PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 10 APR 2020 7:01PM by PIB Bengaluru

ಕೋವಿಡ್-19: ಪಿ ಬಿ ದೈನಿಕ ವರದಿ

Coat of arms of India PNG images free downloadhttps://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್ -19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಪತ್ರಿಕಾ ಪ್ರಕಟಣೆಗಳನ್ನು ಮತ್ತು ಪಿಐಬಿ ಕೈಗೊಂಡ ವಾಸ್ತವದ ಪರಿಶೀಲನೆಯನ್ನು ಒಳಗೊಂಡಿದೆ)

 

 

ಕೋವಿಡ್ 19 ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಪ್ ಡೇಟ್

ಈವರೆಗೆ 6412 ಕೋವಿಡ್ -19 ಪ್ರಕರಣಗಳು ದೃಢಪಟ್ಟಿದ್ದು,  199 ಜನರು ಮೃತಪಟ್ಟಿರುವುದಾಗಿ ವರದಿಯಾಗಿದೆ. 03 ಜನರು ಗುಣಮುಖರಾಗಿ/ಚೇತರಿಕೆಯ ಬಳಿಕ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. 146 ಸರ್ಕಾರಿ, 67 ಖಾಸಗಿ ಪ್ರಯೋಗಾಲಯಗಳು ಮತ್ತು 16 ಸಾವಿರ ಸಂಗ್ರಹಣಾ ಕೇಂದ್ರಗಳ ಮೂಲಕ ಪರೀಕ್ಷೆಯ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಅಲ್ಲದೆ ತ್ವರಿತ ಪರೀಕ್ಷಾ ಕಿಟ್ ಗಳನ್ನು ಮಂಜೂರು ಮಾಡಲಾಗಿದ್ದು, ಬಳಕೆಗೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ ಮತ್ತು ಬೇಡಿಕೆಯನ್ನೂ ಸಲ್ಲಿಸಲಾಗಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1613161

ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ನಮ್ಮ ಸ್ನೇಹಿತರಿಗೆ ಎಲ್ಲ ಸಾಧ್ಯ ನೆರವು ಒದಗಿಸಲು ಭಾರತ ಸಿದ್ಧ ಎಂದು ಪ್ರಧಾನಿ ಹೇಳಿಕೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಾಂಕ್ರಾಮಿಕದ ವಿರುದ್ಧ ಹೋರಾಡಲು ತನ್ನ ಮಿತ್ರರಿಗೆ ಏನೆಲ್ಲಾ ಸಾಧ್ಯವೋ ನೆರವು ಒದಗಿಸಲು ಭಾರತ ಸಿದ್ಧವಾಗಿದೆ ಎಂದು ತಿಳಿದ್ದಾರೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರು ಭಾರತ ಕ್ಲೋರೋಕ್ವಿನ್ ಮಾತ್ರೆಗಳನ್ನು ಇಸ್ರೇಲ್ ಗೆ ಪೂರೈಸಲು ಕೈಗೊಂಡ ನಿರ್ಧಾರಕ್ಕೆ ಧನ್ಯವಾದ ಅರ್ಪಿಸಿ ಮಾಡಿದ್ದ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1612865

ಕೋವಿಡ್ -19 ನಿಗ್ರಹದ ಹಿನ್ನೆಲೆಯಲ್ಲಿ ಹನ್ನೊಂದು ಅಧಿಕಾರಯುತ ಗುಂಪುಳ ಪ್ರಯತ್ನದ ಪರಾಮರ್ಶೆ ನಡೆಸಿದ ಪಿಎಂಓ

ಕೋವಿಡ್ 19 ಪ್ರಸರಣದ ಕಾರಣದಿಂದ ಹೊರಹೊಮ್ಮುತ್ತಿರುವ ಸವಾಲುಗಳನ್ನು ಎದುರಿಸಲು ಅಧಿಕಾರಯುತ ಗುಂಪುಗಳ ಅಧಿಕಾರಿಗಳ ಸಭೆ ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿಂದು ನಡೆಯಿತು. ಪ್ರಧಾನಮಂತ್ರಿಗಳ ಕಾರ್ಯಾಲಯ ಸಾಂಕ್ರಾಮಿಕ ತಡೆಗೆ ಕೈಗೊಂಡಿರುವ ಕ್ರಮಗಳ ನಿಗಾಕ್ಕಾಗಿ ವಿವಿಧ ಹಂತಗಳಲ್ಲಿ ನಡೆಸುವ ಪರಾಮರ್ಶೆಯ ಸರಣಿಯಲ್ಲಿ ಇದು ಇತ್ತೀಚಿನದಾಗಿದೆ. 

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1612926

ಕೋವಿಡ್ 19 ಹೋರಾಟದ ಹಿನ್ನೆಲೆಯಲ್ಲಿ ಲಾಕ್ ಡೌನ್ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮತ್ತು ಯಾವುದೇ ಸಾಮಾಜಿಕ/ಧಾರ್ಮಿಕ ಮೆರವಣಿಗೆ/ಸಮಾವೇಶಕ್ಕೆ ಅವಕಾಶ ನೀಡದಂತೆ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಗೃಹ ಸಚಿವಾಲಯದ ನಿರ್ದೇಶನ

ಏಪ್ರಿಲ್ 2020ರಲ್ಲಿ ಬರುವ ಹಬ್ಬಗಳ ಹಿನ್ನೆಲೆಯಲ್ಲಿ, ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿರುವ ಕೇಂದ್ರ ಗೃಹ ಸಚಿವಾಲಯ ಕೋವಿಡ್ 19 ವಿರುದ್ಧದ ಸೆಣಸಿನಲ್ಲಿ ಕಟ್ಟುನಿಟ್ಟಾಗಿ ಲಾಕ್ ಡೌನ್ ಕ್ರಮಗಳನ್ನು ಪಾಲಿಸುವುದನ್ನು ಖಾತ್ರಿ ಪಡಿಸಿಕೊಳ್ಳುವಂತೆ ಮತ್ತು ಯಾವುದೇ ಸಾಮಾಜಿಕ/ಧಾರ್ಮಿಕ ಸಮಾವೇಶ/ಮೆರವಣಿಗೆಗಳಿಗೆ ಆಸ್ಪದ ನೀಡದಂತೆ ತಿಳಿಸಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1613072

ನೇಪಾಳ ಪ್ರಧಾನಿಯವರೊಂದಿಗೆ ಪ್ರಧಾನ ಮಂತ್ರಿಯವರ ದೂರವಾಣಿ ಮಾತುಕತೆ

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ನೇಪಾಳದ ಪ್ರಧಾನಿ ಘನತೆವೆತ್ತ ಕೆ ಪಿ ಶರ್ಮಾ ಒಲಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು. ಕೋವಿಡ್ -19 ಬಿಕ್ಕಟ್ಟು ಮತ್ತು ಎರಡೂ ದೇಶಗಳು ಮತ್ತು ನಾಗರಿಕರ ಆರೋಗ್ಯ ಮತ್ತು ಸುರಕ್ಷತೆಗೆ ಸಾಂಕ್ರಾಮಿಕ ರೋಗವು ಒಡ್ಡುತ್ತಿರುವ ಸವಾಲುಗಳ ಬಗ್ಗೆ ಉಭಯ ನಾಯಕರು ಅಭಿಪ್ರಾಯಗಳನ್ನು ಹಂಚಿಕೊಂಡರು. ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ತಮ್ಮ ದೇಶಗಳಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಅವರು ಚರ್ಚಿಸಿದರು.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1612944

ಜಪಾನ್ ಪ್ರಧಾನಿಯವರೊಂದಿಗೆ ದೂರವಾಣಿ ಮಾತುಕತೆ ನಡೆಸಿದ ಪ್ರಧಾನಮಂತ್ರಿ

ಪ್ರಧಾನಮಂತ್ರಿ  ಶ್ರೀ ನರೇಂದ್ರ ಮೋದಿ ಅವರು ಇಂದು ಜಪಾನ್ ಪ್ರಧಾನಮಂತ್ರಿ ಘನತೆವೆತ್ತ ಶಿಂಜೋ ಅಬೆ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದರು. ಕೋವಿಡ್ 19 ಸಾಂಕ್ರಾಮಿಕ ರೋಗದಿಂದ ಉದ್ಭವಿಸಿರುವ ಜಾಗತಿಕ ಆರೋಗ್ಯ ಮತ್ತು ಆರ್ಥಿಕ ಸವಾಲುಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರು. ಬಿಕ್ಕಟ್ಟನ್ನು ಎದುರಿಸಲು ತಮ್ಮ ದೇಶಗಳಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಅವರು ಚರ್ಚೆ ನಡೆಸಿದರು.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1612931

ಸವಾಲಿನ ಸಂದರ್ಭದಲ್ಲಿ ಭಾರತ ಬ್ರೆಜಿಲ್ ಪಾಲುದಾರಿಕೆ ಹಿಂದೆಂದಿಗಿಂತಲೂ ಹೆಚ್ಚು ಬಲಿಷ್ಠವಾಗಿದೆ ಎಂದು ಪ್ರಧಾನಮಂತ್ರಿ ಹೇಳಿಕೆ

ಸವಾಲಿನ ಸಂದರ್ಭದಲ್ಲಿ ಭಾರತ ಬ್ರೆಜಿಲ್ ಪಾಲುದಾರಿಕೆ ಹಿಂದೆಂದಿಗಿಂತಲೂ ಬಲಿಷ್ಠವಾಗಿದೆ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಬ್ರೆಜಿಲ್ ಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಪೂರೈಸುವ ಭಾರತದ ನಿರ್ಧಾರಕ್ಕೆ ಕೃತಜ್ಞತೆ ಸಲ್ಲಿಸಿ ಬ್ರೆಜಿಲ್ ಅಧ್ಯಕ್ಷ ಜೈರ್ ಎಂ. ಬೋಲ್ಸೊನಾರೊ ಅವರು ಮಾಡಿದ್ದ ಟ್ವೀಟ್ ಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1612929

ಬಿ.ಎಸ್.ಎಫ್.ನೊಂದಿಗೆ ಭಾರತ-ಪಾಕಿಸ್ತಾನ, ಮತ್ತು ಭಾರತಬಾಂಗ್ಲಾದೇಶ ಗಡಿಗಳ ಗಡಿ ಕಾವಲು ಸಿದ್ಧತೆಗಳ ಪರಾಮರ್ಶೆ ನಡೆಸಿದ ಕೇಂದ್ರ ಗೃಹ ಸಚಿವರು

ಕೇಂದ್ರ ಗೃಹ ವ್ಯವಹಾರಗಳ ಸಚಿವ ಶ್ರೀ ಅಮಿತ್ ಶಾ, ಭಾರತ ಮತ್ತು ಪಾಕಿಸ್ತಾನ, ಭಾರತ – ಬಾಂಗ್ಲಾದೇಶದ ಗಡಿಗಳಲ್ಲಿನ  ಗಡಿ ಕಾವಲು ಸಿದ್ಧತೆಗಳ ಕುರಿತಂತೆ ಬಿ.ಎಸ್.ಎಫ್.ಕಮಾಂಡ್ ಮತ್ತು ಸೆಕ್ಟರ್ ಕೇಂದ್ರ ಕಚೇರಿಯ ಜೊತೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಿನ್ನೆ ಪರಾಮರ್ಶೆ ನಡೆಸಿದರು. ಗಡಿಯಲ್ಲಿರುವ ರೈತರುಗಳಿಗೆ ಕೋವಿಡ್ -19ರ ಬಗ್ಗೆ ಅರಿವು ಮೂಡಿಸುವಂತೆ ಮತ್ತು ಪ್ರದೇಶದಲ್ಲಿ ಅದು ಹಬ್ಬದಂತೆ ಮುನ್ನೆಚ್ಚರಿಕ ಕ್ರಮ ವಹಿಸುವಂತೆ ಅವರು ನಿರ್ದೇಶಿಸಿದರು. ಯಾರೂ ಗಡಿಯಾಚೆಯಿಂದ ಬೇಲಿ ದಾಟಿ ಬಾರದಂತೆ  ಜಿಲ್ಲಾಡಳಿತಗಳ ಸಹಯೋಗದಲ್ಲಿ  ಖಾತ್ರಿ ಪಡಿಸಿಕೊಳ್ಳುವಂತೆ ಬಿ.ಎಸ್.ಎಫ್. ಗೆ ಸೂಚಿಸಿದರು.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1613095

ವೆಂಟಿಲೇಟರುಗಳು, ಪಿಪಿಇ, ಕೋವಿಡ್ ಪರೀಕ್ಷಾ ಕಿಟ್ ಮತ್ತು ಮುಖ ಮತ್ತು ಶಸ್ತ್ರಚಿಕಿತ್ಸಾ ಮಾಸ್ಕ್ ಗಳ ಆಮದಿನ ಮೇಲಿನ ಮೂಲ ಸೀಮಾ ಸುಂಕ ಮತ್ತು ಆರೋಗ್ಯ ಉಪಕರ ವಿನಾಯಿತಿ ನೀಡಿದ ಕೇಂದ್ರ ಸರ್ಕಾರ

ಕೋವಿಡ್ 19 ಪರಿಸ್ಥಿತಿಯ ನಿಟ್ಟಿನಲ್ಲಿ, ತತ್ ಕ್ಷಣಕ್ಕೆ ಬೇಕಿರುವ ವೆಂಟಲೇಟರುಗಳು ಮತ್ತು ಇತರ ವಸ್ತುಗಳ ಅಗತ್ಯ ಮನಗಂಡು ಕೇಂದ್ರ ಸರ್ಕಾರ ಕೆಳಗಿನ ವಸ್ತುಗಳ ಆಮದಿನ ಮೇಲೆ ತತ್ ಕ್ಷಣದಿಂದ ಜಾರಿಗೆ ಬರುವಂತೆ ಮೂಲ ಸೀಮಾ ಸುಂಕ ಮತ್ತು ಆರೋಗ್ಯ ಉಪ ಕರಕ್ಕೆ ವಿನಾಯಿತಿ ನೀಡಿದೆ: ವೆಂಟಿಲೇಟರ್ ಗಳು, ಮುಖದ ಮಾಸ್ಕ್, ಶಸ್ತ್ರಚಿಕಿತ್ಸಾ ಮಾಸ್ಕ್, ವೈಯಕ್ತಿಕ ಸುರಕ್ಷತಾ ಸಾಧನ (ಪಿಪಿಇ), ಕೋವಿಡ್ -19 ಪರೀಕ್ಷಾ ಕಿಟ್ ಗಳು, ಮೇಲ್ಕಂಡ ವಸ್ತುಗಳ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳು.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1612808

ಕೋವಿಡ್ 19 ಸಂಬಂಧಿಸಿದ ವೈದ್ಯಕೀಯ ಸಾಮಗ್ರಿಗಳ ಉತ್ಪಾದನೆಯಲ್ಲಿ ತೊಡಗಿರುವ ಎಂ.ಎಸ್.ಎಂ..ಗಳಿಗೆ ಆದ್ಯತೆಯ ಮೇಲೆ ಅವಕಾಶ ನೀಡಿ  ಶ್ರೀ ನಿತಿನ್ ಗಡ್ಕರಿ

ದೇಶವು ಎರಡು ಯುದ್ಧಕ್ಕೆ ಅಣಿಯಾಗುವ ಅಗತ್ಯವಿದೆ ಎಂದು ಸಚಿವರು ಹೇಳಿದ್ದಾರೆ, ಒಂದು ಕೋವಿಡ್  ವಿರುದ್ಧದ ಯುದ್ಧವಾದರೆ ಇನ್ನೊಂದು ಆರ್ಥಿಕತೆ ನಿಟ್ಟಿನ ಯುದ್ಧವಾಗಿದೆ. ಕೋವಿಡ್-19 ಕಾರಣದಿಂದಾಗಿ, ವೆಂಟಿಲೇಟರ್, ಪಿಪಿಇ ಕಿಟ್‌ಗಳು, ಮಾಸ್ಕ್ ಮತ್ತು ಸ್ಯಾನಿಟೈಜರ್ ಮುಂತಾದ ವೈದ್ಯಕೀಯ ವಸ್ತುಗಳ ಬೇಡಿಕೆ ಕಳೆದ ಒಂದು ತಿಂಗಳಲ್ಲಿ ಇದ್ದಕ್ಕಿದ್ದಂತೆ ಹೆಚ್ಚಾಗಿದೆ ಮತ್ತು ವಸ್ತುಗಳ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಕೊರತೆಯನ್ನು ತುಂಬುವಲ್ಲಿ ಎಂಎಸ್‌.ಎಂಇ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಅವರು ತಿಲಿಸಿದ್ದಾರೆ. ಈ ಚಟುವಟಿಕೆಗಳಲ್ಲಿ ತೊಡಗಿರುವ ಎಂಎಸ್‌.ಎಂಇಗಳಿಗೆ ಆದ್ಯತೆಯ ಮೇರೆಗೆ ಅನುಕೂಲ ಕಲ್ಪಿಸಬೇಕು ಎಂದು ಅವರು ಹೇಳಿದ್ದಾರೆ..

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1612871

ರಾಜ್ಯ ಸರ್ಕಾರಗಳು ಪಡಿತರ ಚೀಟಿ ನೀಡಿರುವ ಎನ್.ಎಫ್.ಎಸ್..ಯೇತರ ಫಲಾನುಭವಿಗಳಿಗೆ ಆಹಾರ ಧಾನ್ಯದ ಪೂರೈಕೆ

ಎನ್.ಎಫ್.ಎಸ್.ಎ. ಅಡಿಯಲ್ಲಿ ಬಾರದ ಆದರೆ ರಾಜ್ಯ ಸರ್ಕಾರಗಳು ತಮ್ಮ ಯೋಜನೆಗಳ ಅಡಿಯಲ್ಲಿ ಪಡಿತರ ಚೀಟಿ ನೀಡಿರುವ ಫಲಾನುಭವಿಗಳಿಗೆ ಮೂರು ತಿಂಗಳುಗಳ ಕಾಲ ಪ್ರತಿ ವ್ಯಕ್ತಿಗೆ 5 ಕೆ.ಜಿಯಂತೆ ಪ್ರತಿ ಕೆ.ಜಿ. ಗೋದಿಗೆ 21 ರೂ. ಹಾಗೂ ಪ್ರತಿ ಕೆಜಿ ಅಕ್ಕಿಗೆ ರೂ.22ರಂತೆ ಏಕರೂಪವಾಗಿ ದೇಶದಾದ್ಯಂತ ಆಹಾರ ಧಾನ್ಯ ಒದಗಿಸಲು ಭಾರತೀಯ ಆಹಾರ ನಿಗಮಕ್ಕೆ ಭಾರತ ಸರ್ಕಾರ ನಿರ್ದೇಶನ ನೀಡಿದೆ. ಈ ದಾಸ್ತಾನನ್ನು ಒಂದೇ ಬಾರಿಗೆ ಅಥವಾ ಮೂರು ತಿಂಗಳುಗಳ ಕಾಲ ತಿಂಗಳ ಆಧಾರದಲ್ಲಿ ಜೂನ್ 20ರವರೆಗೆ ಪಡೆದುಕೊಳ್ಳುವ ಆಯ್ಕೆಯನ್ನು ರಾಜ್ಯಗಳಿಗೆ ನೀಡಲಾಗಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1612843

ಎಂ..ಎಚ್.ಎಫ್.ಡಬ್ಲ್ಯು., ಗರ್ಭದಾರಣೆಗೆ ಮುನ್ನ ಅಥವಾ ಗರ್ಭದಾರಣೆಯ ನಂತರ ಲಿಂಗ ಆಯ್ಕೆ ನಿಷೇಧಿಸುವ ಪಿಸಿ ಮತ್ತು ಪಿಎನ್.ಡಿ.ಟಿ. ಕಾಯಿದೆಯನ್ನು ಅಮಾನತು ಮಾಡಿಲ್ಲ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಗರ್ಭದಾರಣೆಗೆ ಮುನ್ನ ಅಥವಾ ಗರ್ಭ ಧಾರಣೆಯ ನಂತರ ಲಿಂಗ ಆಯ್ಕೆಯನ್ನು ನಿಷೇಧಿಸುವ ಪಿಸಿ ಮತ್ತು ಪಿಎನ್.ಡಿಟಿ ಕಾಯಿದೆಯನ್ನು ಅಮಾನತು ಮಾಡಿಲ್ಲ. ಪ್ರತಿ ಅಲ್ಟ್ರಾಸೌಂಡ್ ಕ್ಲಿನಿಕ್, ಜೆನೆಟಿಕ್ ಕೌನ್ಸೆಲಿಂಗ್ ಸೆಂಟರ್, ಜೆನೆಟಿಕ್ ಲ್ಯಾಬೊರೇಟರಿ, ಜೆನೆಟಿಕ್ ಕ್ಲಿನಿಕ್ ಮತ್ತು ಇಮೇಜಿಂಗ್ ಸೆಂಟರ್ ಗಳು ಕಾನೂನಿನ ಪ್ರಕಾರ ಎಲ್ಲಾ ಕಡ್ಡಾಯ ದಾಖಲೆಗಳನ್ನು ದಿನದಿಂದ ದಿನಕ್ಕೆ ನಿರ್ವಹಿಸಬೇಕಾಗುತ್ತದೆ ಎಂದು ಅದು ಪುನರುಚ್ಚರಿಸಿದೆ. ಇದು ಆಯಾ ಸೂಕ್ತ ಪ್ರಾಧಿಕಾರಗಳಿಗೆ ಸಲ್ಲಿಕೆ ಗಡುವನ್ನು ಮಾತ್ರ ಜೂನ್ 30, 2020 ರವರೆಗೆ ವಿಸ್ತರಿಸಲಾಗಿದೆ. ಪಿಸಿ ಮತ್ತು ಪಿಎನ್‌ಡಿಟಿ ಕಾಯ್ದೆಯ ನಿಬಂಧನೆಗಳಿಗೆ ಅನುಸಾರವಾಗಿ (ರೋಗನಿರ್ಣಯ ಕೇಂದ್ರಗಳಿಗೆ) ಯಾವುದೇ ವಿನಾಯಿತಿ ಇರುವುದಿಲ್ಲ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1612635

ರಾಜ್ಯ ಕೃಷಿ ಸಚಿವರುಗಳೊಂದಿಗಿನ ಕೇಂದ್ರ ಕೃಷಿ ಸಚಿವರು ನಡೆಸಿದ ವೀಡಿಯೊ ಕಾನ್ಫರೆನ್ಸ್ ರೀತ್ಯ ಸರ್ಕಾರಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ಧಾರಗಳ ವಿವರಣೆ

ಬೆಲೆ ಬೆಂಬಲ ಯೋಜನೆ (ಪಿಎಸ್‌ಎಸ್) ಅಡಿಯಲ್ಲಿ ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳನ್ನು ಖರೀದಿಸುವ ಪ್ರಾರಂಭದ ದಿನಾಂಕವನ್ನು ಆಯಾ ರಾಜ್ಯಗಳು ನಿರ್ಧರಿಸುವುದಕ್ಕೆ ಸರ್ಕಾರ ಸಮ್ಮತಿಸಿದೆ. ಈ ದಾಸ್ತಾನು ಆರಂಭಗೊಂಡ ದಿನಾಂಕದಿಂದ 90 ದಿನಗಳ ಕಾಲ ಇರುತ್ತದೆ. ತೋಟಗಾರಿಕೆ ಬೆಳೆಗಳು ಮತ್ತು ಬೇಗ ಹಾಳಾಗುವ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಖಾತ್ರಿಗಾಗಿ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯ ವಿವರಗಳನ್ನು ಕೇಂದ್ರ ಸರ್ಕಾರ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಿದೆ. ರಾಜ್ಯಗಳಿಗೆ ಯೋಜನೆ ಜಾರಿಗೆ ಸಲಹೆ ನೀಡಲಾಗಿದ್ದು, ಇದರಲ್ಲಿ ಶೇ.50ರಷ್ಟು (ಈಶಾನ್ಯ ರಾಜ್ಯಗಳಿಗೆ ಶೇ.) ವೆಚ್ಚವನ್ನು ಭಾರತ ಸರ್ಕಾರವೇ ಭರಿಸಲಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1612826

ರೈಲ್ವೆ ಸಚಿವಾಲಯದಿಂದ ಮಾಧ್ಯಮಗಳಿಗೆ ಸೂಚನೆ

ಕಳೆದ ಎರಡು ದಿನಗಳಿಂದ, ರೈಲುಗಳ ಮೂಲಕ ಸಂಚರಿಸುವ ಸಂಭಾವ್ಯ ಪ್ರಯಾಣಿಕರಿಗೆ ವಿವಿಧ ಶಿಷ್ಟಾಚಾರ ಇತ್ಯಾದಿಗಳ ಬಗ್ಗೆ ಮಾಧ್ಯಮಗಳಲ್ಲಿ ಕೆಲವು ವರದಿಗಳು ಬರುತ್ತಿವೆ. ನಿರ್ದಿಷ್ಟ ದಿನಾಂಕದಿಂದ ಪ್ರಾರಂಭವಾಗುವ ರೈಲುಗಳ ಸಂಖ್ಯೆಯ ಬಗ್ಗೆಯೂ ಅವರು ಪ್ರಸ್ತಾಪಿಸುತ್ತಿದ್ದಾರೆ. ಈ ಮೂಲಕ ಮಾಧ್ಯಮಗಳ ಗಮನಕ್ಕೆ ತರ ಬಯಸುವುದೇನೆಂದರೆ, ಮೇಲಿನ ವಿಷಯಗಳಿಗೆ ಸಂಬಂಧಿಸಿದಂತೆ ಅಂತಿಮ ತೀರ್ಮಾನವನ್ನು ಇನ್ನೂ ತೆಗೆದುಕೊಳ್ಳಬೇಕಾಗಿದೆ ಮತ್ತು ಅಂತಹ ವಿಷಯಗಳ ಬಗ್ಗೆ ನಿರ್ಧಾರ ಕೈಗೊಳ್ಳುವುದಕ್ಕೆ ಮೊದಲೇ ವರದಿ ಮಾಡುವುದು ಇಂಥ ವಿಶೇಷ ಸಂದರ್ಭದಲ್ಲಿ ಸಾರ್ವಜನಿಕರ ಮನದಲ್ಲಿ ಅನಗತ್ಯ ಗೊಂದಲಕ್ಕೆ ಕಾರಣವಾಗುತ್ತದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1612909

ಲಾಕ್ ಡೌನ್ ಮುಂದುವರಿದಿರುವ ಸಮಯದಲ್ಲಿ ದೇಶದ ವಿವಿಧ ಭಾಗಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುತ್ತಿರುವ ಭಾರತೀಯ ರೈಲ್ವೆ

2020ರ ಮಾರ್ಚ್ 23ರವರೆಗೆ ರೈಲ್ವೆ 4.50 ಲಕ್ಷ ಅತ್ಯಾವಶ್ಯಕ ಸಾಮಗ್ರಿಗಳು ಅಂದರೆ ಆಹಾರಧಾನ್ಯ, ಉಪ್ಪು, ಸಕ್ಕರೆ, ಖಾದ್ಯತೈಲ, ಕಲ್ಲಿದ್ದಲು, ಮತ್ತು ಪೆಟ್ರೋಲಿಯಂ ಉತ್ಪನ್ನ ಸೇರಿದಂತೆ ಸುಮಾರು 6.75 ಲಕ್ಷ ಬೋಗಿ ಸರಕುಗಳನ್ನು ಸಾಗಣೆ ಮಾಡಿದೆ.2020 ಏಪ್ರಿಲ್ 2ರಿಂದ ಏಪ್ರಿಲ್ 8ರವರೆಗೆ ರೈಲ್ವೆ ಒಟ್ಟು 258503 ಬೋಗಿ ಸರಕುಗಳನ್ನು ಸಾಗಾಟ ಮಾಡಿದ್ದು, ಇದರಲ್ಲಿ 155512 ಬೋಗಿ ಅವಶ್ಯಕ ವಸ್ತುಗಳಾಗಿವೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1613143

180ಕ್ಕೂ ಹೆಚ್ಚು ಲೈಫ್ ಲೈನ್ ಉಡಾನ್ ವಿಮಾನಗಳು 1,66,000 ಕಿ.ಮೀ. ಕ್ರಮಿಸಿ ಅವಶ್ಯ ವೈದ್ಯಕೀಯ ಪೂರೈಕೆ ಮಾಡಿವೆ

ಕೋವಿಡ್ -19 ಲಾಕ್ ಡೌನ್ ವೇಳೆ ಲೈಫ್ ಲೈನ್ ಉಡಾನ್ ಅಡಿಯಲ್ಲಿ ಏರ್ ಇಂಡಿಯಾ ಮತ್ತು ಅಲಯನ್ಸ್ ಏರ್ 114 ವಿಮಾನಗಳು ಕಾರ್ಯಾಚರಣೆ ಮಾಡಿವೆ. 58 ವಿಮಾನಗಳನ್ನು ಐಎಎಫ್ ಕಾರ್ಯಾಚರಣೆ ಮಾಡಿದೆ. ಖಾಸಗಿ ವಿಮಾನಯಾನ ಸಂಸ್ಥೆಗಳು 2,675 ಟನ್ ದೇಶೀಯ ವೈದ್ಯಕೀಯ ಸರಕನ್ನು ಸಾಗಿಸಿವೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1613163

ಭಾರತದಲ್ಲಿ ಆನ್ ಲೈನ್ ಶಿಕ್ಷಣದ ಪರಿಸರವನ್ನು ಸುಧಾರಣೆ ಮಾಡಲು ಕಲ್ಪನೆಗಳ ಗುಂಪು ಶೋಧನೆಯ ಒಂದು ವಾರ ಕಾಲದ ಭಾರತ್ ಪಡೇ ಆನ್ ಲೈನ್ ಅಭಿಯಾನಕ್ಕೆ ಎಚ್.ಆರ್.ಡಿ. ಸಚಿವರಿಂದ ಚಾಲನೆ

ಲಭ್ಯವಿರುವ ಡಿಜಿಟಲ್ ಶಿಕ್ಷಣ ವೇದಿಕೆಗಳನ್ನು ಉತ್ತೇಜಿಸುವಾಗ ಆನ್‌ಲೈನ್ ಶಿಕ್ಷಣದ ನಿರ್ಬಂಧಗಳನ್ನು ನಿವಾರಿಸಲು ಎಚ್‌.ಆರ್‌ಡಿ ಸಚಿವಾಲಯದೊಂದಿಗೆ ಸಲಹೆಗಳು/ ಪರಿಹಾರಗಳನ್ನು ನೇರವಾಗಿ ಹಂಚಿಕೊಳ್ಳಲು ಭಾರತದ ಅತ್ಯುತ್ತಮ ಚಿಂತನೆಗಳನ್ನು ಆಹ್ವಾನಿಸುವ ಉದ್ದೇಶವನ್ನು ಅಭಿಯಾನ ಹೊಂದಿದೆ. ಕಲ್ಪನೆಗಳನ್ನು ಟ್ವಿಟರ್ ನಲ್ಲಿ #BharatPadheOnline ಹಂಚಿಕೊಳ್ಳಬಹುದು ಮತ್ತು @HRDMinistry& @DrRPNishank ಮತ್ತು bharatpadheonline.mhrd[at]gmail[dot]com ನಲ್ಲಿ 2020ರ ಏಪ್ರಿಲ್ 16ರವರೆಗೆ ಅಧಿಸೂಚಿಸಬಹುದು.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1613090

ಕೋವಿಡ್ -19 ವಿರುದ್ಧ ಹೋರಾಟ: 1.37 ಲಕ್ಷ .ಪಿ.ಎಫ್. ಹಿಂತೆಗೆ ಕ್ಲೇಮ್ ಗಳನ್ನು 10 ದಿನಗಳಿಗೂ ಕಡಿಮೆ ಅವಧಿಯಲ್ಲಿ ಇತ್ಯರ್ಥ ಮಾಡಿದ .ಪಿ.ಎಫ್..

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಶಾಸನಾತ್ಮಕ ಸಂಸ್ಥೆಯಾದ ಸಿಬ್ಬಂದಿ ಪ್ರಾವಿಡೆಂಟ್ ಫಂಡ್ ಸಂಘಟನೆ (.ಪಿ.ಎಫ್..) ದೇಶಾದ್ಯಂತ 1.37 ಲಕ್ಷ ಕ್ಲೇಮ್ಗಳನ್ನು ಇತ್ಯರ್ಥ ಮಾಡಿ 279.65 ಕೋ.ರೂ.ಗಳನ್ನು ಕೋವಿಡ್ -19 ರ ವಿರುದ್ದ ಚಂದಾದಾರರು ಹೋರಾಡಲು ಅನುಕೂಲವಾಗುವಂತೆ .ಪಿ.ಎಫ್. ಯೋಜನೆಗೆ ತಿದ್ದುಪಡಿ ತಂದು ವಿಶೇಷವಾಗಿ ಒದಗಿಸಲಾದ ಪ್ರಸ್ತಾವನೆಯನ್ವಯ ಬಟವಾಡೆ ಮಾಡುತ್ತಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1612914

ಜಲಿಯನ್ ವಾಲಾಬಾಗ್ ಸ್ಮಾರಕಕ್ಕೆ ವಿಧಿಸಿರುವ ಸಾರ್ವಜನಿಕರ ಪ್ರವೇಶ ನಿರ್ಬಂಧ 15.06.2020ರವರೆಗೆ ವಿಸ್ತರಣೆ

ಕೋವಿಡ್ 19 ಬಿಕ್ಕಟ್ಟಿನಿಂದಾಗಿ ಸ್ಮಾರಕದ ನವೀಕರಣ ಕಾಮಗಾರಿ ಬಾಧಿತವಾಗಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1613171

ಕೋವಿಡ್ 19 ವಿರುದ್ಧದ ಹೋರಾಟಕ್ಕಾಗಿ ಪಿಎಂ- ಕೇರ್ಸ್ ನಿಧಿಗೆ ಐಸಿಎಎಲ್, ಐಸಿಎಸ್. ಮತ್ತು ಐಸಿಎಐನಿಂದ 28.80 ಕೋಟಿ ರೂ.ದೇಣಿಗೆ

ಕೋವಿಡ್-19 ಸಾಂಕ್ರಾಮಿಕದಿಂದ ಬಾಧಿತವಾಗಿರುವವರಿಗೆ ನೆರವು ಒದಗಿಸಲು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ, ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ ಮತ್ತು ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಪಿಎಂ- ಕೇರ್ಸ್ ನಿಧಿಗೆ 28.80 ಕೋಟಿ ರೂ. ದೇಣಿಗೆ ನೀಡಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1612847

ಕೋವಿಡ್-19 ಪರಿಹಾರ ಕಾರ್ಯಕ್ಕಾಗಿ ಸಿಪೆಟ್ ಸಂಸ್ಥೆಗಳುಕೇಂದ್ರಗಳು 86.5 ಲಕ್ಷ ರೂ.ಗಳನ್ನು ಸ್ಥಳೀಯ ಪ್ರಾಧಿಕಾರ/ ಸರ್ಕಾರಕ್ಕೆ ದೇಣಿಗೆಯಾಗಿ ನೀಡಿದೆ

ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದಡಿಯ ಭಾರತ ಸರ್ಕಾರದ ಸಂಸ್ಥೆಯಾದ ಪ್ಲಾಸ್ಟಿಕ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನದ ಕೇಂದ್ರೀಯ ಸಂಸ್ಥೆ (ಸಿಪೆಟ್), ಕೋವಿಡ್ -19 ವಿರುದ್ಧ ಸೆಣೆಸಲು 85.50 ಲಕ್ಷ ರೂ.ಗಳನ್ನು ವಿವಿಧ ಸ್ಥಳೀಯ ಸಂಸ್ಥೆಗಳು, ಮುನಿಸಿಪಲ್ ಕಾರ್ಪೊರೇಷನ್ ಗಳು ಮತ್ತು ರಾಜ್ಯ ಸರ್ಕಾರಗಳಿಗೆ ದೇಣಿಗೆಯಾಗಿ ನೀಡಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1613078

ಕೋವಿಡ್ 19 ವಿರುದ್ಧ ಹೋರಾಡಲು ದುರ್ಗಾಪುರ ಸಿಎಸ್ಐಆರ್ಸಿಎಂಇಆರ್. ನಿಂದ ಸೋಂಕುತಡೆವ ವಾಕ್ ವೇ ಮತ್ತು ರಸ್ತೆ ಸ್ಯಾನಿಟೈಜರ್ ಘಟಕ

ಮಾರಕ ಕೊರೋನಾ ವೈರಾಮು ವಿಶ್ವದಾದ್ಯಂತ ಭೀತಿ ಹುಟ್ಟಿಸಿರುವ ಸಂದರ್ಭದಲ್ಲಿ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನೆ ಮಂಡಳಿ ಎಸ್.ಅಂಡ್ ಟಿ ಪರಿಹಾರ ಒದಗಿಸಲು ಹೆಜ್ಜೆಯಿಟ್ಟಿದೆ. ದುರ್ಗಾಪುರದ ಸಿಎಸ್.ಐಆರ್.ಗಳ ಒಂದು ಪ್ರಮುಖ ಎಂಜಿನಿಯರಿಂಗ್ ಪ್ರಯೋಗಾಲಯವಾದ ಸಿಎಸ್.ಐ.ಆರ್ – ಕೇಂದ್ರೀಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ ತಂತ್ರಜ್ಞಾನ ಮತ್ತ ಉತ್ಪನ್ನಗಳ ಅಭಿವೃದ್ಧಿ ಪಡಿಸಿದ್ದು, ಇದು ವೈರಾಣು ಪ್ರಸರಣ ತಡೆಗೆ ಸಹಕಾರಿಯಾಗಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1612863

 

ಪಿಐಬಿ ಕ್ಷೇತ್ರೀಯ ಕಚೇರಿಗಳ ವರದಿ

  • ಕೇರಳ: 4 ಬ್ರಿಟಿಷ್ ಪ್ರಜೆಗಳು ಇಂದು ಚೇತರಿಸಿಕೊಂಡಿದ್ದಾರೆ; ಈಗ ವಿದೇಶಿಯರಾರೂ ಚಿಕಿತ್ಸೆಯಲ್ಲಿಲ್ಲ. ಕಾಸರಗೋಡಿನಲ್ಲಿ 15 ಜನರನ್ನು ಇಂದು ಬಿಡುಗಡೆ ಮಾಡಲಾಗಿದೆ. 12 ಹೊಸ ಪ್ರಕರಣಗಳು ವರದಿಯಾಗಿದ್ದು, 13 ಮಂದಿ ಚೇತರಿಸಿಕೊಂಡಿದ್ದಾರೆ. ಒಟ್ಟು 258 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ;
  • ತಮಿಳುನಾಡು: ಲಾಕ್ ಡೌನ್ ಅವಧಿಯನ್ನು ಇನ್ನೂ 2 ವಾರಗಳವರೆಗೆ ವಿಸ್ತರಿಸಲು ತಮಿಳುನಾಡು ಸರ್ಕಾರ ರಚಿಸಿರುವ ವೈದ್ಯಕೀಯ ತಜ್ಞರ ತಂಡ ಶಿಫಾರಸು ಮಾಡಿದೆ. ಪುದುಚೇರಿಯಲ್ಲಿ 2 ದೃಢೀಕೃತ ಪ್ರಕರಣಗಳು; ಕೇಂದ್ರಾಡಳಿತ ಪ್ರದೇಶದಲ್ಲಿ ಈಗ ಒಟ್ಟು ಪ್ರಕರಣಗಳು 7 ಆಗಿದೆ.
  • ಕರ್ನಾಟಕ: ಇಂದು 10 ಹೊಸ ಪ್ರಕರಣ; ಮೈಸೂರು 5, ಬೆಂಗಳೂರು ನಗರ 2, ಬೆಂಗಳೂರು ಗ್ರಾಮಾಂತರ 2 ಮತ್ತು ಕಲ್ಬುರ್ಗಿ 1. ಒಟ್ಟು ದೃಢೀಕೃತ ಪ್ರಕರಣಗಳ ಸಂಖ್ಯೆ 207. ಈವರೆಗೆ 6 ಮಂದಿ ಸಾವಿಗೀಡಾಗಿದ್ದು, 30 ಮಂದಿ ಬಿಡುಗಡೆಯಾಗಿದ್ದಾರೆ.
  • ಆಂಧ್ರಪ್ರದೇಶ; ಟಾಟಾ ಟ್ರಸ್ಟ್ ಅಧ್ಯಕ್ಷ ರತನ್ ಟಾಟಾ ಮುಖ್ಯಮಂತ್ರಿಗೆ ಪತ್ರ ಬರೆದಿದ್ದು, ಕೋವಿಡ್ 19 ವಿರುದ್ಧ ಹೋರಾಟಕ್ಕೆ ಬೆಂಬಲದ ಭರವಸೆ ನೀಡಿದ್ದಾರೆ. ಕರ್ನೂಲ್ ನಲ್ಲಿ ಕೋವಿಡ್ 19 ಪತ್ತೆ ಪ್ರಯೋಗಾಲಯ ಸ್ಥಾಪನೆಗೆ ಐಸಿಎಂಆರ್ ಗೆ ಪ್ರಸ್ತಾಪನೆ ಸಲ್ಲಿಸಿರುವ ರಾಜ್ಯ. ಎರಡು ಪ್ರಕರಣಗಳು ಅನಂತಪುರದಿಂದ ಇಂದು ವರದಿಯಾಗಿವೆ. ಒಟ್ಟು ದೃಢೀಕೃತ ಪ್ರಕರಣಗಳ ಸಂಖ್ಯೆ ಈಗ 365, ಗುಣವಾದವರು 10.
  • ತೆಲಂಗಾಣ; ಒಂದು ಪ್ರಕರಣ ವೇಮುಲವಾಡದಿಂದ ವರದಿಯಾಗಿದೆ, ಒಟ್ಟು ಪ್ರಕರಣ ಈವರೆಗೆ ವರದಿಯಾಗಿರುವುದು 472, ಮನೆಯಿಂದ ಹೊರಗೆ ಬರುವಾಗ ಜನರಿಗೆ ಮಾಸ್ಕ್ ಧಾರಣೆ ಕಡ್ಡಾಯ.
  • ಗುಜರಾತ್: ಕಳೆದ 12 ಗಂಟೆಗಳಲ್ಲಿ 46 ಹೊಸ ಸೋಂಕಿತ ಪ್ರಕರಣಗಳ ವರದಿಯಾಗಿದ್ದು, ರಾಜ್ಯದ ಒಟ್ಟು ಪ್ರಕರಣದ ಸಂಖ್ಯೆಯನ್ನು 308ಕ್ಕೆ ಏರಿಸಿದೆ, ನಗರವಾರು ರೀತ್ಯ ವರದಿಯಾಗಿರುವ 46 ಹೊಸ ಪ್ರಕರಣಗಳಲ್ಲ 11 ಅಹ್ಮದಾಬಾದ್, 17 ವಡೋದರ, 2 ಪಟಾನ್, 5 ರಾಜಕೋಟ್, 2 ಕಚ್, 4 ಭರೂಚ್, ಗಾಂಧಿನಗರ 1, ಹಾಗೂ ಭಾವ್ ನಗರ್ 4. 
  • ರಾಜಾಸ್ತಾನ್: 26 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸಂಖ್ಯೆ 489 ಆಗಿದೆ. 25 ಪ್ರಕರಣಗಳಲ್ಲಿ ಸಂಪರ್ಕದ ಹಿಸ್ಟರಿ ಇದೆ. ಒಂದು ಪ್ರಕರಣದ ವಿವರ ಶೋಧಿಸಲಾಗುತ್ತಿದೆ.
  • ಎಂ.ಪಿ: ಮಧ್ಯಪ್ರದೇಶ ಸರ್ಕಾರ 46 ಕೊರೋನಾ ಹಾಟ್ ಸ್ಪಾಟ್ ಗಳನ್ನು 15 ಜಿಲ್ಲೆಗಳಲ್ಲಿ ಗುರುತಿಸಿದೆ. 75 ಕೊರೋನಾ ಸೋಂಕಿತ ರೋಗಿಗಳು ಜಿಲ್ಲೆಗಳಲ್ಲಿ ಪತ್ತೆಯಾಗಿದ್ದಾರೆ.
  • ಮಹಾರಾಷ್ಟ್ರ: ಲಾಕ್‌ಡೌನ್ ಆದೇಶಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮಹಾರಾಷ್ಟ್ರದ ಮಹಾಬಲೇಶ್ವರ ಪೊಲೀಸ್ ಠಾಣೆಯಲ್ಲಿ ಡಿಎಚ್‌.ಎಫ್‌.ಎಲ್ ಸಮೂಹದ ಕಪಿಲ್ ವಾಧ್ವಾನ್ ಮತ್ತು ಇತರ 22 ಮಂದಿ ಕುಟುಂಬ ಸದಸ್ಯರು ಮತ್ತು ದೇಶೀಯ ಸಹಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ತನಿಖೆಗೆ ಆದೇಶಿಸಲಾಗಿದೆ. ಈ ದಿನಾಂಕದವರೆಗೆ 16 ಆನ್ಟಿ ಬಾಡಿ ಆಧಾರಿತ ತ್ವರಿತ ಪರೀಕ್ಷೆ ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ) ಯಲ್ಲಿ ಮೌಲ್ಯೀಕರಿಸಲಾಗಿದೆ ಮತ್ತು ಅವುಗಳಲ್ಲಿ 8 ತೃಪ್ತಿಕರವೆಂದು ಕಂಡುಬಂದಿದೆ.
  • ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶ 2020ರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಒಂದು ವರ್ಷ ಕಾಲ ಸಂಪುಟ ಎಲ್ಲ ಶಾಸಕರ ವೇತನವನ್ನು ಶೇ.30ರಷ್ಟು ಕಡಿಮೆ ಮಾಡಲು ನಿರ್ಧರಿಸಿದೆ. ಈ ಹಣವನ್ನು ಕೋವಿಡ್ 19 ವಿರುದ್ಧ ಹೋರಾಟಕ್ಕೆ ಬಳಸಲಾಗುವುದು.
  • ಅಸ್ಸಾಂ: ಕೋವಿಡ್ 19 ಹಿನ್ನೆಲೆಯಲ್ಲ ಅಸ್ಸಾಂ ಡಿಜಿಪಿ ಬಿಹು ಸಮಿತಿಗೆ ರಂಗೋಲಿ ಬಿಹೂ ವೇಳೆ ಕೇವಲ 5 ಜನ ಮಾತ್ರ ಧ್ವಜ ಹಾರಿಸುವಂತೆ ಮನವಿ ಮಾಡಿದ್ದಾರೆ.
  • ಮಣಿಪುರ: ಚೀನಾದಿಂದ ಮ್ಯಾನ್ಮಾರ್ ಮೂಲಕ ಮಣಿಪುರ ತಲುಪಲು ಪ್ರಯಾಣ ಮಾಡಿದ್ದ ಚುರಾಚಂದಪುರ ಬಾಲಕಿಯ ಮೇಲೆ ಲಾಕ್ ಡೌನ್ ವೇಳೆ ಅಕ್ರಮವಾಗಿ ರಾಜ್ಯಕ್ಕೆ ಪ್ರವೇಶಿಸಿದ ಪ್ರಕರಣ ದಾಖಲಾಗಿದೆ.
  • ಮಿಜೋರಾಂ: ಕೋವಿಡ್-19 ಗಾಗಿ ಸಿಎಂ ರಿಲೀಫ್ ಫಂಡ್‌ ನಿಂದ ಮಿಜೋರಾಂ ಸಿಎಂ ಎಲ್ಲಾ 11 ಜಿಲ್ಲೆಗಳಿಗೆ ರೂ .2.33 ಕೋಟಿ ಪರಿಹಾರ ಮೊತ್ತವನ್ನು ಮಂಜೂರು ಮಾಡಿದ್ದಾರೆ, ಐಜ್ವಾಲ್ 62 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಪಡೆಯುತ್ತದೆ.
  • ಮೇಘಾಲಯ: ಮೇಘಾಲಯದಲ್ಲಿ ಮಾನ್ಯತೆ ಇಲ್ಲದೆ ಯಾವುದೇ ಪ್ರಯೋಗಾಲಯ ಕೋವಿಡ್ ಮಾದರಿ ಸಂಗ್ರಹಿಸಿ ಪರೀಕ್ಷೆ ಮಾಡುವಂತಿಲ್ಲ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
  • ನಾಗಾಲ್ಯಾಂಡ್:ವಿಮಾನ ಸಂಚಾರ ಪುನಾರಂಭವಾದ ಬಳಿಕ ತಮ್ಮ ಪ್ರವಾಸವನ್ನು ಮುಂದೂಡುವಂತೆ ನಾಗಾಲ್ಯಾಂಡ್ ಸರ್ಕಾರ ಜನರಿಗೆ ಸಲಹೆ ನೀಡಿದೆ; ಬರುವವರನ್ನು ಪ್ರತ್ಯೋಕೀಕರಣದಲ್ಲಿಡಲಾಗುವುದು ಎಂದು ಹೇಳಿದೆ.
  • ಸಿಕ್ಕಿಂ: ಸಿಕ್ಕಿಂ, ಸರ್ಕಾರದಲ್ಲಿ ನೋಂದಾಯಿಸಿಕೊಂಡಿರುವ ಕಾರ್ಮಿಕ ಇಲಾಖೆ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಖಾತೆಗೆ ತಲಾ 2ಸಾವಿರ ರೂ ವರ್ಗಾವಣೆ ಮಾಡಲಿದೆ.
  • ತ್ರಿಪುರಾ: ತ್ರಿಪುರಾದ ವಿದ್ಯಾರ್ಥಿಗಳು ಮನೆಯಲ್ಲಿ ಕುಳಿತೇ ಪಾಠ ಕೇಳಬಹುದಾಗಿದೆ. ವಿವಿಧ ಮಾಧ್ಯಮ ಇದಕ್ಕೆ ಜೊತೆಗೂಡಿವೆ ಎಂದು ತ್ರಿಪುರಾ ಸಿ.ಎಂ. ತಿಳಿಸಿದ್ದಾರೆ.

 

Fact Check on #Covid19

 

https://ci6.googleusercontent.com/proxy/0J5AN7jK4IdoraFtGBQeWWF9tUukOYycMqPo2SqqDN120TdRo9irQ2qhSURriPvBrqr_JcFMAG14AXwuF45Po-rXfzOzrrB51S3Qt-q9WurKB5aXnwpY=s0-d-e1-ft#https://static.pib.gov.in/WriteReadData/userfiles/image/image004E13Z.jpg

 

https://ci4.googleusercontent.com/proxy/EJBPP9YDvjEIQpRYWYGhOEE9mqp4cdaeO-Wi0nwNwcikkjn-qgUBX1v0Zh_fJFaw3GP2-v8Xc_a7Iyj9GpILWpTvcM0wrUD2WCJLIvHtzEc4TgFrdTS8=s0-d-e1-ft#https://static.pib.gov.in/WriteReadData/userfiles/image/image005NR7K.jpg

 

https://ci3.googleusercontent.com/proxy/aN9DnMJOfwFtCXJZUmwRytZiUo9HIK-brMQPwRURM5LlzgZbc6wmItOKep-oWtRzl7lALsPmLg6KzdOhTgpf4dzAYNPPFeX4R2-32E9X-jVYx8HCof2e=s0-d-e1-ft#https://static.pib.gov.in/WriteReadData/userfiles/image/image006GXDR.jpg

https://pbs.twimg.com/profile_banners/231033118/1584354869/1500x500

 

******

 



(Release ID: 1613170) Visitor Counter : 186