ಸಂವಹನ ಸಚಿವಾಲಯ
ಸ್ಪೀಡ್ ಪೋಸ್ಟ್ ಮೂಲಕ ಔಷಧಗಳ ಪೂರೈಕೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಅಂಚೆ ಇಲಾಖೆ ಕಾರ್ಯದರ್ಶಿಗೆ ಸಂಪರ್ಕ ಸಚಿವ ಶ್ರೀ ರವಿಶಂಕರ ಪ್ರಸಾದ್ ಸೂಚನೆ
ಪ್ರಕಟಣಾ ದಿನಾಂಕ:
13 APR 2020 6:49PM by PIB Bengaluru
ಸ್ಪೀಡ್ ಪೋಸ್ಟ್ ಮೂಲಕ ಔಷಧಗಳ ಪೂರೈಕೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಅಂಚೆ ಇಲಾಖೆ ಕಾರ್ಯದರ್ಶಿಗೆ ಸಂಪರ್ಕ ಸಚಿವ ಶ್ರೀ ರವಿಶಂಕರ ಪ್ರಸಾದ್ ಸೂಚನೆ
ಕೇಂದ್ರ ಸಂಪರ್ಕ, ಕಾನೂನು ಮತ್ತು ನ್ಯಾಯ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ ರವಿಶಂಕರ ಪ್ರಸಾದ್, ಅಂಚೆ ಇಲಾಖೆ ಕಾರ್ಯದರ್ಶಿಗಳಿಗೆ ಲಾಕ್ ಡೌನ್ ವೇಳೆ ಸ್ಪೀಡ್ ಪೋಸ್ಟ್ ಮೂಲಕ ಔಷಧಗಳ ಪೂರೈಕೆ ಖಾತ್ರಿಪಡಿಸಲು ಹೆಚ್ಚಿನ ಆದ್ಯತೆ ನೀಡಬೇಕೆಂದು ನಿರ್ದೇಶನ ನೀಡಿದ್ದಾರೆ.
ಸಂಪರ್ಕ ಸಚಿವರು ಇಂದು ತಮ್ಮ ಟ್ವೀಟ್ ಸಂದೇಶದಲ್ಲಿ, ಭಾರತೀಯ ಅಂಚೆ ಇಲಾಖೆಯ ಎಲ್ಲ ಸಿಬ್ಬಂದಿಗಳಿಗೆ ಈ ಬಗ್ಗೆ ಜಾಗೃತಿ ಮೂಡಿಸಬೇಕು ಮತ್ತು ಔಷಧಗಳ ಸ್ವೀಕೃತಿ ಮತ್ತು ಕಳುಹಿಸುವ ವೇಳೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.
****
(ಪ್ರಕಟಣೆ ಐ.ಡಿ.: 1614100)
ವಿಸಿಟರ್ ಕೌಂಟರ್ : 264
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Assamese
,
Punjabi
,
Gujarati
,
Odia
,
Tamil
,
Telugu
,
Malayalam