ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಐಐಟಿ (ಬಿಎಚ್‌ಯು) ನ ಆವಿಷ್ಕಾರ ಕೇಂದ್ರದಿಂದ ಪೂರ್ಣ ದೇಹದ ನೈರ್ಮಲ್ಯ ಸಾಧನ

Posted On: 10 APR 2020 7:33PM by PIB Bengaluru

ಐಐಟಿ (ಬಿಎಚ್‌ಯು) ನ ಆವಿಷ್ಕಾರ ಕೇಂದ್ರದಿಂದ ಪೂರ್ಣ ದೇಹದ ನೈರ್ಮಲ್ಯ ಸಾಧನ

 

ಇಂದಿನ ಜಾಗತಿಕ ಪರಿಸರದಲ್ಲಿ, ಎಲ್ಲರೂ ಕೋವಿಡ್-19 ವೈರಸ್ ವಿರುದ್ಧ ಹೋರಾಡಲು ಪ್ರಯತ್ನಿಸುತ್ತಿದ್ದಾರೆ. ಪ್ರಸ್ತುತ, ಕೊರೊನಾದಿಂದ ನಮ್ಮನ್ನು ರಕ್ಷಿಸಿಕೊಳ್ಳುವ ಏಕೈಕ ಮಾರ್ಗವೆಂದರೆ ಸ್ವಚ್ಛವಾಗಿರುವುದು ಮತ್ತು ಸಾಮಾಜಿಕ ಅಂತರವನ್ನು ಕಾಪಾಡುವುದು. ಐಐಟಿ (ಬಿಎಚ್‌ಯು) ನಲ್ಲಿರುವ ಮಾಳವಿಯಾ ಸೆಂಟರ್ ಫಾರ್ ಇನ್ನೋವೇಶನ್, ಇನ್ಕ್ಯುಬೇಷನ್ ಮತ್ತು ಎಂಟರ್‌ಪ್ರೆನ್ಯೂರ್‌ಶಿಪ್ (ಎಂಸಿಐಐಇ) ನ  ಶ್ರೀ ಜೀತು ಶುಕ್ಲಾ ಅವರು ಇಡೀ ದೇಹವನ್ನು ಸ್ವಚ್ಛಗೊಳಿಸಲು ಬಳಸಬಹುದಾದ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ.  ಈ ಸಾಧನವನ್ನು ಎಲ್ಲಿ ಬೇಕಾದರೂ ಇಡಬಹುದು  ಮತ್ತು ಅದು ಸ್ವಯಂಚಾಲಿತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ.  ಈ ಸಾಧನವು ಸಂವೇದಕ ಆಧಾರಿತವಾಗಿದ್ದು ಇದನ್ನು ಯಾವುದೇ ಆವರಣದ ಹೊರಗೆ ಸ್ಥಾಪಿಸಬಹುದು.  ಸಂವೇದಕ ಆಧಾರಿತ ಸ್ಥಾಪಿತ ಯಂತ್ರವು ಸಾಧನದ ಮುಂದೆ ಬರುವ ವ್ಯಕ್ತಿಯನ್ನು ಸ್ವಯಂಚಾಲಿತವಾಗಿ ಪತ್ತೆ ಮಾಡುತ್ತದೆ ಮತ್ತು 10-15 ಮಿಲಿ ಸ್ಯಾನಿಟೈಜರ್ ಅನ್ನು 15 ಸೆಕೆಂಡುಗಳ ಕಾಲ ಸಿಂಪಡಿಸುತ್ತದೆ ಮತ್ತು ಇದು ವ್ಯಕ್ತಿಯ ಸಂಪೂರ್ಣ ದೇಹ, ಬಟ್ಟೆ, ಬೂಟುಗಳು ಇತ್ಯಾದಿಗಳನ್ನು ಸ್ವಚ್ಛಗೊಳಿಸುತ್ತದೆ. ಈ ಸಾಧನವನ್ನು ಜನರ ಓಡಾಟ ಇರುವ ಯಾವುದೇ ಸ್ಥಳದಲ್ಲಿ ಬೇಕಾದರೂ ಸ್ಥಾಪಿಸಬಹುದುಇದರಿಂದಾಗಿ ವ್ಯಕ್ತಿಯು ಸ್ವಚ್ಛಗೊಂಡ ನಂತರವೇ ಆವರಣದೊಳಗೆ ಪ್ರವೇಶಿಸಬಹುದು.

ಈ ನಿಟ್ಟಿನಲ್ಲಿ ಮಾಹಿತಿ ನೀಡಿದ ಮಾಲ್ವಿಯಾ ಸೆಂಟರ್ ಫಾರ್ ಇನ್ನೋವೇಶನ್, ಇನ್ಕ್ಯುಬೇಷನ್ & ಎಂಟರ್‌ಪ್ರೆನ್ಯೂರ್‌ಶಿಪ್, ಐಐಟಿ (ಬಿಎಚ್‌ಯು)  ಕೋಆರ್ಡಿನೇಟರ್ ಆದ ಪ್ರೊ.ಪಿ.ಕೆ. ಮಿಶ್ರರವರು, ಇಂದಿನ ಅಗತ್ಯಕ್ಕೆ ಅನುಗುಣವಾಗಿ ಈ ಸಾಧನವನ್ನು ತಯಾರಿಸಲಾಗಿದೆ ಎಂದು ಹೇಳಿದರು. ಪ್ರಸ್ತುತ ಸರ್ಕಾರವು ಬಳಸುತ್ತಿರುವ ಸಾಮಾನ್ಯ ಸ್ಯಾನಿಟೈಜರ್ ಅನ್ನು ನಾವು ಬಳಸುತ್ತಿದ್ದೇವೆ. ಈ ಸಾಧನದಿಂದ ಆದ ನೈರ್ಮಲ್ಯೀಕರಣದಿಂದಾಗಿ, ಒಬ್ಬ ವ್ಯಕ್ತಿಗೆ ಹಾನಿ ಉಂಟುಮಾಡುವ ಹೆಚ್ಚಿನ ವೈರಸ್‌ಗಳನ್ನು ತಪ್ಪಿಸಲು ಸಾಧ್ಯವಿದೆ.  ಡೊಸ್ ನ  ಮಾನ್ಯತೆ, ಒಳಗಾಗುವ ಸಮಯ, ಆವರ್ತನವು ಇನ್ನೂ ಪ್ರಕ್ರಿಯೆಯ ಹಂತದಲ್ಲಿದೆ.  ಆದರೂ, ಈ ಸಾಧನದೊಂದಿಗೆ ಸ್ವಚ್ಛಗೊಳಿಸಿದ ನಂತರವೂ, ಮುಖಗವಸುಗಳನ್ನು ಧರಿಸುವುದು, ಸಾಮಾಜಿಕ ಅಂತರವಿಡುವುದು ಮತ್ತು ನಿಯಮಿತವಾಗಿ ಸೋಪಿನಿಂದ ಕೈ ತೊಳೆಯುವುದು ಅಗತ್ಯವಾಗಿರುತ್ತದೆ.

***(Release ID: 1613167) Visitor Counter : 244