ರಕ್ಷಣಾ ಸಚಿವಾಲಯ
ಒಎಫ್ ಬಿಯಿಂದ ತಪಾಸಣೆ, ಐಸೋಲೇಶನ್ ಮತ್ತು ಕ್ವಾರಂಟೈನ್ ಗಾಗಿ ಎರಡು ಹಾಸಿಗಗಳ ಟೆಂಟ್ ಸಿದ್ಧ
Posted On:
11 APR 2020 9:28AM by PIB Bengaluru
ಒಎಫ್ ಬಿಯಿಂದ ತಪಾಸಣೆ, ಐಸೋಲೇಶನ್ ಮತ್ತು ಕ್ವಾರಂಟೈನ್ ಗಾಗಿ ಎರಡು ಹಾಸಿಗಗಳ ಟೆಂಟ್ ಸಿದ್ಧ
ಅರುಣಾಚಲ ಪ್ರದೇಶಕ್ಕೆ 50 ಟೆಂಟ್ ಗಳ ವಿತರಣೆ
ಕೊರೊನಾ ಸೋಂಕು (ಕೋವಿಡ್ ವಿರುದ್ಧ) ಸಮರದಲ್ಲಿ ಸೇನಾ ಸಾಮಗ್ರಿ ಕಾರ್ಖಾನೆ ಮಂಡಳಿ(ಒಎಫ್ ಬಿ) ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಸಾಂಕ್ರಾಮಿಕದ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಿರುವ ಒಎಫ್ ಬಿ, ಈ ವಾರದಲ್ಲಿ ಕೈಗೊಂಡಿರುವ ಕ್ರಮಗಳ ಅಪ್ ಡೇಟ್ ಮಾಹಿತಿ ಇಲ್ಲಿದೆ.
ಎರಡು ಹಾಸಿಗೆಗಳ ಟೆಂಟ್
ಒಎಫ್ ಬಿ ತಪಾಸಣೆ, ಐಸೋಲೇಶನ್ ಮತ್ತು ಕ್ವಾರಂಟೈನ್ ಗಾಗಿ ವೈದ್ಯಕೀಯ ಉಪಕರಣಗಳನ್ನು ಒಳಗೊಂಡ ಎರಡು ಹಾಸಿಗೆಗಳ ಬಿಡಾರ (ಟೆಂಟ್) ವನ್ನು ಅಭಿವೃದ್ಧಿಪಡಿಸಿದೆ. ಇದು ಐಸೋಲೇಶನ್ ವಾರ್ಡ್ ಗಳ ಸಿದ್ಧತೆಗೆ ಅತ್ಯಂತ ಕಡಿಮೆ ದರದಲ್ಲಿ ಪರಿಣಾಮಕಾರಿ ತಂತ್ರವಾಗಿದೆ. ಈ ವಿಶೇಷ ಟೆಂಟ್ ಗಳನ್ನು ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ, ವೈದ್ಯಕೀಯ ತಪಾಸಣೆ, ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ಸರದಿ ಮತ್ತು ಕ್ವಾರಂಟೈನ್ ಉದ್ದೇಶಗಳಿಗೆ ಬಳಕೆ ಮಾಡಬಹುದಾಗಿದೆ. 9.55 ಚದರ ಮೀಟರ್ ವ್ಯಾಪ್ತಿಯ ಈ ಟೆಂಟ್ ಅನ್ನು ವಾಟರ್ ಪ್ರೂಫ್ ಬಟ್ಟೆ, ಮೆದು ಉಕ್ಕು ಮತ್ತು ಅಲ್ಯುಮೀನಿಯಂ ಬಳಸಿ ಸಿದ್ಧಪಡಿಸಲಾಗಿದೆ.
ಈ ಟೆಂಟ್ ಗಳನ್ನು ಯಾವುದೇ ಸ್ಥಳದಲ್ಲಿ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಹಾಕಬಹುದಾಗಿದ್ದು, ಅತ್ಯಲ್ಪ ಅವಧಿಯಲ್ಲಿ ಸಾಂಪ್ರದಾಯಿಕ ಆಸ್ಪತ್ರೆಗಳ ಬದಲಿಗೆ ಹೆಚ್ಚುವರಿ ಸೌಕರ್ಯಕ್ಕಾಗಿ ಇವುಗಳ ನೆರವು ಪಡೆದು, ಸೃಷ್ಟಿಸಬಹುದಾಗಿದೆ. ಕಾನ್ಪುರದ ಸೇನಾ ಸಾಮಗ್ರಿ ಉಪಕರಣ ಕಾರ್ಖಾನೆ ಈ ಟೆಂಟ್ ಗಳನ್ನು ಅಭಿವೃದ್ಧಿಪಡಿಸಿದೆ. ಈಗಾಗಲೇ ಅಂತಹ 50 ಟೆಂಟ್ ಗಳನ್ನು ಅರುಣಾಚಲ ಪ್ರದೇಶ ಸರ್ಕಾರಕ್ಕೆ ಕಳುಹಿಸಲಾಗಿದೆ.
ಹ್ಯಾಂಡ್ ಸ್ಯಾನಿಟೈಸರ್ ಮತ್ತು ಮಾಸ್ಕ್
ಡೆಹ್ರಾಡೂನ್ ನ ಸೇನಾ ಸಾಮಗ್ರಿ ಕಾರ್ಖಾನೆ ಮಂಡಳಿಯ ಒಪಿಟಿಒ ಎಲೆಕ್ಟ್ರಾನಿಕ್ಸ್ ಕಾರ್ಖಾನೆ ಘಟಕ 2,500 ಬಾಟಲ್(ತಲಾ 100 ಎಂಎಲ್) ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ಮತ್ತು 1,000 ಮುಖಗವಸುಗಳನ್ನು 2020ರ ಏಪ್ರಿಲ್ 6ರಂದು ಉತ್ತರಾಖಂಡ ರಾಜ್ಯಪಾಲರಿಗೆ ದೇಣಿಗೆಯಾಗಿ ನೀಡಿದೆ.
ಒಎಫ್ ಬಿಯ ಅರುವಂಕಡು ಕೊರಡೈಟ್ ಕಾರ್ಖಾನೆ 2020ರ ಏಪ್ರಿಲ್ 8ರಂದು ತಮಿಳುನಾಡಿನ ನೀಲಗಿರಿ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ 100 ಲೀಟರ್ ಸ್ಯಾನಿಟೈಸರ್ ಅನ್ನು ಹಸ್ತಾಂತರಿಸಿದೆ.
ಪುಣೆಯ ಭಾರೀ ಸ್ಫೋಟಕಗಳ ಕಾರ್ಖಾನೆ(ಎಚ್ಇಎಫ್) 2020ರ ಏಪ್ರಿಲ್ 9ರಂದು ಬೆಳಗಾವಿಯ ಮೆಸರ್ಸ್ ಎಚ್ಎಲ್ಎಲ್ ಗೆ ಮೊದಲ ಬ್ಯಾಚ್ ನಲ್ಲಿ 2500 ಲೀಟರ್ ಸ್ಯಾನಿಟೈಸರ್ ಅನ್ನು ರವಾನಿಸಿದೆ.
ಧೂಮೀಕರಣ ಚೇಂಬರ್
ನಾಗ್ಪುರದ ಅಂಬಜಹರಿ ಸೇನಾ ಸಾಮಗ್ರಿ ಕಾರ್ಖಾನೆ(ಒಎಫ್ಎಜೆ), ನೈರ್ಮಲೀಕರಣದ ಉದ್ದೇಶದಿಂದ ಸಂಪೂರ್ಣ ಧೂಮೀಕರಣ ಮಾಡುವ ಚೇಂಬರ್ ಅನ್ನು ಅಭಿವೃದ್ಧಿಪಡಿಸಿದೆ. ಇದು ಮಡಿಚಿಡಬಹುದಾಗಿದೆ ಮತ್ತು ಸುಲಭವಾಗಿ ಸ್ಥಳಾಂತರಿಸಬಹುದಾಗಿದೆ ಅದನ್ನು ಒಎಫ್ಎಜೆ ಆಸ್ಪತ್ರೆಯ ಪ್ರಮುಖ ದ್ವಾರದಲ್ಲಿ ಅಳವಡಿಸಲಾಗಿದೆ.
ಕೈ ತೊಳೆಯುವ ವ್ಯವಸ್ಥೆ
ಡೆಹ್ರಾಡೂನ್ ನ ಸೇನಾ ಸಾಮಗ್ರಿ ಕಾರ್ಖಾನೆ, ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಸೋಪ್ ಡಿಸ್ಪೆನ್ಸರ್ ವ್ಯವಸ್ಥೆಯನ್ನೊಳಗೊಂಡ ಪೆಡಲ್ ಮೂಲಕ ಕಾರ್ಯ ನಿರ್ವಹಿಸುವ ಕೈತೊಳೆಯುವ ವ್ಯವಸ್ಥೆಯನ್ನು 2020ರ ಏಪ್ರಿಲ್ 7ರಂದು ಪೊಲೀಸ್ ಅಧಿಕಾರಿಗಳಿಗೆ ಹಸ್ತಾಂತರಿಸಿತು.
ಪುಣೆಯ ದೇಹು ರಸ್ತೆಯ ಸೇನಾ ಸಾಮಗ್ರಿ ಕಾರ್ಖಾನೆ, 2020ರ ಏಪ್ರಿಲ್ 6 ರಂದು ದೇಹುಗಾಂವ್ ಗ್ರಾಮದ ಕಾರ್ಮಿಕರಿಗೆ ಆಹಾರ ಕಿಟ್ ಗಳನ್ನು ವಿತರಿಸಿತು.
***
(Release ID: 1613223)
Visitor Counter : 274