ನಾಗರೀಕ ವಿಮಾನಯಾನ ಸಚಿವಾಲಯ

ಖಾಸಗಿ ವಿಮಾನಯಾನ ಸಂಸ್ಥೆಗಳು ಸುಮಾರು 2,675 ಟನ್ ಗಳಷ್ಟು ಸ್ಥಳೀಯ ವೈದ್ಯಕೀಯ ಸಾಮಗ್ರಿಗಳ ಸಾಗಾಣೆ

Posted On: 10 APR 2020 5:34PM by PIB Bengaluru

ಖಾಸಗಿ ವಿಮಾನಯಾನ ಸಂಸ್ಥೆಗಳು ಸುಮಾರು 2,675 ಟನ್ ಗಳಷ್ಟು ಸ್ಥಳೀಯ ವೈದ್ಯಕೀಯ ಸಾಮಗ್ರಿಗಳ ಸಾಗಾಣೆ

180 ಕ್ಕೂ ಹೆಚ್ಚು ಲೈಫ್ ಲೈನ್ ಉಡಾನ್ ವಿಮಾನಗಳು ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ಸಾಗಿಸಲು 1,66,000 ಕಿ. ಮೀ ಗಿಂತ ಹೆಚ್ಚು ದೂರವನ್ನು ಕ್ರಮಿಸಿವೆ

 

ಕೊವಿಡ್ – 19 ಲಾಕ್ ಡೌನ್ ಅವಧಿಯಲ್ಲಿ ಲೈಫ್ ಲೈನ್ ಉಡಾನ್ ಅಡಿಯಲ್ಲಿ 180ಕ್ಕೂ ಹೆಚ್ಚು ವಿಮಾನಗಳು ಕಾರ್ಯ ನಿರ್ವಹಿಸುತ್ತಿದ್ದು, ಅವುಗಳಲ್ಲಿ 114 ವಿಮಾನಗಳು ಏರ್ ಇಂಡಿಯಾ ಮತ್ತು ಅಲಯೆನ್ಸ್ ಏರ್ ಸಂಸ್ಥೆಗಳದ್ದಾಗಿದೆ. ಐಎಎಫ್ 58 ವಿಮಾನಗಳ ಕಾರ್ಯನಿರ್ವಹಣೆಯನ್ನು ವಹಿಸಿಕೊಂಡಿದೆ.

 

ಕ್ರಮಿಸಿದ ಒಟ್ಟು ಕಿಲೋಮೀಟರ್

1,66,076 ಕಿ. ಮೀ.

09.04.2020 ರಂದು ಸಾಗಿಸಿದ ಸರಕುಗಳ ತೂಕ

10.22 ಟನ್ ಗಳು

09.04.2020 ರ ವರೆಗೆ ಸಾಗಿಸಿದ ಸರಕುಗಳ ಒಟ್ಟು ತೂಕ

248.02 + 10.22 = 258.24 ಟನ್ ಗಳು

ದೇಶೀಯ ಸರಕು ಸಾಗಿಸುವ ವಿಮಾನಯಾನ ನಿರ್ವಾಹಕರಾದ ಬ್ಲೂ ಡಾರ್ಟ್, ಸ್ಪೈಸ್ ಜೆಟ್ ಮತ್ತು ಇಂಡಿಗೊ ವಾಣಿಜ್ಯ ಆಧಾರದ ಮೇಲೆ ಕಾರ್ಗೊ ವಿಮಾನಗಳ ಹಾರಾಟ ನಿರ್ವಹಿಸುತ್ತಿವೆ. ಸ್ಪೈಸ್ ಜೆಟ್ 3,29,886 ಕಿ. ಮೀ. ದೂರವನ್ನು ಮತ್ತು 1993 ಟನ್ ಗಳಷ್ಟು ಸರಕುಗಳನ್ನು 241 ಕಾರ್ಗೊ ವಿಮಾನಗಳ ಮೂಲಕ ಸಾಗಾಟ ನಡೆಸಿತು. ಇವುಗಳಲ್ಲಿ 175 ದೇಶೀಯ ಕಾರ್ಗೊ ವಿಮಾನಗಳಾಗಿದ್ದು 1401 ಟನ್ ಗಳನ್ನು ಸಾಗಿಸಿವೆ. ಬ್ಲೂ ಡಾರ್ಟ್ 79,916 ಕಿ. ಮೀ. ದೂರವನ್ನು ಮತ್ತು 1,270 ಟನ್ ಗಳಷ್ಟು ಸರಕುಗಳನ್ನು 82 ಕಾರ್ಗೊ ವಿಮಾನಗಳ ಮೂಲಕ ಸಾಗಾಟ ನಡೆಸಿತು. ಇಂಡಿಗೊ ಸಹ 12,206 ಕಿ. ಮೀ. ದೂರವನ್ನು ಮತ್ತು 4.37 ಟನ್ ಗಳಷ್ಟು ಸರಕುಗಳನ್ನು 15 ಕಾರ್ಗೊ ವಿಮಾನಗಳ ಮೂಲಕ ಸಾಗಾಟ ನಡೆಸಿತು.

ಪವನ್ ಹನ್ಸ್ ನಿಯಮಿತ ಸಂಸ್ಥೆ ಏಪ್ರಿಲ್ 8, 2020 ರ ವರೆಗೆ, ಗುವಾಹಟಿ, ಅಗರ್ತಾಲ, ಕಿಶ್ವಾರ್, ನವಪಾಚಿ, ಶ್ರೀ ನಗರ, ಜಮ್ಮು (ಜಮ್ಮು ಮತ್ತು ಕಾಶ್ಮೀರ), ನಾಗ್ಪುರ್, ಔರಂಗಾಬಾದ್ ಸ್ಥಳಗಳಿಗೆ, 3561 ಕಿ. ಮೀ. ದೂರವನ್ನು ಮತ್ತು 1.07 ಟನ್ ಗಳಷ್ಟು ತುರ್ತು ಚಿಕಿತ್ಸಾ ವೈದ್ಯಕೀಯ ಸಾಮಗ್ರಿಗಳನ್ನು 5 ಕಾರ್ಗೊ ವಿಮಾನಗಳ ಮೂಲಕ ಸಾಗಾಟ ನಡೆಸಿತು.

 

ದಿನಾಂಕ

ಏರ್ ಇಂಡಿಯಾ

ಮೈತ್ರಿ

ಐಎಎಫ್

ನಿರ್ವಹಿಸಿದ ಒಟ್ಟು ವಿಮಾನಗಳು

09.4.2020

04

08

01

13

* ಪ್ರಮುಖವಾಗಿ ಜಮ್ಮು ಮತ್ತು ಕಾಶ್ಮೀರ, ಲದಾಖ್, ಈಶಾನ್ಯ ಮತ್ತು ಇತರ ದ್ವೀಪ ಪ್ರದೇಶಗಳಿಗಾಗಿ ಏರ್ ಇಂಡಿಯಾ ಮತ್ತು ಐ ಎ ಫ್ ಜೊತೆಗೂಡಿವೆ.

ಸಾಗಾಣೆ ಮಾಡುವ ಸರಕುಗಳು ಕೊವಿಡ್ – 19 ಗೆ ಸಂಬಂಧಿಸಿದ ಕಾರಕಗಳು, ಕಿಣ್ವಗಳು, ವೈದ್ಯಕೀಯ ಉಪಕರಣಗಳು, ಪರೀಕ್ಷಾ ಕಿಟ್ ಗಳು ಮತ್ತು ಪಿಪಿಇ, ಮಾಸ್ಕ್ ಗಳು, ಕೈಗವಸುಗಳು ಮತ್ತು ಹೆಚ್ ಎಲ್ ಎಲ್ ನ ಇತರ ಉಪಕರಣಗಳನ್ನು ಒಳಗೊಂಡಿದೆ ಜೊತೆಗೆ ರಾಜ್ಯ ಮತ್ತು ಕೇಂದ್ರಾಡಳಿತ ಸರ್ಕಾರಗಳಿಂದ ಮನವಿ ಪಡೆಯಲಾದ ಸರಕುಗಳು ಮತ್ತು ಅಂಚೆ ಪ್ಯಾಕೆಟ್ ಗಳನ್ನು ಸಹ ಒಳಗೊಂಡಿದೆ.

ಅಂತಾರಾಷ್ಟ್ರೀಯ

ಏಪ್ರಿಲ್ 9, 2020 ರಂದು ಭಾರತ, ಶಾಂಘಾಯ್ ನಿಂದ 21.77 ಟನ್ ಗಳಷ್ಟು ವೈದ್ಯಕೀಯ ಉಪಕರಣಗಳನ್ನು ಏರ್ ಇಂಡಿಯಾ ಮೂಲಕ ತಂದಿತು. ಅವಶ್ಯಕತೆಗೆ ಅನುಗುಣವಾಗಿ, ನಿರ್ಣಾಯಕ ವೈದ್ಯಕೀಯ ಉಪಕರಣಗಳನ್ನು ಇತರ ದೇಶಗಳಿಗೆ ಸಾಗಿಸಲು ಏರ್ ಇಂಡಿಯಾ ನಿಯಮಿತ ಕಾರ್ಗೊ ವಿಮಾನಗಳನ್ನು ಮೀಸಲಿರಿಸಿದೆ.

ಸ್ಪೈಸ್ ಜೆಟ್ ನಿಂದ ದೇಶೀಯ ಕಾರ್ಗೊ ಸಾಗಣೆ (09.04.2020 ರಂತೆ)

ದಿನಾಂಕ

ವಿಮಾನಗಳ ಸಂಖ್ಯೆ

ಟನ್ನುಗಳು

ಕಿ. ಮೀ. ಗಳು

09-04-2020

16

133.80

16,795

 

ಸ್ಪೈಸ್ ಜೆಟ್ ನಿಂದ ಅಂತಾರಾಷ್ಟ್ರೀಯ ಕಾರ್ಗೊ ಸಾಗಣೆ (09.04.2020 ರಂತೆ)

ದಿನಾಂಕ

ವಿಮಾನಗಳ ಸಂಖ್ಯೆ

ಟನ್ನುಗಳು

ಕಿ. ಮೀ. ಗಳು

09-04-2020

5

53.77

13,316

 

ಬ್ಲೂ ಡಾರ್ಟ್ ಕಾರ್ಗೊಯಿಂದ ಸಾಗಣೆ (09.04.2020 ರಂತೆ)

ದಿನಾಂಕ

ವಿಮಾನಗಳ ಸಂಖ್ಯೆ

ಟನ್ನುಗಳು

ಕಿ. ಮೀ. ಗಳು

09-04-2020

12

195.100

12,642.65

 

****

 


(Release ID: 1613163) Visitor Counter : 169