ಬುಡಕಟ್ಟು ವ್ಯವಹಾರಗಳ ಸಚಿವಾಲಯ

ಬುಡಕಟ್ಟು ಸಂಗ್ರಹಣಾಕಾರರು ಕೆಲಸವನ್ನು ಸುರಕ್ಷಿತವಾಗಿ ನಡೆಸುವುದನ್ನು ಖಾತ್ರಿ ಪಡಿಸಲು ಯುನಿಸೆಫ್ ಹಾಗು ಡಬ್ಲ್ಯುಎಚ್‌ಒ ಜೊತೆಗೂಡಿ ಸ್ವ ಸಹಾಯ ಗುಂಪುಗಳಿಗೆ ಡಿಜಿಟಲ್ ಅಭಿಯಾನ ಆರಂಭಿಸಿದ ಟ್ರೈಫೆಡ್

Posted On: 09 APR 2020 8:05PM by PIB Bengaluru

ಬುಡಕಟ್ಟು ಸಂಗ್ರಹಣಾಕಾರರು ಕೆಲಸವನ್ನು ಸುರಕ್ಷಿತವಾಗಿ ನಡೆಸುವುದನ್ನು ಖಾತ್ರಿ ಪಡಿಸಲು ಯುನಿಸೆಫ್ ಹಾಗು ಡಬ್ಲ್ಯುಎಚ್‌ಒ ಜೊತೆಗೂಡಿ ಸ್ವ ಸಹಾಯ ಗುಂಪುಗಳಿಗೆ ಡಿಜಿಟಲ್ ಅಭಿಯಾನ ಆರಂಭಿಸಿದ ಟ್ರೈಫೆಡ್

ಈ ಅಭಿಯಾನದ ಮೂಲಕ ಸುಮಾರು 50 ಲಕ್ಷ ಬುಡಕಟ್ಟು ವಾಸಿಗಳಿಗೆ ತಲುಪುವ ಉದ್ದೇಶ

 

ಕೋವಿಡ್-19 ವಿರುದ್ಧ ಪ್ರಾಥಮಿಕ ಪುನರ್ ಮನನದ ಭಾಗವಾಗಿ ಸ್ವಸಹಾಯ ಗುಂಪುಗಳು(ಎಸ್ಎಚ್ ಜಿಎಸ್) ಮತ್ತು ಅದರ ತರಬೇತುದಾರರಿಗೆ ವಸ್ತುಶಃ ತರಬೇತಿ ನೀಡುವ ಅಭಿಯಾನವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಆರಂಭಿಸಿದೆ. ಆ ಮೂಲಕ ಬುಡಕಟ್ಟು ವಾಸಿಗಳು ತಮ್ಮ ಕೆಲಸ ಕಾರ್ಯವನ್ನು ಸುರಕ್ಷಿತವಾಗಿ ಮುಂದುವರಿಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮ ಗಳನ್ನು ಕೈಗೊಳ್ಳುವಂತೆ ಮಾಡಲಾಗಿದೆ. ಬುಡಕಟ್ಟು ಪ್ರದೇಶಗಳನ್ನು ಒಳಗೊಂಡ ಎಲ್ಲ 27 ರಾಜ್ಯಗಳಲ್ಲಿ ಸುಮಾರು 18,000ಕ್ಕೂ ಅಧಿಕ ಜನರನ್ನು ಈ ಅಭಿಯಾನದಡಿ ತಲುಪುವ ಗುರಿ ಹೊಂದಲಾಗಿದೆ. ಬುಡಕಟ್ಟು ವಾಸಿಗಳು ಸುರಕ್ಷಿತವಾಗಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಲು ಟ್ರೈಫೆಡ್, ಯುನಿಸೆಫ್ ಮತ್ತು ಡಬ್ಲ್ಯೂಎಚ್ಒ ಸಹಯೋಗದಲ್ಲಿ ಡಿಜಿಟಲ್ ಸಂವಹನ ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸಿದೆ. ಆ ಮೂಲಕ ಸ್ವ-ಸಹಾಯ ಗುಂಪುಗಳ(ಎಸ್ಎಚ್ ಜಿಎಸ್)ಗಳನ್ನು ಬಳಸಿಕೊಂಡು ಬುಡಕಟ್ಟು ವಾಸಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಲು ಪ್ರಾಮುಖ್ಯತೆ ನೀಡಲಾಗುತ್ತಿದೆ.

ಭಾಗವಹಿಸಿದ್ದವರನ್ನು ಉದ್ದೇಶಿಸಿ ಮಾತನಾಡಿದ ಟ್ರೈಫೆಡ್ ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ಪ್ರವೀರ್ ಕೃಷ್ಣ, ಸಾಂಕ್ರಾಮಿಕ 2019 ಸಂದರ್ಭದಲ್ಲಿ ಬುಡಕಟ್ಟು ವಾಸಿಗಳ ಸುರಕ್ಷತೆ ಕಾಯ್ದುಕೊಳ್ಳುವುದು ಪ್ರಥಮ ಆದ್ಯತೆಯಾಗಿದೆ ಮತ್ತು ಬುಡಕಟ್ಟು ವಾಸಿಗಳು ತಮ್ಮ ಉತ್ಪನ್ನಗಳ ಖರೀದಿ ಕೆಲಸವನ್ನು ಸುರಕ್ಷಿತವಾಗಿ ಮಾಡುವಂತೆ ಖಾತ್ರಿಗೊಳಿಸಬೇಕಿದೆ. ಈ ಡಿಜಿಟಲ್ ಅಭಿಯಾನದ ಗುರಿ ಸುಮಾರು 50 ಲಕ್ಷ ಬುಡಕಟ್ಟು ವಾಸಿಗಳಿಗೆ ಅವರ ಸುರಕ್ಷತೆಯನ್ನು ಖಾತ್ರಿಪಡಿಸುವುದಾಗಿದೆ. ಉಪ ಅರಣ್ಯ ಉತ್ಪನ್ನ(ಎಂಎಫ್ ಪಿ)/ಮರಹುಟ್ಟು ಹೊರತುಪಡಿಸಿದ ಅರಣ್ಯ ಉತ್ಪನ್ನ(ಎನ್ ಟಿಎಫ್ ಪಿ)ಯ ಕಟಾವು ಮತ್ತು ಸಂಗ್ರಹ ಹಂಗಾಮು ಈಗ ಹಲವು ಪ್ರದೇಶಗಳಲ್ಲಿ ಚೆನ್ನಾಗಿದೆ. ಬುಡಕಟ್ಟು ಜನರ ಆರೋಗ್ಯ ರಕ್ಷಣೆಗೆ ಕೆಲವು ಕ್ರಿಯಾಶೀಲ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಮತ್ತು ಅವರಿಗೆ ಸುರಕ್ಷತೆ ಒದಗಿಸುವ ಮೂಲಕ ಅವರ ಆರ್ಥಿಕತೆ ಹಾಗೂ ಅವರ ಜೀವನೋಪಾಯವನ್ನು ಸುರಕ್ಷಿತಗೊಳಿಸಬೇಕಿದೆ.

ಯುನಿಸೆಫ್ ಡಿಜಿಟಲ್ ಮಲ್ಟಿ ಮೀಡಿಯಾ ಪಠ್ಯ, ವೆಬಿನಾರ್ ಗಳ ಮೂಲಕ ವಸ್ತುಶಃ ಕಲಿಕೆ(ಕೋವಿಡ್-19ಗೆ ಪ್ರತಿಯಾಗಿ ಪ್ರಾಥಮಿಕ ಪುನರ್ ಮನನ ಕ್ರಮ ಮತ್ತು ಪ್ರಮುಖ ಮುಂಜಾಗ್ರತಾ ನಡವಳಿಕೆಗಳು) ಸಾಮಾಜಿಕ ಮಾಧ್ಯಮ ಅಭಿಯಾನಗಳು(ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಹೋಮ್ ಕ್ವಾರಂಟೈನ್ ಇತ್ಯಾದಿ)ಗೆ ಎಲ್ಲ ಬೆಂಬಲ ನೀಡುತ್ತಿದ್ದು, ವನ್ಯ ರೇಡಿಯೋ ಮೂಲಕ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೆಚ್ಚುವರಿಯಾಗಿ ಟ್ರೈಫೆಡ್, ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ನ #iStandWithHumanity Initiative ಉಪಕ್ರಮದಡಿ ಬುಡಕಟ್ಟು ಕುಟುಂಬಗಳ ಉಳಿವಿಗೆ ಅಗತ್ಯ ಆಹಾರ ಹಾಗೂ ಪಡಿತರವನ್ನು ಒದಗಿಸುವ ಕಾರ್ಯವನ್ನು ಮಾಡುತ್ತಿದೆ.

27 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶ ಒಳಗೊಂಡಂತೆ 18,075 ವನ ಧನ ಸ್ವಸಹಾಯ ಗುಂಪುಗಳಿಗೆ ಒಟ್ಟಾರೆ 1205 ವನಧನ ವಿಕಾಸ ಕೇಂದ್ರ(ವಿಡಿವಿಕೆಎಸ್)ಗಳನ್ನು ಮಂಜೂರು ಮಾಡಲಾಗಿದೆ. ಈ ಯೋಜನೆಯಲ್ಲಿ 3.6 ಲಕ್ಷ ಬುಡಕಟ್ಟು ಸಮುದಾಯದವರು ಒಳಗೊಂಡಿದ್ದಾರೆ. ಆರಂಭದಲ್ಲಿ ಈ 15,000ಕ್ಕೂ ಅಧಿಕ ಸ್ವಸಹಾಯ ಗುಂಪುಗಳು ಡಿಜಿಟಲ್ ತರಬೇತಿ ಕಾರ್ಯಕ್ರಮದ ಮೂಲಕ ಅವುಗಳನ್ನು ವನಧನ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಜೀವನೋಪಾಯ ಕೇಂದ್ರಗಳನ್ನಾಗಿ ಉತ್ತೇಜಿಸಲಾಗುವುದು. ಸ್ವಸಹಾಯ ಗುಂಪುಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತವೆ. ಕೋವಿಡ್-19 ಹಿನ್ನೆಲೆಯಲ್ಲಿ ಎನ್ ಟಿಎಫ್ ಪಿ ಕುರಿತಂತೆ ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂಬುದನ್ನು ಗಮನದಲ್ಲಿರಿಸಿಕೊಂಡು ವೈಯಕ್ತಿಕ ಶುಚಿತ್ವ ಕಾಪಾಡಿಕೊಳ್ಳುವುದು, ನಗದು ರಹಿತ ವ್ಯವಸ್ಥೆ ಅಳವಡಿಕೆ ಮತ್ತಿತರ ಸಲಹಾತ್ಮಕ ಪದ್ಧತಿಗಳ ಪಾಲನೆ ಮತ್ತು ನಿರ್ವಹಣೆಗೆ ಉತ್ತೇಜನ ನೀಡಲಾಗುವುದು.

*****


(Release ID: 1612839) Visitor Counter : 194