ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
ಕೋವಿಡ್-19 ಹಿನ್ನೆಲೆಯಲ್ಲಿ ಡಿಒಪಿಟಿ, ಡಿಎಆರ್ ಪಿಜಿ ಮತ್ತು ಡಿಒಪಿಪಿಡಬ್ಲ್ಯೂಕಾರ್ಯಗಳ ಬಗ್ಗೆ ಪರಾಮರ್ಶೆ ನಡೆಸಿದ ಡಾ. ಜಿತೇಂದ್ರ ಸಿಂಗ್
Posted On:
13 APR 2020 4:43PM by PIB Bengaluru
ಕೋವಿಡ್-19 ಹಿನ್ನೆಲೆಯಲ್ಲಿ ಡಿಒಪಿಟಿ, ಡಿಎಆರ್ ಪಿಜಿ ಮತ್ತು ಡಿಒಪಿಪಿಡಬ್ಲ್ಯೂಕಾರ್ಯಗಳ ಬಗ್ಗೆ ಪರಾಮರ್ಶೆ ನಡೆಸಿದ ಡಾ. ಜಿತೇಂದ್ರ ಸಿಂಗ್
12 ದಿನಗಳಲ್ಲಿ ಸುಮಾರು 7000 ಕೋವಿಡ್-19ಗೆ ಸಂಬಂಧಿಸಿದ ಸಾರ್ವಜನಿಕ ಕುಂದುಕೊರತೆಗಳ ಪರಿಹಾರ - ಡಾ. ಸಿಂಗ್
ಡಿಒಪಿಟಿಯ ಕಲಿಕಾ ವೇದಿಕೆ ಐಗಾಟ್ ಮೂಲಕ ಈವರೆಗೆ 71,000ಕ್ಕೂ ಅಧಿಕ ವ್ಯಕ್ತಿಗಳ ನೋಂದಣಿ
ಕೇಂದ್ರ ಈಶಾನ್ಯ ರಾಜ್ಯಗಳ ಅಭಿವೃದ್ಧಿ, (ಡಿಒಎನ್ಇಆರ್) ಸಚಿವ(ಸ್ವತಂತ್ರ ಖಾತೆ), ಪ್ರಧಾನಮಂತ್ರಿಗಳ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿ, ಅಣು ಇಂಧನ ಮತ್ತು ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಇಂದು ಡಿಒಪಿಟಿ, ಡಿಎಆರ್ ಪಿಜಿ ಮತ್ತು ಡಿಒಪಿಪಿಡಬ್ಲ್ಯೂ ಇಲಾಖೆಗಳು, ಕೋವಿಡ್-19 ಹಿನ್ನೆಲೆಯಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಿದರು. ಸಾಂಕ್ರಾಮಿಕ ಎದುರಿಸಲು ಇಲಾಖೆಗಳು ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದ ಸಚಿವರು, ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಅವಧಿಯಲ್ಲಿ ಯಾವುದೇ ತೊಂದರೆಗೆ ಸಿಲುಕಬಾರದು ಎಂದು ಹೇಳಿದರು.
ಡಾ. ಜಿತೇಂದ್ರ ಸಿಂಗ್ ಅವರು ಕಳೆದ ಏಪ್ರಿಲ್ 1, 2020ರಂದು ಕೋವಿಡ್-19ಗೆ ಸಂಬಂಧಿಸಿದ ಸಾರ್ವಜನಿಕ ಕುಂದುಕೊರತೆಗಳನ್ನು ಆಲಿಸುವ ರಾಷ್ಟ್ರೀಯ ಮೇಲ್ವಿಚಾರಣಾ ಡ್ಯಾಶ್ ಬೋರ್ಡ್ ಪೋರ್ಟಲ್ https://darpg.gov.in. ಅನ್ನು ಬಿಡುಗಡೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಸಿಪಿಜಿಆರ್ ಎಎಂಎಸ್ ಗಳನ್ನು ಸ್ವೀಕರಿಸಲು ಎಲ್ಲ ಕೇಂದ್ರ ಸಚಿವಾಲಯಗಳು/ಇಲಾಖೆಗಳು ಮತ್ತು ರಾಜ್ಯ ಸರ್ಕಾರಗಳಿಗೆ ಸಾರ್ವಜನಿಕ ಕುಂದುಕೊರತೆಗಳನ್ನು ನಿರ್ವಹಿಸಲು ಸುತ್ತೋಲೆಗಳನ್ನು ಹೊರಡಿಸಲಾಗಿತ್ತು. ಪ್ರತಿ ದಿನ ವರದಿಯಾಗುವ ಕೋವಿಡ್-19 ಪಿಜಿ ಪ್ರಕರಣಗಳನ್ನು ಉನ್ನತಾಧಿಕಾರ ಸಮಿತಿ – 10, ಪ್ರಧಾನಮಂತ್ರಿಗಳ ಕಾರ್ಯಾಲಯ, ಸಚಿವರನ್ನೊಳಗೊಂಡ ಉನ್ನತಾಧಿಕಾರ ಸಮಿತಿ ಮತ್ತು 2020ರ ಏಪ್ರಿಲ್ 1 ರಿಂದ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವರಿಗೂ ವರದಿ ಸಲ್ಲಿಸಲಾಗುತ್ತಿದೆ.
2020ರ ಏಪ್ರಿಲ್ 12ರ ವರೆಗೆ ಸರ್ಕಾರ ಸುಮಾರು 7000 ಕೋವಿಡ್-19 ಕುರಿತ ಸಾರ್ವಜನಿಕ ಕುಂದುಕೊರತೆಗಳನ್ನು ವಿಲೇವಾರಿ ಮಾಡಿದ್ದು, ಸರಾಸರಿ ವಿಲೇವಾರಿ ಸಮಯ 1.57 ದಿನ. ಗರಿಷ್ಠ ಸಂಖ್ಯೆಯ ಕೋವಿಡ್-19ಗೆ ಸಂಬಂಧಿಸಿದ ಕುಂದುಕೊರತೆಗಳನ್ನು ವಿಲೇವಾರಿ ಮಾಡಿರುವ ಸಚಿವಾಲಯ ಮತ್ತು ಇಲಾಖೆಗಳೆಂದರೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ (1625 ಕುಂದುಕೊರತೆಗಳು), ಹಣಕಾಸು ಸಚಿವಾಲಯ (1043 ಕುಂದುಕೊರತೆಗಳು) ಕಾರ್ಮಿಕ ಸಚಿವಾಲಯ (751 ಕುಂದುಕೊರತೆಗಳು). ಅತ್ಯಧಿಕ ಕುಂದುಕೊರತೆಗಳು 1315 ಇತ್ಯರ್ಥವಾದ ದಿನಗಳೆಂದರೆ ಏಪ್ರಿಲ್ 8, 2020 ಮತ್ತು ಏಪ್ರಿಲ್ 9, 2020.
ಕಳೆದ ವಾರ ಬಿಡುಗಡೆ ಮಾಡಲಾದ ಕೋವಿಡ್-19 ಎದುರಿಸಲು ಡಿಒಪಿಟಿಯ ಕಲಿಕಾ ವೇದಿಕೆ (https://igot.gov.in)ಯಲ್ಲಿ ಈವರೆಗೆ 71,000 ಅಧಿಕ ಮಂದಿ ನೋಂದಣಿ ಆಗಿರುವುದಕ್ಕೆ ಮತ್ತು 27,000 ಅಭ್ಯರ್ಥಿಗಳು ಕೋರ್ಸ್ ಮುಕ್ತಾಯಗೊಳಿಸಿರುವುದಕ್ಕೆ ಡಾ. ಜಿತೇಂದ್ರ ಸಿಂಗ್ ತೃಪ್ತಿ ವ್ಯಕ್ತಪಡಿಸಿದ್ದಾರೆ. ವೈದ್ಯರು, ನರ್ಸ್ ಗಳು, ಅರೆ ವೈದ್ಯಕೀಯ ಸಿಬ್ಬಂದಿ, ನೈರ್ಮಲ್ಯ ಕೆಲಸಗಾರರು, ತಂತ್ರಜ್ಞರು, ಆಶಾ ಕಾರ್ಯಕರ್ತೆಯರು(ಎಎನ್ಎಂಎಸ್), ಕೇಂದ್ರ ಮತ್ತು ರಾಜ್ಯ ಸರ್ಕಾರಿ ಅಧಿಕಾರಿಗಳು, ನಾಗರಿಕ ರಕ್ಷಣಾ ಸಿಬ್ಬಂದಿ, ನಾನಾ ಪೊಲೀಸ್ ಸಂಸ್ಥೆಗಳು, ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್(ಎನ್ ಸಿಸಿ), ನೆಹರು ಯುವ ಕೇಂದ್ರ ಸಂಘಟನೆ(ಎನ್ ವೈಕೆಎಸ್), ರಾಷ್ಟ್ರೀಯ ಸೇವಾ ಯೋಜನೆ(ಎನ್ಎಸ್ಎಸ್), ಭಾರತೀಯ ರೆಡ್ ಕ್ರಾಸ್ ಸೊಸೈಟಿ(ಐಆರ್ ಸಿಎಸ್), ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್(ಬಿಎಸ್ ಜಿ) ಮತ್ತು ಇತರೆ ಸ್ವಯಂ ಸೇವಕರನ್ನು ಮುಖ್ಯ ಗುರಿಯನ್ನಾಗಿಟ್ಟು ಕೊಳ್ಳಲಾಗಿದೆ.
ಈ ವೇದಿಕೆ ಪ್ರತಿಯೊಬ್ಬರಿಗೂ ನಿಗದಿತ ಪಾತ್ರದ ಪಠ್ಯ ಒದಗಿಸುತ್ತಿದೆ. ಪ್ರತಿಯೊಬ್ಬ ಕಲಿಕಾರ್ಥಿ ತಮ್ಮ ಕೆಲಸದ ಸ್ಥಳ ಅಥವಾ ಮನೆಯನ್ನು ಆಯ್ಕೆ ಮಾಡಿಕೊಂಡು ಕಲಿಯಬಹುದಾಗಿದೆ. ಐಜಿಒಟಿ ವೇದಿಕೆಯನ್ನು ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದ್ದು, ಅದು ಮುಂದಿನ ವಾರಗಳಲ್ಲಿ ಸುಮಾರು 1.5 ಕೋಟಿ ಕೆಲಸಗಾರರು ಮತ್ತು ಸ್ವಯಂ ಸೇವಕರಿಗೆ ತರಬೇತಿಯನ್ನು ನೀಡಲಿದೆ. ಆರಂಭಿಕವಾಗಿ (9) ಐಜಿಒಟಿ ಕೋರ್ಸ್ ಗಳನ್ನು ಆರಂಭಿಸಲಾಗಿದೆ. ಅವುಗಳೆಂದರೆ ಕೋವಿಡ್ ನ ಮೂಲ ಅಂಶಗಳು, ಐಸಿಯು ಆರೈಕೆ, ವೆಂಟಿಲೇಷನ್ ನಿರ್ವಹಣೆ, ಕ್ಲಿನಿಕಲ್ ನಿರ್ವಹಣೆ, ಪಿಪಿಇ ಮೂಲಕ ಸೋಂಕು ನಿರ್ವಹಣೆ, ಸೋಂಕು ನಿಯಂತ್ರಣ ಮತ್ತು ಮುಂಜಾಗ್ರತೆ, ಕ್ವಾರಂಟೈನ್ ಮತ್ತು ಐಸೋಲೇಷನ್, ಪ್ರಯೋಗಾಲಯ ಮಾದರಿ ಸಂಗ್ರಹ ಪರೀಕ್ಷೆ, ಕೋವಿಡ್-19 ಪ್ರಕರಣಗಳ ನಿರ್ವಹಣೆ ಮತ್ತು ಕೋವಿಡ್-19 ತರಬೇತಿ.
***
(Release ID: 1614108)
Visitor Counter : 136