ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ 
                
                
                
                
                
                
                    
                    
                        ಕೋವಿಡ್-19 ಸಾಂಕ್ರಾಮಿಕ ಎದುರಿಸಲು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ, ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ ಮತ್ತು ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಪಿಎಂ-ಕೇರ್ಸ್ ನಿಧಿಗೆ 28.80 ಕೋಟಿ ರೂ.ದೇಣಿಗೆ
                    
                    
                        
                    
                
                
                    Posted On:
                10 APR 2020 9:21AM by PIB Bengaluru
                
                
                
                
                
                
                ಕೋವಿಡ್-19 ಸಾಂಕ್ರಾಮಿಕ ಎದುರಿಸಲು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ, ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ ಮತ್ತು ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾ
ಪಿಎಂ-ಕೇರ್ಸ್ ನಿಧಿಗೆ 28.80 ಕೋಟಿ ರೂ.ದೇಣಿಗೆ
 
ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿರುವ ಮೂರು ವೃತ್ತಿಪರ ಸಂಸ್ಥೆಗಳಾದ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ, ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ ಮತ್ತು ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾ, ಕೋವಿಡ್-19 ಸಾಂಕ್ರಾಮಿಕದಿಂದ ಸಂತ್ರಸ್ತರಾದವರಿಗೆ ನೆರವಾಗಲು ಪಿಎಂ-ಕೇರ್ಸ್ ನಿಧಿಗೆ 28.80 ಕೋಟಿ ರೂ. ದೇಣಿಗೆ ನೀಡಿವೆ.
ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡಿದ ನಂತರ ಪ್ರಧಾನಮಂತ್ರಿಗಳ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ನಿಧಿಯನ್ನು (PM CARES Fund) 2020 ಮಾರ್ಚ್ 28 ರಂದು ಸ್ಥಾಪಿಸಲಾಯಿತು. ಈ ರಾಷ್ಟ್ರೀಯ ನಿಧಿಯನ್ನು ಕೋವಿಡ್-19 ಸಾಂಕ್ರಾಮಿಕ ರೋಗದ ಯಾವುದೇ ರೀತಿಯ ತುರ್ತು ಅಥವಾ ತೊಂದರೆಯ ಪರಿಸ್ಥಿತಿಯನ್ನು ಎದುರಿಸುವ ಮತ್ತು ಪೀಡಿತ ಜನರಿಗೆ ಪರಿಹಾರವನ್ನು ನೀಡುವ ಪ್ರಾಥಮಿಕ ಉದ್ದೇಶದೊಂದಿಗೆ ಸ್ಥಾಪಿಸಲಾಗಿದೆ.
 
ದೇಣಿಗೆಗಳ ವಿವರಗಳು ಕೆಳಕಂಡಂತಿವೆ: 
	
		
			| 
			 ಕ್ರ.ಸಂ. 
			 | 
			
			 ಸಂಸ್ಥೆ 
			 | 
			
			 ಸಂಸ್ಥೆಯ ದೇಣಿಗೆ 
			 | 
			
			 ಸದಸ್ಯರ ದೇಣಿಗೆ 
			 | 
			
			 ಒಟ್ಟು 
			(ಕೋ.ರೂ.) 
			 | 
		
		
			| 
			 1 
			 | 
			
			 ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ 
			 | 
			
			 15.00 
			 | 
			
			 6.00 
			 | 
			
			 21.00 
			 | 
		
		
			| 
			 2 
			 | 
			
			 ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ 
			 | 
			
			 5.00 
			 | 
			
			 0.25 
			 | 
			
			 5.25 
			 | 
		
		
			| 
			 3 
			 | 
			
			 ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾ 
			 | 
			
			 2.50 
			 | 
			
			 0.05 
			 | 
			
			 2.55 
			 | 
		
		
			| 
			 ಒಟ್ಟು 
			 | 
			
			 22.50 
			 | 
			
			 6.30 
			 | 
			
			 28.80 
			 | 
		
	
 
***
                
                
                
                
                
                (Release ID: 1612847)
                Visitor Counter : 236