ಗೃಹ ವ್ಯವಹಾರಗಳ ಸಚಿವಾಲಯ

ಲಾಕ್ ಡೌನ್ ಮಾರ್ಗಸೂಚಿಗಳನ್ನು ಅಕ್ಷರಶಃ ಕಟ್ಟುನಿಟ್ಟಾಗಿ ಪಾಲಿಸಲು ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯ ನಿರ್ದೇಶನ

Posted On: 12 APR 2020 10:22PM by PIB Bengaluru

ಲಾಕ್ ಡೌನ್ ಮಾರ್ಗಸೂಚಿಗಳನ್ನು ಅಕ್ಷರಶಃ ಕಟ್ಟುನಿಟ್ಟಾಗಿ ಪಾಲಿಸಲು ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯ ನಿರ್ದೇಶನ

ಅಂತರ ರಾಜ್ಯ ಸರಕು, ಲಾರಿ ಮತ್ತು ಗೋದಾಮು ಹಾಗೂ ಶೈತ್ಯಾಗಾರಗಳ ಸಿಬ್ಬಂದಿ ಸುಗಮ ಕಾರ್ಯ ನಿರ್ವಹಣೆಗೆ ಕ್ರಮ ಕೈಗೊಳ್ಳಲು ಸೂಚನೆ

 

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್ಎ) ಲಾಕ್ ಡೌನ್ ಕ್ರಮಗಳ ಸಮಗ್ರ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ನಿಯಂತ್ರಣಕ್ಕೆ ಭಾರತ ಸರ್ಕಾರದ ಎಲ್ಲ ಸಚಿವಾಲಯಗಳು/ಇಲಾಖೆಗಳು, ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪ್ರಾಧಿಕಾರಗಳು ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ವಿವರ ನೀಡಿದೆ. https://mha.gov.in/sites/default/files/PR_Consolidated%20Guideline%20of%20MHA_28032020%20%281%29_0.PDF.

ಜನರಿಗೆ ಆಗುತ್ತಿರುವ ತೊಂದರೆಗಳನ್ನು ನಿವಾರಿಸಲು ಮತ್ತು ದೇಶಾದ್ಯಂತ ಅಗತ್ಯ ಸರಕು ಮತ್ತು ಸೇವೆಗಳ ಲಭ್ಯತೆಯನ್ನು ಖಾತ್ರಿಪಡಿಸಲು ನಂತರ ಮಾರ್ಗಸೂಚಿಯಲ್ಲಿ ಕೆಲವು ಸ್ಪಷ್ಟನೆಗಳನ್ನು ನೀಡಲಾಗಿದೆ.

ಎಂಎಚ್ಎ, ಲಾಕ್ ಡೌನ್ ಮಾರ್ಗಸೂಚಿಗಳನ್ನು ಅಕ್ಷರಶಃ ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲ ರಾಜ್ಯಗಳಿಗೆ ನಿರ್ದೇಶನ ನೀಡಿದೆ ಮತ್ತು ಅಂತರರಾಜ್ಯ ಸರಕು ಸಾಗಾಣೆ, ಲಾರಿಗಳು ಹಾಗೂ ಗೋದಾಮು ಮತ್ತು ಶೈತ್ಯಾಗಾರಗಳ ಕಾರ್ಯನಿರ್ವಹಣೆ ಮತ್ತು ಸಿಬ್ಬಂದಿ ಸುಗಮ ರೀತಿಯಲ್ಲಿ ಕೆಲಸ ನಿರ್ವಹಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ದೇಶದ ಹಲವು ಭಾಗಗಳಲ್ಲಿ ಮಾರ್ಗಸೂಚಿಯ ಅಂಶಗಳನ್ನು ಅಕ್ಷರಶಃ ಜಾರಿಗೊಳಿಸಿಲ್ಲ ಎಂಬುದು ಸಚಿವಾಲಯದ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಈ ಆದೇಶವನ್ನು ನೀಡಲಾಗಿದೆ. ವಿಶೇಷವಾಗಿ ಈ ಅಂಶಗಳನ್ನು ಪಾಲಿಸುತ್ತಿಲ್ಲ.

· ಅವಶ್ಯಕ ಮತ್ತು ಅವಶ್ಯಕವಲ್ಲದ ವಸ್ತುಗಳ ಸಾಗಾಣೆ ಮಾಡುತ್ತಿದ್ದ ಟ್ರಕ್ ಗಳನ್ನು ತಡೆ ಹಿಡಿಲಾಗುತ್ತಿದೆ.

· ಅಗತ್ಯ ವಸ್ತುಗಳ ಉತ್ಪಾದನಾ ಘಟಕಗಳ ಕಾರ್ಯನಿರ್ವಹಣೆಗೆ ಅಗತ್ಯವಿರುವ ಸಿಬ್ಬಂದಿಯನ್ನು ಮತ್ತು ವಿನಾಯಿತಿ ಪಡೆದಿರುವ ವಲಯದಲ್ಲಿರುವ ಕಾರ್ಮಿಕರನ್ನು ಅಗತ್ಯ ಅಧಿಕೃತ ಪಾಸ್ ಪಡೆದಿಲ್ಲ ಎಂಬ ಕಾರಣಕ್ಕೆ ಸಂಚಾರಕ್ಕೆ ಅವಕಾಶ ನೀಡದಿರುವುದು.

· ಮೇಲಿನ ಎರಡು ಕ್ಯಾಟಗರಿಗೆ ಒಳಪಡುವ ಸಿಬ್ಬಂದಿ ಮತ್ತು ಸರಕುಗಳನ್ನು ಅಂತರರಾಜ್ಯ ಸಂಚಾರಕ್ಕೆ ಬಿಡದಿರುವುದು, ಈ ಕುರಿತು ಒಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಮತ್ತೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಸೂಚನೆಗಳನ್ನು ಅಥವಾ ಪಾಸ್ ಗಳನ್ನು ಪಾಲಿಸದೇ ಇರುವುದು.

· ಶೈತ್ಯಾಗಾರಗಳು ಮತ್ತು ಗೋದಾಮುಗಳು ಕಾರ್ಯನಿರ್ವಹಣೆಗೆ ಅವಕಾಶ ನೀಡದಿರುವುದು.

ಎಂಎಚ್ಎ, ಅನುಮತಿ ನೀಡಿರುವ ಈ ವಿಶೇಷ ಚಟುವಟಿಕೆಗಳಿಗೆ ನಿರ್ಬಂಧಿಸುತ್ತಿರುವುದರಿಂದ ಅತ್ಯವಶ್ಯಕ ವಸ್ತುಗಳ ಉತ್ಪಾದನೆಯಲ್ಲಿ ಕೊರತೆ ಉಂಟಾಗಲಿದೆ. ಜಾರಿ ಹಂತದಲ್ಲಿ ಸ್ಪಷ್ಟನೆ ಮೂಡಿಸುವ ಉದ್ದೇಶದಿಂದ ಎಂಎಚ್ಎ, ಈ ಕೆಳಗಿನ ಮಾರ್ಗಸೂಚಿಗಳನ್ನು ಸಂಬಂಧಿಸಿದ ಅಧಿಕಾರಿಗಳು ಎಲ್ಲ ಹಂತಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪುನರುಚ್ಚರಿಸಿದೆ.

· ಎಲ್ಲ ಟ್ರಕ್ ಗಳ ಅಂತರ ರಾಜ್ಯ ಮತ್ತು ಅಂತರ ರಾಜ್ಯ ಸಂಚಾರ ಮತ್ತು ಸರಕು ಸಾಗಾಣೆ ವಾಹನಗಳು ಒಬ್ಬ ಚಾಲಕ ಹಾಗೂ ಓರ್ವ ಹೆಚ್ಚುವರಿ ಸಿಬ್ಬಂದಿ ಇರುವಂತಹ ಅಧಿಕೃತ ಚಾಲನೆ ಪರವಾನಗಿ ಹೊಂದಿರುವ ಚಾಲಕನ ವಾಹನಕ್ಕೆ ಅವಕಾಶ ಮಾಡಿಕೊಡುವುದು. ಯಾವುದೇ ಅವಶ್ಯಕ ಅಥವಾ ಅವಶ್ಯಕವಲ್ಲದ ಯಾವುದೇ ವಸ್ತುಗಳಾದರೂ ಸಂಚಾರಕ್ಕೆ ಅವಕಾಶ ನೀಡುವುದು. ಟ್ರಕ್ ಗಳ ಸಂಚಾರಕ್ಕೆ ಪ್ರತ್ಯೇಕ ಪರ್ಮಿಟ್ ಅಥವಾ ಅನುಮೋದನೆ ಬೇಕಿಲ್ಲ.

· ಖಾಲಿ ಟ್ರಕ್/ ಸರಕು ಸಾಗಾಣೆ ಈ ವಾಹನಗಳು ಸರಕನ್ನು ಇಳಿಸುವ ಕಾರ್ಯ ಪೂರ್ಣಗೊಳಿಸಿ ಅಥವಾ ಸರಕುಗಳನ್ನು ತುಂಬಿಸಿಕೊಳ್ಳಲು ಒಂದು ಮಾರ್ಗದಲ್ಲಿ ಖಾಲಿ ವಾಹನ ಸಂಚರಿಸುತ್ತಿದ್ದರೆ ಅದಕ್ಕೆ ಅವಕಾಶ ಮಾಡಿಕೊಡಬೇಕು. ಚಾಲನಾ ಪರವಾನಗಿ ಮತ್ತು ರಸ್ತೆ ಪರ್ಮಿಟ್ ಇತ್ಯಾದಿ ಅಧಿಕೃತ ದಾಖಲೆಗಳಿದ್ದರೂ ಖಾಲಿ ವಾಹನ ಸಂಚರಿಸುತ್ತಿದೆ ಎಂದು ಆ ವಾಹನ ಸಂಚಾರವನ್ನು ತಡೆಯುವಂತಿಲ್ಲ. ಸ್ಥಳೀಯ ಅಧಿಕಾರಿಗಳು ಅತ್ಯಂತ ಕ್ರಿಯಾಶೀಲವಾಗಿ ಟ್ರಕ್ ಚಾಲಕರ ಮತ್ತು ಕ್ಲೀನರ್ ಗಳ ಸಂಚಾರಕ್ಕೆ ಅಂದರೆ ಅವರ ನಿವಾಸದಿಂದ ಟ್ರಕ್ ಗಳ ಸ್ಥಳಗಳಿಗೆ ತೆರಳಲು ಅವಕಾಶ ಮಾಡಿಕೊಡಬೇಕು.

· ಸ್ಥಳೀಯ ಪ್ರಾಧಿಕಾರಗಳು ಅನುಮತಿ ನೀಡಲಾಗಿರುವ ಕೈಗಾರಿಕೆಗಳು/ವಾಣಿಜ್ಯ ಚಟುವಟಿಕೆಗಳಿಗೆ ಅಗತ್ಯವಾಗಿರುವ ಕೆಲಸಗಾರರು ದುಡಿಯುವ ಸ್ಥಳಕ್ಕೆ ಬರಲು ಮತ್ತು ಪುನಃ ತೆರಳಲು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು.

· ರೈಲ್ವೆ, ವಿಮಾನ ನಿಲ್ದಾಣಗಳು, ಬಂದರುಗಳು ಮತ್ತು ಸುಂಕ ಪ್ರಾಧಿಕಾರಗಳಿಗೆ ತಮ್ಮ ಸಿಬ್ಬಂದಿ ಮತ್ತು ಗುತ್ತಿಗೆ ಕಾರ್ಮಿಕರಿಗೆ ಪಾಸ್ ಗಳನ್ನು ವಿತರಿಸುವಂತೆ ಈಗಾಗಲೇ ಸೂಚಿಸಲಾಗಿದೆ. ಇದನ್ನು ಖಾತ್ರಿಪಡಿಸಬೇಕು.

· ಅನುಮತಿ ನೀಡಲಾಗಿರುವ ಉತ್ಪಾದನಾ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಪಾಸ್ ಗಳನ್ನು ನೀಡುವ ಕುರಿತಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಅತ್ಯಂತ ತ್ವರಿತವಾಗಿ ಕಂಪನಿಗಳು ಮತ್ತು ಸಂಸ್ಥೆಗಳ ಮೂಲಕ ಪ್ರಮಾಣೀಕೃತ ಪಾಸ್ ಗಳನ್ನು ವಿತರಿಸಲು ಸೂಚಿಸಲಾಗಿದೆ. ಈ ಪಾಸ್ ಗಳನ್ನು ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ ವ್ಯಾಪ್ತಿಯಲ್ಲಿ ಮತ್ತು ಇತರೆ ಗಡಿ ಪ್ರದೇಶದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮಾನ್ಯ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು.

· ಅತ್ಯವಶ್ಯಕ ವಸ್ತುಗಳ ಉತ್ಪಾದನೆಯಲ್ಲಿ ತೊಡಗಿರುವ ಎಂಎಸ್ಎಂಇಗಳು ಗೋಧಿಹಿಟ್ಟು(ಅಟ್ಟ), ಬೇಳೆ-ಕಾಳು(ದಾಲ್) ಮತ್ತು ಎಣ್ಣೆ ಇತ್ಯಾದಿ ಅವಶ್ಯಕ ವಸ್ತುಗಳ ಉತ್ಪಾದನೆಗೆ ಮುಕ್ತವಾಗಿ ಅಥವಾ ಯಾವುದೇ ಅಡೆತಡೆ ಇಲ್ಲದೆ ಅವಕಾಶ ಮಾಡಿಕೊಡಬೇಕು.

· ಗೋದಾಮುಗಳು/ ಶೈತ್ಯಾಗಾರಗಳು ಮುಕ್ತವಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಮತ್ತು ಅವುಗಳಿಗೆ ಸರಕುಗಳ ಸಾಗಾಣೆ ವಾಹನಗಳು ಬಂದುಹೋಗಲು ಸಹ ಅವಕಾಶ ನೀಡಬೇಕು. ಅವಶ್ಯಕ ವಸ್ತುಗಳು ಅಥವಾ ಅವಶ್ಯಕ ವಲ್ಲದ ವಸ್ತುಗಳನ್ನೂ ಸಹ ಗೋದಾಮುಗಳಿಗೆ ಸಾಗಿಸಲು ಅವಕಾಶ ಮಾಡಿಕೊಡಬೇಕು. ಆ ಮೂಲಕ ಗೋದಾಮು ಕಂಪನಿಗಳ ಕಾರ್ಯಾಚರಣೆಗೆ ಅನುವು ಮಾಡಿಕೊಡಬೇಕು.

ಈ ಎಲ್ಲ ಮಾರ್ಗಸೂಚಿಗಳು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ(ಎಂಒಎಚ್ಎಫ್ ಡಬ್ಲ್ಯೂ) ಹೊರಡಿಸಿರುವ ಮಾರ್ಗಸೂಚಿಗಳಲ್ಲಿರುವ ನಿಯಂತ್ರಣ ಮತ್ತು ಕ್ವಾರಂಟೈನ್ ಪ್ರದೇಶ ಹಾಗೂ ಕಣ್ಗಾವಲು ಕ್ರಮಗಳು(ಹಾಟ್ ಸ್ಪಾಟ್)ಗಳನ್ನು ಹೊರತುಪಡಿಸಿ, ಇತರೆ ಎಲ್ಲಾ ಪ್ರದೇಶಗಳಿಗೆ ಅನ್ವಯವಾಗುತ್ತದೆ. ಇಂತಹ ಪ್ರದೇಶಗಳಲ್ಲಿ ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಪ್ರಾಧಿಕಾರಗಳು ಕೋವಿಡ್-19 ಹರಡುವುದನ್ನು ನಿಯಂತ್ರಿಸಲು ನಿರ್ಬಂಧಗಳನ್ನು ವಿಧಿಸಿರುತ್ತವೆ.

ಈ ಮೇಲೆ ತಿಳಿಸಿದ ಎಲ್ಲ ವ್ಯಕ್ತಿಗಳು ಮತ್ತು ವಾಹನಗಳ ಸಂಚಾರಕ್ಕೆ ಕೋವಿಡ್-19 ಹಿನ್ನೆಲೆಯಲ್ಲಿ ಅಗತ್ಯವಿರುವ ಶುಚಿತ್ವ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮಗಳ ಪಾಲನೆಗೆ ಒಳಪಟ್ಟು ಅವಕಾಶ ಮಾಡಿಕೊಡಬೇಕು ಎಂದು ಆದೇಶದಲ್ಲಿ ಪುನರುಚ್ಚರಿಸಲಾಗಿದೆ. ಈ ಮೇಲಿನ ಎಲ್ಲ ನಿರ್ದೇಶನಗಳ ಬಗ್ಗೆ ಜಿಲ್ಲಾಡಳಿತಗಳಿಗೆ ಮತ್ತು ಕ್ಷೇತ್ರ ಮಟ್ಟದ ಸಂಸ್ಥೆಗಳಿಗೆ ತಿಳಿಸಿ ಕೊಡಬೇಕು ಎಂದು ರಾಜ್ಯಗಳಿಗೆ ಮನವಿ ಮಾಡಲಾಗಿದೆ. ಎಂಎಚ್ಎ ಅನುಮತಿ ನೀಡಿರುವ ಎಲ್ಲ ಚಟುವಟಿಕೆಗಳು ಯಾವುದೇ ಅಡೆತಡೆ ಇಲ್ಲದೆ ನಡೆಯುವಂತೆ ನೋಡಿಕೊಳ್ಳಬೇಕೆಂದು ಸೂಚಿಸಲಾಗಿದೆ.

 

*****

 



(Release ID: 1613864) Visitor Counter : 146