ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ಕೋವಿಡ್-19 ಎದುರಿಸಲು ಡಿಎಸ್ ಟಿ ಪ್ರೋತ್ಸಾಹಿತ ನವೋದ್ಯಮದಿಂದ ನೈಸರ್ಗಿಕ ಮದ್ಯಸಾರ ರಹಿತ ಸ್ಯಾನಿಟೈಸರ್
Posted On:
10 APR 2020 12:00PM by PIB Bengaluru
ಕೋವಿಡ್-19 ಎದುರಿಸಲು ಡಿಎಸ್ ಟಿ ಪ್ರೋತ್ಸಾಹಿತ ನವೋದ್ಯಮದಿಂದ ನೈಸರ್ಗಿಕ ಮದ್ಯಸಾರ ರಹಿತ ಸ್ಯಾನಿಟೈಸರ್
“ಸೋಂಕು ನಿವಾರಣೆಗೆ ಈ ಜೈವಿಕ ದ್ರಾವಣ ಪರಿಸರದಲ್ಲಿ ಬೆರೆಯುತ್ತದೆ ಮತ್ತು ಪರಿಸರ ಸ್ನೇಹಿ ಹಾಗೂ ಚರ್ಮದ ಮೇಲೆ ಸೋಕಿಸುವುದು ಸುಲಭ”: ಡಿಎಸ್ ಟಿ ಕಾರ್ಯದರ್ಶಿ ಪ್ರೊ|| ಅಶುತೋಶ್ ಶರ್ಮ
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್ ಟಿ)ಯಿಂದ ಆರ್ಥಿಕ ನೆರವು ಪಡೆಯುತ್ತಿರುವ ಮಹಾರಾಷ್ಟ್ರದ ಪುಣೆಯಲ್ಲಿರುವ ಆಹಾರ, ಕೃಷಿ ಮತ್ತು ಜೈವಿಕ ತಂತ್ರಜ್ಞಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರೀನ್ ಪಿರಮಿಡ್ ಬಯೋಟೆಕ್ (ಜಿಪಿಬಿ) ಕಂಪನಿ ದೀರ್ಘಕಾಲ ಸೋಂಕು ಹರಡದಂತೆ ತಡೆಯಬಲ್ಲ ಮುಖ ಮತ್ತು ಕೈಗಳಿಗೆ ಹಚ್ಚಿಕೊಳ್ಳಬಹುದಾದ ಮದ್ಯಸಾರ ರಹಿತ ನೈಸರ್ಗಿಕ ಸ್ಯಾನಿಟೈಸರ್ ಅನ್ನು ಅಭಿವೃದ್ಧಿಪಡಿಸಿದೆ.
ಕೋವಿಡ್-19 ವಿರುದ್ಧ ಭಾರತ ನಡೆಸುತ್ತಿರುವ ಹೋರಾಟದಲ್ಲಿ ಇದು ತುಂಬಾ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ. ಈ ರೋಗ ಸಾಂಕ್ರಾಮಿಕವಾಗಿದ್ದು, ಕೈಗಳನ್ನು ಶುಚಿಗೊಳಿಸುವುದು, ಸಾಮಾನ್ಯವಾಗಿ ಬಳಕೆ ಮಾಡುವ ಟೇಬಲ್, ಕಂಪ್ಯೂಟರ್, ಕುರ್ಚಿ, ಮೊಬೈಲ್ ಫೋನ್ ಮತ್ತು ಬೀಗದ ಕೀಗಳು ಇವುಗಳಿಂದಲೂ ಕೂಡ ಸೋಂಕು ಹರಡುವ ಸಾಧ್ಯತೆ ಇದೆ. ಸೋಪು ಅಥವಾ ಆಲ್ಕೋಹಾಲ್ ಸೋಂಕಿನ ಹೊರ ಭಾಗವನ್ನು ನಾಶಗೊಳಿಸುತ್ತದೆ. ಆದರೆ ಸೋಪು ಮತ್ತು ನೀರಿನ ಲಭ್ಯತೆ ಒಂದು ಸವಾಲಾಗಿದೆ. ಅದೇ ರೀತಿ ಆಲ್ಕೋಹಾಲ್ ಮತ್ತು ನೀರು ಮಿಶ್ರಣದ ಬಳಕೆ ಮತ್ತು ನಿಯಂತ್ರಣ ಲಭ್ಯತೆ ಕೂಡ ಕಷ್ಟಕರವಾದುದು.
ಗ್ರೀನ್ ಪಿರಮಿಡ್ ಬಯೋಟೆಕ್ ಇದೀಗ ಅಭಿವೃದ್ಧಿಪಡಿಸಿರುವ ಸ್ಯಾನಿಟೈಸರ್ ನಲ್ಲಿನ ಆಕ್ಟಿವ್ ಫಾರ್ಮಸಿಟಿಕಲ್ ಇನ್ ಗ್ರಿಡಿಯೆಂಟ್(ಎಪಿಐ) ಜೈವಿಕ ದ್ರಾವಣವಾಗಿದ್ದು, ಅದು ಬ್ಯಾಕ್ಟೀರಿಯಾ ಅಥವಾ ವೈರಾಣು ವಿರುದ್ಧ ದೀರ್ಘಕಾಲ ರಕ್ಷಣೆ ನೀಡುತ್ತದೆ ಮತ್ತು ಸೋಂಕು ಹರಡುವ ಅಪಾಯದ ಸಂಭವನೀಯತೆಯನ್ನು ಗಣನೀಯವಾಗಿ ತಗ್ಗಿಸುತ್ತದೆ. ಇದನ್ನು ಪಾಥೊಜೆನಿಕ್ ಬ್ಯಾಕ್ಟೀರಿಯಾ, ಶಿಲೀಂಧ್ರ (ಫಂಗೈ) ಮತ್ತು ಈಸ್ಟ್ ಸೇರಿ ನಾನಾ ರೂಪದಲ್ಲಿ ಪರೀಕ್ಷೆಗೊಳಪಡಿಸಲಾಗಿದೆ. ಈ ದ್ರಾವಣ ಸೂಕ್ತ ಮತ್ತು ಪರಿಣಾಮಕಾರಿಯಾಗಿ ಕೈಗಳನ್ನು ಶುಚಿಮಾಡಿಕೊಳ್ಳಲು ಮತ್ತು ನೆಲ ಸ್ವಚ್ಛತೆಗೆ ಬಳಸಿಕೊಳ್ಳಬಹುದಾಗಿದೆ. ಇದು ಸಂಪೂರ್ಣವಾಗಿ ಪರಿಸರದೊಂದಿಗೆ ಬೆರೆಯುವಂತಹುದು, ನೈಸರ್ಗಿಕವಾದುದು ಮತ್ತು ಮದ್ಯಸಾರರಹಿತವಾದುದು. ಸ್ಯಾನಿಟೈಸೇಶನ್ ಅಲ್ಲದೆ ಎಪಿಐ ಒಂದು ವಿಭಿನ್ನ ಉತ್ಪನ್ನವಾಗಿದ್ದು, ಫೈಬ್ರೋಬ್ಲಾಸ್ಟ್ ಚಟುವಟಿಕೆಗಳಿಗೂ ಕೂಡ ಇದು ನೆರವಾಗುತ್ತದೆ. ಹಾಗಾಗಿ ಇದನ್ನು ಗಾಯಗಳನ್ನು ಸ್ವಚ್ಛಗೊಳಿಸಲು ಮತ್ತು ಚರ್ಮದ ಉರಿಯನ್ನು ತಗ್ಗಿಸಲು ಹಾಗೂ ಚರ್ಮವನ್ನು ಒಣಗುವುದನ್ನು ತಪ್ಪಿಸುತ್ತದೆ. ಅಲ್ಲದೆ ಇದರಲ್ಲಿ ಬಳಸಲಾಗುತ್ತಿರುವ ತಂತ್ರಜ್ಞಾನ ಆಧಾರಿತ ಅಪ್ಲಿಕೇಶನ್ ಗಳಿಂದ ಚರ್ಮಕ್ಕೆ ಯಾವುದೇ ತೊಂದರೆಯಾಗುವುದಿಲ್ಲ.
“ಚರ್ಮವನ್ನು ಸೋಂಕು ಮುಕ್ತಗೊಳಿಸಲು ನೀರು, ಸೋಪು, ಆಲ್ಕೋಹಾಲ್ ಆಧಾರಿತ ಹಲವು ಬಗೆಯ ದ್ರಾವಣ ಇತ್ಯಾದಿಗಳನ್ನು ಬಳಕೆ ಮಾಡಲಾಗುತ್ತಿದೆ. ಪ್ರತಿಯೊಂದಕ್ಕೂ ತನ್ನದೇ ಆದ ಸಾಮರ್ಥ್ಯವಿದ್ದು, ಅವುಗಳ ಬಳಕೆ, ಲಭ್ಯತೆ ಮತ್ತು ಸಂದರ್ಭಗಳನ್ನು ಆಧರಿಸಿರುತ್ತದೆ. ಈ ಜೈವಿಕ ದ್ರಾವಣ, ಸೋಂಕು ನಿವಾರಣೆಗೆ ಪರಿಹಾರವಲ್ಲದೆ, ಪರಿಸರದೊಂದಿಗೆ ಬೆರೆಯುತ್ತದೆ ಮತ್ತು ಪರಿಸರಸ್ನೇಹಿ ಹಾಗೂ ಚರ್ಮದ ಮೇಲೆ ಬಳಸುವುದು ಸುಲಭ” ಎಂದು ಡಿಎಸ್ ಟಿ ಕಾರ್ಯದರ್ಶಿ ಪ್ರೊ|| ಅಶುತೋಶ್ ಶರ್ಮ ಹೇಳಿದ್ದಾರೆ.
ಪುಣೆ ಮೂಲದ ಗ್ರೀನ್ ಪಿರಮಿಡ್ ಬಯೋಟೆಕ್(ಜಿಪಿಬಿ) ಕಂಪನಿ ಸಿಎಸ್ಐಆರ್ – ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಯಾಗಿದೆ ಮತ್ತು ಇದಕ್ಕೆ ಮೂಲ ಬಂಡವಾಳ ಮತ್ತು ಬೆಂಬಲವನ್ನು ಡಿಎಸ್ ಟಿ ತಂತ್ರಜ್ಞಾನ ಅಭಿವೃದ್ಧಿ ಮಂಡಳಿ(ಟಿಡಿಬಿ) ನೀಡುತ್ತಿದೆ. ಅಲ್ಲದೆ ಇದು ಉದ್ಯಮಶೀಲ ಅಭಿವೃದ್ಧಿ ಕೇಂದ್ರ(ವೆಂಚರ್ ಸೆಂಟರ್) ಪುಣೆಯ ಸಂಪೋಷಣಾ ಕೇಂದ್ರವಾಗಿದೆ. ಸೂಕ್ಷ್ಮ ಜೀವ ವಿಜ್ಞಾನ ದಲ್ಲಿ ಪಿಎಚ್ ಡಿ ಪಡೆದಿರುವ ಡಾ|| ಅಸ್ಮಿತಾ ಪ್ರಭೂಣೆ ಇದರ ಸಂಸ್ಥಾಪಕರು ಮತ್ತು ನಿರ್ದೇಶಕರು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ಡಾ|| ಅಸ್ಮಿತಾ ಪ್ರಭೂಣೆ,(ಸಂಸ್ಥಾಪನಾ ಕಾರ್ಯದರ್ಶಿ), ಗ್ರೀನ್ ಪಿರಮಿಡ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್, ಎನ್ ಸಿ ಎಲ್ asmita.prabhune[at]gmail[dot]com
ಮೊಬೈಲ್: 9822244149.)
*****
(Release ID: 1612939)
Visitor Counter : 185