ರಕ್ಷಣಾ ಸಚಿವಾಲಯ

ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಭಾರತೀಯ ವಾಯುಪಡೆ ಬೆಂಬಲ

Posted On: 11 APR 2020 6:26PM by PIB Bengaluru

ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಭಾರತೀಯ ವಾಯುಪಡೆ ಬೆಂಬಲ

 

ನೊವೆಲ್ ಕೊರೊನಾವೈರಸ್ ನಿಗ್ರಹದ ಭಾರತ ಸರ್ಕಾರದ ಪ್ರಯತ್ನಗಳಿಗೆ ಪೂರಕವಾಗಿ ಯಾವುದೇ ಕೆಲಸ ಕೈಗೊಳ್ಳಲು ಭಾರತೀಯ ವಾಯುಪಡೆ (ಐಎಎಫ್) ದಿನದ 24 ಗಂಟೆಯೂ ಸಿದ್ಧವಾಗಿದೆ. ವಿವಿಧ ರಾಜ್ಯಗಳ ನೋಡಲ್ ಪಾಯಿಂಟ್ಗಳಿಗೆ ಅಗತ್ಯ ವೈದ್ಯಕೀಯ ಸರಬರಾಜು ಮತ್ತು ಪಡಿತರವನ್ನು ಸಕಾಲಿಕವಾಗಿ ತಲುಪಿಸುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ, ಇದರಿಂದಾಗಿ ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ಮತ್ತು ಸಮರ್ಥವಾಗಿ ಎದುರಿಸಲು ರಾಜ್ಯ ಸರ್ಕಾರಗಳು ಮತ್ತು ಪೂರಕ ಏಜೆನ್ಸಿಗಳನ್ನು ಸಜ್ಜುಗೊಳಿಸುತ್ತಿದೆ.

ಕಳೆದ ಕೆಲವು ದಿನಗಳಲ್ಲಿ, ಭಾರತೀಯ ವಾಯುಪಡೆಯು ಮಹಾರಾಷ್ಟ್ರ, ಕೇರಳ, ತೆಲಂಗಾಣ, ನಾಗಾಲ್ಯಾಂಡ್ ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಗೆ ನೋಡಲ್ ಪಾಯಿಂಟ್ಗಳಿಂದ ಅಗತ್ಯ ವೈದ್ಯಕೀಯ ಸರಬರಾಜು ಮತ್ತು ಸರಕುಗಳನ್ನು ಸಾಗಿಸಿದೆ.

ಭಾರತೀಯ ವಾಯುಪಡೆಯು ಡಿಆರ್ಡಿಒಗಾಗಿ ಮೀಸಲಾದ ಹಾರಾಟಗಳನ್ನು ನಡೆಸಿತು ಮತ್ತು ಡಿಆರ್ಡಿಒ ಉತ್ಪಾದನಾ ಸೌಲಭ್ಯಗಳಲ್ಲಿ ಪಿಪಿಇ ಉತ್ಪಾದಿಸಲು ವಿವಿಧ ನೋಡಲ್ ಪಾಯಿಂಟ್ಗಳಿಂದ ಸುಮಾರು 9000 ಕೆಜಿ ಕಚ್ಚಾ ವಸ್ತುಗಳನ್ನು ಸಾಗಿಸಿತು. ಇದು ಡಿಆರ್ಡಿಒ ತಯಾರಿಸಿದ ಎನ್ 95/99 ಮುಖಗವಸುಗಳನ್ನೂ ಸಹ ಸಾಗಿಸಿದೆ. ಸಾಂಕ್ರಾಮಿಕ ಹರಡುವುದನ್ನು ತಡೆಗಟ್ಟಲು ಭಾರತ ಸರ್ಕಾರವು ನಿರ್ದಿಷ್ಟಪಡಿಸಿರುವ ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ಕಾರ್ಯಗಳನ್ನು ಕೈಗೊಳ್ಳುವಾಗ ಐಎಎಫ್ ಖಾತ್ರಿಪಡಿಸಿಕೊಂಡಿದೆ.

ದೇಶದಲ್ಲಿ ಸಾಂಕ್ರಾಮಿಕ ರೋಗದ ಯಾವುದೇ ಪರಿಸ್ಥಿತಿಗಳ ವಿರುದ್ಧದ ಹೋರಾಟವನ್ನು ಬೆಂಬಲಿಸಲು ಉದ್ಭವಿಸುವ ಎಲ್ಲ ಅಗತ್ಯಗಳನ್ನು ಪೂರೈಸಲು ಐಎಎಫ್ ಸದಾ ಸಿದ್ಧವಾಗಿದೆ ಮತ್ತು ಸಜ್ಜಾಗಿದೆ.

https://ci4.googleusercontent.com/proxy/PEA3tZ2kDqMMN7YhWHEizcJId23dbsOnS4nKjDNBJkVbmXkgWg0kEvwBGWeKUmBwJjr5D0Ed-y-0e29954j3a2q0XiCwEni1aNAS8xCmyfsTlIzRHr5z=s0-d-e1-ft#https://static.pib.gov.in/WriteReadData/userfiles/image/PHOTO(1)4OM8.jpg

https://ci5.googleusercontent.com/proxy/1y11oiPdNby1eoRKl2tOkdD6bFG0BZ5Sp5GGW8kAgrUjG3hL8yoYmgWmkHudL5WUsgAAakMCfmOuQ2NFl7IyEj32UQvB9X52lUrje8qlMo2BmtRBVBKy=s0-d-e1-ft#https://static.pib.gov.in/WriteReadData/userfiles/image/PHOTO(2)CZHY.jpg

ಛಾಯಾಚಿತ್ರಗಳು: ಡಿಆರ್ಡಿಒ ಉತ್ಪಾದನಾ ಸೌಲಭ್ಯಗಳಲ್ಲಿ ವೈಯಕ್ತಿಕ ರಕ್ಷಣಾ ಸಾಧನ (ಪಿಪಿಇ) ಉತ್ಪಾದಿಸಲು ಐಎಎಫ್ An -32 ವಿಮಾನಕ್ಕೆ ಅಗತ್ಯ ಕಚ್ಚಾ ವಸ್ತುಗಳನ್ನು ತುಂಬಲಾಗಿದೆ.

***



(Release ID: 1613444) Visitor Counter : 147