮೂಲಕ , ಡಿ.ಒ.ಪಿ.ಯಲ್ಲಿ ಮತ್ತು ಎನ್.ಪಿ.ಪಿ.ಎ. ಯಲ್ಲಿ ನಿಯಂತ್ರಣ ಕೊಠಡಿಗಳ ಸ್ಥಾಪನೆ ಮತ್ತು ಜೊತೆಯಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಸತತ ಸಂಪರ್ಕದಲ್ಲಿದೆ ಎಂದು ಕಾರ್ಯದರ್ಶಿಗಳು ಹೇಳಿದರು.ಇದರಿಂದಾಗಿ ಸಮಸ್ಯೆಗಳನ್ನು ತಿಳಿಯಲು ಮತ್ತು ತಕ್ಷಣವೇ ಅವುಗಳನ್ನು ಸಂಬಂಧಿತ ಅಧಿಕಾರಿಗಳ ಜೊತೆ ಮಾತನಾಡಿ ಪರಿಹಾರ ಮಾಡಲು ಇದರಿಂದ ಸಾಧ್ಯವಾಗುತ್ತದೆ ಎಂದರು.
ಇಂತಹ ಕಠಿಣ ಸಮಯದಲ್ಲಿ ಫಾರ್ಮಾ ವಲಯಕ್ಕೆ ಅನುಕೂಲಕರವಾದಂತಹ ಸಲಹಾ ಮಾರ್ಗದರ್ಶಿಗಳನ್ನು 12.4.2020 ರಂದು ಕೇಂದ್ರ ಗೃಹ ಸಚಿವಾಲಯ ಹೊರಡಿಸಿದುದಕ್ಕಾಗಿ ಉದ್ಯಮದ ಪ್ರತಿನಿಧಿಗಳು ಸಂತೋಷ ವ್ಯಕ್ತಪಡಿಸಿದರು. ಮಧುಮೇಹ, ಕ್ಯಾನ್ಸರ್ ನಿರೋಧ, ಮತ್ತು ಇತರ ಹೆಚ್ಚಿನ ಮೌಲ್ಯದ ಔಷಧಿಗಳ ಸಹಿತ ಇತರ ಔಷಧಗಳನ್ನು ಪೂರೈಕೆ ಮಾಡುವಲ್ಲಿ, ಸಾಗಣೆ ಮಾಡುವಲ್ಲಿ ಕೊರಿಯರ್ ಸೇವೆಗಳು ಪ್ರಮುಖ ಪಾತ್ರವಹಿಸುತ್ತವೆ, ಆದುದರಿಂದ ಕೊರಿಯರ್ ಸೇವೆಯನ್ನು ಆವಶ್ಯಕ ಸೇವೆಗಳು ಎಂದು ಘೋಷಿಸಬೇಕು ಎಂಬಂತಹ ಕೆಲವು ಸಲಹೆಗಳನ್ನು ಅವರು ನೀಡಿದರು. ಔಷಧ ಉತ್ಪಾದನೆಗೆ ಅವಶ್ಯವಾದ ಎಲ್ಲಾ ಪೂರಕ ಸೇವೆಗಳ ಕಾರ್ಯಾಚರಣೆಗೆ ಅವಕಾಶ ಒದಗಿಸಬೇಕಾದ ಅಗತ್ಯವನ್ನು ಅವರು ಪ್ರತಿಪಾದಿಸಿದರು. ಜೆ.ಎನ್.ಪಿ.ಟಿ. ಬಂದರಿನಲ್ಲಿ ಮತ್ತು ಮುಂಬಯಿ ವಿಮಾನ ನಿಲ್ದಾಣದಲ್ಲಿ ದಟ್ಟಣೆಯ ಸಮಸ್ಯೆಯನ್ನು ಅವರು ಪ್ರಸ್ತಾಪಿಸಿದರು. ದೇಶದ ಎಲ್ಲಾ ಭಾಗಗಳಲ್ಲಿಯೂ ಅಡೆ ತಡೆ ಇಲ್ಲದೆ ಔಷಧಿ ಮತ್ತು ವೈದ್ಯಕೀಯ ಸಲಕರಣೆಗಳ ಪೂರೈಕೆಯನ್ನು ಖಾತ್ರಿಪಡಿಸಲು ಎಲ್ಲರೂ ಸಾಧ್ಯ ಇರುವ ಪ್ರಯತ್ನಗಳನ್ನು ಮಾಡಬೇಕು ಎಂದರು. ವೈದ್ಯರ ಚೀಟಿ ಇಲ್ಲದೆ ನೀಡಬಾರದು ಎಂದು ಕಾನೂನು ಇರುವ ಯಾವುದೇ ಔಷಧಿಗಳನ್ನು ಯಾವುದೇ ಕೆಮಿಸ್ಟ್ ಆ ಚೀಟಿ ಇಲ್ಲದೆ ವಿತರಿಸಬಾರದು ಎಂಬುದನ್ನು ಖಾತ್ರಿಪಡಿಸುವಂತೆ ಎ.ಐ.ಒ.ಸಿ.ಡಿ.ಯನ್ನು ಕೇಳಲಾಯಿತು. ಲಾಕ್ ಡೌನ್ ಅವಧಿಯಲ್ಲಿ ಔಷಧಿಗಳ ಪೂರೈಕೆಯನ್ನು ನಿರ್ವಹಿಸುತ್ತಿರುವ ನಿಟ್ಟಿನಲ್ಲಿ ಮಾಡುತ್ತಿರುವ ಅತ್ಯುತ್ತಮ ಪ್ರಯತ್ನಗಳಿಗೆ ಕಾರ್ಯದರ್ಶಿಗಳು ಸಂಘಟನೆಗಳಿಗೆ ಧನ್ಯವಾದ ಸಲ್ಲಿಸಿದರು ಮತ್ತು ಅವರ ನೈಜ ಕಷ್ಟಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸರಕಾರದಿಂದ ಸಂಪೂರ್ಣ ಸಹಕಾರದ ಭರವಸೆ ನೀಡಿದರು.
***
(Release ID: 1614297)
Visitor Counter : 219