ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಕೋವಿಡ್-19 ವಿರುದ್ಧ ಹೋರಾಟಕ್ಕೆ ತಂತ್ರಜ್ಞಾನ ಅಭಿವೃದ್ಧಿ ಮಂಡಳಿಯ ಪ್ರಸ್ತಾಪಗಳ ಆಹ್ವಾನಕ್ಕೆ ಭಾರತೀಯ ಉದ್ಯಮಗಳಿಂದ ಉತ್ಸಾಹದ  ಪ್ರತಿಕ್ರಿಯೆ

Posted On: 11 APR 2020 12:19PM by PIB Bengaluru

ಕೋವಿಡ್-19 ವಿರುದ್ಧ ಹೋರಾಟಕ್ಕೆ ತಂತ್ರಜ್ಞಾನ ಅಭಿವೃದ್ಧಿ ಮಂಡಳಿಯ ಪ್ರಸ್ತಾಪಗಳ ಆಹ್ವಾನಕ್ಕೆ ಭಾರತೀಯ ಉದ್ಯಮಗಳಿಂದ ಉತ್ಸಾಹದ  ಪ್ರತಿಕ್ರಿಯೆ

 

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (ಡಿಎಸ್ಟಿ) ಅಂಗ ಸಂಸ್ಥೆಯಾದ ತಂತ್ರಜ್ಞಾನ ಅಭಿವೃದ್ಧಿ ಮಂಡಳಿ (ಟಿಡಿಬಿ) ಕೋವಿಡ್-19 ವಿರುದ್ಧ ಹೋರಾಟಕ್ಕೆ ತಾಂತ್ರಿಕವಾಗಿ ನವೀನ ಪರಿಹಾರಗಳ ಪ್ರಸ್ತಾವನೆಗಳನ್ನು ನೀಡುವಂತೆ ಭಾರತೀಯ ಕಂಪನಿಗಳು ಮತ್ತು ಉದ್ಯಮಗಳಿಗೆ ನೀಡಿದ್ದ ಆಹ್ವಾನಕ್ಕೆ ಭಾರತೀಯ ಉದ್ಯಮ ಮತ್ತು ಸ್ಟಾರ್ಟ್ ಅಪ್ ಗಳಿಂದ ಉತ್ಸಾಹದ ಪ್ರತಿಕ್ರಿಯೆ ದೊರೆತಿದೆ.

ದೇಶೀಯ ತಂತ್ರಜ್ಞಾನದ ವ್ಯಾಪಾರೀಕರಣ ಅಥವಾ ಆಮದು ತಂತ್ರಜ್ಞಾನದ ಅಳವಡಿಕೆಗಾಗಿ ತಂತ್ರಜ್ಞಾನ ಅಭಿವೃದ್ಧಿ ಮಂಡಳಿಯು ಭಾರತೀಯ ಕಂಪನಿಗಳಿಗೆ ಹಣಕಾಸಿನ ನೆರವು ನೀಡುತ್ತದೆ. ಕೋವಿಡ್ -19 ವಿರುದ್ಧ ಹೋರಾಡುವಲ್ಲಿ ದೇಶದ ಪ್ರಮುಖ ಸಾಮರ್ಥ್ಯಗಳನ್ನು ಬಲಪಡಿಸಲು 2020 ಮಾರ್ಚ್ 20 ರಂದು ಉದ್ಯಮಗಳಿಂದ ಪ್ರಸ್ತಾಪಗಳನ್ನು ಆಹ್ವಾನಿಸಿತ್ತು. ಕಣ್ಗಾವಲು, ಪ್ರಯೋಗಾಲಯದ ಬೆಂಬಲ, ಸೋಂಕು ತಡೆಗಟ್ಟುವಿಕೆ ನಿಯಂತ್ರಣ, ಲಾಜಿಸ್ಟಿಕ್ಸ್, ಅಪಾಯ ಸಂವಹನ ಮತ್ತು ನಿರ್ದಿಷ್ಟವಾಗಿ  ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ಮತ್ತು ಅನಾರೋಗ್ಯ ಪೀಡಿತ ರೋಗಿಗಳ ಪ್ರತ್ಯೇಕತೆ ಮತ್ತು ನಿರ್ವಹಣೆಯ ದೃಷ್ಟಿಯಿಂದ ಸಾಮರ್ಥ್ಯಗಳನ್ನು ಬಲಪಡಿಸುವುದು ಮುಂತಾದ ಪ್ರಮುಖ ಕ್ಷೇತ್ರಗಳಲ್ಲಿ ಪ್ರಸ್ತಾವನೆಗಳನ್ನು ಆಹ್ವಾನಿಸಿದೆ.

ಆಹ್ವಾನದ ಪರಿಣಾಮ ವ್ಯಾಪಕವಾಗಿದ್ದು, ಮೊದಲ ವಾರದಲ್ಲಿಯೇ 300 ಕ್ಕೂ ಹೆಚ್ಚು ಕಂಪನಿಗಳು ಟಿಡಿಬಿ ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ತಮ್ಮ ಆಸಕ್ತಿಯನ್ನು ತಿಳಿಸಿವೆ. ಇದಲ್ಲದೆ, ಇದುವರೆಗೆ 140 ಕಂಪನಿಗಳು ತಮ್ಮ ಪ್ರಸ್ತಾಪಗಳನ್ನು ಸಲ್ಲಿಸಿವೆ. ಇವುಗಳಲ್ಲಿ ಹಲವು ಪ್ರದೇಶಗಳಿಗೆ ನವೀನ ಪರಿಹಾರಗಳನ್ನು ನೀಡುವ ಸ್ಟಾರ್ಟ್ಅಪ್ಗಳಿಂದ ಬಂದಿವೆ.

"ಕೋವಿಡ್-19 ಕ್ಕೆ ಸಂಬಂಧಿಸಿದ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳ ಸಂಪೂರ್ಣ ಉತ್ಪಾದನೆಯನ್ನು ಬೆಂಬಲಿಸುವ ಟಿಡಿಬಿ ಕರೆಗೆ ನಮ್ಮ ಸ್ಟಾರ್ಟ್ ಅಪ್ ಮತ್ತು ಎಂಎಸ್ಎಂಇಗಳು ತ್ವರಿತವಾಗಿ ಸ್ಪಂದಿಸಿವೆ. ರಾಷ್ಟ್ರವು ನಮ್ಮ ನಷ್ಟವನ್ನು ತ್ವರಿತವಾಗಿ ಮತ್ತು ಸಂಪೂರ್ಣವಾಗಿ ಸರಿದೂಗಿಸಬೇಕಾಗಿದೆ ಮತ್ತು ದೇಶೀಯ ತಂತ್ರಜ್ಞಾನ ಉತ್ಪಾದನೆಯಲ್ಲಿರುವ ಸವಾಲುಗಳನ್ನು ಎದುರಿಸಲು ಹೊಸ ಚೈತನ್ಯದೊಂದಿಗೆ ಮುಂದುವರೆಯಬೇಕಾಗಿದೆ. ದಿಕ್ಕಿನಲ್ಲಿ ತೆಗೆದುಕೊಳ್ಳುವ ಪ್ರತಿಯೊಂದು ಹೆಜ್ಜೆಯೂ ಭಾರೀ ಪರಿಣಾಮವನ್ನು ಬೀರುತ್ತದೆ." ಎಂದು ಡಿಎಸ್ಟಿ ಕಾರ್ಯದರ್ಶಿ ಪ್ರೊಫೆಸರ್ ಅಶುತೋಷ್ ಶರ್ಮಾ ಹೇಳುತ್ತಾರೆ.

ಡಯಗ್ನೊಸ್ಟಿಕ್ ಕಿಟ್ಗಳು, ರಿಯಲ್-ಟೈಮ್ ರಿವರ್ಸ್ ಟ್ರಾನ್ಸ್ಸ್ಕ್ರಿಪ್ಟೇಸ್ ಪಿಸಿಆರ್ (ಆರ್ ಟಿ- ಪಿಸಿಆರ್) ಮತ್ತು ಪ್ರತಿಕಾಯ (ಆ್ಯಂಟಿಬಾಡಿ) ಕ್ಷಿಪ್ರ ಪರೀಕ್ಷೆಗಳ ಬಗ್ಗೆ ಹಲವಾರು ಪ್ರಸ್ತಾಪಗಳನ್ನು ಸ್ವೀಕರಿಸಲಾಗಿದೆ.  ಕಾಗದ ಆಧಾರಿತದಿಂದ ಆನ್-ಚಿಪ್ ಅಸ್ಸೇಸ್ಗಳವರೆಗೆ ಮತ್ತು ಪಾಯಿಂಟ್ ಆಫ್ ಕೇರ್ ಅಪ್ಲಿಕೇಶನ್ಗಳಿಗಾಗಿ ನ್ಯಾನೊ-ಫ್ಲ್ಯೂಯಿಡಿಕ್ ಪ್ಲಾಟ್ಫಾರ್ಮ್ಗಳವರೆಗೆ ಪರಿಹಾರಗಳ ಪ್ರಸ್ತಾಪಗಳು ಬಂದಿವೆ.

ಬಯೋಟೆಕ್ ಕ್ಷೇತ್ರದಲ್ಲಿ, ಕೆಲವು ಲಸಿಕೆ ಅಭಿವೃದ್ಧಿಗೆ, ಕೆಲವು ಮಾರ್ಕರ್ ಗಳ ಆಧಾರದ ಮೇಲೆ ರೋಗದ ತೀವ್ರತೆಯನ್ನು ಗುರುತಿಸುವ ಪಾಯಿಂಟ್-ಆಫ್-ಕೇರ್ ಸಾಧನಕ್ಕೆ ಮತ್ತು ಆರೋಗ್ಯ ಸ್ಥಿತಿಗಳನ್ನು ಸುಧಾರಿಸುವ ಸಾಧನವಾಗಿ ನೈಸರ್ಗಿಕ ಮೂಲಗಳಿಂದ ಪಡೆದ ಉತ್ಪನ್ನಗಳಿಗೆ ಪ್ರಸ್ತಾಪಗಳು ಬಂದಿವೆ.

ವಿನ್ಯಾಸ, ವಸ್ತು ಮತ್ತು ಉತ್ಪಾದನಾ ತಂತ್ರಗಳಲ್ಲಿ ಹೊಸ ಆವಿಷ್ಕಾರಗಳನ್ನು ಪರಿಚಯಿಸುವ ಮೂಲಕ ವಿವಿಧ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ವೆಚ್ಚ-ಪರಿಣಾಮಕಾರಿ ಮುಖಗವಸುಗಳ ಉತ್ಪಾದನೆಗೆ ಪರಿಹಾರಗಳನ್ನು ನೀಡಲು ಮುಂದೆ ಬಂದಿವೆ. ಕ್ಷೇತ್ರದಲ್ಲಿನ ಹೆಚ್ಚಿನ ಪರಿಹಾರಗಳು ಹೆಣೆದ ಮುಖಗವಸುಗಳು ಸೇರಿದಂತೆ ಕಡಿಮೆ ವೆಚ್ಚದ ಸಾಮಾನ್ಯ ಮುಖಗವಸುಗಳಾಗಿವೆ. ಇದಲ್ಲದೆ, ಆಂಟಿವೈರಲ್ ಡ್ರಗ್ 3 ಡಿ ಪ್ರಿಂಟೆಡ್ ಮಾಸ್ಕ್, ನ್ಯಾನೊಫೈಬರ್ ಲೇಪಿತ ಎನ್ -95 ಮಾಸ್ಕ್, ಪೊವಿಡೋನ್ ಅಯೋಡಿನ್ ತೆಳು-ಫಿಲ್ಮ್ ಲೇಪಿತ ಮುಖಗವಸನ್ನು ಸಾಮೂಹಿಕ ಬಳಕೆಗಾಗಿ ಪ್ರಸ್ತಾಪಿಸಲಾಗಿದೆ.

ಬೃಹತ್ ಪ್ರದೇಶಗಳ ನೈರ್ಮಲ್ಯೀಕರಣ ಮತ್ತು ಕ್ರಿಮಿನಾಶಕ ಪ್ರಸ್ತಾವಗಳಲ್ಲಿ, ಬೃಹತ್ ಪ್ರದೇಶದ ನೈರ್ಮಲ್ಯೀಕರಣಕ್ಕಾಗಿ Full Depth Disinfection Cycle (ಎಫ್ಡಿಡಿಸಿ) ತಂತ್ರಜ್ಞಾನ, ಹ್ಯಾಂಡ್ ಸ್ಯಾನಿಟೈಜರ್ ನಿಂದ ಸ್ವಯಂಚಾಲಿತ ಸೋಂಕುನಿವಾರಕ ರೋಬೋಟ್ಗಳವರೆಗೆ ವಿವಿಧ ಪರಿಹಾರಗಳ ಪ್ರಸ್ತಾವಗಳು ಬಂದಿವೆ. ಅನೇಕ ಕಂಪನಿಗಳು ತಮ್ಮ ಉತ್ಪನ್ನಗಳಲ್ಲಿ ಸೋಂಕುನಿವಾರಕಕ್ಕಾಗಿ ಬೆಳ್ಳಿ ನ್ಯಾನೊಪರ್ಟಿಕಲ್ಸ್ ಆಂಟಿವೈರಲ್ ಗುಣಲಕ್ಷಣಗಳನ್ನು, ಸೋಂಕುನಿವಾರಕ ಕೋಣೆಗಳಲ್ಲಿ ಯುವಿ ಕಿರಣಗಳ ಸೂಕ್ಷ್ಮಾಣುಜೀವಿ ಗುಣಲಕ್ಷಣಗಳ ಬಳಕೆ, ಥೈಮೋಲ್ ಮತ್ತು ಲಿಕ್ವಿಡ್ ಓಝೋನ್ ಆಧಾರಿತ ಸೋಂಕುನಿವಾರಕ ತಂತ್ರಜ್ಞಾನಗಳು ಮತ್ತು ಸ್ಥಾಯೀವಿದ್ಯುತ್ತಿನ ಸಿಂಪಡಿಸುವಿಕೆಯಂತಹ ಸಿಂಪಡಿಸುವ ಗನ್ಗಳನ್ನು ಅನ್ವೇಷಿಸಿವೆ.

ಥರ್ಮಲ್ ಸ್ಕ್ಯಾನರ್ ಅಡಿಯಲ್ಲಿ ಪ್ರಸ್ತಾಪಿಸಲಾದ ಕೆಲವು ಪರಿಹಾರಗಳಲ್ಲಿ, ಗುಣಮಟ್ಟದ ಥರ್ಮಲ್ ಇಮೇಜಿಂಗ್, ಹೆಚ್ಚಿನ ರೆಸಲ್ಯೂಶನ್ ತಾಪಮಾನದ ವ್ಯಾಪ್ತಿಯನ್ನು ಹೊಂದಿರುವ ಸ್ಕ್ರೀನಿಂಗ್ ಸಿಸ್ಟಮ್, 0.3 ಡಿಗ್ರಿಗಿಂತ ಕಡಿಮೆ, ಮತ್ತು ಸಾಮೂಹಿಕ-ಪ್ರಮಾಣದ ಆರಂಭಿಕ ಸ್ಕ್ರೀನಿಂಗ್ ಗೆ ಸೇರಿವೆ. ಇವುಗಳಲ್ಲಿ ಕೆಲವು ಕಂಪನಿಗಳು ಉತ್ತಮ ಸ್ಕ್ಯಾನಿಂಗ್ ಫಲಿತಾಂಶಗಳನ್ನು ಸಾಧಿಸಲು, ಕ್ವಾರಂಟೈನ್ ಮೇಲ್ವಿಚಾರಣೆಯಲ್ಲಿ ಆಹಾರ ಮತ್ತು ಔಷಧಿ ವಿತರಣೆಯಲ್ಲಿ, ಸ್ವಯಂ ಮೌಲ್ಯಮಾಪನಕ್ಕಾಗಿ ಅಪ್ಲಿಕೇಶನ್ಗಳು ಮತ್ತು ಟೆಲಿಮೆಡಿಸಿನ್ ನಲ್ಲಿಇ ಕಂಪ್ಯೂಟಿಂಗ್ ತಂತ್ರಗಳನ್ನು ಮತ್ತು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳುವುದಾಗಿ ಹೇಳಿಕೊಂಡಿವೆ. ಪ್ರಸ್ತಾಪಿತ ಯೋಜನೆಗಳಲ್ಲಿ ಅವರ ತಾಂತ್ರಿಕ ಸಾಮರ್ಥ್ಯ ಮತ್ತು ಆರ್ಥಿಕ ಬೆಂಬಲದ ಬಗ್ಗೆ ತಜ್ಞರ ಸಮಿತಿಗಳು ಮೌಲ್ಯಮಾಪನ ಮಾಡುತ್ತಿವೆ.

(ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ, ಕಮಾಂಡರ್ ನವನೀತ್ ಕೌಶಿಕ್, ಎಸ್ ಸಿ '', ತಂತ್ರಜ್ಞಾನ ಅಭಿವೃದ್ಧಿ ಮಂಡಳಿ, navneetkaushik.tdb[at]gmail[dot]com, ಮೊಬೈಲ್: 9560611391)

https://ci5.googleusercontent.com/proxy/wRPOXygk_326fuD-gh3BvOPRvyWmGVZqFF6mSRBU5aazsl7Ff1WCQAAL7a4_79KYFiqUd2-N661DfmiLSStvguU5hLd4hAdzd0OCojUzz44p0oJShJbZ=s0-d-e1-ft#https://static.pib.gov.in/WriteReadData/userfiles/image/image001B52E.jpg

***



(Release ID: 1613336) Visitor Counter : 310