ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಕೋವಿಡ್-19 ಗಾಗಿ ನಾವೆಲ್ ರಕ್ತ ಪ್ಲಾಸ್ಮಾ ಚಿಕಿತ್ಸೆಯ ಅನ್ವೇಷಣೆ

Posted On: 11 APR 2020 12:26PM by PIB Bengaluru

ಕೋವಿಡ್-19 ಗಾಗಿ ನಾವೆಲ್ ರಕ್ತ ಪ್ಲಾಸ್ಮಾ ಚಿಕಿತ್ಸೆಯ ಅನ್ವೇಷಣೆ

ಚೇತರಿಸಿಕೊಂಡ ವ್ಯಕ್ತಿಯು ಪಡೆದ ರೋಗನಿರೋಧಕ ಶಕ್ತಿಯನ್ನು ಉಪಯೋಗಿಸಿ ಅನಾರೋಗ್ಯಪೀಡಿತ ವ್ಯಕ್ತಿಗೆ ನೀಡಿ ಆರೈಕೆ ಮಾಡುವುದು ಚಿಕಿತ್ಸೆಯ ಉದ್ದೇಶ

 

ಕೋವಿಡ್-19 ಕಾಯಿಲೆಯಿಂದ  ಬಳಲುತ್ತಿರುವ ರೋಗಿಗಳಿಗೆ ನವೀನ ರೀತಿಯ ಚಿಕಿತ್ಸೆಯನ್ನು ನೀಡಲು ದಿಟ್ಟ ಹೆಜ್ಜೆ ಇಡುವುದಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯ  ಶ್ರೀ ಚಿತ್ರ ತಿರುಣಾಲ್ ಇನ್ಸ್ಟಿಟ್ಯೂಟ್ ಫಾರ್ ಮೆಡಿಕಲ್ ಸೈನ್ಸಸ್ ಅಂಡ್ ಟೆಕ್ನಾಲಜಿ (ಎಸ್ಸಿಟಿಐಎಂಎಸ್ ಟಿ) ಸಂಸ್ಥೆಯು ಅನುಮತಿ ಪಡೆದಿದೆ. ತಾಂತ್ರಿಕವಾಗಿ ಕನ್ವೆಲೆಸೆಂಟ್-ಪ್ಲಾಸ್ಮಾ ಥೆರಪಿಎಂದು ಕರೆಯಲ್ಪಡುವ ಈ ಚಿಕಿತ್ಸೆಯು ಚೇತರಿಸಿಕೊಂಡ ವ್ಯಕ್ತಿಯು ಪಡೆದ ರೋಗನಿರೋಧಕ ಶಕ್ತಿಯನ್ನು ಅನಾರೋಗ್ಯಪೀಡಿತ ವ್ಯಕ್ತಿಗೆ ಚಿಕಿತ್ಸೆ ನೀಡಲು ಬಳಸಿಕೊಳ್ಳುತ್ತದೆ.   ಈ ಹೊಸ ಬಗೆಯ ಚಿಕಿತ್ಸೆಯನ್ನು ಕೈಗೊಳ್ಳಲು  ಭಾರತದ ಉನ್ನತ ಅಧಿಕೃತ ಸಂಸ್ಥೆಯಾದ  ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯು  ಎಸ್ಸಿಟಿಐಎಂಎಸ್ಟಿಗೆ ಅನುಮೋದನೆ ನೀಡಿದೆ.  " ರಕ್ತದಾನದ ಮಾನದಂಡಗಳನ್ನು ಸಡಿಲಿಸಲು ವಯಸ್ಸಿನ ಮಿತಿಯನ್ನು  ಕಡಿತಗೊಳಿಸುವುದಕ್ಕಾಗಿರುವ ಅನುಮತಿಗಾಗಿ ನಾವು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಗೆ ಕೋರಿಕೆಯನ್ನು ಸಲ್ಲಿಸಿದ್ದೇವೆ " ಎಂದು ಎಸ್ಸಿಟಿಐಎಂಎಸ್ ಟಿ ನಿರ್ದೇಶಕರಾದ  ಡಾ. ಆಶಾ ಕಿಶೋರ್ ಹೇಳಿದರು.

ಕನ್ವೆಲೆಸೆಂಟ್-ಪ್ಲಾಸ್ಮಾ ಥೆರಪಿ ಎಂದರೇನು?: ನಾವೆಲ್ ಕೊರೊನಾವೈರಸ್‌ನಂತಹ ರೋಗಕಾರಕ ಸೋಂಕು ತಗುಲಿದಾಗ, ನಮ್ಮ ರೋಗನಿರೋಧಕ ವ್ಯವಸ್ಥೆಗಳು ಪ್ರತಿಕಾಯಗಳನ್ನು (ಆ್ಯಂಟಿಬಾಡಿ) ಉತ್ಪಾದಿಸುತ್ತವೆ.  ಪೊಲೀಸ್ ನಾಯಿಗಳಂತೆ, ಆಕ್ರಮಣಕಾರಿ ವೈರಸ್ ಅನ್ನು ಕಂಡುಹಿಡಿಯಲು ಮತ್ತು ಗುರುತಿಸಲು ಪ್ರತಿಕಾಯಗಳು ವ್ಯಾಪಿಸುತ್ತವೆ. ಬಿಳಿ ರಕ್ತ ಕಣಗಳು ಗುರುತಿಸಲ್ಪಟ್ಟ ಒಳನುಗ್ಗಿದ್ದವನ್ನು ಬಂಧಿಸುತ್ತವೆ ಮತ್ತು ದೇಹವು ಸೋಂಕನ್ನು ತೊಡೆದುಹಾಕುತ್ತದೆ.  ಈ ಚಿಕಿತ್ಸೆಯು ರಕ್ತ ವರ್ಗಾವಣೆಯಂತೆ, ಚೇತರಿಸಿಕೊಂಡ ರೋಗಿಯಿಂದ ಪ್ರತಿಕಾಯವನ್ನು ಬೆಳೆಸುತ್ತದೆ ಮತ್ತು ಅನಾರೋಗ್ಯದ ವ್ಯಕ್ತಿಗೆ ಸೇರಿಸುತ್ತದೆ. ಪ್ರತಿಕಾಯದ ಸಹಾಯದಿಂದ, ಪ್ರತಿರಕ್ಷಣಾ ವ್ಯವಸ್ಥೆಯು ವೈರಸ್ ಮೇಲೆ ತೀವ್ರವಾದ ಪ್ರಹಾರವನ್ನು ಮಾಡುತ್ತದೆ.

ಪ್ರತಿಕಾಯಗಳು (ಆ್ಯಂಟಿಬಾಡಿ) ಯಾವುವು ?:  ಪ್ರತಿಕಾಯಗಳು ಸೂಕ್ಷ್ಮಜೀವಿಗಳಿಂದ ಸೋಂಕನ್ನು ತಡೆಗಟ್ಟುವ ಮುಂಚೂಣಿಯಲ್ಲಿರುವವು. ನಾವೆಲ್ ಕೊರೊನಾವೈರಸ್ನಂತಹ ಆಕ್ರಮಣಕಾರಿಯು ಎದುರಾದಾಗ ಅವು ಬಿ ಲಿಂಫೋಸೈಟ್ಸ್ ಎಂದು ಕರೆಯಲ್ಪಡುವ ಪ್ರತಿರಕ್ಷಣಾ ಕೋಶಗಳಿಂದ ಸ್ರವಿಸುವ ಒಂದು ನಿರ್ದಿಷ್ಟ ರೀತಿಯ ಪ್ರೋಟೀನ್ ಗಳಾಗಿವೆ. ಪ್ರತಿ ಆಕ್ರಮಣಕಾರಿ ರೋಗಕಾರಕಕ್ಕೆ ಹೆಚ್ಚು ನಿರ್ದಿಷ್ಟವಾದ ಪ್ರತಿಕಾಯಗಳನ್ನು ಪ್ರತಿರಕ್ಷಣಾ ವ್ಯವಸ್ಥೆಯು ವಿನ್ಯಾಸಗೊಳಿಸುತ್ತದೆ. ನಿರ್ದಿಷ್ಟ ಪ್ರತಿಕಾಯ ಮತ್ತು ಅದರ ಪಾಲುದಾರ ವೈರಸ್ ವು  ಪರಸ್ಪರ ಪೂರಕವಾಗಿರುತ್ತವೆ.

ಚಿಕಿತ್ಸೆಯನ್ನು ಹೇಗೆ ನೀಡಲಾಗುತ್ತದೆ ?:  ಕೋವಿಡ್-19 ಕಾಯಿಲೆಯಿಂದ ಚೇತರಿಸಿಕೊಂಡ ವ್ಯಕ್ತಿಯಿಂದ ರಕ್ತವನ್ನು ಪಡೆಯುಲಾಗುತ್ತದೆ.  ವೈರಸ್-ತಟಸ್ಥಗೊಳಿಸುವ ಪ್ರತಿಕಾಯಗಳಿಗಾಗಿ ಸೀರಮ್ ಅನ್ನು ಬೇರ್ಪಡಿಸಲಾಗುತ್ತದೆ ಮತ್ತು ಪರೀಕ್ಷಿಸಲಾಗುತ್ತದೆ.  ಸುಸ್ಥಿರ ಸೀರಮ್, ಅಂದರೆ ಸಾಂಕ್ರಾಮಿಕ ಕಾಯಿಲೆಯಿಂದ ಚೇತರಿಸಿಕೊಂಡ ಮತ್ತು ಆ ರೋಗಕಾರಕಕ್ಕೆ ಪ್ರತಿಕಾಯಗಳಲ್ಲಿ ಸಮೃದ್ಧವಾಗಿರುವ ವ್ಯಕ್ತಿಯಿಂದ ಪಡೆದ ರಕ್ತದ ಸೀರಮ್ ಅನ್ನು ನಂತರ ಕೋವಿಡ್-19 ರೋಗಿಗೆ ನೀಡಲಾಗುತ್ತದೆ.  ರೋಗಿಗಳು ನಿಷ್ಕ್ರಿಯ ರೋಗನಿರೋಧಕವನ್ನು ಪಡೆಯುತ್ತಾರೆ. "ರಕ್ತದ ಸೀರಮ್ ಅನ್ನು ಹೊರತೆಗೆದು ರೋಗಪೀಡಿತ ವ್ಯಕ್ತಿಗೆ ನೀಡುವ ಮೊದಲು ಸಂಭಾವ್ಯ ದಾನಿಯನ್ನು ಪರೀಕ್ಷಿಸಲಾಗುತ್ತದೆ. ಮೊದಲಿಗೆ, ಸ್ವ್ಯಾಬ್ ಪರೀಕ್ಷೆಯು ನಕಾರಾತ್ಮಕವಾಗಿರಬೇಕು ಮತ್ತು ಸಂಭಾವ್ಯ ದಾನಿಯು ಖಚಿತವಾಗಿ ಗುಣವಾಗಿರುವನೆಂದು ಘೋಷಿಸಬೇಕು. ನಂತರ ಚೇತರಿಸಿಕೊಂಡ ವ್ಯಕ್ತಿ ಎರಡು ವಾರಗಳವರೆಗೆ ಕಾಯಬೇಕಾಗುತ್ತದೆ. ಇಲ್ಲದಿದ್ದರೆ ಸಂಭಾವ್ಯ ದಾನಿ ಕನಿಷ್ಠ 28 ದಿನಗಳವರೆಗೆ ರೋಗ ಲಕ್ಷಣರಹಿತವಾಗಿರಬೇಕು.  ಈ ಎರಡರಲ್ಲಿ ಯಾವುದಾದರೂ ಒಂದು ಕಡ್ಡಾಯವಾಗಿದೆ ಎಂದು ಡಾ. ಕಿಶೋರ್ ಇಂಡಿಯಾ ಸೈನ್ಸ್ ವೈರ್ ಜೊತೆ ಮಾತನಾಡುತ್ತಾ ಹೇಳಿದರು.

ಯಾರು ಚಿಕಿತ್ಸೆಯನ್ನು ಪಡೆಯುತ್ತಾರೆ?:  “ಆರಂಭದಲ್ಲಿ ನಾವು ಕಡಿಮೆ ಸಂಖ್ಯೆಯ ರೋಗಿಗಳಲ್ಲಿ ಪ್ರಯತ್ನಿಸುತ್ತೇವೆ. ಪ್ರಸ್ತುತ ಇದನ್ನು ತೀವ್ರವಾಗಿ ಭಾದಿತ ರೋಗಿಗಳಿಗೆ ಮಾತ್ರ ನಿರ್ಬಂಧಿತ ಬಳಕೆಗೆ ಪ್ರಾಯೋಗಿಕ ಚಿಕಿತ್ಸೆಯಾಗಿ ಅನುಮತಿಸಲಾಗಿದೆ. ಅವರು ನೇಮಕಗೊಳ್ಳುವ ಮೊದಲು ನಾವು ತಿಳುವಳಿಕೆಯುಳ್ಳ ಒಪ್ಪಿಗೆಯನ್ನು ಪಡೆಯುತ್ತೇವೆ.  ಇದನ್ನು ಕ್ಲಿನಿಕಲ್ ಪ್ರಯೋಗವಾಗಿ ನಡೆಸಲಾಗುವುದು ಎಂದು ಡಾ ಕಿಶೋರ್ ಹೇಳಿದರು.  ಇದರಲ್ಲಿ ಐದು ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ಕೋವಿಡ್ ಚಿಕಿತ್ಸಾಲಯಗಳು ಸಹಭಾಗಿತ್ವದಲ್ಲಿರುತ್ತವೆ ”.

ವ್ಯಾಕ್ಸಿನೇಷನ್‌ ಗಿಂತಲೂ ಇದು ಹೇಗೆ ಭಿನ್ನವಾಗಿದೆ?: ಈ ಚಿಕಿತ್ಸೆಯು ನಿಷ್ಕ್ರಿಯ ರೋಗನಿರೋಧಕಕ್ಕೆ ಹೋಲುತ್ತದೆ. ಲಸಿಕೆ ನೀಡಿದಾಗ, ಪ್ರತಿರಕ್ಷಣಾ ವ್ಯವಸ್ಥೆಯು ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ. ಹೀಗಾಗಿ, ನಂತರದ ದಿನಗಳಲ್ಲಿ, ಲಸಿಕೆ ಹಾಕಿದ ವ್ಯಕ್ತಿಯು ಆ ರೋಗಕಾರಕದಿಂದ ಸೋಂಕಿಗೆ ಒಳಗಾದಾಗ, ಪ್ರತಿರಕ್ಷಣಾ ವ್ಯವಸ್ಥೆಯು ಪ್ರತಿಕಾಯಗಳನ್ನು ಬಿಡುಗಡೆ ಮಾಡುತ್ತದೆ ಮತ್ತು ಸೋಂಕನ್ನು ತಟಸ್ಥಗೊಳಿಸುತ್ತದೆ.  ವ್ಯಾಕ್ಸಿನೇಷನ್ ಜೀವನಪರ್ಯಂತ ರಕ್ಷಣೆಯನ್ನು ನೀಡುತ್ತದೆ. ನಿಷ್ಕ್ರಿಯ ಪ್ರತಿಕಾಯ ಚಿಕಿತ್ಸೆಯ ಸಂದರ್ಭದಲ್ಲಿ, ಚುಚ್ಚುಮದ್ದಿನ ಪ್ರತಿಕಾಯಗಳು ರಕ್ತಪ್ರವಾಹದಲ್ಲಿ ಉಳಿಯುವ ಸಮಯದವರೆಗೆ ಮಾತ್ರ ಪರಿಣಾಮವು ಇರುತ್ತದೆ.  ನೀಡಿರುವ ರಕ್ಷಣೆಯು ತಾತ್ಕಾಲಿಕವಾಗಿರುತ್ತದೆ.  ಮಗುವು ತನ್ನದೇ ಆದ ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುವ ಮೊದಲು ತಾಯಿಯು ಎದೆ ಹಾಲಿನ ಮೂಲಕ ಪ್ರತಿಕಾಯಗಳನ್ನು ಶಿಶುವಿಗೆ ವರ್ಗಾಯಿಸುತ್ತಾಳೆ.

ಇತಿಹಾಸ: 1890 ರಲ್ಲಿ, ಜರ್ಮನಿಯ ಶರೀರಶಾಸ್ತ್ರಜ್ಞ ಎಮಿಲ್ ವಾನ್ ಬೆಹ್ರಿಂಗ್, ಡಿಫ್ತಿರಿಯಾ (ಗಂಟಲಮಾರಿ) ಸೋಂಕಿತ ಮೊಲದಿಂದ ಪಡೆದ ಸೀರಮ್ ಡಿಫ್ತಿರಿಯಾ ಸೋಂಕನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿ ಎಂದು ಕಂಡುಹಿಡಿದನು. 1901 ರಲ್ಲಿ ಬೆಹ್ರಿಂಗ್‌ಗೆ ಔಷಧಕ್ಕಾಗಿ ಮೊಟ್ಟಮೊದಲ ಬಾರಿಗೆ ನೊಬೆಲ್ ಪ್ರಶಸ್ತಿ ನೀಡಲಾಯಿತು. ಆ ಸಮಯದಲ್ಲಿ ಪ್ರತಿಕಾಯಗಳ ಬಗ್ಗೆ ತಿಳಿದಿರಲಿಲ್ಲ. ಸುಸ್ಥಿರ ಸೀರಮ್ ಚಿಕಿತ್ಸೆಯು ಕಡಿಮೆ ಪರಿಣಾಮಕಾರಿಯಾಗಿದ್ದು ಮತ್ತು ಸಾಕಷ್ಟು ಅಡ್ಡಪರಿಣಾಮಗಳನ್ನು ಹೊಂದಿತ್ತು. ಪ್ರತಿಕಾಯದ ಭಾಗವನ್ನು ಬೇರ್ಪಡಿಸಲು ಹಲವು ವರ್ಷಗಳೇ ಬೇಕಾದವು.  ಇನ್ನು, ಅನಪೇಕ್ಷಿತ ಪ್ರತಿಕಾಯಗಳು ಮತ್ತು ಕಲ್ಮಶಗಳು ಅಡ್ಡಪರಿಣಾಮಗಳಿಗೆ ಕಾರಣವಾದವು.

ಇದು ಪರಿಣಾಮಕಾರಿಯಾಗಿದೆಯೇ?: ಬ್ಯಾಕ್ಟೀರಿಯಾದ ಸೋಂಕಿನ ವಿರುದ್ಧ ನಮ್ಮಲ್ಲಿ ಪರಿಣಾಮಕಾರಿ ಪ್ರತಿಜೀವಕಗಳಿವೆ (ಆ್ಯಂ ಟಿಬಯಾಟಿಕ್ಸ್). ಆದಾಗ್ಯೂ, ನಮ್ಮಲ್ಲಿ ಪರಿಣಾಮಕಾರಿ ಆಂಟಿವೈರಲ್‌ಗಳು ಇಲ್ಲ.  ಹೊಸ ವೈರಲ್ ಹರಡುವಿಕೆಯು  ಸಂಭವಿಸಿದಾಗ, ಅದಕ್ಕೆ ಚಿಕಿತ್ಸೆ ನೀಡಲು ಯಾವುದೇ ಔಷಧಿಗಳಿಲ್ಲ. ಆದ್ದರಿಂದ, ಹಿಂದಿನ ವೈರಲ್ ಸಾಂಕ್ರಾಮಿಕ ಸಮಯದಲ್ಲಿ ಚೇತರಿಸಿಕೊಳ್ಳುವ ಸೀರಮ್ ಅನ್ನು ಬಳಸಲಾಗುತ್ತದೆ. 2009-2010ರ ಹೆಚ್1ಎನ್1 ಇನ್ ಫ್ಲುಯೆನ್ಸಾ ವೈರಸ್ ಸಾಂಕ್ರಾಮಿಕ ರೋಗದ ಸಮಯದಲ್ಲಿ, ತೀವ್ರವಾದ ಆರೈಕೆಯ ಅಗತ್ಯವಿರುವ ಸೋಂಕಿನ ರೋಗಿಗಳನ್ನು ಬಳಸಲಾಗುತ್ತಿತ್ತು. ನಿಷ್ಕ್ರಿಯ ಪ್ರತಿಕಾಯ ಚಿಕಿತ್ಸೆಯ ನಂತರ, ಸೀರಮ್-ಚಿಕಿತ್ಸೆ ಪಡೆದ ವ್ಯಕ್ತಿಗಳು ಕ್ಲಿನಿಕಲ್ ಸುಧಾರಣೆಯನ್ನು ತೋರಿಸಿದರು. ವೈರಲ್ ಹೊರೆಯು ಕಡಿಮೆಯಾಯಿತು ಮತ್ತು ಸಾವಿನ ಪ್ರಮಾಣ ಕಡಿಮೆ ಮಾಡಲು ಸಾಧ್ಯವಾಯಿತು. 2018 ರಲ್ಲಿ ಹರಡಿದ ಎಬೋಲಾ ಸಾಂಕ್ರಾಮಿಕ ರೋಗಕ್ಕೂ  ಈ ವಿಧಾನವು ಸಹ ಉಪಯುಕ್ತವಾಗಿತ್ತು.

ಇದು ಸುರಕ್ಷಿತವೇ?: ಆಧುನಿಕ ರಕ್ತ ಬ್ಯಾಂಕಿಂಗ್ ತಂತ್ರಗಳೊಂದಿಗೆ ರಕ್ತದಿಂದ ಹರಡುವ ರೋಗಕಾರಕಗಳ ಪರೀಕ್ಷೆಯು ಕಠಿಣವಾಗಿರುತ್ತದೆ.  ರಕ್ತದ ದಾನಿಗಳು ಮತ್ತು ಸ್ವೀಕರಿಸುವವರ ಪ್ರಕಾರವನ್ನು ಹೊಂದಿಸುವುದು ಕಷ್ಟವೇನಲ್ಲ  ಆದ್ದರಿಂದ ಈಗಾಗಲೇ ತಿಳಿದಿರುವ ಸಾಂಕ್ರಾಮಿಕ ಏಜೆಂಟ್‌ಗಳನ್ನು ಅಜಾಗರೂಕತೆಯಿಂದ ವರ್ಗಾಯಿಸುವ ಅಥವಾ ವರ್ಗಾವಣೆಯ ಪ್ರತಿಕ್ರಿಯೆಗಳನ್ನು ಪ್ರಚೋದಿಸುವ ಅಪಾಯಗಳು ಕಡಿಮೆ. "ರಕ್ತದಾನದ ಸಂದರ್ಭದಲ್ಲಿ ನಾವು ಮಾಡುವಂತೆಯೇ ರಕ್ತ ಗುಂಪುಗಳು ಮತ್ತು ಆರ್ ಹೆಚ್ ಹೊಂದಾಣಿಕೆಯನ್ನು ನೋಡಬೇಕು. ರಕ್ತ ಗುಂಪು ಹೊಂದಾಣಿಕೆಯಾಗುವ ಜನರು ಮಾತ್ರ ರಕ್ತದಾನ ಮಾಡಬಹುದು ಅಥವಾ ಸ್ವೀಕರಿಸಬಹುದು. ರಕ್ತದಾನ ಮಾಡಲು ಅನುಮತಿ ನೀಡುವ ಮೊದಲು ದಾನಿಯನ್ನು ಕಟ್ಟುನಿಟ್ಟಾಗಿ ಪರೀಕ್ಷಿಸಲಾಗುತ್ತದೆ  ಮತ್ತು ಕೆಲವು ಕಡ್ಡಾಯ ಅಂಶಗಳಿಗಾಗಿ ಪರೀಕ್ಷಿಸಲಾಗುತ್ತದೆ. ಅವರು ಹೆಪಟೈಟಿಸ್, ಎಚ್‌ಐವಿ, ಮಲೇರಿಯಾ ಮತ್ತು ಇನ್ನಿತರ ಪರೀಕ್ಷೆಗಳಿಗೆ ಒಳಗಾಗುತ್ತಾರೆ ಇದರಿಂದಾಗಿ ಬೇರೆ ರೋಗಕಾರಕವನ್ನು ಸ್ವೀಕರಿಸುವವರಿಗೆ ರವಾನಿಸದಂತೆ ನೋಡಿಕೊಳ್ಳುತ್ತವೆ ಎಂದು ಎಸ್‌ಸಿಟಿಐಎಂಎಸ್‌ಟಿ ನಿರ್ದೇಶಕರಾದ ಡಾ. ಆಶಾ ಕಿಶೋರ್ ಹೇಳಿದರು.

ಸ್ವೀಕರಿಸುವವರಲ್ಲಿ ಪ್ರತಿಕಾಯಗಳು ಎಷ್ಟು ಕಾಲ ಉಳಿಯುತ್ತವೆ?: ಪ್ರತಿಕಾಯ ಸೀರಮ್ ನೀಡಿದ ನಂತರ, ಅದು ಸ್ವೀಕರಿಸುವವರಲ್ಲಿ ಕನಿಷ್ಠ ಮೂರರಿಂದ ನಾಲ್ಕು ದಿನಗಳವರೆಗೆ ಇರುತ್ತದೆ. ಈ ಅವಧಿಯಲ್ಲಿ, ರೋಗಿಯು ಚೇತರಿಸಿಕೊಳ್ಳುತ್ತಾನೆ. ಅಮೇರಿಕ ಮತ್ತು ಚೀನಾದ ಸಂಶೋಧನಾ ವರದಿಗಳು ವರ್ಗಾವಣೆ ಪ್ಲಾಸ್ಮಾದ ಪ್ರಯೋಜನಕಾರಿ ಪರಿಣಾಮವನ್ನು ಮೊದಲ ಮೂರು ನಾಲ್ಕು ದಿನಗಳಲ್ಲಿ ಪಡೆಯಲಾಗುತ್ತದೆ ಮತ್ತು ನಂತರದ ದಿನಗಳಲ್ಲಿ ಪಡೆಯುವುದಿಲ್ಲ ಎಂದು ಸೂಚಿಸುತ್ತದೆ.

ಸವಾಲುಗಳು: ಈ ಚಿಕಿತ್ಸೆಯನ್ನು ಸಜ್ಜುಗೊಳಿಸಲು ಸರಳವಲ್ಲ, ಮುಖ್ಯವಾಗಿ ಗುಣಮುಖರಾದವರಿಂದ ಗಮನಾರ್ಹ ಪ್ರಮಾಣದ ಪ್ಲಾಸ್ಮಾವನ್ನು ಪಡೆಯುವ ಕಷ್ಟದಿಂದಾಗಿ. ಕೋವಿಡ್-19 ನಂತಹ ಕಾಯಿಲೆಗಳಲ್ಲಿ, ಹೆಚ್ಚಿನ ಬಲಿಪಶುಗಳು ವಯಸ್ಸಾದವರು, ಅಧಿಕ ರಕ್ತದೊತ್ತಡ, ಮಧುಮೇಹ ಮುಂತಾದ ಇತರ ಖಾಯಿಲೆಗಳಿಂದ ಬಳಲುತ್ತಿರುತ್ತಾರೆ, ಚೇತರಿಸಿಕೊಂಡ ಎಲ್ಲಾ ರೋಗಿಗಳು ರಕ್ತದಾನ ಮಾಡಲು ಸ್ವಯಂಪ್ರೇರಿತರಾಗಿ ಮುಂದೆ ಬರುವುದಿಲ್ಲ

***



(Release ID: 1613405) Visitor Counter : 487