ಕೃಷಿ ಸಚಿವಾಲಯ

ಲಾಕ್‌ಡೌನ್ ಸಂದರ್ಭದಲ್ಲಿ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳನ್ನು ಉತ್ತೇಜಿಸಲು ಕೃಷಿ, ಸಹಕಾರ ಮತ್ತು ರೈತ ಕಲ್ಯಾಣ ಇಲಾಖೆಯ ಉಪಕ್ರಮಗಳು

Posted On: 11 APR 2020 6:55PM by PIB Bengaluru

ಲಾಕ್ಡೌನ್ ಸಂದರ್ಭದಲ್ಲಿ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳನ್ನು ಉತ್ತೇಜಿಸಲು ಕೃಷಿ, ಸಹಕಾರ ಮತ್ತು ರೈತ ಕಲ್ಯಾಣ ಇಲಾಖೆಯ ಉಪಕ್ರಮಗಳು

ಕೇಂದ್ರ ಕೀಟನಾಶಕ ಮಂಡಳಿ ಮತ್ತು ನೋಂದಣಿ ಸಮಿತಿಯು ಲಾಕ್ ಡೌನ್ ಅವಧಿಯಲ್ಲಿ CROP ಸಾಫ್ಟ್ವೇರ್ ಬಳಸಿ ವಿವಿಧ 1.25 ಲಕ್ಷ ಮೆ.ಟನ್ ಗೂ ಹೆಚ್ಚು ರಾಸಾಯನಿಕಗಳಿಗೆ 33 ಆಮದು ಪರವಾನಗಿಗಳನ್ನು ನೀಡಿದೆ

ಸಾರಿಗೆ, ಕರ್ಫ್ಯೂ ಪಾಸ್ ಮತ್ತು ಪ್ಯಾಕೇಜಿಂಗ್ ಘಟಕಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎಪಿಇಡಿಎ ಬಗೆಹರಿಸಿದೆ; ಅಕ್ಕಿ, ನೆಲಗಡಲೆ, ಸಂಸ್ಕರಿಸಿದ ಆಹಾರ, ಮಾಂಸ, ಕೋಳಿ, ಡೈರಿ ಮತ್ತು ಸಾವಯವ ಉತ್ಪನ್ನಗಳು ಸೇರಿದಂತೆ  ಎಲ್ಲಾ ಪ್ರಮುಖ ಉತ್ಪನ್ನಗಳ ರಫ್ತು ಪ್ರಾರಂಭವಾಗಿದೆ

 

ಲಾಕ್ಡೌನ್ ಅವಧಿಯಲ್ಲಿ ರೈತರಿಗೆ ಮತ್ತು ಕೃಷಿ ಚಟುವಟಿಕೆಗಳಿಗೆ ಕ್ಷೇತ್ರ ಮಟ್ಟದಲ್ಲಿ ಅನುಕೂಲವಾಗುವಂತೆ ಭಾರತ ಸರ್ಕಾರದ ಕೃಷಿ ಸಹಕಾರ ಮತ್ತು ರೈತ ಕಲ್ಯಾಣ ಇಲಾಖೆಯು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅವುಗಳ ಇತ್ತೀಚಿನ ಮಾಹಿತಿ ಇಲ್ಲಿದೆ:

  1. ಲಾಕ್ಡೌನ್ ಅವಧಿಯಲ್ಲಿ  ಕೇಂದ್ರ ಕೀಟನಾಶಕ ಮಂಡಳಿ ಮತ್ತು ನೋಂದಣಿ ಸಮಿತಿಯ (ಸಿಐಬಿ ಮತ್ತು ಆರ್ಸಿ) CROP ಸಾಫ್ಟ್ವೇರ್ ಅನ್ನು ವರ್ಚುವಲ್ ಪ್ರೈವೇಟ್ ನೆಟ್ವರ್ಕ್ (ವಿಪಿಎನ್) ಮೂಲಕ ಬಳಸಿ ತಜ್ಞರು / ಅಧಿಕಾರಿಗಳು ಮನೆಯಿಂದ ಕೆಲಸ ಮಾಡುವ ಮೂಲಕ ಪ್ರಮಾಣಪತ್ರಗಳನ್ನು ವಿತರಿಸಲು ಪ್ರಯತ್ನಿಸಲಾಗಿದೆ. ಬೆಳೆ ಸಂರಕ್ಷಣಾ ರಾಸಾಯನಿಕಗಳ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿರುವ ಕೈಗಾರಿಕಾ ಘಟಕಗಳ ಸುಗಮ ಕಾರ್ಯನಿರ್ವಹಣೆಗೆ ಅಗತ್ಯವಾದ ದೇಶೀಯ ಉತ್ಪಾದನೆ ಮತ್ತು ರಾಸಾಯನಿಕಗಳು / ಕಚ್ಚಾ ವಸ್ತುಗಳ ಆಮದುಗೆ ಸಂಬಂಧಿಸಿದ ನೋಂದಣಿ ಪ್ರಮಾಣಪತ್ರವನ್ನು ನೀಡುವಲ್ಲಿ ಪ್ರಯತ್ನವು ಮಹತ್ವದ ಕೊಡುಗೆ ನೀಡಿದೆ ಮತ್ತು ಮೂಲಕ ಕೀಟನಾಶಕಗಳು ಮತ್ತು ಬೆಳೆ ಸಂರಕ್ಷಣಾ ರಾಸಾಯನಿಕಗಳ ಸಮಯೋಚಿತ ಲಭ್ಯತೆಯನ್ನು ಖಾತ್ರಿಪಡಿಸುತ್ತಿದೆ.
  2. ಇದುವರೆಗೆ, ಸಿಐಬಿ ಮತ್ತು ಆರ್ಸಿ 1.25 ಲಕ್ಷ ಮೆಟ್ರಿಕ್ ಟನ್ ಗಿಂತಲೂ ಹೆಚ್ಚು ವಿವಿಧ ರಾಸಾಯನಿಕಗಳನ್ನು ಆಮದು ಮಾಡಿಕೊಳ್ಳಲು 33 ಸಂಖ್ಯೆಯ ಆಮದು ಪರವಾನಗಿಗಳನ್ನು ನೀಡಿವೆ. ಕೀಟನಾಶಕಗಳ ರಫ್ತಿಗೆ ಅನುಕೂಲವಾಗುವಂತೆ ರಫ್ತಿಗಾಗಿ 189 ಪ್ರಮಾಣಪತ್ರಗಳನ್ನು ಸಹ ನೀಡಲಾಗಿದೆ. ಕೀಟನಾಶಕಗಳ ದೇಶೀಯ ಉತ್ಪಾದನೆಗೆ ಅನುಕೂಲವಾಗುವಂತೆ ವಿವಿಧ ವಿಭಾಗಗಳಲ್ಲಿ 1263 ನೋಂದಣಿ ಪ್ರಮಾಣಪತ್ರಗಳನ್ನು ನೀಡಲಾಗಿದೆ.
  3. ಲಾಕ್ಡೌನ್ ಕಾರಣದಿಂದಾಗಿ, 2020 ಏಪ್ರಿಲ್ 16 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಖಾರಿಫ್ ಬೆಳೆಗಳ ರಾಷ್ಟ್ರೀಯ ಸಮ್ಮೇಳನವನ್ನು ನಡೆಸಲು ಇಲಾಖೆ ನಿರ್ಧರಿಸಿದೆ. ಕೇಂದ್ರ ಕೃಷಿ ಸಚಿವರು, ಕೇಂದ್ರ ರಾಜ್ಯ ಸಚಿವರು (ಕೃಷಿ) ಮತ್ತು ಸಚಿವಾಲಯದ ಹಿರಿಯ ಅಧಿಕಾರಿಗಳು ಖಾರಿಫ್ ಕೃಷಿಯ ಸಮಯದಲ್ಲಿ ಬೆಳೆ ನಿರ್ವಹಣೆಯ ಸವಾಲುಗಳು ಮತ್ತು ಕಾರ್ಯತಂತ್ರಗಳ ಕುರಿತು ರಾಜ್ಯಗಳೊಂದಿಗೆ ಚರ್ಚೆ ನಡೆಸಲಿದ್ದಾರೆ ಮತ್ತು ಬ್ಲಾಕ್ ಮಟ್ಟಗಳಲ್ಲಿ ಬೀಜಗಳು, ರಸಗೊಬ್ಬರಗಳು, ಕೀಟನಾಶಕಗಳು ಮತ್ತು ಕೃಷಿ ಯಂತ್ರೋಪಕರಣಗಳ ಸಮಯೋಚಿತ ಲಭ್ಯತೆ ಮತ್ತು ಬೆಳೆ ನಿರ್ವಹಣೆಗೆ ಸಂಬಂಧಿಸಿದ ಇತರ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ.
  4. ಸಾರಿಗೆ, ಕರ್ಫ್ಯೂ ಪಾಸ್, ಪ್ಯಾಕೇಜಿಂಗ್ ಘಟಕಗಳಿಗೆ ಸಂಬಂಧಿಸಿದ ಸಾಕಷ್ಟು ಪ್ರಯತ್ನಗಳನ್ನು ಮತ್ತು ಸಮಸ್ಯೆಗಳನ್ನು APEDA ಬಗೆಹರಿಸಿದೆ. ಅಕ್ಕಿ, ನೆಲಗಡಲೆ, ಸಂಸ್ಕರಿಸಿದ ಆಹಾರ, ಮಾಂಸ, ಕೋಳಿ, ಡೈರಿ ಮತ್ತು ಸಾವಯವ ಉತ್ಪನ್ನಗಳು ಸೆರಿದಂತೆ ಎಲ್ಲಾ ಪ್ರಮುಖ ಉತ್ಪನ್ನಗಳ ರಫ್ತು ಪ್ರಾರಂಭವಾಗಿದೆ.
  5. ಬೇಗ ಹಾಳಾಗುವ ತೋಟಗಾರಿಕಾ ಉತ್ಪನ್ನಗಳು, ಕೃಷಿ ಉತ್ಪನ್ನಗಳು, ಹಾಲು ಮತ್ತು ಡೈರಿ ಉತ್ಪನ್ನಗಳನ್ನು ಒಳಗೊಂಡಂತೆ ಅಗತ್ಯ ವಸ್ತುಗಳನ್ನು ವೇಗವಾಗಿ ಪೂರೈಸಲು ರೈತರು / ಎಫ್ಪಿಒಗಳು / ವ್ಯಾಪಾರಿಗಳು ಮತ್ತು ಕಂಪನಿಗಳಿಗೆ ನೆರವಾಗಲು ರೈಲ್ವೆಯು 236 ಪಾರ್ಸೆಲ್ ವಿಶೇಷ ರೈಲಯಗಳನ್ನು ಓಡಿಸಲು 67 ಮಾರ್ಗಗಳನ್ನು ಪರಿಚಯಿಸಿದೆ (ಅವುಗಳಲ್ಲಿ 171 ವೇಳಾಪಟ್ಟಿ ಸಹಿತ ಪಾರ್ಸೆಲ್ ರೈಲುಗಳು). ದೇಶಾದ್ಯಂತ ಪೂರೈಕೆ ಸರಪಳಿಯ ನಿರಂತರತೆಗಾಗಿ ರೈಲುಗಳು ದೇಶದ ಪ್ರಮುಖ ನಗರಗಳ ನಡುವೆ ಮತ್ತು ರಾಜ್ಯ ರಾಜಧಾನಿಗಳಿಂದ ರಾಜ್ಯದ ಎಲ್ಲಾ ಭಾಗಗಳಿಗೆ ಸಂಪರ್ಕವನ್ನು ಸಾಧಿಸಿವೆ.
  6. -ಕಾಮರ್ಸ್ ಘಟಕಗಳು ಮತ್ತು ರಾಜ್ಯ ಸರ್ಕಾರಗಳು ಸೇರಿದಂತೆ ಇತರ ಗ್ರಾಹಕರಿಂದ ತ್ವರಿತ ಸಾಮೂಹಿಕ ಸಾಗಣೆಗೆ ಅನುಕೂಲ ಕಲ್ಪಿಸಲು ಪಾರ್ಸೆಲ್ ವ್ಯಾನ್ಗಳ ವ್ಯವಸ್ಥೆಯನ್ನು ಸಹ ರೈಲ್ವೆ ಮಾಡಿದೆ.
  7. ಪಾರ್ಸೆಲ್ ವಿಶೇಷ ರೈಲುಗಳಿಗೆ ಸಂಬಂಧಿಸಿದ ವಿವರಗಳ ಕೊಂಡಿ indianrailways.gov.in ವೆಬ್ಸೈಟ್ನಲ್ಲಿ ಲಭ್ಯವಿದೆ.

 

ಪಾರ್ಸೆಲ್ ವಿಶೇಷ ರೈಲುಗಳ ವಿವರಗಳಿಗಾಗಿ ನೇರ ಲಿಂಕ್ ಇಲ್ಲಿದೆ

https://enquiry.indianrail.gov.in/mntes/q?opt=TrainRunning&subOpt=splTrnDtl

***

 



(Release ID: 1613560) Visitor Counter : 218