ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ

ಕೋವಿಡ್-19 ಚಟುವಟಿಕೆಗಳ ಸಂಬಂಧ ಸಿಎಸ್ಆರ್ ವೆಚ್ಚಕ್ಕೆ ಅರ್ಹವೇ ಎಂಬ ಬಗ್ಗೆ ಪದೇ ಪದೇ ಕೇಳುವ ಪ್ರಶ್ನೆಗಳಿಗೆ ಎಂಸಿಎ ಉತ್ತರ

Posted On: 11 APR 2020 7:07PM by PIB Bengaluru

ಕೋವಿಡ್-19 ಚಟುವಟಿಕೆಗಳ ಸಂಬಂಧ ಸಿಎಸ್ಆರ್ ವೆಚ್ಚಕ್ಕೆ ಅರ್ಹವೇ ಎಂಬ ಬಗ್ಗೆ ಪದೇ ಪದೇ ಕೇಳುವ ಪ್ರಶ್ನೆಗಳಿಗೆ ಎಂಸಿಎ ಉತ್ತರ

 

ಕೋವಿಡ್-19 ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸಿಎಸ್ಆರ್ ವೆಚ್ಚದ ಅರ್ಹತೆ ಬಗ್ಗೆ ಸಂಬಂಧಿಸಿದ ನಾನಾ ವಿಭಾಗದವರಿಂದ ಮನವಿಗಳು/ಉಲ್ಲೇಖಗಳನ್ನು ಸ್ವೀಕರಿಸಿರುವ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ(ಎಂಸಿಎ) ಆ ಕುರಿತು ಸ್ಪಷ್ಟನೆಯನ್ನು ನೀಡಿದೆ. ಈ ನಿಟ್ಟಿನಲ್ಲಿ ಪದೇ ಪದೇ ಕೇಳಲಾಗುವ ನಿಗದಿತ ಪ್ರಶ್ನೆಗಳನ್ನು(ಎಫ್ಎಕ್ಯೂ)ನಲ್ಲಿ ಈ ಕೆಳಗಿನಂತೆ ಸಂಬಂಧಿಸಿದ ಎಲ್ಲರಿಗೂ ಸರಿಯಾಗಿ ಅರ್ಥವಾಗಲೆಂದು ಸ್ಪಷ್ಟನೆಗಳ ಸಹಿತ ನೀಡಲಾಗಿದೆ.

 

ಕ್ರ.ಸಂ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು (ಎಫ್ಎಕ್ಯೂ)

ಉತ್ತರ

1.      

‘ಪಿಎಂ-ಕೇರ್ಸ್ ನಿಧಿ’ ನೀಡಲಾಗುವ ದೇಣಿಗೆ ಸಿಎಸ್ಆರ್ ವೆಚ್ವವೆಂದು ಅರ್ಹವಾಗಲಿದೆಯೇ ?

‘ಪಿಎಂ-ಕೇರ್ಸ್ ನಿಧಿ’ಗೆ ನೀಡಲಾಗುವ ದೇಣಿಗೆ ಸಿಎಸ್ಆರ್ ವೆಚ್ಚ ಎಂದು ಪರಿಗಣಿಸಲ್ಪಡುತ್ತದೆ. ಅದು ಕಂಪನಿಗಳ ಕಾಯ್ದೆ 2013ರ ಶೆಡ್ಯೂಲ್ 7ರ ಐಟಂ ಸಂಖ್ಯೆ(8)ರ ಮತ್ತು ಎಫ್.ಸಂಖ್ಯೆ. ಸಿಎಸ್ಆರ್-05.01.2020-ಸಿಎಸ್ಆರ್-ಎಂಸಿಎ ದಿನಾಂಕ 28 ಮಾರ್ಚ್ 2020ರಂದು ಹೊರಡಿಸಿರುವ ಸ್ಪಷ್ಟನಾ ಆದೇಶದಲ್ಲಿ ವಿವರಿಸಲಾಗಿದೆ.

2.      

ಮುಖ್ಯಮಂತ್ರಿಗಳ ಪರಿಹಾರ ನಿಧಿ’ ಅಥವಾ ‘ರಾಜ್ಯಗಳ ಕೋವಿಡ್-19 ಪರಿಹಾರ ನಿಧಿ’ಗೆ ನೀಡುವ ದೇಣಿಗೆ ಸಿಎಸ್ಆರ್ ವೆಚ್ಚಕ್ಕೆ ಅರ್ಹವಾಗಲಿದೆಯೇ ?

ಮುಖ್ಯಮಂತ್ರಿಗಳ ಪರಿಹಾರ ನಿಧಿ’ ಅಥವಾ ‘ರಾಜ್ಯಗಳ ಕೋವಿಡ್-19 ಪರಿಹಾರ ನಿಧಿ’ಗೆ ನೀಡುವ ದೇಣಿಗೆ ಕಂಪನಿಗಳ ಕಾಯ್ದೆ 2013ರ ಶೆಡ್ಯೂಲ್ 7ರಲ್ಲಿ ಸೇರ್ಪಡೆ ಮಾಡಿಲ್ಲ, ಹಾಗಾಗಿ ಅದಕ್ಕೆ ನೀಡುವ ಯಾವುದೇ ದೇಣಿಗೆ ಸಿಎಸ್ಆರ್ ವೆಚ್ಚಕ್ಕೆ ಅರ್ಹವಾಗುವುದಿಲ್ಲ.

3.      

ರಾಜ್ಯಗಳ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ನೀಡುವ ದೇಣಿಗೆ ಸಿಎಸ್ಆರ್ ವೆಚ್ಚ ಎಂದು ಅರ್ಹವಾಗುವುದೇ ?

ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ನೀಡುವ ದೇಣಿಗೆ ಸಿಎಸ್ಆರ್ ವೆಚ್ಚ ಎಂದು ಅರ್ಹವಾಗಲಿದೆ. 2013ರ ಕಾಯ್ದೆಯ ಶೆಡ್ಯೂಲ್ 7ರ ಐಟಂ ಸಂಖ್ಯೆ(12)ರಲ್ಲಿ ಮತ್ತು ಆದೇಶ ಸಂಖ್ಯೆ 10/2020 ದಿನಾಂಕ 23 ಮಾರ್ಚ್ 2020ರಂದು ಹೊರಡಿಸಿರುವ ಸ್ಪಷ್ಟನಾ ಆದೇಶದಂತೆ ಇದು ಅರ್ಹವಾಗಲಿದೆ.

4.      

ಕೋವಿಡ್-19 ಸಂಬಂಧಿ ಚಟುವಟಿಕೆಗಳಿಗಾಗಿ ಖರ್ಚು ಮಾಡಲಾಗುವ ಸಿಎಸ್ಆರ್ ನಿಧಿಗಳನ್ನು ಸಿಎಸ್ಆರ್ ವೆಚ್ಚ ಎಂದು ಪರಿಗಣಿಸಲಾಗುವುದೇ ?

ಸಚಿವಾಲಯದ ಆದೇಶ ಸಂಖ್ಯೆ 10/2020 ದಿನಾಂಕ 23 ಮಾರ್ಚ್, 2020ರಂದು ಹೊರಡಿಸಿರುವ ಸ್ಪಷ್ಟ ಆದೇಶದಲ್ಲಿ ಕೋವಿಡ್-19 ಸಂಬಂಧಿ ಚಟುವಟಿಕೆಗಳಿಗಾಗಿ ಖರ್ಚು ಮಾಡಲಾಗುವ ಸಿಎಸ್ಆರ್ ನಿಧಿಯನ್ನು ಸಿಎಸ್ಆರ್ ವೆಚ್ಚ ಎಂದು ಪರಿಗಣಿಸಲಾಗುವುದು. ಅದರಲ್ಲಿ ಮತ್ತಷ್ಟು ಸ್ಪಷ್ಟಪಡಿಸುವ ಅಂಶ ಎಂದರೆ ಕೋವಿಡ್-19ಗೆ ಸಂಬಂಧಿಸಿದ ನಾನಾ ಚಟುವಟಿಕೆಗಳಿಗೆ ಖರ್ಚು ಮಾಡುವ ನಿಧಿಯನ್ನು ಶೆಡ್ಯೂಲ್ 7ರ ಐಟಂ ಸಂಖ್ಯೆ(1) ಮತ್ತು (12)ರಲ್ಲಿ ವಿಪತ್ತು ನಿರ್ವಹಣಾ ಮತ್ತು ನೈರ್ಮಲೀಕರಣ ಹಾಗೂ ಆರೋಗ್ಯ ರಕ್ಷಣಾ ಮುನ್ನೆಚ್ಚರಿಕೆ ಕ್ರಮಗಳನ್ನು ಉತ್ತೇಜಿಸುವುದಕ್ಕೆ ಸಂಬಂಧಿಸಿದ್ದಾಗಿದೆ. ಮತ್ತೆ 18.06.2014ರಂದು ಹೊರಡಿಸಿರುವ ಸಾಮಾನ್ಯ ಆದೇಶ ಸಂಖ್ಯೆ 21/2014ರಲ್ಲಿ ಶೆಡ್ಯೂಲ್ 7ರಲ್ಲಿನ ಅಂಶವನ್ನು ಸ್ವಲ್ಪ ವಿಸ್ತಾರವಾಗಿದ್ದು, ಈ ಉದ್ದೇಶದಲ್ಲಿ ಅತ್ಯಂತ ದಾರಾಳ ಅಥವಾ ಉದಾರ ರೀತಿಯಲ್ಲಿ ವ್ಯಾಖ್ಯಾನಿಸಬಹುದಾಗಿದೆ.

5.      

ಲಾಕ್ ಡೌನ್ ಅವಧಿಯಲ್ಲಿ ಗುತ್ತಿಗೆ ಕಾರ್ಮಿಕರು ಸೇರಿ, ಸಿಬ್ಬಂದಿ ಮತ್ತು ಕೆಲಸಗಾರರಿಗೆ ನೀಡುವ ವೇತನ/ಭತ್ಯೆಗಳನ್ನು ಕಂಪನಿಗಳ ಸಿಎಸ್ಆರ್ ವೆಚ್ಚದಡಿ ಹೊಂದಾಣಿಕೆ ಮಾಡಿಕೊಳ್ಳಬಹುದೇ ?

ಇಂತಹ ಸಂದರ್ಭಗಳಲ್ಲಿ ವೇತನ/ಭತ್ಯೆಗಳನ್ನು ಕಂಪನಿಗಳನ್ನು ಪಾವತಿಸುವುದು ಕಂಪನಿಗಳ ಸಾಂಸ್ಥಿಕ ಮತ್ತು ಒಪ್ಪಂದದ ಬಾಧ್ಯತೆಯಾಗಿದೆ. ಅದೇ ರೀತಿ ಲಾಕ್ ಡೌನ್ ಅವಧಿಯಲ್ಲಿ ಸಿಬ್ಬಂದಿಗೆ ಮತ್ತು ಕೆಲಸಗಾರರಿಗೆ ವೇತನ/ಭತ್ಯೆಗಳನ್ನು ಪಾವತಿಸುವುದು ಉದ್ಯೋಗದಾತರ ನೈತಿಕ ಕರ್ತವ್ಯವಾಗಿದೆ. ಏಕೆಂದರೆ ಈ ಅವಧಿಯಲ್ಲಿ ಅವರಿಗೆ ಜೀವನೋಪಾಯಕ್ಕೆ ಅಥವಾ ಯಾವುದೇ ಪರ್ಯಾಯ ಉದ್ಯೋಗ ಇರುವುದಿಲ್ಲ. ಆದ್ದರಿಂದ ಲಾಕ್ ಡೌನ್ ಅವಧಿಯಲ್ಲಿ ಯಾವುದೇ ಸಿಬ್ಬಂದಿ ಮತ್ತು ನೌಕರರಿಗೆ ವೇತನ/ಭತ್ಯೆಗಳನ್ನು ಪಾವತಿ ಮಾಡುವುದು(ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅಗತ್ಯತೆಗಳನ್ನು ಪಾಲಿಸುವುದೂ ಸೇರಿದಂತೆ) ಸಿಎಸ್ಆರ್ ವೆಚ್ಚ ಎಂದು ಪರಿಗಣಿತವಾಗುವುದಿಲ್ಲ.  

6.      

ಲಾಕ್ ಡೌನ್ ಅವಧಿಯಲ್ಲಿ ದಿನಗೂಲಿ/ಹಂಗಾಮಿ ನೌಕರರಿಗೆ ನೀಡುವ ವೇತನವನ್ನು ಕಂಪನಿಗಳ ಸಿಎಸ್ಆರ್ ವೆಚ್ಚದ ಜೊತೆ ಹೊಂದಾಣಿಕೆ ಮಾಡಿಕೊಳ್ಳಬಹುದೇ ?

ಲಾಕ್ ಡೌನ್ ಅವಧಿಯಲ್ಲಿ ದಿನಗೂಲಿ/ಹಂಗಾಮಿ ನೌಕರರಿಗೆ ನೀಡುವ ವೇತನ ನೀಡುವುದು ಕಂಪನಿಯ ನೈತಿಕ/ಮಾನವೀಯ/ಒಪ್ಪಂದದ ಕರ್ತವ್ಯವಾಗಿದೆ ಮತ್ತು ಇದು 2013ರ ಕಂಪನಿ ಕಾಯ್ದೆ ಸೆಕ್ಷನ್ 135ರ ವ್ಯಾಪ್ತಿಯಲ್ಲಿ ಸಿಎಸ್ಆರ್ ದೇಣಿಗೆ ನೀಡುವ ಕಾನೂನು ಆಧರಿಸಿ ಎಲ್ಲಾ ಕಂಪನಿಗಳಿಗೂ ಅನ್ವಯವಾಗುತ್ತದೆ. ಆದ್ದರಿಂದ ಲಾಕ್ ಡೌನ್ ಅವಧಿಯಲ್ಲಿ ಹಂಗಾಮಿ ಅಥವಾ ದಿನಗೂಲಿ ನೌಕರರಿಗೆ ನೀಡುವ ವೇತನ ಸಿಎಸ್ಆರ್ ವೆಚ್ಚ ಎಂದು ಪರಿಗಣಿಸಲಾಗುವುದಿಲ್ಲ.

7.      

ತಾತ್ಕಾಲಿಕ/ ಹಂಗಾಮಿ/ ದಿನಗೂಲಿ ನೌಕರರಿಗೆ ನೀಡುವ ಹೆಚ್ಚುವರಿ ಭತ್ಯೆ ಪಾವತಿ ಸಿಎಸ್ಆರ್ ವೆಚ್ಚಕ್ಕೆ ಅರ್ಹವಾಗುವುದೇ ?

ತಾತ್ಕಾಲಿಕ/ಹಂಗಾಮಿ/ದಿನಗೂಲಿ ನೌಕರರಿಗೆ ನೀಡುವ ವೇತನದ ಮೇಲಿನ ಯಾವುದೇ ಹೆಚ್ಚುವರಿ ಭತ್ಯೆ, ವಿಶೇಷವಾಗಿ ಕೋವಿಡ್-19ಗೆ ಸಂಬಂಧಿಸಿದ ವಿಷಯಗಳಿಗೆ ನೀಡಿದ್ದರೆ ಅದನ್ನು  ಸಿಎಸ್ಆರ್ ವೆಚ್ಚ ಎಂದು ಪರಿಗಣಿಸಲಾಗುವುದು. ಈ ಅವಕಾಶ ಒಮ್ಮೆ ಮಾತ್ರ ಲಭ್ಯವಿದ್ದು, ಇದಕ್ಕೆ ಕಂಪನಿಯ ವ್ಯವಸ್ಥಾಪನಾ ಮಂಡಳಿ ನಿಖರವಾಗಿ ಘೋಷಣೆ ಮಾಡಿರಬೇಕು ಮತ್ತು ಅದನ್ನು ಸಾಂಸ್ಥಿಕ ಆಡಿಟರ್ ಪ್ರಮಾಣೀಕರಿಸಿ ಅನುಮೋದಿಸಿರಬೇಕು.

 

****



(Release ID: 1613555) Visitor Counter : 244